- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಮಂಗಳೂರು ನಗರದಲ್ಲಿ ಮಾದಕವಸ್ತುಗಳ ವಿರುದ್ಧ ನಗರ ಪೊಲೀಸ್ ಇಲಾಖೆ ನಡೆಸುತ್ತಿರುವ ನಿರಂತರ ಕಾರ್ಯಾಚರಣೆ ಗಮನಾರ್ಹ ಯಶಸ್ಸು ದಾಖಲಿಸಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಹೈಡೋವೀಡ್ ಗಾಂಜಾ, ಚರಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪೆಡ್ಲರ್‌ಗಳನ್ನು ಬಂಧಿಸಿ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯಾಚರಣೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಅದರ ಮುಂದುವರಿದ ಭಾಗವಾಗಿ, ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ ಅಚ್ಚರಿಯ ಮಾದಕವಸ್ತು ತಪಾಸಣೆಯನ್ನು ನಡೆಸಲಾಗಿದೆ. ಕಾಲೇಜು ಹಾಗೂ ಖಾಸಗಿ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಮೂಲಕ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಒಟ್ಟು ಸುಮಾರು 200 ವಿದ್ಯಾರ್ಥಿಗಳ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶಗಳು ಹಿಂದಿನ ಪ್ರಕರಣಗಳಿಗಿಂತ ಉತ್ತಮವಾಗಿವೆ ಎಂದು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ACP CEN ಹಾಗೂ ACP ಸೌತ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಇಂತಹ ಅಪ್ರತೀಕ್ಷಿತ ತಪಾಸಣೆಗಳನ್ನು ಮುಂದಿನ ದಿನಗಳಲ್ಲಿಯೂ ನಿಯಮಿತವಾಗಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.…
ನವದೆಹಲಿ: ದೇಶವ್ಯಾಪಿ ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ಬೀದಿ ನಾಯಿಗಳ ಕಾಟ ದಿನೇದಿನೇ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ನಾಯಿ ಕಡಿಯುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನವರಿ 13ರಂದು ಈ ವಿಷಯದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಾಯಿ ಕಡಿಯುವ ಘಟನೆಗಳಿಂದ ಸಂತ್ರಸ್ತರಾಗುವ ನಾಗರಿಕರಿಗೆ ಸಂಬಂಧಿಸಿದ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರವನ್ನು ನೀಡಲೇಬೇಕು ಎಂದು ಸ್ಪಷ್ಟವಾಗಿ ಎಚ್ಚರಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಕಳೆದ 75 ವರ್ಷಗಳಿಂದ ಬೀದಿ ನಾಯಿ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು ಸರ್ಕಾರಗಳು ವಿಫಲವಾಗಿವೆ ಎಂದು ಕಠಿಣವಾಗಿ ಟೀಕಿಸಿದೆ. ಈ ನಿರ್ಲಕ್ಷ್ಯಕ್ಕೆ ರಾಜ್ಯ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ವಿಚಾರಣೆ ವೇಳೆ ಮಾತನಾಡಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, “ಪ್ರತಿ ನಾಯಿ ಕಡಿಯುವ ಪ್ರಕರಣವು ಮಗು, ವೃದ್ಧರು ಅಥವಾ ದುರ್ಬಲ ವ್ಯಕ್ತಿಗೆ ಪ್ರಾಣಾಪಾಯ ಉಂಟುಮಾಡುವ…
ಮಂಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ಕೊಡಗು ಜಂಟಿ ಆಶ್ರಯದಲ್ಲಿ ಜನವರಿ 18ರಂದು ಯುವಶಕ್ತಿಯ ಸಾಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ, ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ. ಜನವರಿ ೧೮ ರಂದು ಡಾ. ಬಿ.ಆರ್ ಅಂಬೇಡ್ಕರ್ ಭವನ ಹಾಸನದಲ್ಲಿ ಗಣ್ಯಾತಿಗಣ್ಯರು ಪ್ರಶಸ್ತಿ ಪ್ರಧಾನ ಮಾಡುವರು. ಕಳೆದ ೨೧ ವರುಷಗಳಿಂದ ಸಾಹಿತ್ಯ ಪತ್ರಿಕೋದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದಾರೆ. ಕಳೆದ 13 ವರುಷಗಳಿಂದ ಸಾಹಿತ್ಯ ಪರ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ 9 ಕೃತಿಗಳನ್ನು ಪ್ರಕಟಿಸಿದ್ದಾರೆ. ಇತರ ಹಿರಿಯ ಕಿರಿಯ ಲೇಖಕರ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ೪೯ ಕೃತಿಯನ್ನು ಪತ್ರಿಕೆಯ ವತಿಯಿಂದ ಬಿಡುಗಡೆಗೊಳಿಸಿದ್ದಾರೆ .ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ…
ಬೆಂಗಳೂರು/ಮಂಗಳೂರು: ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ್ದ ಮಂಗಳೂರಿನ ಕಾವೂರು ನಿವಾಸಿ ಟೆಕ್ಕಿ ಶರ್ಮಿಳಾ (35) ಅವರನ್ನು ಕೊಂದು, ಸಾಕ್ಷ್ಯ ನಾಶಪಡಿಸಲು ಫ್ಲಾಟ್‌ಗೆ ಬೆಂಕಿ ಹಚ್ಚಿದ್ದ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಬೆಂಗಳೂರಿನ ಫ್ಲಾಟ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಶರ್ಮಿಳಾ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ಶಂಕಿಸಲಾಗಿದ್ದರೂ, ಇದೀಗ ಅದು ಪೂರ್ವನಿಯೋಜಿತ ಹತ್ಯೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶರ್ಮಿಳಾ ಅವಿವಾಹಿತರಾಗಿದ್ದು, ಸುಬ್ರಹ್ಮಣ್ಯ ಲೇಔಟ್‌ನ ಸಂಕಲ್ಪ ನಿಲಯದಲ್ಲಿರುವ ಎರಡು ಬೆಡ್‌ರೂಮ್ ಫ್ಲಾಟ್‌ನಲ್ಲಿ ವಾಸವಿದ್ದರು. ಅವರು ಬೆಂಗಳೂರಿನ ಪ್ರಮುಖ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 3ರ ರಾತ್ರಿ 10.15 ರಿಂದ 10.45ರ ಅವಧಿಯಲ್ಲಿ ಅವರ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ಶರ್ಮಿಳಾ ಅವರ ಸುಟ್ಟ ದೇಹವನ್ನು ಪತ್ತೆಹಚ್ಚಿತ್ತು. ಆ ಸಮಯದಲ್ಲಿ ಶರ್ಮಿಳಾ ಅವರ ರೂಮ್‌ಮೇಟ್ 2025ರ ನವೆಂಬರ್ 14ರಿಂದ ಅಸ್ಸಾಂನ ತಮ್ಮ ತವರು ಮನೆಯಲ್ಲಿ ಇದ್ದ ಕಾರಣ, ಪ್ರಾರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ…
ಬೆಂಗಳೂರು : ವಂದೇ ಮಾತರಂ ಲಲಿತ ಕಲಾ ಅಕಾಡೆಮಿ (ರಿ.), ಬೆಂಗಳೂರು ಸಂಸ್ಥೆಯ ವತಿಯಿಂದ ಆಯೋಜಿಸಲಾದ “ಸಂಕ್ರಾಂತಿ ಸಂಭ್ರಮ 2026” ಕಾರ್ಯಕ್ರಮವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಭವ್ಯವಾಗಿ ಜರುಗಿತು. ಈ ಸಂದರ್ಭದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುನಂದ ಕೋಟ್ಯಾನ್ ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರುನಾಡ ಕಾಯಕ ಯೋಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೆಸರಾಂತ ಚಲನಚಿತ್ರ ನಟರು ಹಾಗೂ ಮಾಜಿ ಸಚಿವರಾದ ಬಿ.ಸಿ. ಪಾಟೀಲ್, ವೃಂದಾ ಆಚಾರ್ಯ ಅವರ ನೇತೃತ್ವದ ವೀರೇಶ್ ಮುತ್ತಿನ ಮಠ, ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಲ್ಲದೆ ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಸಮಾಜ ಸೇವಕರು ಹಾಗೂ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಸುನಂದ ಕೋಟ್ಯಾನ್ ಅವರು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿಶೇಷವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ಜಾಗೃತಿ, ಸಾರ್ವಜನಿಕ ಸೇವೆ ಹಾಗೂ…
ವಂದೇ ಮಾತರಂ ಲಲಿತ ಕಲಾ ಅಕಾಡೆಮಿ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ಆಯೋಜಿಸಲಾದ “ಸಂಕ್ರಾಂತಿ ಸಂಭ್ರಮ–2026” ಕಾರ್ಯಕ್ರಮವು ಬೆಂಗಳೂರಿನ ಪ್ರತಿಷ್ಠಿತ ನಯನ ಸಭಾಂಗಣದಲ್ಲಿ ಭವ್ಯವಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿತು. ಈ ಸಮಾರಂಭದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸುನಂದ ಅವರು ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಹಾಗೂ ನಿರಂತರ ಸೇವೆಯನ್ನು ಗುರುತಿಸಿ, ಅವರಿಗೆ “ಕರುನಾಡ ಕಾಯಕ ಯೋಗಿ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು. ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ಜನಸಾಮಾನ್ಯರ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಹಾಗೂ ಸೇವಾ ಮನೋಭಾವನೆಗೆ ಈ ಪ್ರಶಸ್ತಿ ಸಂದಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೆಸರಾಂತ ಚಲನಚಿತ್ರ ನಟರು ಹಾಗೂ ಮಾಜಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ಅವರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಅವರೊಂದಿಗೆ ಶ್ರೀಮತಿ ವೃಂದಾ ಆಚಾರ್ಯ, ವೀರೇಶ್ ಮುತ್ತಿನ ಮಠ ಸೇರಿದಂತೆ ಹಲವು ಗಣ್ಯರು, ಗೌರವ ಅತಿಥಿಗಳು ಹಾಗೂ ಕಲಾ-ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು…
ಚಿಕ್ಕಮಂಗಳೂರು: ಮಕ್ಕಳ ಭವಿಷ್ಯಕ್ಕಾಗಿ ಎಲ್ಲ ಕಷ್ಟವನ್ನೂ ಸಹಿಸುವುದೇ ಪೋಷಕರ ಧರ್ಮ. ಆದರೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ನಡೆದಿರುವ ಘಟನೆ, ತಂದೆ ಎಂಬ ಸಂಬಂಧದ ಅರ್ಥವನ್ನೇ ಮರೆಸುವಂತಿದೆ. ಹಣದ ಲಾಲಸೆಗೆ ಮನುಷ್ಯತ್ವವನ್ನೇ ಮಾರಾಟ ಮಾಡಿದ ತಂದೆ, ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದಾನೆಂಬ ಆರೋಪ ಸಮಾಜವನ್ನೇ ಬೆಚ್ಚಿಬೀಳಿಸಿದೆ. ದಿನಕ್ಕೆ ಐದು ಸಾವಿರ ರೂ. ಲಾಭ ಸಿಗುತ್ತದೆಯೆಂಬ ಆಸೆಗೆ, ಹೆತ್ತ ಮಗಳ ಭವಿಷ್ಯವನ್ನೇ ಕತ್ತಲೆಗೆ ತಳ್ಳಿದ ಈ ಅಮಾನವೀಯ ಕೃತ್ಯ ಇಡೀ ಜಿಲ್ಲೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತಾಯಿಯಿಲ್ಲದ ಬದುಕು – ತಂದೆಯೇ ದ್ರೋಹಿತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ, ಹಲವು ವರ್ಷಗಳಿಂದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಪಿಯುಸಿ ತನಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಳು. ಬಳಿಕ ತಂದೆಯ ಬಳಿ ವಾಸಕ್ಕೆ ಬಂದ ಆಕೆ, ಕಳೆದ ಡಿಸೆಂಬರ್‌ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ತೆರಳಿ ಎರಡು ದಿನಗಳ ಕಾಲ ಉಳಿದು ಮರಳಿದ್ದಳು. ಮತ್ತೊಮ್ಮೆ ಅಜ್ಜಿ ಕರೆಯುತ್ತಿದ್ದಾಳೆಂದು ನಂಬಿ ಹೊರಟ ಬಾಲಕಿಗೆ, ಅಲ್ಲೇ ತನ್ನ ಬದುಕಿನ ಅತ್ಯಂತ ಭೀಕರ ಅನುಭವ ಎದುರಾಯಿತು.…
ಮಂಗಳೂರು | ವರದಿ : ದಕ್ಷಿಣ ಕನ್ನಡ ಜಿಲ್ಲಾಡಳಿತದ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನ ಶರಧಿ ಪ್ರತಿಷ್ಠಾನ ಆಯೋಜಿಸಿರುವ, ಅಸ್ತ್ರ ಗೋಲ್ಡ್ & ಡೈಮಂಡ್ಸ್ ಸಹಯೋಗದೊಂದಿಗೆ ನಡೆಯುವ “ಕಲಾ ಪರ್ಬ” ಚಿತ್ರ–ಶಿಲ್ಪ–ಸಾಂಸ್ಕೃತಿಕ ಮೇಳವು ಜ.9ರಿಂದ 11ರವರೆಗೆ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ. ಶಿವಪ್ರಕಾಶ್ ತಿಳಿಸಿದ್ದಾರೆ. ಕದ್ರಿ ಪಾರ್ಕ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರ ಸುಮಾರು 120 ಮಳಿಗೆಗಳಲ್ಲಿ 5,000ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು. ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಸೇರಿದಂತೆ ಕಲಾವಿದರಿಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ 120ಕ್ಕೂ ಅಧಿಕ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಉತ್ಸವದ ಕಾರ್ಯಕ್ರಮಗಳು: ಜ.9ರಂದು ಸಂಜೆ 5.30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ ನಡೆಯಲಿದ್ದು, ಭರತನಾಟ್ಯ…
ಕಾರ್ಕಳ:ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ವರ್ಗಾವಣೆ ಆದೇಶ ಹೊರಡಿಸಿದ್ದು, ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ಳಿಯಪ್ಪ ಕೆ. ಯು. ಅವರನ್ನು ಕಾರ್ಕಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿಯಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿಗೆ ಕಾರಣವಾಗಿ ಕಾರ್ಕಳದ ಎಎಸ್‌ಪಿಯಾಗಿದ್ದ ಡಾ. ಹರ್ಷಪ್ರಿಯಂವದ (ಐಪಿಎಸ್) ಅವರಿಗೆ ಬೆಂಗಳೂರು ಸಿಐಡಿ ವಿಭಾಗದ ಎಸ್ಪಿಯಾಗಿ ಬಡ್ತಿ ನೀಡಿ ವರ್ಗಾಯಿಸಲಾಗಿರುವುದು ಉಲ್ಲೇಖಿಸಲಾಗಿದೆ. ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಬೆಳ್ಳಿಯಪ್ಪ ಕೆ. ಯು. ಅವರನ್ನು ನಿಯೋಜಿಸಲಾಗಿದೆ. ಬೆಳ್ಳಿಯಪ್ಪ ಕೆ. ಯು. ಅವರು ಅನುಭವಸಂಪನ್ನ ಹಾಗೂ ಕರ್ತವ್ಯನಿಷ್ಠ ಪೊಲೀಸ್ ಅಧಿಕಾರಿ ಎಂಬ ಹೆಸರು ಪಡೆದಿದ್ದು, ಈ ಹಿಂದೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕುಂದಾಪುರ ಪೊಲೀಸ್ ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗೆ ಇದೆ. ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಬೆಳ್ಳಿಯಪ್ಪ ಅವರ ಅನುಭವ ಕಾರ್ಕಳ…
ಸುರತ್ಕಲ್ : ಸೂರಿಂಜೆ ಮೂಲದ ಉದ್ಯಮಿ ಡಿ. ಕೆ. ಶೆಟ್ಟಿ ಅವರ ಮಾಲಕತ್ವದ ಇನ್ನ ಹಾಸ್ಪಿಟಲಿಟಿ ಸಂಸ್ಥೆ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಪ್ರಮುಖ ಹಾಸ್ಪಿಟಲಿಟಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಸೇವೆ ಮತ್ತು ವೃತ್ತಿಪರ ನಿರ್ವಹಣೆಯ ಮೂಲಕ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ವ್ಯವಹಾರ ವಿಸ್ತರಣೆಯ ಉದ್ದೇಶದಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಕೇಂದ್ರವಾಗಿರುವ ಸುರತ್ಕಲ್ ನಗರದಲ್ಲಿ, ಇನ್ನ ಹಾಸ್ಪಿಟಲಿಟಿ ಸಂಸ್ಥೆಯ ನೂತನ ಶಾಖೆಯನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಜನವರಿ 1, 2026 ಗುರುವಾರ ಸಂಜೆ 4 ಗಂಟೆಗೆ, ಸುರತ್ಕಲ್‌ನ ಅಭಿಷ್ ಬ್ಯುಸಿನೆಸ್ ಸೆಂಟರ್ ಕಟ್ಟಡದಲ್ಲಿ ಭವ್ಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ನೂತನ ಶಾಖೆಯನ್ನು ವಿಶ್ವಕಪ್ ಮಹಿಳಾ ಕಬಡ್ಡಿ ವಿಜೇತ ತಂಡದ ಸದಸ್ಯೆ ಕುಮಾರಿ ಧನಲಕ್ಷ್ಮಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
