Author: Tulunada Surya

ನವದೆಹಲಿ: ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಚರ್ಚೆಯಲ್ಲಿ ಭಾಗವಹಿಸಿ ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳನ್ನು ಮುಂದಿಟ್ಟರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್‌ಟಿ ಸುಧಾರಣೆಗಳು ದೇಶದ ಆರ್ಥಿಕತೆಯನ್ನು ಬಲಪಡಿಸಿರುವುದಾಗಿ ಅವರು ಶ್ಲಾಘಿಸಿದರು. ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಇಳಿಕೆಯಿಂದ ಸಾಮಾನ್ಯ ಕುಟುಂಬಗಳಿಗೆ ಅನುಕೂಲವಾಗಿದ್ದು, ಸರಳೀಕೃತ ಆದಾಯ ತೆರಿಗೆ ವ್ಯವಸ್ಥೆ ತೆರಿಗೆದಾರರಿಗೆ ಹೆಚ್ಚಿನ ಸ್ಪಷ್ಟತೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಭದ್ರತೆ – ಆರ್ಥಿಕತೆಯ ಜೊತೆಯ ಸಂಬಂಧ ಬಜೆಟ್ ಕೇವಲ ಆರ್ಥಿಕ ದಾಖಲೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಯ ಮೂಲಾಧಾರವೂ ಆಗಿದೆ ಎಂದು ಚೌಟ ಹೇಳಿದರು. ರಕ್ಷಣಾ ವಲಯಕ್ಕೆ ಹೆಚ್ಚುವರಿ ಅನುದಾನ ಮತ್ತು ಸ್ವದೇಶಿ ಉತ್ಪಾದನೆಗೆ ಉತ್ತೇಜನವನ್ನು ಸ್ವಾಗತಿಸಿದ ಅವರು, ಸೇವಾವಧಿಯಲ್ಲಿ ಗಾಯಗೊಂಡ ಸೈನಿಕರಿಗೆ ವಿಕಲಚೇತನ ಪಿಂಚಣಿ ವಿಸ್ತರಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದರು. ರಾಜ್ಯ ಸರ್ಕಾರದ ವಿರುದ್ಧ ಟೀಕೆ ಸಹಕಾರಿ ಒಕ್ಕೂಟ…

Read More

ನವದೆಹಲಿ : ದೇಶದ ಸಾಮಾಜಿಕ ನ್ಯಾಯ ವ್ಯವಸ್ಥೆ ಹಾಗೂ ಮೀಸಲಾತಿ ನೀತಿಗಳ ಕುರಿತು ಮಹತ್ವದ ಸ್ಪಷ್ಟನೆ ನೀಡುವಂತೆ Supreme Court of India ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದೆ. ಧರ್ಮಾಂತರಗೊಂಡವರ ಪರಿಶಿಷ್ಟ ಜಾತಿ (SC) ಸ್ಥಾನಮಾನ ಕುರಿತು ದೀರ್ಘಕಾಲದಿಂದ ನಡೆಯುತ್ತಿದ್ದ ಚರ್ಚೆಗೆ ಈ ತೀರ್ಪು ಮಹತ್ವದ ದಿಕ್ಕು ನೀಡುವಂತಾಗಿದೆ. ನ್ಯಾಯಮೂರ್ತಿಗಳಾದ P. K. Mishra ಹಾಗೂ N. V. Anjaria ಅವರ ಪೀಠ, ಸಂವಿಧಾನದಲ್ಲಿ ನಿರ್ದಿಷ್ಟಪಡಿಸಿರುವ ಪರಿಶಿಷ್ಟ ಜಾತಿ ಸ್ಥಾನಮಾನವು ಮೂಲತಃ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಪುನರುಚ್ಚರಿಸಿದೆ. ಈ ಹಿನ್ನೆಲೆ, ಇತರ ಧರ್ಮಗಳಿಗೆ—ವಿಶೇಷವಾಗಿ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಗಳಿಗೆ—ಮತಾಂತರಗೊಂಡ ವ್ಯಕ್ತಿಗಳು SC ಹಕ್ಕುಗಳನ್ನು ಮುಂದುವರಿಸಲು ಅರ್ಹರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ತೀರ್ಪಿನ ಪ್ರಮುಖ ಅಂಶಗಳು: ಇದೇ ವೇಳೆ, Andhra Pradesh High Court ನೀಡಿದ್ದ ಹಿಂದಿನ ತೀರ್ಪನ್ನೂ ಸುಪ್ರೀಂ ಕೋರ್ಟ್ ಸಮರ್ಥಿಸಿದ್ದು, ಅದರಲ್ಲಿ ಕೂಡ ಇದೇ ತತ್ವವನ್ನು ಸ್ಪಷ್ಟಪಡಿಸಲಾಗಿತ್ತು. ಸಾಮಾಜಿಕ ಮತ್ತು ಕಾನೂನು ಮಹತ್ವ ಈ ತೀರ್ಪು…

Read More

ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟದ ಮಹತ್ವದ ಸಭೆ ಸಂಘಟನೆಯ ಅಧ್ಯಕ್ಷರಾದ ಎ. ಸಿ. ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ಭವಿಷ್ಯದ ಕಾರ್ಯಯೋಜನೆಗಳು, ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು-ಬೆಳೆಸುವ ದಿಕ್ಕಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಮಧ್ಯಮ ಕಾರ್ಯದರ್ಶಿ ಕರುಣಾಕರ್ ಶೆಟ್ಟಿ ಪ್ರಮುಖವಾಗಿ ಭಾಗವಹಿಸಿ ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದಲ್ಲದೆ ಸದಸ್ಯರಾದ ಸುಧಾಕರ್ ಆಳ್ವ, ಹೇಮ ದಾಮೋದರ್ ಸುವರ್ಣ, ಜಯಂತಿ ಎಸ್. ಬಂಗೇರ, ಪ್ರಶಾಂತ್ ಭಟ್ ಕಡಬ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದು, ಸಂಘಟನೆಯ ಬಲವರ್ಧನೆಗೆ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ತುಳು ಭಾಷೆಯ ಪ್ರಚಾರ-ಪ್ರಸಾರವನ್ನು ಮತ್ತಷ್ಟು ವ್ಯಾಪಕಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಯುವಜನರನ್ನು ಸಂಘಟನೆಯೊಂದಿಗೆ ಸೇರಿಸಿ ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯವನ್ನು ಒತ್ತಿ…

Read More

ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು ₹25 ಕೋಟಿ ವಂಚನೆ ನಡೆಸಿದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೇಸನ್ ಡಿಸೋಜಾ ಮತ್ತು ಲವೀನಾ ಬಂಧಿತರು. ಕೋರ್ಟ್ ಡಿ-ಗ್ರೂಪ್ ಉದ್ಯೋಗದ ಹೆಸರಿನಲ್ಲಿ ₹10 ಲಕ್ಷದಿಂದ ₹25 ಲಕ್ಷವರೆಗೆ ಹಣ ಪಡೆದು ನಕಲಿ ನೇಮಕಾತಿ ಪತ್ರಗಳನ್ನು ನೀಡುತ್ತಿದ್ದರೆಂದು ತಿಳಿದುಬಂದಿದೆ. ಬೆಂಗಳೂರುನಲ್ಲಿ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಭಾರಿ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಪೊಲೀಸರು ಜೇಸನ್ ಡಿಸೋಜಾ ಮತ್ತು ಲವೀನಾ ಎಂಬ ದಂಪತಿಯನ್ನು ಬಂಧಿಸಿದ್ದಾರೆ. ಈ ದಂಪತಿ ನಿರುದ್ಯೋಗಿಗಳು ಮತ್ತು ಖಾಸಗಿ ಉದ್ಯೋಗದಲ್ಲಿರುವವರನ್ನು ಟಾರ್ಗೆಟ್ ಮಾಡಿಕೊಂಡು “ಕೋರ್ಟ್‌ನಲ್ಲಿ ಡಿ-ಗ್ರೂಪ್ ಉದ್ಯೋಗ ಖಚಿತ” ಎಂದು ಭರವಸೆ ನೀಡುತ್ತಿದ್ದರು. ಒಬ್ಬೊಬ್ಬರಿಂದ ₹10 ಲಕ್ಷದಿಂದ ₹25 ಲಕ್ಷವರೆಗೆ ಹಣ ಪಡೆದು, ಒಟ್ಟು ₹25 ಕೋಟಿಗೂ ಹೆಚ್ಚು ಹಣ ವಂಚಿಸಿರುವುದು ತಿಳಿದುಬಂದಿದೆ.ಮೋಸದ ಭಾಗವಾಗಿ ನ್ಯಾಯಾಧೀಶರ ಸಹಿಯನ್ನು ನಕಲಿ ಮಾಡಿ, ಕೋರ್ಟ್ ಲೆಟರ್‌ಹೆಡ್‌ನಲ್ಲಿ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ, ಅವುಗಳನ್ನು ನಿಜವಾದ…

Read More

ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟವನ್ನು ತಡೆಯುವ ಉದ್ದೇಶದಿಂದ ಸಿಸಿಬಿ (CCB) ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಎಂಡಿಎಂಎ (MDMA) ಮಾದಕ ವಸ್ತು ಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಂಪ್‌ವೆಲ್–ಎಕ್ಕೂರು ಪ್ರದೇಶದಲ್ಲಿ ಆಟೋ ರಿಕ್ಷಾ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಬಂಧಿತರನ್ನು ತೊಕ್ಕೊಟ್ಟು ಪೆರ್ಮನೂರು ನಿವಾಸಿ ಹೈದರ್ ಅಲಿ (53), ಚೆಂಬುಗುಡ್ಡೆ ನಿವಾಸಿ ಮೊಹಮ್ಮದ್ ಸಜಾದ್ (29) ಹಾಗೂ ಉಡುಪಿ ಜಿಲ್ಲೆಯ ಶಿರ್ವ ಮೂಲದ ಪ್ರಸ್ತುತ ಉಜ್ಜೋಡಿಯಲ್ಲಿ ವಾಸವಾಗಿರುವ ಜೈಸನ್ ಮೆನೆಜಸ್ (26) ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಸುಮಾರು 26 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹2.50 ಲಕ್ಷ), ₹37,000 ನಗದು, 5 ಮೊಬೈಲ್ ಫೋನ್‌ಗಳು, ತೂಕಮಾಪನ ಯಂತ್ರ ಹಾಗೂ ಒಂದು ಆಟೋ ರಿಕ್ಷಾ ಸೇರಿದಂತೆ ಒಟ್ಟು ₹4,37,500 ಮೌಲ್ಯದ…

Read More

ತುಮಕೂರು: ಬೆಂಗಳೂರಿಗೆ ತೆರಳುವ ವೇಳೆ ಮಾರ್ಗ ಮಧ್ಯೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಅಚಾನಕ್ ಎದೆನೋವು ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ತಕ್ಷಣ ಎಚ್ಚರಿಕೆ ವಹಿಸಿದ ಕಾರು ಚಾಲಕ, ಯಾವುದೇ ವಿಳಂಬ ಮಾಡದೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದರು.ಮೂಲಗಳ ಪ್ರಕಾರ, ಸಚಿವರು ತಮ್ಮ ಕಾರು ಚಾಲಕ ಹಾಗೂ ಗನ್‌ಮ್ಯಾನ್ ಜೊತೆ ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಕೊಪ್ಪಳದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಸಮೀಪದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ಯುವ ನಿರ್ಧಾರ ಕೈಗೊಂಡರು.ಸದ್ಯ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ತಂಡ ಸಮಗ್ರ ಪರಿಶೀಲನೆ ನಡೆಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.ಘಟನೆಯ ವಿಷಯ ತಿಳಿದು ಬಂದ ತಕ್ಷಣ ಸಂಬಂಧಿತ ಅಧಿಕಾರಿಗಳು ಹಾಗೂ ಅಭಿಮಾನಿಗಳು ಆಸ್ಪತ್ರೆಗೆ…

Read More

ಬೆಂಗಳೂರು, ಮಾ.22: ಸಮಾಜ ಸೇವೆಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಪಕ್ಷದ ವಕ್ತಾರರಾದ ಎಂ.ಬಿ. ಸದಾಶಿವ ರವರಿಗೆ, ವಿಶೇಷ ಮಕ್ಕಳ ಆರೈಕೆಯಲ್ಲಿ ತೋರಿದ ಮಾನವೀಯತೆ ಹಾಗೂ ಸಮರ್ಪಿತ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು.ನಗರದ ಫೀಜಾ ಬೈ ನೆಕ್ಸಸ್ ಮಹಲ್‌ನಲ್ಲಿ ದಿನಾಂಕ 22-03-2026 ರಂದು ಸಂಜೆ 7.00 ಗಂಟೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ಎಂ. ಫಾರೂಕ್ ಮತ್ತು ಅವರ ಧರ್ಮಪತ್ನಿಯವರು ಸದಾಶಿವ ರವರನ್ನು ಸನ್ಮಾನಿಸಿ ಗೌರವಿಸಿದರು. ವಿಶೇಷ ಮಕ್ಕಳ ಕಲ್ಯಾಣಕ್ಕಾಗಿ ಸದಾಶಿವ ರವರು ಕೈಗೊಂಡಿರುವ ಸೇವಾ ಚಟುವಟಿಕೆಗಳು ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಅವರ ಸೇವಾ ಮನೋಭಾವನೆಗೆ ಈ ಗೌರವ ಕಾರ್ಯಕ್ರಮ ಸಾಕ್ಷಿಯಾಯಿತು. ವಿಶೇಷ ಮಕ್ಕಳ ಅಭಿವೃದ್ದಿ ಹಾಗೂ ಅವರ ಜೀವನಮಟ್ಟವನ್ನು ಉತ್ತಮಗೊಳಿಸಲು ಅವರು ತೋರಿದ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಅಭಿಪ್ರಾಯಪಟ್ಟರು.ಸನ್ಮಾನ ಸ್ವೀಕರಿಸಿದ ಸದಾಶಿವ ರವರು, “ಈ ಗೌರವ ನನ್ನೊಬ್ಬನಿಗಲ್ಲ, ವಿಶೇಷ ಮಕ್ಕಳಿಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಸೇರಿದ್ದು. ಸಮಾಜದ…

Read More

ಕಾರ್ಕಳ : ಕಾರ್ಕಳ ಜನತಾದಳ (ಜಿಡಿಎಸ್) ವಿಧಾನಸಭಾ ಕ್ಷೇತ್ರ ಹಾಗೂ ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಡಿಎಸ್ ಪಕ್ಷದ 25ನೇ ವರ್ಷದ ರಜತ ಮಹೋತ್ಸವವನ್ನು ಏಪ್ರಿಲ್ 4, 2026ರಂದು ಶನಿವಾರ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಮಹೋತ್ಸವ ಕಾರ್ಯಕ್ರಮವು ಹೆಬ್ರಿ ಸಮೀಪದ ಪರಿಮಳ ಲೇಔಟ್, ಮದಗ ಕುಚ್ಚೂರು ರಸ್ತೆಯಲ್ಲಿ ಸಂಜೆ 6.00 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 8.00 ಗಂಟೆಗೆ ಪ್ರಮುಖ ಸಭಾ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ಸ್ಥಳದಲ್ಲಿ ವಿಶಾಲ ವೇದಿಕೆ, ಸಭಾ ವ್ಯವಸ್ಥೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಜಿಡಿಎಸ್ ಶಾಸಕಾಂಗ ಪಕ್ಷದ ನಾಯಕರು ಶ್ರೀ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವರು ಹಾಗೂ ಮಾಜಿ ಸಂಸದರಾದ ಶ್ರೀ ಸಿ.ಎಸ್. ಪುಟ್ಟರಾಜು, ರಾಜ್ಯ…

Read More

ಉಡುಪಿ/ಪರಾರಿ: ಇಲ್ಲಿನ ಪರಾರಿ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ಮುಂಬರುವ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೈವಸ್ಥಾನದ ವಠಾರದಲ್ಲಿ ದಿನಾಂಕ 22-03-2026 ಭಾನುವಾರ ದಂದು ಭಕ್ತಿಪೂರ್ವಕವಾಗಿ ಜರುಗಿತು.​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರ ತಿಪ್ಪೇಶ್ ಬಿ ಎಂ ಮಣಿಪಾಲ ಠಾಣಾಧಿಕಾರಿ ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಅಶೋಕ್ ಮಳಬಾಗಿ ಅವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮುಂಬರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.​ಸಮಿತಿಯ ಅಧ್ಯಕ್ಷರಾದ ಗುರುರಾಜ್ ಭಟ್ ಕೊಳಲಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಕ್ಷೇತ್ರದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಭಟ್ ಉಪ್ಪೂರು ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ​ಈ ಶುಭ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೇಳಂಜೆ ಗ್ರಾಮಸ್ಥರು ಹೊರ ಊರಿನ ದಾನಿಗಳ ಸಹಾಯದಿಂದ ಶ್ರೀ ಗೊಬ್ಬರಿಯ ದೇವರು ಗುಡಿಯು ಬಹಳ ಸುಂದರವಾಗಿ ಮುಂದಿನ ದಿನಗಳಲ್ಲಿ ಮೂಡಿ ಬರುತ್ತದೆ ಎಂದು ಇವರು…

Read More

ಇರಾನ್‌ನಲ್ಲಿ ನಡೆಯುತ್ತಿರುವ ನಿರಂತರ ಯುದ್ಧದಿಂದ ಉಡುಪಿ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರಿನ ಸಮಸ್ಯೆ ಉಲ್ಬಣಿಸುತ್ತಿದೆ. ಸಾಮಾನ್ಯ ಜನರ ಜೀವನಕ್ಕೂ ಇದರ ಬಿಸಿ ತಟ್ಟುತ್ತಿದೆ. ಈವರೆಗೆ ಗೃಹ ಬಳಕೆಯ ಸಿಲಿಂಡ‌ರ್ ಆದರೂ ಸಿಗುತ್ತಿತ್ತು. ಈಗ ಅದರ ಲಭ್ಯತೆಯು ಇಲ್ಲದಂತಾಗಿ ಜನಸಾಮಾನ್ಯರಿಗೂ ಸಹ ಅಡುಗೆ ಮಾಡಲಾಗದೆ ಪರಿತಪಿಸುವಂತಾಗಿದೆ. ಸಣ್ಣ ಹೋಟೆಲ್‌ಗಳು, ದೊಡ್ಡ ಹೋಟೆಲ್‌ಗಳು, ಲಾಡ್ಜ್‌ಗಳು, ಸ್ವಂತ ಮನೆಯಲ್ಲಿ ವಾಸಿಸುವವರು, ಬಾಡಿಗೆ ಮನೆಯಲ್ಲಿರುವ ಜನಸಾಮಾನ್ಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸಹ ಸಿಲಿಂಡರಿನ ಸಮಸ್ಯೆಗೆ ಸಿಲುಕಿದ್ದಾರೆ. ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ವರ್ಷವೂ ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ, ವಿವಾಹ ಮುಂತಾದ ಸಮಾರಂಭ ನಡೆಯುವ ಕಾಲವಾಗಿದ್ದು, ಈಗ ಅದಕ್ಕೂ ಅನಿಲ ಪೂರೈಕೆಯ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ಸಭೆ ಸಮಾರಂಭವವನ್ನು ನಡೆಸಲಾಗದೆ ಸಿಲಿಂಡರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಗಮನಹರಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಇವರ ವಿನಂತಿ.

Read More