Author: Tulunada Surya

ಮಂಗಳೂರು: ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ “ಟಾಸ್” ತುಳು ಮತ್ತು ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು. ಶರವು ಶ್ರೀ ಮಹಾಗಣಪತಿ ದೇವಸ್ಥಾದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತ್ರಿ ಆಶೀರ್ವಚನ ನೀಡಿದರು. ಡಾ ದೇವದಾಸ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಸುತ್ತೇಜ್ ಶೆಟ್ಟಿ, ಕ್ಯಾಟ್ಕಾದ ಅಧ್ಯಕ್ಷ ಲಂಚೂಲಾಲ್, ಶರ್ಮಿಳಾ ಕಾಪಿಕಾಡ್, ಶೋಭರಾಜ್ ಪಾವೂರು, ಬಾಳ ಜಗನ್ನಾಥ ಶೆಟ್ಟಿ, ಮಣಿಕಾಂತ್ ಕದ್ರಿ, ಅನೂಪ್ ಸಾಗರ್, ಯತೀಶ್ ಪೂಜಾರಿ, ನಿತೇಶ್ ಸುವರ್ಣ, ಕೃತಿ ಶೆಟ್ಟಿ, ಚೈತ್ರ ಶೆಟ್ಟಿ ಉಪಸ್ಥಿತರಿದ್ದರು.ರಾಜ್ಯ ಪ್ರಶಸ್ತಿ ಪುರಸ್ಜೃತ ತೆಲಿಕೆದ ಬೊಳ್ಳಿ ಡಾ ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ಕಾಪಿಕಾಡ್ ನಿರ್ದೇಶನ ಮತ್ತು ಅಭಿನಯದ ಟಾಸ್ ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕರು: ಪಿ ಆ್ಯಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್…

Read More

ಉಡುಪಿ: ಕಿರುತೆರೆಯಲ್ಲಿ ಪ್ರಸಾರವಸಗುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕಾಮಿಡಿ ಕಿಲಾಡಿಗಳು ಸೀಸನ್ 3ಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮನರಂಜನೆ ನೀಡುತ್ತಿದ್ದ ಜನಪ್ರಿಯ ಹಾಸ್ಯ ನಟ ರಾಕೇಶ್ ಪೂಜಾರಿ ಅವರು ಉಡುಪಿ ನಿವಾಸಿಯಾಗಿದ್ದರು. ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಟ ರಾಕೇಶ್ ಪೂಜಾರಿ ಈಗ ಹಿಟ್ಲರ್ ಕಲ್ಯಾಣ ಸೇರಿದಂತೆ ಸಿನಿಮಾಗಳು, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.ರಾಕೇಶ್ ಪೂಜಾರಿ ಮೊದಲು ನಾಟಕರಂಗದಲ್ಲಿ ಗುರುತಿಸಿಕೊಂಡು ನಂತರ ಕಿರುತೆರೆಯಲ್ಲಿ ಹೆಸರುವಾಸಿಯಾದರು.

Read More

ಕಾಸರಗೋಡು: ‘ತುಳುನಾಡಿನ ಗುತ್ತು ಬಾಳಿಕೆಗಳು ತಮ್ಮ ಶಿಷ್ಟಾಚಾರವನ್ನು ಮೀರದೆ ಪರಂಪರಾಗತವಾದ ಆಚಾರ ವಿಚಾರಗಳನ್ನು ಗೌರವಿಸುತ್ತಿರುವುದು ಒಂದು ಉತ್ತಮ ಲಕ್ಷಣ. ದೈವಗಳ ಚಾವಡಿ, ನಾಗ ಸಾನಿಧ್ಯ, ತರವಾಡು ಮನೆಗಳನ್ನು ಪುನರ್ ನಿರ್ಮಿಸಿ ತಮ್ಮವರೆಲ್ಲರನ್ನೂ ಒಂದೆಡೆ ಸೇರಿಸಲು ಉಪಕ್ರಮಿಸಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹಬ್ಬ ಹರಿದಿನಗಳನ್ನು ಒಂದೇ ಕಡೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿರುವುದು ಕೌಟುಂಬಿಕ ಏಕತೆಯನ್ನು ಬಲಪಡಿಸಿದೆ’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಕಾಸರಗೋಡಿನ ಪಾರಕಟ್ಟೆಯಲ್ಲಿ ಚೆಂಗಳ ಗುತ್ತು ಶ್ರೀ ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.’ಚೆಂಗಳ ಗುತ್ತು ಕುಟುಂಬಕ್ಕೆ ಸೇರಿದ 400ಕ್ಕೂ ಮಿಕ್ಕಿದ ಸದಸ್ಯರು ಒಟ್ಟುಗೂಡಿ ನಿರ್ಮಿಸಿದ ನೂತನ ತರವಾಡು ಮನೆ ಮತ್ತು ದೈವಾಲಯಗಳು ಅವರ ಶ್ರದ್ಧಾಭಕ್ತಿಯ ಪ್ರತೀಕ’ ಎಂದವರು ನುಡಿದರು.ಇದೇ ಸಂದರ್ಭದಲ್ಲಿ ಉಮೇಶ್ ಶೆಟ್ಟಿ ಮನ್ನಿಪ್ಪಾಡಿ ಸಂಪಾದಿಸಿದ ‘ ಜೀಟಿಗೆ ‘…

Read More

ಮಂಗಳೂರು: ಕಲಾಸಕ್ತರ ಸಂಭ್ರಮಕ್ಕೆ ಹೊಸ ಹಾದಿ ತೆರೆದಿರುವ ಯುವ ಪ್ರತಿಭೆ ಆಕಾಶ್ ಅಜಿತ್ ಕುಮಾರ್ (ಆಶಿಕಿ) ಅವರು ತಮ್ಮ ಮೊದಲ ಆಲ್ಬಮ್ “Tu Hi Hai” ಮೂಲಕ ಸಂಗೀತ ಪ್ರಪಂಚದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇವರ ಮೊದಲ ಆಲ್ಬಮ್ ಭಾರೀ ಜನಪ್ರಿಯತೆಯನ್ನು ಗಳಿಸಿದ ಬಳಿಕ, ಇದೀಗ ಅವರು ತಮ್ಮ ಎರಡನೇ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹೊಸ ಹಾಡು “ಮನೆ ನೀನೆ ಸಖಿ ” ಪೈಕಿ ಮತ್ತೊಂದು ಆಕಾಶ್ ಅವರ ಪ್ರೀತಿ, ಭಾವನೆ ಹಾಗೂ ಬದುಕಿನ ಚಿತ್ರಣವನ್ನು ಮತ್ತಷ್ಟು ವಿಶಿಷ್ಟವಾಗಿ ಕಾಣಿಸಲು ಸಹಾಯ ಮಾಡಿದೆ. “ಮನೆ ನೀನೆ ಸಖಿ ” ಹಾಡು, ಪ್ರೀತಿ ಮತ್ತು ಸಂಕಟದ ಅನುಭವಗಳನ್ನು ಮನಮುಟ್ಟುವ ರೀತಿಯಲ್ಲಿ ಕಲ್ಪನೆ ಮಾಡಿದ್ದು, ಅದರ ದೃಷ್ಟಿಕೋನವು ಶುಭ ಮತ್ತು ದುಃಖದ ನಡುವಣ ಅದ್ಭುತ ಸಮನ್ವಯವನ್ನು ಕಂಡುಹಿಡಿಯುತ್ತದೆ. ಆಕರ್ಷಕ ಸಾಹಿತ್ಯ, ಮನಸ್ಸನ್ನು ಸ್ಪರ್ಶಿಸುವ ಸಂಗೀತ ಸಂಯೋಜನೆ ಹಾಗೂ ಆಶಿಕಿಯ (ಆಕಾಶ್ ಅಜಿತ್ ಕುಮಾರ್ ) ಧ್ವನಿ ಈ ಹಾಡಿಗೆ ಹೊಸ ಸ್ಪಂದನೆಯನ್ನು ಕೊಟ್ಟಿದೆ. ಆಶಿಕಿ…

Read More

ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ* ಕರುನಾಡ ಕಾಯಕ ಯೋಗಿ ಸದ್ಭಾವನ *ರಾಜ್ಯಪ್ರಶಸ್ತಿ ಪ್ರಧಾನ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಬೆಂಗಳೂರಿನ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ರಿಜಿಸ್ಟರ್ ರಂಗವೈಭವ 2025 . ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮೇ 9ರಂದು ನಗರಬಾವಿ ಮಲ್ಲತಳ್ಳಿ ಕಲಾಗ್ರಾಮ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಿತು.ಗೀತ ರಚನೆಗಾರರು ಹಾಗೂ ಸಂಗೀತ ಸಂಯೋಜಕರು, ನಿರ್ದೇಶಕರಾದ ಡಾ. ನಾಗೇಂದ್ರ ಪ್ರಸಾದ್ ಅವರು ,”ಕರುನಾಡ ಕಾಯಕಯೋಗಿ ಸದ್ಭಾವನಾ “ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು. ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಸಾಹಿತಿ ,ಸಂಘಟಕಿ ,ಸಮಾಜ ಸೇವಕಿ, ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕರುನಾಡ ಕಾಯಕಯೋಗಿ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು .ಉಗ್ರವತಾರ ಚಲನಚಿತ್ರದ ನಿರ್ದೇಶಕರಾದ ಶ್ರೀ ಗುರುಮೂರ್ತಿ ಅವರಿಗೆ ಕರುನಾಡ ಕಾಯಕ ಯೋಗಿ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿದರು. ಸಭಾ ಕಾರ್ಯಕ್ರಮವನ್ನು ಡಾ. ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ತಾರೆ ಡಾ. ಭವ್ಯ…

Read More

ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯುಳ್ಳ ಈ ಮಹಾನ್ ಸಾನಿಧ್ಯವು ಗುರುಪುರ ಫಲ್ಗುಣಿ ನದಿ ತಟಾಕದಲ್ಲಿ ಕಂಗೊಳಿಸುತ್ತಿದ್ದು ಮೇ ತಿಂಗಳ 15, 16 ಮತ್ತು 17ರಂದು ಈ ಮಹಾಚೈತನ್ಯದ ಪ್ರತಿಷ್ಠೆ ಮತ್ತು ಪಂಚಕಲ್ಯಾಣಯುಕ್ತವಾದ ಬ್ರಹ್ಮಕಲಶ ಮಹೋತ್ಸವ ಸಂಭ್ರಮವು ವೇದೋಕ್ತ ವಿಧಿ-ವಿಧಾನಗಳಂತೇ ಜರಗಲಿರುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ತಿಳಿಸಿದ್ದಾರೆ. ದೇವರ ಮೂರ್ತಿಗೆ ಸ್ವತಃ ತಮ್ಮ ಕೈಯಾರ ಕಲಶಾಭಿಷೇಕ ಮಾಡುವ ಅವಕಾಶವಿದ್ದು ದೇವಸ್ಥಾನದಲ್ಲಿ ಸ್ನಾನ ಘಟಕ,ಧ್ಯಾನ ಕೇಂದ್ರ ಕೂಡ ವಿದ್ದು ವಸತಿ ಗೃಹದ ನಿರ್ಮಾಣವಾಗಿದೆ.ಪುರಾತನ ಕಾಲದ ತೀರ್ಥಬಾವಿ ಇದೆ,ಬಡ ಕುಟುಂಬಗಳಿಗೆ ಮದುವೆ ಕಾರ್ಯಕ್ರಮಗಳಿಗೆ ಉಚಿವಾಗಿ ಸಭಾಂಗಣ ನೀಡಲು ನಿರ್ಧಾರಿಸಿದ್ದಾರೆಂದು ತಿಳಿಸಿದ್ದಾರೆ. ಗುರುಪುರ ಎಂಬ ಹೆಸರೇ ಹೇಳುವಂತೆ ಆಧ್ಯಾತ್ಮಿಕ ಸಾಧಕರು ನೆಲೆಸಿ ಲೋಕಮುಖಿಯಾಗಿ ತಪಸ್ಸನ್ನಾಚರಿಸಿದ ಪ್ರದೇಶವಾಗಿದೆ. ಈ ಪ್ರದೇಶದ ದಕ್ಷಿಣ ಭಾಗದಲ್ಲಿ ಪವಿತ್ರ ಫಲ್ಗುಣಿ (ಗುರುಪುರ) ನದಿಯು ಪಶ್ಚಿಮವಾಹಿನಿಯಾಗಿ ಜೀವರಾಶಿಯ ಪೋಷಕಿಯಾಗಿ ಹರಿಯುತ್ತಿದ್ದಾಳೆ. ಈ ಪವಿತ್ರ ನದಿಯ ತಟಾಕಕ್ಕೆ ಶತಶತಮಾನಗ ಶತಶತಮಾನಗಳ…

Read More

ಪ್ರವಾಸಿಗರನ್ನು ಹೊತ್ತು ತಂದ 7ಸೀ ವಯೋಜರ್ ಹಡಗಿನ ಲ್ಲಿ ನಮ್ಮ ಧಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಗೆ ಬಂದ ಹಡ ಗಿ ನಲ್ಲಿ ಬಂದವರಲ್ಲಿ ಸುಮಾರು ಜನ ಪ್ರವಾಸಿ ಗರು ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯನ್ನು 09.05.2025 ರಂದು ಮಧ್ಯಾಹ್ನ 1.30ಕ್ಕೆ ಸಂದರ್ಶನ ಮಾಡಿದರು ಪ್ರವಾಸಿಗರಲ್ಲಿ ಅಮೇರಿಕಾ ದೇಶದ ಪ್ರಜೆಗಳು ಹೆಚ್ಚಿದ್ದರು ಈ ಸಂಧರ್ಭ ಉಪಸ್ಥಿತರಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ ಬಸದಿ ಇತಿಹಾಸ ಹಾಗೂ ಧರ್ಮ ಕ್ಕೆ ಸಂಬಂಧ ಪಟ್ಟ ಪ್ರಶ್ನೆ ಗಳಿಗೆ ಉತ್ತರಿಸಿದರು. ಲೋಕಶಾಂತಿ ಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಪಾಕ್ ಭಯೋತ್ಪದಕ ಉಗ್ರ ದಾಳಿ ಯಿಂದ ಹುತಾತ್ಮ ರಾದಭಾರತಿ ಯ ಸೈನಿಕರಿಗೆ ಹಾಗೂ ನಾಗರೀಕರಿಗೆಉತ್ತಮ ಸದ್ಗತಿ ಕೋರಿ ಪ್ರಾರ್ಥಿಸ ಲಾಯಿತು ಮಂಗಳೂರು ಲಿಯಾ ಟ್ರಾವೆಲ್ಸ್ ರೋಹನ್ ಮತ್ತಿ ತರ ಪ್ರವಾಸಿ ಮಾರ್ಗ ದರ್ಶಕರು ಜತೆಗಿದ್ದರು ಶ್ರೀ ಗಳು ಎಲ್ಲರಿಗೂ ಶುಭ ಯಾತ್ರೆ…

Read More

ಇಸ್ಲಾಮಾಬಾದ್ : ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಯನ್ನು ಗುರಿಯಾಗಿಸಿ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಮರುದಿನವೇ ಪಾಕಿಸ್ತಾನದ ಲಾಹೋರ್‌ ನಲ್ಲಿ ಮೂರು ಸ್ಫೋಟ ಸಂಭವಿಸಿದ್ದು ಜನರು ಭಯದಿಂದ ಮನೆಯಿಂದ ಹೊರಗೋಡಿದರು ಎಂದು ಮೂಲಗಳಿಂದ ತಿಳಿದು ಬಂದಿದೆ ಗುರುವಾರ ಲಾಹೋರ್‌ ನ ಅತ್ಯಂತ ಸೂಕ್ಷ್ಮ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಗುಲ್ಬೆರ್ಗ್‍ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ರಸ್ತೆಯಲ್ಲಿ ಕೆಲ ನಿಮಿಷಗಳ ಅಂತರದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ವಾಲ್ಟನ್ ವಿಮಾನ ನಿಲ್ದಾಣದ 9 ಕಿ.ಮೀ ವ್ಯಾಪ್ತಿಯಲ್ಲಿರುವ ಡಿಎಚ್‍ಎ 3 ಮತ್ತು 4ನೇ ಹಂತದಲ್ಲಿ ಸ್ಫೋಟ ಸಂಭವಿಸಿದ್ದು ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ ನಗರ ಮತ್ತು ನಸೀರಾಬಾದ್ ನಗರಗಳಲ್ಲಿಯೂ ಸ್ಫೋಟ ಸಂಭವಿಸಿದೆ. ಎಂದು ತಿಳಿದು ಬಂದಿದೆ

Read More

ಮೂಡಬಿದ್ರಿ: ‘ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ನುಡಿಸಿರಿ ವಿರಾಸತ್ ಗಳಲ್ಲದೆ ಇತರ ಹಲವಾರು ರಾಜ್ಯ – ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕರಾವಳಿ ಕರ್ನಾಟಕದ ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಜಗದಗಲ ಪಸರಿಸಿದೆ. ನಾಡು – ನುಡಿಯ ಸೇವೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳ ಪಾತ್ರ ಹಿರಿದು. ಅದು ಇತರ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯ ತುಳು ಸಂಘದ ಆಶ್ರಯದಲ್ಲಿ ಜರಗಿದ ‘ಸಿರಿಪರ್ಬ – 2025′ ತುಳು ಸಾಂಸ್ಕೃತಿಕ ಉತ್ಸವದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾತ್ಮಕ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತುಳು ತಲೆಯೆತ್ತಿ ನಿಲ್ಲಲಿ:’ ಶಿಕ್ಷಣ ಸಂಸ್ಥೆಗಳಲ್ಲಿ ತುಳು ಮಾತನಾಡಲು ತೀವ್ರ ವಿರೋಧವಿದ್ದ ಕಾಲವಿತ್ತು; ಆದರೆ ಈಗ ಅದು ಬದಲಾಗಿದೆ. ಪ್ರಾಥಮಿಕ ಹಂತದಿಂದ ಕಾಲೇಜಿನವರೆಗೆ ತುಳುವನ್ನೊಂದು ಪಠ್ಯವಾಗಿ…

Read More

ಮಂಗಳೂರು:ಏಪ್ರಿಲ್ 27 ರಿಂದ 30 ರವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ 24 ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್‌ಶಿಪ್ 2025 ರ ಸಬ್ ಜೂನಿಯರ್ ವಿಭಾಗದ ತೌಲೊ ಜಿಯನ್ಸೂವಿನಲ್ಲಿ ಕು.ಮನ್ವಿತ ಮನೋಜ್ ಕುಮಾರ್ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇಮ್ಮೋರ್ಟಲ್ಸ್ ಅಕಾಡಮಿಯ ಗುರುಗಳಾಗಿರುವ ರೋಹನ್. ಎಸ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿರುವ ಇವರು ಶ್ರೀ ರಾಮಾಶ್ರಮ ಆಂಗ್ಲ ಮಾದ್ಯಮ ಶಾಲೆ ಕೊಂಚಾಡಿಯಲ್ಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿರುತ್ತಾರೆ.

Read More