Author: Tulunada Surya

ಇತಿಹಾಸ ಪ್ರಸಿದ್ದ ಜೈನ ಕಾಶಿ ಮೂಡುಬಿದಿರೆ ಕ್ಷೇಮ ವೇಣು ಪುರ 18 ಬಸದಿ ಸರೋವರ ದೇಗುಲ ಗಳಿಂದ ಪ್ರಸಿದ್ದ ವಾಗಿದ್ದು ಕ್ರಿ ಪೂ 6 ನೇ ಶತ ಮಾನ ಕ್ಕಿಂತಲೂ ಪೂರ್ವ ದಲ್ಲಿ ಪಾರ್ಶ್ವ ಮುನಿ ಗಳ ತಪ ಪ್ರಭಾವ ಕ್ಕೆ ಒಳಗಾಗಿ ಉರಗ ಪುರ ವು ಪಾರ್ಶ್ವ ಪುರ ಮೂಡು ಬಿದಿರೆ ವಂಶ ಪುರ, ಕ್ಷೇಮ ವೇಣು ಪುರ ಎಂದು ಪ್ರಸಿದ್ಧ ವಾದ ದಕ್ಷಿಣ ಭಾರತ ದ ಜೈನ ಸಿದ್ದ ತೀರ್ಥ ಅತಿಶಯ ಕ್ಷೇತ್ರ ವಾಗಿದೆಇಲ್ಲಿಯ ಗುರು ಪರಂಪರೆ ಪ್ರಾಚೀನ ವಾಗಿದ್ದು ಕಾಲo ತರ ಗಳಲ್ಲಿ ವಿವಿಧ ಕಾರಣ ಗಳಿಂದ ಅನೇಕ ಸಾನ್ನಿಧ್ಯ ಗಳು ಕಾಲ ನ ಅವಕೃಪೆ ಗೆ ಒಳಗಾಗಿ ಅಜೀರ್ಣ ಗೊಂಡವು ಅಂತಹ ನಾಗ ಸರೋವರ ಬಳಿಯ ನಾಗ ಬನವು ಅಜೀರ್ಣ ಗೊಂಡಿದ್ದು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನ ನೇತ್ರ ತ್ವ ದಲ್ಲಿ ಇಲ್ಲಿಯ ಮೂಲ ನಾಗ…

Read More

02-03-2025 ರಂದು ಬಂಟರ ಯಾನೆ ನಾಡವರ ಸಂಘ ಹೊಸನಗರ(ರಿ ) ಆಶ್ರಯದಲ್ಲಿ ಬೆಂಗಳೂರು ಬಂಟರ ಸಂಘ ಇವರ ಸಹಭಾಗಿತ್ವದಲ್ಲಿ ಶ್ರೀ ಗಣಪತಿ ದೇವಸ್ಥಾನದ ಸಭಾಭವನ ಹೊಸನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ,ಬಂಟ ಸಮುದಾಯದಿಂದ ಚುನಾವಣೆಯಲ್ಲಿ ಅರಸಿ ಬಂದ ಹೊಸನಗರ ತಾಲೂಕಿನ ಬಂಟರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಬಂಟರ ಸಂಘ ಬೆಂಗಳೂರು ಪರವಾಗಿ ಸಂಘದ ಅಧ್ಯಕ್ಷರು ಆದ ಸಿ ಎ ಅಶೋಕ್ ಶೆಟ್ಟಿ , ಉಮೇಶ್ ಶೆಟ್ಟಿ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಕಾರ್ಯಕ್ರಮ ದಲ್ಲಿ ಕಾರ್ಯಕಾರಿ ಸಮಿತಿ ಸದ್ಯಸರಾದ ಗೀತಾ ಶೆಟ್ಟಿ ಉಪಸ್ಥಿತರಿದ್ದರು. ಬೆಂಗಳೂರು ಬಂಟರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು , ವಿದ್ಯಾರ್ಥಿ ವೇತನ ಸಮಿತಿ ಸದಸ್ಯರು ಹಾಗೂ ಬಂಟರ ಸಂಘ ಹೊಸನಗರದ ಸದಸ್ಯರು ಉಪಸ್ಥಿತರಿದ್ದರು

Read More

ಕರ್ನಾಟಕ ರಾಜ್ಯೋಡು ನಮ್ಮ ತುಳು ಭಾಷೆಗ್ ಅಧಿಕೃತ ಸ್ಥಾನಮಾನ ತಿಕ್ಕೊಡುಂದು, ತೌಳವ ಸಂಗಮದ ಶ್ರೀ ಉಪ್ಪಳ ರಾಜಾರಾಮ ಶೆಟ್ಟಿ ಮೆರೆನ ಮುತಾಲಿಕೆಡ್ ಬೆಂಗಳೂರು ಪ್ರೆಸ್ ಕ್ಲಬ್ ಡ್ ವಿಶೇಷ ಪತ್ರಿಕಾ ಗೋಷ್ಠಿ 08-03-2025 ಕ್ ನಡತ್ಂಡ್. ಪಳ್ಳಿ ವಿಶ್ವನಾಥ್ ಶೆಟ್ಟಿ ಪತ್ರಿಕಾ ಗೋಷ್ಠಿದ ಬಗ್ಗೆಡ್ ಪ್ರಾಸ್ತಾವಣೆ ಮಲ್ತೆದ್,ತುಳುವೆರೆನ ಜೋಕುಲೆಗ್ ಮಾತೃಭಾಷಾ ಶಿಕ್ಷಣದ ಅವಕಾಶ ಬೊಕ ಸವಲತ್ ತಿಕ್ಕೊಡುಂದು ಬಿನ್ನಪ ಮಲ್ತೆರ್ . ಅನುಭವಿ ವಕೀಲೆರಾಯಿನ ಶ್ರೀ ದೀಪಕ್ ಶೆಟ್ಟಿ ಬೇಲಾಡಿ ತುಳುಭಾಷೆದ ಕಾನೂನಾತ್ಮಕ ಸ್ಥಾನಮಾನೋಗಾದ್ ಉಪಯುಕ್ತ ವಿಚಾರೊಲೆನ್ ಮಂಡನೆ ಮಲ್ತೆರ್. ತುಳು ಭಾಷೆದ ವ್ಯಾಪ್ತಿ, ಕಾನೂನಾತ್ಮಕ ಅರ್ಹತೆದ ಬಗ್ಗೆಡ್ ಸವಿವರವಾದ್ ಮಾಧ್ಯಮದ ಬಂಧುಲೆಗ್ ಮನದಟ್ ಮಲ್ತೆರ್. ದ.ಕ. ಸಂಘದ ಡಾ. ಕೆ.ಸಿ. ಬಲ್ಲಾಳ್, ತುಳುವೆರೆಂಕುಲುದ ಡಾ. ಕೆ.ಎನ್. ಅಡಿಗ, ಬೆಂಗಳೂರು ತುಳುಕೂಟದ ಗೌ. ಅಧ್ಯಕ್ಷೆರ್ ಶ್ರೀ ರಾಜೇಂದ್ರ ಕುಮಾರ್ ಕೆ.ವಿ, ತುಳುವೆರೆ ಚಾವಡಿದ ಶ್ರೀ ಉಮೇಶ ಪೂಂಜಾ, ಜೈ ತುಳುನಾಡ್ ದ ಶ್ರೀ ಧನಂಜಯ ಆಚಾರ್ಯ, ಸಂಶೋಧಕಿ,ಪತ್ರಕರ್ತೆ ಪ್ರೊ. ಶ್ರೀಲತಾ, ಐ-ಲೇಸಾ…

Read More

ಮಂಗಳೂರು: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರಕಾರಕ್ಕೆ ನೆರವಾಗಲು, ರಾಜ್ಯದಲ್ಲಿ 1974 ರಲ್ಲಿ ಸ್ಥಾಪಿಸಲಾಗಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿ ಸಿ ಆರ್ ಇ) ವನ್ನು 33 ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸಲು ಸರಕಾರ ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸಿರುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ – ಸಂಸ್ಥೆಗಳ ಮಹಾಒಕ್ಕೂಟವು, ಈ ಯೋಜನೆ ಕಾನೂನುಗಳ ಆಶಯದಂತೆ ಅನುಷ್ಠಾನಗೊಳ್ಳಲು ಈ ಎಲ್ಲ ವಿಶೇಷ ಪೊಲೀಸ್ ಠಾಣೆಗಳಿಗೆ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಮಾರ್ಚ್ 7 ರಂದು ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಪ್ರಕಟಿಸಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಇದಕ್ಕೆ ಕಾರಣ ಕರ್ತರಾದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಡಿ ಸಿ ಆರ್…

Read More

ಕುಂದಾಪುರ: ಡಾ. ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ ಹಾಗೂ ಕುಂದಾಪುರ ಸಿಟಿ ಜೆ.ಸಿ.ಐ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಲಕ್ಷ್ಯ ಕ್ಲಿನಿಕ್ ನ ವೈದ್ಯೇ ಡಾ. ಅಮ್ಮಾಜಿ ಸನ್ಮಾನ ಸ್ವೀಕರಿಸಿದರು . ಹೆಮ್ಮಾಡಿಯ ಲಕ್ಷ್ಯ ಕ್ಲಿನಿಕ್ ನ ವೈದ್ಯೇ ಡಾ. ಅಮ್ಮಾಜಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಲ್ಲಿಯೇ ಹೆಣ್ಣು ವಿವಿಧ ನೆಲೆಯಲ್ಲಿ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು ಆತ್ಮಸ್ಥೈರ್ಯ ಮತ್ತು ನಿಷ್ಠೆಯಿಂದ ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಹೆಣ್ಣು ಮಕ್ಕಳಿಗೆ ಸಮಾಜದ ಮುಖ್ಯ ಭೂಮಿಕೆಯಲ್ಲಿ ಗುರುತಿಸುವಂತಾಗಬೇಕಾದರೆ ಪೋಷಕರು ಮತ್ತು ಹೆತ್ತವರ ಬೆಂಬಲ ಅತ್ಯಂತ ಮುಖ್ಯ ನನ್ನ ಮನೆಯವರ ನೆರವಿನಿಂದ ನಾನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ ವಾಯಿತು ಎಂದರು.

Read More

ಮಂಗಳೂರು ; ಫರಂಗಿಪೇಟೆಯ ನಿವಾಸಿ ಯುವಕ 19 ವರ್ಷ ಪ್ರಾಯದ ದಿಗಂತ್ ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ನಾಯಕರು ದಿಗಂತ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದ್ದು ಹಲವು ರೀತಿಯ ಪ್ರತಿಭಟನೆ ಕೂಡ ನಡೆಸಿದ್ದರು. ಇದೀಗ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಪೊಲಿಸರು ಆತನನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೋಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿ‌ಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮೆರಾಗಳನ್ನು ಬಳಿಸಿ ಹುಡುಕಾಟ ನಡೆಸಿದ್ದರು ಇಂದು ಕೂಡ ಅನೇಕ ಕಡೆಗಳಲ್ಲಿ ಕ್ಯೂಬಿಂಗ್ ಕಾರ್ಯಚರಣೆ ಕೂಡ ನಡೆಸಿತ್ತು ಒಟ್ಟಿನಲ್ಲಿ ನಾಪತ್ತೆಯಾದ ಯುವಕ ಸಿಕ್ಕಿರುವುದು ಪೋಲಿಸ್ ಇಲಾಖೆಯ ಅವಿರತ ಶ್ರಮಕ್ಕೆ…

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಮಹಿಳಾ ದಿನಾಚರಣೆ ಸುನಂದ ಕೋಟ್ಯಾನ್ ಕಟಪಾಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು ದಿನಾಂಕ 08-03-2025 ರಂದು ಉಡುಪಿ ಜಿಲ್ಲಾ ಮಹಿಳಾ ಘಟಕ ವತಿಯಿಂದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಹಿಳಾ ಘಟಕದ ಪ್ರಮುಖರಾದ ಜ್ಯೋತಿ ಬನ್ನಂಜೆ, ಸುಲೋಚನಾ, ಶ್ಯಾಮಲಾ, ಅಶ್ವಿನಿ , ದನವಂತಿ ಮತ್ತಿತರರು ಉಪಸ್ಥಿತರಿದ್ದರು.

Read More

ಮಂಗಳೂರು:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾರ್ಚ್ 8 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.ಮಾರ್ಚ್ 8 ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ಆಗಮನ, 2:25 ಗಂಟೆಗೆ ಸಕ್ರ್ಯೂಟ್ ಹೌಸ್ ಆಗಮನ, 2:30 ಗಂಟೆಗೆ ಸಕ್ರ್ಯೂಟ್ ಹೌಸ್‍ನಲ್ಲಿ ಪತ್ರಿಕಾಗೋಷ್ಠಿ, ಸಂಜೆ 4 ಗಂಟೆಗೆ ನಾವೂರು ಗ್ರಾಮದ ಕೂಡಿಬೈಲು ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ, ಬಂಟ್ವಾಳ ವತಿಯಿಂದ 14ನೇ ವರ್ಷದ ಹೊನಲು ಬೆಳಕಿನ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳದ ಕಾರ್ಯಕ್ರಮದಲ್ಲಿ ಭಾಗಿ, ಸಂಜೆ 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಸಚಿವರು ಬೆಂಗಳೂರಿಗೆ ತೆರಳಲಿದ್ದಾರೆ.

Read More

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2022 ಹಾಗೂ 2023 ಮತ್ತು 2024 ಈ ಮೂರು ವರ್ಷಗಳ ಸಾಲಿನ ಪ್ರಶಸ್ತಿಯನ್ನು 9 ಮಂದಿ ಸಾಧಕರಿಗೆ ಘೋಷಿಸಲಾಗಿದೆ.2022ನೇ ಸಾಲಿನ ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಡಾ. ರಘಪತಿ ಕೆಮ್ತೂರು ( 71). ಇದೇ ಸಾಲಿನ ತುಳು ನಾಟಕ ಸಿನಿಮಾ ಕ್ಷೇತ್ರದ ಪ್ರಶಸ್ತಿಗೆ ಶ್ರೀಮತಿ ರತ್ನಮಾಲ ಪುರಂದರ ಬೆಂಗಳೂರು (65) , ಜಾನಪದ ಕ್ಷೇತ್ರದ ಪ್ರಶಸ್ತಿಗೆ ಶ್ರೀ ಪ್ರಭಾಕರ ಶೇರಿಗಾರ ಉಡುಪಿ (70 ) ಆಯ್ಕೆಯಾಗಿದ್ದಾರೆ.​2023ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಸಿಮಂತೂರು ಚಂದ್ರಹಾಸ ಸುವರ್ಣ ಮುಂಬಯಿ (70) ಆಯ್ಕೆಯಾಗಿದ್ದಾರೆ. ಇದೇ ಸಾಲಿನ ನಾಟಕ ಕ್ಷೇತ್ರದ ಪ್ರಶಸ್ತಿಗೆ ನೆಕ್ಕಿದ ಪುಣಿ ಗೋಪಾಲಕೃಷ್ಣ ಬೆಂಗಳೂರು (77) ಆಯ್ಕೆಯಾಗಿದ್ದಾರೆ. ಜಾನಪದ ಕ್ಷೇತ್ರದ ಪ್ರಶಸ್ತಿಗೆ ಲಕ್ಷ್ಮಣ ಕಾಂತ ಕಣಂತೂರು (65) ಆಯ್ಕೆಯಾಗಿದ್ದಾರೆ.​2024ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಶ್ರೀ ಯಶವಂತ ಬೋಳೂರು(70) ಆಯ್ಕೆಯಾಗಿದ್ದಾರೆ. ಇದೇ ಸಾಲಿನ ನಾಟಕ, ಸಿನಿಮಾ ಕ್ಷೇತ್ರದ ಪ್ರಶಸ್ತಿಗೆ ಶ್ರೀಮತಿ…

Read More

ಮಂಗಳೂರು : ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ನಡಾವಳಿ ಉತ್ಸವವು ಏಪ್ರಿಲ್ 9 ರಿಂದ 11 ರವರೆಗೆ ಶೃದ್ಧಾ ಭಕ್ತಿಯಿಂದ ನಡೆಯಲಿದೆ. ಏಪ್ರಿಲ್ 05-04-2025ನೇ ಶನಿವಾರ ಮಜಿ, ತುಂಬೆಯಲ್ಲಿ ಜರಗಲಿರುವ ಗೊನೆ ಮುಹೂರ್ತದಿಂದ ಮೊದಲ್ಗೊಂಡು ಮೀನ ಮಾಸ ದಿನ 26 ಸಲುವ ತಾ. 09-04-2025 ನೇ ಬುಧವಾರದಿಂದ ಮೀನ ಮಾಸ ದಿನ 28 ಸಲುವ ತಾ. 11-04-2025ನೇ ಶುಕ್ರವಾರ ಪರ್ಯಂತ ಶ್ರೀ ಕ್ಷೇತ್ರದಲ್ಲಿ ನಡಾವಳಿ ಉತ್ಸವವು ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮತ್ತು ಶ್ರೀ ಭಗವನ್ನಾಮ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಬೆಳಗ್ಗೆ ಭಂಡಾರ ಆರೋಹಣವಾಗಿ ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಹೋರಾಡಲಿದ್ದು . ಮಧ್ಯಾಹ್ನ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನೆರವೇರಲಿದೆ. ರಾತ್ರಿ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ನಡೆಲಿದ್ದು . ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಪ್ರಮುಖರು…

Read More