Author: Tulunada Surya

*ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಸಭೆಯು ದಿನಾಂಕ 9-2-25 ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಉಡುಪಿ ಜಿಲ್ಲಾ ಕಛೇರಿಯಲ್ಲಿ. ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ಸಂಪಾದಕ ಶಶಿ ಬಂಡಿಮಾರ್ ರವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಶಿ ಬಂಡಿಮಾರ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಶಶಿ ಬಂಡಿಮಾರ್ ರವರು ತುಳು ಭಾಷೆಗಾಗಿ ಅವರು ಮಾಡಿದ ತ್ಯಾಗ ಕುರಿತು ವಿವರಿಸಿ ಶಶಿ ಬಂಡಿಮಾರ್ ರವರ ಹೆಸರಿನಲ್ಲಿ ತುಳು ಭವನದಲ್ಲಿ ಯಾವುದಾದರೂ ಒಂದು ವೇದಿಕೆ ಅಥವಾ ಸಭಾಂಗಣಕ್ಕೆ ಹೆಸರು ಇಡುವಂತೆ ಪ್ರಯತ್ನಿಸಬೇಕು ಎಂದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಶಶಿ ಬಂಡಿಮಾರ್ ರವರು ತುಳು ಭಾಷೆಗಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ಎಲ್ಲಾ ತುಳು ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕು ಎಂದರು.ತುಳುನಾಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಕೃಷ್ಣ ಕುಮಾರ್,…

Read More

ದಿನಾಂಕ: 12-02-2025 ರಂದು ಬೆಳಿಗ್ಗೆ 11-00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಸುಳ್ಯ ತಾಲೂಕು ಕಛೇರಿ, ಸುಳ್ಯ ಇಲ್ಲಿ “ಲೋಕಾಯುಕ್ತ ಜನ ಸಂಪರ್ಕ ಸಭೆ” ಕಾರ್ಯಕ್ರಮಮನ್ನು ಆಯೋಜಿಸಲಾಗಿರುತ್ತದೆ. ಬಳಿಕ ಅಪರಾಹ್ನ 2.00 ಗಂಟೆಯಿಂದ ಅಪರಾಹ್ನ 3.00 ಗಂಟೆಯವರೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಸದರಿ ದಿನಾಂಕದಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ. ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರ್ವ ತುಳು ಸಂಘಟನೆಗಳಿಂದ “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ದಿ. ಶಶಿರಾಜ್ ಬಂಡಿಮಾರ್ ಇವರಿಗೆ ಶ್ರದ್ಧಾಂಜಲಿ ಸಭೆ ಫೆ.7 ರಂದು ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಿತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ತಾರನಾಥ್ ಗಟ್ಟಿ ನುಡಿ ನಮನ ಸಲ್ಲಿಸಿ ಮಾತನಾಡಿ, ಶಶಿ ಬಂಡಿಮಾರ್ ತುಳು ಭಾಷೆ, ತುಳುವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರ ನಿಧನ ತುಳುವರಿಗೆ ದೊಡ್ಡ ನಷ್ಟ , ಇಡಿ ತುಳುನಾಡಿಗೆ ದುಃಖದ ಸಂಗತಿ ಎಂದು ಹೇಳಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ,ತುಳು ರಾಜ್ಯದ ವಿಷಯ ಬಂದಾಗ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ದಿಟ್ಟವಾಗಿ ನುಡಿದವರು ಶಶಿ ಬಂಡಿಮಾರ್ ಎಂದು ಹೇಳಿದರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ತುಳು ಭಾಷೆ ಅಧಿಕೃತ ಮಾಡುವ ಕೆಲಸಕ್ಕೆ ವೇಗ ಕೊಡಬೇಕೆಂದು ಶಶಿ ಬಂಡಿಮಾರ್ ಜತೆ ಹೇಳಿದ್ದೆ.…

Read More

ಬಂಟ್ವಾಳ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ, ತುಳು ಸಾಹಿತ್ಯ ಸಮ್ಮೇಳನ ಫೆಬ್ರವರಿ 6 ರಂದು ನಡೆಯಿತು. ಫೆಬ್ರವರಿ 6ರಂದು ಬೆಳಗ್ಗೆ ದೀಪೋಜ್ವಲನ ಮೂಲಕ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆಯನ್ನು ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನೆರವೇರಿಸಿದರು. ಸಾಧ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯದಲ್ಲಿ ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಯಾವುದೇ ಸಮಸ್ಯೆಗಳಿಗೆ ಪರಿಹಾರವಿರುವುದು ಆಧ್ಯಾತ್ಮಿಕತೆಯಲ್ಲಿ. ಅದರ ಉದ್ದೇಶದಲ್ಲಿ ಇಂದು ಆಧ್ಯಾತ್ಮ ಕೇಂದ್ರದ ಲೋಕಾರ್ಪಣೆಯಾಗಿದೆ ಅದು ಸದುಪಯೋಗವಾಗಬೇಕಾದರೆ ಭಕ್ತರ ಸಹಕಾರ ಅಗತ್ಯ ಎಂದು ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ, ಡಾ ರಾಮಾನಂದ ಶೆಟ್ಟಿ, ಹರೀಶ್ ಶೆಟ್ಟಿ ಐಕಳ, ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಕಡಂಜಾರು…

Read More

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಉದ್ದಿಮೆ ಪರವಾನಿಗೆಗೆ ಸಂಬಂಧಪಟ್ಟ ಅಹವಾಲುಗಳನ್ನು ಸ್ವೀಕರಿಸಲು ಸಲುವಾಗಿ ಉದ್ದಿಮೆ ಪರವಾನಿಗೆ ಅದಾಲತ್ ವಿನೂತನ ರೀತಿಯಲ್ಲಿ ನಡೆಯಿತು. ಇಂದು ನಗರದ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿಯ ಮುಂಭಾಗದಲ್ಲಿ ಉದ್ದಿಮೆ ಪರವಾನಿಗೆ ಅದಾಲತ್ ನಡೆಸಲಾಯ್ತು. ಅದಾಲತ್‌ನಲ್ಲಿ ಹಲವಾರು ಮಂದಿಯ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಿ, ತಕ್ಷಣವೇ ಬಗೆಹರಿಸಿದರು. ಈ ವೇಳೆ ಮೇಯರ್ ಮನೋಜ್ ಕುಮಾರ್ ಮಾತನಾಡಿ, ಪಾಲಿಕೆಗೆ ಮೊಟ್ಟ ಮೊದಲ ಬಾರಿಗೆ ವ್ಯಾಪಾರ ಪರವಾನಿಗೆ ಅದಾಲತ್ ನಡೆಸಲಾಗುತ್ತಿದೆ. ಪಾಲಿಕೆಯ ಅದಾಯ ಮೂಲವೇ ಟ್ರೇಡ್ ಲೈನ್ಸ್ ಆಗಿದೆ. ಇದರಿಂದಾಗಿ ಪಾಲಿಕೆಗೆ ಹೆಚ್ಚುವರಿ ಅದಾಯ ಬರುತ್ತದೆ. ಕೆಲವರು ಕೆಲವೊಂದು ಸಮಸ್ಯೆಗಳಿಂದ 10-15 ವರ್ಷಗಳಿಂದ ನವೀಕರಣ ಮಾಡದೇ ಇರುವುದರಿಂದ ಪಾಲಿಕೆಗೆ ದೊಡ್ಡ ಮಟ್ಟಿನ ಸಮಸ್ಯೆ ಆಗುತ್ತಿರುವ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ತತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವ ಸದುದ್ದೇಶದಿಂದ ಅದಾಲತ್ ನಡೆಸಲಾಗಿದೆ ಎಂದು ಹೇಳಿದರು. ಇಂದು ಮಹಾನಗರಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಜರಗಿದ ವ್ಯಾಪಾರ ಪರವಾನಿಗೆ ಅಧಾಲತ್ ನಲ್ಲಿ ನವೀಕರಣದ…

Read More

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಇದರ 2025-26 ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ , ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷ ಶ್ರೀ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಬಲ್ಲಾಳ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಯೂನಿಯನ್ ನಿರ್ದೇಶಕ ಹಾಗೂ ಶಾಸಕ ಯಶ್ಪಾಲ್ ಎ ಸುವರ್ಣ, ನಿರ್ದೇಶಕರುಗಳಾದ ಎಚ್. ಗಂಗಾಧರ ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಬಿ.ಕರುಣಾಕರ ಶೆಟ್ಡಿ, ಪ್ರಸಾದ್ ಎಸ್.ಶೆಟ್ಟಿ, ಸುಧೀರ್ ವೈ., ಬಿ.ಪ್ರದೀಪ್ ಯಡಿಯಾಳ್, ಅನಿಲ್ ಎಸ್.ಪೂಜಾರಿ, ಅಲೆವೂರು ಹರೀಶ್ ಕಿಣಿ, ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಧರ್ ಪಿ.ಎಸ್., ಸಹಕಾರ ಸಂಘಗಳ ಉಪ ನಿಬಂಧಕ ಕೆ.ಆರ್.ಲಾವಣ್ಯ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಕನ್ಯ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್…

Read More

ಮಂಗಳೂರು : ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ಟೈಮ್ಸ್ ಆಫ್ ಕುಡ್ಲದ ಪ್ರಧಾನ ಸಂಪಾದಕ‌ ಶಶಿ ಬಂಡಿಮಾರ್ ಕಳೆದ ಬುಧವಾರ ನಿಧನ ರಾದ ಹಿನ್ನೆಲೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಸಂತಾಪ ಸೂಚಕ ಸಭೆ ನಡೆಯಿತು.ಟೈಮ್ಸ್ ಆಫ್ ಕುಡ್ಲತುಳು ಪತ್ರಿಕೆಯ ಸಂಪಾದಕ, ನಮ್ಮ ಸಂಘದ ಸಕ್ರಿಯ ಸದಸ್ಯರಾ ಗಿದ್ದು,ತುಳು ಭಾಷೆ ಸಂಸ್ಕೃತಿಯ ಕುರಿತಾಗಿ ತನ್ನ ಪತ್ರಿಕೆಯ ಮೂಲಕ ಶಶಿ ಬಂಡಿಮಾರ್ ಜಾಗೃತಿ ಮೂಡಿಸಿದವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ನುಡಿನಮನ ಸಲ್ಲಿಸಿದರು. ಯುವ ಉತ್ಸಾಹಿ ಉದ್ಯಮಿ ಪರಿಶ್ರಮದಿಂದ ತುಳು ಪತ್ರಿಕೆಯನ್ನು ನಡೆಸಿಕೊಂಡು ಬಂದವರು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದ ಪತ್ರ ಕರ್ತ ಶಶಿ ಬಂಡಿಮಾರ್ ನಮ್ಮನ್ನಗಲಿದ್ದಾರೆ ಎಂದು ಮಂಗಳೂರು ಪ್ರೆಸ್‌ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಂತಾಪ ಸೂಚಿಸಿದ್ದಾರೆ. ತುಳು ಪತ್ರಿಕೆ ನಡೆಸುತ್ತಾ,…

Read More

ಮಂಗಳೂರು : ಜನವರಿ 30ರಂದು ನಾಗಾಲ್ಯಾಂಡ್ ನಲ್ಲಿ ಹೃದಯಘಾತದಿಂದ ನಿಧನ ಹೊಂದಿದ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕರು ಆಗಿದ್ದು ತುಳು ಭಾಷೆ ಸಾಹಿತ್ಯ ಸಂಸ್ಕೃತಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿ ಹಲವು ಜನರಿಗೆ ಉದ್ಯೋಗದಾತರಾಗಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಶಶಿ.ಆರ್. ಬಂಡಿಮಾರ್ ರವರಿಗೆ ಫೆಬ್ರವರಿ 07 ಶುಕ್ರವಾರ ಸಂಜೆ 3:30ಕ್ಕೆ ಮಂಗಳೂರಿನ ಊರ್ವಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಭಾಂಗಣ ತುಳು ಭವನದಲ್ಲಿ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ.

Read More

ಕುಂದಾಪುರ: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಜಿಲ್ಲಾ ಪೊಲೀಸ್ ಕಛೇರಿಯ ಹೆಡ್ ಕಾನ್ ಸ್ಟೇಬಲ್ ಶಿವಾನಂದ ನಾಯರಿ ಅವರ ಸೇವೆಯನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ ಕುಂದಾಪುರ ಘಟಕ ಅವರ ಮನೆಗೆ ತೆರಳಿ ಕುಟುಂಬದವರ ಸಮ್ಮುಖದಲ್ಲಿ ಶಿವಾನಂದ ಬಾಯರಿ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸತೀಶ್ ಖಾರ್ವಿ ಅಂತರಾಷ್ಟ್ರೀಯ ಪವರ್ ಲಿಫ್ಟ್ ರ್ ಕ್ರೀಡಾಪಟು, ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾಕ್ಟರ್ ರವೀಂದ್ರ ತಲ್ಲೂರು, ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಸಂಯೋಜಕರು ಶಿವಾನಂದ ತಲ್ಲೂರು ಹಾಗೂ ಕುಂದಾಪುರ ಘಟಕ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಆನಂದ್ ಖಾರ್ವಿ, ಕೇಶವ ಖಾರ್ವಿ, ನಿತ್ಯಾನಂದ ನಾಯ್ಕ್ , ಉಮೇಶ್ ನಾಯರಿ ಕಿರಿಮಂಜೇಶ್ವರ, ನವೀನ್ ನಾಯರಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು. ಹರ್ಷವರ್ಧನ್ ಖಾರ್ವಿ ಯವರು ಕಾರ್ಯಕ್ರಮ ನಿರೂಪಿಸಿದರು

Read More

ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ರಕರಣದ ನಾಲ್ವರು ಆರೋಪಿಗಳನ್ನು ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು ಆದರೆ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ತಲಪಾಡಿಯ ಅಲಂಕಾರು ಗುಡ್ಡದ ಬಳಿ ಕರೆದುಕೊಂಡು ಹೋಗಿದ್ದರು. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನ ಹಿನ್ನೆಲೆ ಆರೋಪಿ ಕಣ್ಣನ್​ಮಣಿ ಕಾಲಿಗೆ ಫೈರಿಂಗ್​ ಮಾಡಲಾಗಿತ್ತು ಆದರೆ ಇದೀಗ ಮತ್ತೋರ್ವ ಆರೋಪಿ ಮಹಜರ್ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುರುಗನ್ ಮೇಲೆ ಪೊಲೀಸರು ಗುಂಡು ಹಾರಿಸಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಆರೋಪಿ ದರೋಡೆಗೆ ಬಳಸಿದ್ದ ಪಿಸ್ತೂಲ್​ ಅನ್ನು ಬಚ್ಚಿಟ್ಟಿದ್ದ. ಅದನ್ನು ರಿಕವರಿ ಮಾಡಲು ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ…

Read More