Author: Tulunada Surya

ಯೆಮೆನ್‌: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಗಲ್ಲಿಗೇರಿಸಲಾಗುವುದು. ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಮುಂದಿನ ವಾರ ಅಂದರೆ ಜುಲೈ 16 ರಂದು ಗಲ್ಲಿಗೇರಿಸಲಾಗುತ್ತದೆ. ಕಳೆದ ವರ್ಷ, ಯೆಮೆನ್ ಅಧ್ಯಕ್ಷರು ಕೇರಳದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಅನುಮೋದಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಗಳು ರಾಷ್ಟ್ರೀಯ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದು, ಈ ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದ್ದಾರೆ ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದ್ದಾರೆ. ಸಚಿವಾಲಯವು ಈ ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ನಿಮಿಶಾ ಪ್ರಿಯಾ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ, ಅವರು ಅಂತಿಮವಾಗಿ ತಮ್ಮ ಕ್ಲಿನಿಕ್ ನ್ನು ತೆರೆದರು ಮತ್ತು 2014 ರಲ್ಲಿ ತಲಾಲ್ ಅಬ್ದೋ ಮಹ್ದಿ ಅವರನ್ನು ಸಂಪರ್ಕಿಸಿದರು,…

Read More

10.7.25 ಗುರು ಪೂರ್ಣಿಮಾ ನಿಮಿತ್ತ ಜೈನ ಕಾಶಿ ಮೂಡು ಬಿದಿರೆ ಶ್ರೀ ಮಠ ದಲ್ಲಿ ಚಾತು ರ್ಮಾಸ ನಿಮಿತ್ತ ಆಚಾರ್ಯ ಗುಲಾಬ್ ಭೂಷಣ ಮಹಾರಾಜ್, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ರ ದಿವ್ಯ ಸಾನಿಧ್ಯ ಬೆಳಿಗ್ಗೆ ಯಿಂದ ಅಭಿಷೇಕ ಪೂಜೆ ಶ್ರಾವಕ ರಿಂದ ಕಲಶ ಸ್ಥಾಪನೆ ಶ್ರೀ ಮಠ ಹಾಗೂ ಶಾಂತಿ ಭವನ ದಲ್ಲಿ ಲಘು ಸಿದ್ದ ಚಕ್ರ ವಿಧಾನ, ಪೂಜೆ ನೆರವೇರಿತು ಬಳಿಕ ಆಶೀರ್ವಾದ ಮಡಿದ ಆಚಾರ್ಯ ರುಗುರು ಗಳ ಉಪಕಾರ ಶ್ರೇಷ್ಠ ತಪಸ್ಸು ಜ್ಞಾನ ದ ಮೂಲಕ ನಮ್ಮ ನ್ನು ಸಂಸ್ಕಾರ ವಂತ ರಾಗಿ ರೂಪಿಸುವರು ಎಂದರು ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ನಾಲ್ಕು ಜೈನ ವೇದ ದಿವ್ಯ ಧ್ವನಿ ಯಿಂದ ಸಿಗಲು ಗೌತಮ ಗಣ ಧರ ರ ಉಪಕಾರ ಅತ್ಯಂತ ಶ್ರೇಷ್ಠ ಸರ್ವರಿಗೂ ಹಿತ ವಾದ ಮಧುರ ಓಂ ಕಾರ ಧ್ವನಿ ಯನ್ನು ಗೌತಮ ಸ್ವಾಮಿ ಸಂಸಾರ ದಿಂದ ಮೋಕ್ಷ ಪಡೆಯುವ ಪ್ರಶ್ನೆ ಮಾಡುವ ಮೂಲಕ ಜ್ಞಾನ ಹರಿಯಲು ಕಾರಣ…

Read More

ಕೋಟ ಶ್ರೀನಿವಾಸ ಪೂಜಾರಿ ಅವರ ಇಪ್ಪತ್ತೈದು ಲಕ್ಷ ಅನುದಾನದಲ್ಲಿ ಪಿಲಾರು-ಪಲ್ಲ ಸಂಪರ್ಕದ ಕಚ್ಚಾ ರಸ್ತೆ ನಿರ್ಮಾಣವಾಗಲು ಹಿರಿಯರಾದ ಸುಬ್ರಾಯ ಗಟ್ಟಿಯವರ ತ್ಯಾಗ ಮನೋಭಾವವೇ ಪ್ರಮುಖ ಕಾರಣವಾಗಿದ್ದು,ಅವರು ತಮ್ಮ ಸ್ವಂತ ಸ್ಥಳವನ್ನ ಸಮಾಜಕ್ಕೆ ಬಿಟ್ಟು ಕೊಟ್ಟಿದ್ದರಿಂದ‌ ಪಿಲಾರು-ಪಲ್ಲ ಸಂಪರ್ಕದ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.ತೊಕ್ಕೊಟ್ಟಿನ‌ ಭಗತ್ ಸಿಂಗ್ ಪ್ರತಿಷ್ಠಾನದ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ನಿವೃತ್ತ ಶಿಕ್ಷಕರು ,ಪ್ರಗತಿ ಪರ ಕೃಷಿಕರಾದ ಸುಬ್ರಾಯ ಗಟ್ಟಿ ಪಿಲಾರು ಅವರಿಗೆ ಅವರ ಸ್ವಗೃಹದಲ್ಲಿ ಗುರುವಾರದಂದು ಗುರುವಂದನೆಯನ್ನ ಸಮರ್ಪಿಸಿ ಅವರು ಮಾತನಾಡಿದರು.ಬಹಳ ವರುಷಗಳ ಹಿಂದೆಯೇ ಪಿಲಾರು ಪ್ರದೇಶದ ಯುವಕರಿಗೆ ಮಾರ್ಗದರ್ಶನ ಮಾಡಲು ಸುಬ್ರಾಯ ಗಟ್ಟಿಯವರದ್ದೇ ನಾಯಕತ್ವ ಇತ್ತು.ಅವರಿಗೆ ತೊಂಭತ್ತೈದು ವರ್ಷವಾದರೂ ಇಂದಿಗೂ ಜೀವನೋತ್ಸಾಹದಲ್ಲಿದ್ದು ವಾಕ್,ಶ್ರವಣ,ಗ್ರಹಿಕಾ ಶಕ್ತಿಯನ್ನ ಹೊಂದಿದ್ದಾರೆ.ಸಂಘ ಸಂಸ್ಥೆಗಳನ್ನ ಹುಟ್ಟು ಹಾಕೋದು ಮಾತ್ರವಲ್ಲ ಅದನ್ನ ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕು.ಆ ನಿಟ್ಟಿನಲ್ಲಿ ಭಗತ್ ಸಿಂಗ್ ಪ್ರತಿಷ್ಠಾನವು ಉಳ್ಳಾಲ ಪ್ರದೇಶದಲ್ಲಿ ಇಂತಹ ಅರ್ಥಪೂರ್ಣ,ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸುತ್ತಿರುವುದು ಪ್ರಶಂಸನೀಯವೆಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾದ ಕೆ.ರವೀಂದ್ರ…

Read More

ಆದಿಮಹೇಶ್ವರಿ ಪ್ರಶಾಧಿತ ಚಿಕ್ಕ ಮೇಳ ತಂಡವು ತುಳುನಾಡ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಪ್ರಶಾಂತ್ ರೈ ಮರುವಂಜ ಮನೆ ಭೇಟಿ ಯಕ್ಷಗಾನ ಪ್ರದರ್ಶನ ನೀಡಿತು. ಈ ಸಂದರ್ಭದಲ್ಲಿ ತುಳುನಾಡಿನ ಕಲೆಯನ್ನು ಗೌರವಿಸುವ ನಿಟ್ಟಿನಲ್ಲಿ ತಂಡವನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು. ಸ್ಥಳೀಯ ತುಳುನಾಡ ರಕ್ಷಣಾ ವೇದಿಕೆ ಪ್ರಮುಖರು ಉಪಸ್ಥಿತರಿದ್ದರು.

Read More

ಮಂಗಳೂರು: ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಎಲ್ಲ ರಾಜಕೀಯ ಮುಖಂಡರುಗಳು, ಧಾರ್ಮಿಕ ಮತ್ತು ಶೈಕ್ಷಣಿಕ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಎಲ್ಲ ಸಮುದಾಯದ ಮುಖಂಡರುಗಳೊಂದಿಗೆ ಜುಲೈ 9 ರಂದು ಗೃಹ ಸಚಿವ ಪರಮೇಶ್ವರ ರವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು. ವೇದಿಕೆಯಲ್ಲಿ ವಿಧಾನಸಭಾಧ್ಯಕ್ಷರಾದ ಯುಟಿ ಖಾದರ್ , ಆರೋಗ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ , ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಕೆ.ಅರುಣ್ ಉಪಸ್ಥಿತರಿದ್ದರು.

Read More

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ವ್ಯಾಸ ಪೂಜೆಯ ದಿನ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ದಿನವನ್ನು ಗುರು ಪೂಜೆ ಅಥವಾ ಗುರು ಪೂಜೆಗಾಗಿ ಮೀಸಲಿಡಲಾಗಿದೆ. ಈ ದಿನ ಶಿಷ್ಯರು ತಮ್ಮ ಗುರುಗಳಿಗೆ ಪೂಜೆ ಅಥವಾ ಗೌರವ ಸಲ್ಲಿಸುತ್ತಾರೆ. ಗುರುವು ತನ್ನ ಜ್ಞಾನ ಮತ್ತು ಬೋಧನೆಗಳಿಂದ ಶಿಷ್ಯರನ್ನು ಪ್ರಬುದ್ಧಗೊಳಿಸುವ ಆಧ್ಯಾತ್ಮಿಕ ಮಾರ್ಗದರ್ಶಿಯನ್ನು ಸೂಚಿಸುತ್ತದೆ. ವ್ಯಾಸ ಪೂಜೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ ಮತ್ತು ಈ ದಿನವನ್ನು ವೇದವ್ಯಾಸರ ಜನ್ಮದಿನವೆಂದು ಸ್ಮರಿಸಲಾಗುತ್ತದೆ. ವೇದವ್ಯಾಸರು ಹಿಂದೂ ಮಹಾಕಾವ್ಯವಾದ ಮಹಾಭಾರತದ ಲೇಖಕ ಮತ್ತು ಪಾತ್ರ. ಗುರು ಪೂರ್ಣಿಮಾ ಹಾಗೂ ‘ವ್ಯಾಸಪೂರ್ಣಿಮೆ’ ಗುರುವನ್ನು ಸ್ಮರಿಸುವ ಪುಣ್ಯ ದಿನ_ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದ್ದು, ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯನ್ನು ವಿಶೇಷ ಮಹತ್ವ ನೀಡಲಾಗಿರುವ ಗುರು ಪರಂಪರೆಯನ್ನು ಸ್ಮರಿಸಿ ಪೂಜಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ವೇದಗಳನ್ನು ವಿಂಗಡಿಸಿ ಮಾನವ ಕುಲದ ಉದ್ಧರಿಸುವುದಕ್ಕಾಗಿ ಸಾಕ್ಷಾತ್ ವಿಷ್ಣುವೇ ವ್ಯಾಸರ ರೂಪದಲ್ಲಿ ಅವತರಿಸುತ್ತಾನೆ, ವೇದಗಳನ್ನು ವಿಂಗಡಿಸಿದ ಕಾರಣದಿಂದ ವ್ಯಾಸರಿಗೆ ವೇದ ವ್ಯಾಸ ಎಂಬ…

Read More

ಭಟ್ಕಳ-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ಮತ್ತು ಅಂಬೇಡ್ಕರ್ ಸೇನೆ ಉಡುಪಿ ವತಿಯಿಂದ ಇಂದು ಉಡುಪಿ ಜಿಲ್ಲೆಯ ಕುಂದಾಪುರ ದ ತ್ರಾಸಿಯ ಪ್ರೆಸ್ಟಿಜ್ ಹಾಲ್ನಲ್ಲಿ ಪತ್ರಿಕಾ ದಿನಾಚಾರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರದ ಹೆಮ್ಮೆಯ ಅಂತಾರಾಷ್ಟ್ರೀಯ ಪವರ್ ಲಿಫ್ಟರ ಶ್ರೀ ಸತೀಶ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪರವಾಗಿ ಕುಂದಾಪುರ ಹಿರಿಯ ನ್ಯಾಯವಾದಿ ಶ್ರೀ ರವಿಕಿರಣ್ ಮುರುಡೇಶ್ವರ ಅವರು ಕುಂದಾಪುರದ ಹೆಮ್ಮೆಯ ಅಂತಾರಾಷ್ಟ್ರೀಯ ಪವರ್ ಲಿಫ್ಟರ ಶ್ರೀ ಸತೀಶ್ ಖಾರ್ವಿ ಅವರಿಗೆ ಶಾಲು ಹೊದಿಸಿ, ಪೇಟ , ತೊಡಿಸಿ , ಹಾರ ಹಾಕಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಶ್ರೀ ಪ್ರಭಾಕರ್ ಪೂಜಾರಿ ಉಡುಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಅಧ್ಯಕ್ಷ ಶ್ರೀ ಬಂಗ್ಲೆ ಮಲ್ಲಿಕಾರ್ಜುನ , ಖ್ಯಾತ ಮುಳುಗು ತಜ್ಞ , ಸಮಾಜ ಸೇವಕ ಈಶ್ವರ ಮಲ್ಪೆ, ಕುಂದಾಪುರ ವಲಯ ಅರಣ್ಯ ಅಧಿಕಾರಿ…

Read More

ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಶಾಂತಿ ಸೌಹಾರ್ದ ನೆಲೆಸಲು ಪ್ರಯತ್ನಿಸುತ್ತಿರುವ ಗ್ರಹ ಮಂತ್ರಿಯವರಿಗೆ ಪ್ರಶಾಂತ್ ರೈ ಮರವಂಜ ಸನ್ಮಾನಿಸಿದರು. ಇತ್ತೀಚೆಗೆ ತುಳುನಾಡ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಪ್ರಶಾಂತ್ ರೈ ಮರವಂಜ ನೇತೃತ್ವದಲ್ಲಿ ನಿಯೋಗ ಕರ್ನಾಟಕ ಸರ್ಕಾರದ ಗೃಹ ಸಚಿವ ಪರಮೇಶ್ವರರವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಶಾಂತಿ ಸೌಹಾರ್ದ ನೆಲೆಸಲು ಉತ್ತಮ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುತ್ತಿರುವ ಗ್ರಹ ಮಂತ್ರಿಯವರಿಗೆ ಶಾಲು ಹೊದಿಸಿ ಗೌರವ ಸನ್ಮಾನಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟಿ ಶ್ರೀಮತಿ ಪ್ರವೀಣ ಪ್ರಶಾಂತ್ ರೈ ಮರುವಂಜ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಎಂದು ಮರು ನಾಮಕರಣ ಮಾಡುವ ಹೋರಾಟಕ್ಕೆ ಸಮಿತಿ ರಚಿಸಲಾಗಿದೆ. ಇದರಲ್ಲಿ ಪದಾಧಿಕಾರಿಗಳ ನೇಮಕ ಮಾಡಿಲ್ಲ, ಪಕ್ಷಾತೀತವಾಗಿ ಎಲ್ಲರನ್ನೂ ಒಳಗೊಂಡ ಸಮಿತಿಯಾಗಿದೆ ಎಂದು ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ. ಸಾರ್ವತ್ರಿಕವಾಗಿ ತುಳುನಾಡು ಎಂದು ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡನ್ನು ಒಳಗೊಂಡ ಭೂಭಾಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೆಸರು ಇತ್ತು. ಸುಮಾರು 2,000 ವರ್ಷಗಳ ಹಿಂದೆ ತಮಿಳಿನ ಸಂಗಂ ಸಾಹಿತ್ಯವಾದ ‘ಅಗನಾನೂರು’ ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿರುವುದು ನಮ್ಮ ಪ್ರದೇಶದ ಪುರಾತನ ದಾಖಲೆಯಾಗಿದೆ. ಮುಂದೆ ಆಳುಪರು, ಪಲ್ಲವರು, ಹೊಯ್ಸಳರು, ವಿಜಯನಗರ, ಕೆಳದಿ ರಾಜರು ತುಳು ವಿಷಯ, ತುಳು ದೇಶ, ತುಳು ರಾಜ್ಯ ಎಂದು ನಮ್ಮ ಆವಿಭಜಿತ ಜಿಲ್ಲೆಗಳನ್ನು ಗುರುತಿಸಿರುವುದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿರುವ ದಾಖಲೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಂಗಳೂರು ರಾಜ್ಯ, ಬಾರ್ಕೂರು ರಾಜ್ಯ ಎಂದು ಈಗಿರುವ ತುಳುನಾಡನ್ನು ವಿಭಾಗಿಸಿ ಆಡಳಿತಾತ್ಮಕವಾಗಿ ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು…

Read More

ಮಂಗಳೂರು : ಆಲ್ ಮರೀನಾ ಬಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದಿಕ್ ಪಾಂಡವರ ಕಲ್ಲು ಎಂಬಾತ ಮುಸ್ಲಿಂ ಯುವತಿಯರಿಗೆ ಮದುವೆ ಮಾಡಿಸುವ ನೆಪದಲ್ಲಿ ಕ್ರೌಡ್ ಫಂಡ್‌ ಸಂಗ್ರಹ ಮಾಡುವುದಲ್ಲದೆ ಇದರ ಜತೆ ಯುವತಿಯರ ಮೊಬೈಲ್ ನಂಬರ್ ಪಡೆದು ಆ ಬಳಿಕ ತನ್ನ ಆನೈತಿಕ ಸಂಬಂಧಕ್ಕೆ ಬಳಸಿಕೊಳ್ಳಲು ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಇನ್ನೊಂದು ಸಂಸ್ಥೆಯವರು ನನಗೆ ತಿಳಿಸಿ ಸಹಾಯ ಯಾಚಿಸಿದಾಗ ಸತ್ಯಾಸತ್ಯತೆಯನ್ನು ತಿಳಿಯಲು ಸಿದ್ದೀಕ್ ನನ್ನು ಕರೆದು ವಿಚಾರಿಸಿದಾಗ ಆತ ತನ್ನ ತಪ್ಪನ್ನು ಮರೆಮಾಡಲು ಅತ್ಮಹತ್ಯೆಗೆ ಪ್ರಯತ್ನಿಸಿದ್ದು ವಿಫಲವಾದಾಗ ಅವರಿಗೆ ಮುಖ ತೋರಿಸಲು ನಾಚಿಕೆ ಪಟ್ಟು ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿಸುಳ್ಳು ಕೇಸ್ ದಾಖಲಿಸಿರುವುದಾಗಿ ಡಿ ವಾಯ್ಸ್ ಬ್ಲಡ್ ಡೊನೊರ್ಸ್ ಮಂಗಳೂರು ಇದರ ಸ್ಥಾಪಕ ಅಬ್ದುಲ್ ರವೂಫ್ ಬಂದ‌ರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವಾಯ್ ಆಪ್ ಬ್ಲಡ್ ಡೋನರ್ನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಿ ದಾಖಲೆಯ ಮಟ್ಟದಲ್ಲಿ ರಕ್ತದಾನ ಮಾಡಿಸಿ, ಸಮಾಜಕ್ಕೆ ಉಚಿತ ಆಂಬುಲೆನ್…

Read More