Author: Tulunada Surya

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿನ ಗಡ್ಡೆಯನ್ನು ಹೊರತೆಗೆಯುವ ಸಂದರ್ಭದಲ್ಲಿ ವಿಪರೀತ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ವೈದ್ಯರ ವಿರುದ್ಧ ಆಕ್ರೋಶಗೊಂಡು ಪ್ರತಿಭಟಿಸಿದ ಘಟನೆ ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ಸಂಭವಿಸಿದೆ ‌ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಜುಬೇದಾ(54) ಎಂಬವರು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಸಾಣೂರಿನ ಕ್ಲಿನಿಕ್ ಗೆ ತಪಾಸಣೆ ಮಾಡಿಸಿದಾಗ ಅವರು ಹೊಟ್ಟೆಯಲ್ಲಿ ಗಡ್ಡೆ ಬೆಳೆದ ಕಾರಣದಿಂದ ಶಸ್ತ್ರಚಿಕಿತ್ಸೆ ನಡೆಸುವಂತೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜುಬೇದಾ ಅವರನ್ನು ಬುಧವಾರಕಾರ್ಕಳದ ಸ್ಪಂದನ ಆಸ್ಪತ್ರೆಗೆ ದಾಖಲಿಸಿದ್ದರು.ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿನ ಗಡ್ಡೆ ಹೊರತೆಗೆಯಲು ಯತ್ನಿಸಿದಾಗ ವಿಪರೀತ ರಕ್ತಸ್ರಾವದಿಂದಜುಬೇದಾ ಮೃತಪಟ್ಟಿದ್ದಾರೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ರಕ್ತಸಿಕ್ತ ಬಟ್ಟೆಗಳನ್ನು ಬೆಡ್ ಬಳಿ ಹಾಕಲಾದ ದೃಶ್ಯ ಇದಕ್ಕೆ ಪುಷ್ಟಿ ನೀಡುವಂತಿತ್ತು ಮಹಿಳೆ ಮೃತಪಟ್ಟ ಬಳಿಕ ಅವರ ಸಂಬಂಧಿಕರು ಹಾಗೂ ಸ್ಥಳೀಯರು ಆಸ್ಪತ್ರೆಯಲ್ಲಿ ಜಮಾಯಿಸಿ ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.…

Read More

ಮಂಗಳೂರು :- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.ಮೇ 16 ರಂದು ಮಧ್ಯಾಹ್ನ 3:15 – ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 3:35- ನಗರದ ಉರ್ವಾ ಮಾರ್ಕೆಟ್‍ನಲ್ಲಿರುವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಹಾಗೂ ವೀಕ್ಷಣೆ, ಸಂಜೆ 4:15- ಪಡೀಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ”ಪ್ರಜಾ ಸೌಧ” ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭ, 6:30 – ಉಳ್ಳಾಲ ಸೈಯದ್ ಮೊಹಮ್ಮದ್ ಶರೀಫ್ ಫುಲ್ ಮದನಿ ದರ್ಗಾ ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಭಾಗಿ, ನಂತರ ರಾತ್ರಿ 8:25 – ಮಂಗಳೂರಿನಿಂದ ಮುಖ್ಯಮಂತ್ರಿಗಳು ಬೆಂಗಳೂರಿಗೆ ತೆರಳಲಿದ್ದಾರೆ.

Read More

ಮಂಗಳೂರು:- ಕಡಲ ಕೊರೆತ ಕಾಮಗಾರಿಗಳನ್ನು ನಡೆಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವಂತೆ ವಿಧಾನಸಭೆ ಸ್ಪೀಕರ್ ಸೂಚಿಸಿದರು. ಅವರು ಬುಧವಾರ ನಗರದ ಸಕ್ರ್ಯೂಟ್ ಹೌಸ್ ನಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕಡಲ ಕೊರೆತ ಕಾಮಗಾರಿ ನಡೆಸುವಾಗ ಅಧಿಕಾರಿಗಳು ಸ್ಥಳೀಯ ಪ್ರದೇಶಕ್ಕೆ ಸೂಕ್ತವಲ್ಲದ ತಂತ್ರಜ್ಞಾನದಿಂದ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆಗಳು ಬರುತ್ತಿದೆ. ಕಡಲ ಅಲೆಗಳ ಅಬ್ಬರವು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಸ್ಥಳೀಯ ಮೀನುಗಾರರು ಹಾಗೂ ಇತರೆ ಕಡಲತೀರ ನಿವಾಸಿಗಳು ಹಲವು ದಶಕಗಳಿಂದ ಕಡಲತೀರದಲ್ಲಿ ವಾಸಿಸುತ್ತಿದ್ದು ಕಡಲ ಅಲೆಗಳ ಏರಿಳಿತದ ಬಗ್ಗೆ ಅನುಭವದ ಮಾಹಿತಿ ಹೊಂದಿದ್ದಾರೆ. ಇವರ ಅಭಿಪ್ರಾಯ ಆಲಿಸಿ ಕಾಮಗಾರಿಯನ್ನು ನಡೆಸಬೇಕು ಎಂದು ವಿಧಾನಸಭೆ ಸ್ಪೀಕರ್ ತಿಳಿಸಿದರು. ಈಗಾಗಲೇ ಸರಕಾರವು ಸಮುದ್ರ ಪ್ರತಿಬಂಧಕ ಕಾಮಗಾರಿಗಳಿಗೆ ಕರಾವಳಿ ತೀರದ 3 ಜಿಲ್ಲೆಗಳಿಗೆ 200 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆಸುವ ಬದಲು ಅತಿ ಹೆಚ್ಚು ಕಡಲ ಕೊರೆತ…

Read More

ಮಂಗಳೂರು :- ಬೆಳ್ತಂಗಡಿ ತಾಲ್ಲೂಕು ಮಲವಂತಿಗೆ ಗ್ರಾಮದ ವ್ಯಾಪ್ತಿಗೊಳಪಟ್ಟ ಎಳನೀರು, ಗುತ್ಯಡ್ಕ, ಬಂಗಾರಗಿ, ಉಕ್ಕುಡ ಮತ್ತು ಕುರ್ಚಾರು ಪ್ರದೇಶಗಳು ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ತಮ್ಮ ಗ್ರಾಮ ಪಂಚಾಯತ್ ಗೆ ಭೇಟಿ ನೀಡಬೇಕಾದರೆ ಕುದುರೆಮುಖ-ಬಜಗೋಳಿ-ಬೆಳ್ತಂಗಡಿ ಮೂಲಕ ಸುಮಾರು 120 ಕಿ.ಮೀ ದೂರವನ್ನು ಕ್ರಮಿಸಬೇಕು. ಆದರೆ, ಎಳನೀರು-ದಿಡುಪೆ ರಸ್ತೆಯ ಅಭಿವೃದ್ಧಿಯಾದರೆ ಈ ಪ್ರದೇಶಗಳಲ್ಲಿನ ಜನರಿಗೆ ತಮ್ಮ ಗ್ರಾಮಪಂಚಾಯತ್ ಗೆ ಕೇವಲ 9 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರಕ್ಕೆ 20 ಕಿ.ಮೀ ದೂರವನ್ನು ಕ್ರಮಿಸಿದರೆ ತಲುಪಬಹುದಾಗಿದೆ.ಈ 9 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ಈ ಭಾಗದ ಜನರು ಹಲವಾರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಈ ರಸ್ತೆಯ ಅಭಿವೃದ್ಧಿ ಮಾಡಬೇಕಾದರೆ ಅರಣ್ಯ ಇಲಾಖೆಯ ವನ್ಯ-ಜೀವಿ ವಿಭಾಗದ ಅನುಮತಿ ಅಗತ್ಯವಾಗಿರುತ್ತದೆ. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಸರ್ವೆ ನಡೆಸುವ ಬಗ್ಗೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗವು ಅನುಮತಿ ನೀಡಿರುತ್ತದೆ ಎಂಬುದಾಗಿ ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.…

Read More

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಭೂತಪೂರ್ವ ಕಾರ್ಯವೈಖರಿಯನ್ನು ಮೆಚ್ಚಿ ಫೌಂಡೇಶನ್ ನ ಗೌರವಾಧ್ಯಕ್ಷರಾದ ಮಹಾದಾನಿ, ಗೌರವಾನ್ವಿತ ಡಾ ಕೆ ಸದಾಶಿವ ಶೆಟ್ಟಿ ಯವರು ಫೌಂಡೇಶನ್ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆಯನ್ನು ಘೋಷಿಸಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿಯವರು ಪಟ್ಲ ಫೌಂಡೇಶನ್ನಿನ ಗೌರವಾಧ್ಯಕ್ಷರಾದ ನಂತರ ಟ್ರಸ್ಟಿನ ಕಾರ್ಯ ಯೋಜನೆಗಳು ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದು ಕಲಾಭಿಮಾನಿಗಳ, ಸಂಘಟಕರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ “ಪಟ್ಲ ದಶಮ” ಸಂಭ್ರಮದ ಸಮಾಲೋಚನಾ ಸಭೆಯ ದಿನದಂದು ಫೌಂಡೇಶನ್ ನ ಎಲ್ಲಾ ಮಹಾದಾನಿಗಳು, ಮತ್ತು ಫೌಂಡೇಶನ್ ನ ಪದಾಧಿಕಾರಿಗಳ ಸಮ್ಮುಖದಲ್ಲಿ ಪಟ್ಲ ಫೌಂಡೇಶನ್ ನ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಅಧ್ಯಕ್ಷರಾಗಿ ಬರೋಡ ಶಶಿಧರ ಶೆಟ್ಟಿ ಅವರು ಜವಾಬ್ದಾರಿಯನ್ನು ಬಹಳ ಪ್ರೀತಿಯಿಂದ ವಹಿಸಿಕೊಂಡಿದ್ದರು. ದಶಮಾನೋತ್ಸವದ ಮುಖ್ಯ ಧ್ಯೇಯವಾಗಿ ಕನಿಷ್ಠ 10 ಕೋಟಿ ರೂಪಾಯಿ ಆದರೂ…

Read More

ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್ .ಡಿ. ಎ. ಬಸವೇ ಗೌಡ ಲೋಕಾಯುಕ್ತ ಬಲೆಗೆ ಪಿರ್ಯಾದಿದಾರರ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ನೊಂದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು 2023ರ ಅಕ್ಟೋಬರ್ ತಿಂಗಳಿನಲ್ಲಿ ವಯೋನಿವೃತ್ತಿ ಹೊಂದಿರುತ್ತಾರೆ. ತದ ನಂತರ ಪಿರ್ಯಾದಿದಾರರ ಗಂಡ ಜೂನ್ 2024 ರಂದು ಮರಣ ಹೊಂದಿರುತ್ತಾರೆ. ಪಿರ್ಯಾದಿದಾರರು ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಶ್ರೀ ಭಾಸ್ಕರ್ ರವರ ಬಳಿ ಅವರ ಗಂಡನ ಮರಣ ಉಪದಾನದ ಬಗ್ಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರುವುದಿಲ್ಲ. ನಂತರ ಪಿರ್ಯಾದಿದಾರರ ಖಾತೆಗೆ ಗಂಡನ ಮರಣ ಉಪದಾನವನ್ನು ಜಮೆ ಮಾಡಿಕೊಟ್ಟಿರುವ ಪ್ರತಿಫಲವಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಶ್ರೀ ಭಾಸ್ಕರ್ ರವರು ರೂ 5000/- ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್.ರವರ ರೂ 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ…

Read More

ಮಂಗಳೂರು ; ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಶ್ಚ ಕ್ರಿಯೇಶನ್ಸ್ ಬ್ಯಾನ‌ರ್ ಅಡಿಯಲ್ಲಿ ಮೂಡಿ ಬಂದಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರ ಇದೇ ಮೇ 16 ರಂದು ತೆರೆಗೆ ಬರಲು ಸಜ್ಜಾಗಿದೆ ಎಂದು ಸಂದೀಪ್ ಕಾಮತ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶ್ರೀ ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ಇವರ ನಿರ್ಮಾಣದಲ್ಲಿ, ಸಂದೀಪ್ ಕಾಮತ್ ಅಜೆಕಾರು ಇವರ ನಿರ್ದೇಶನದಲ್ಲಿ ಸಿನೆಮಾ ಮೂಡಿಬಂದಿದ್ದು. ಕರಾವಳಿ ಭಾಗದಕಲೆ-ಸಂಸ್ಕೃತಿ-ಆಚಾರ-ವಿಚಾರಗಳನ್ನು ಬಹಳ ಸುಂದರವಾಗಿ ಸಿನೆಮಾದಲ್ಲಿ ತೋಸಿಸಲಾಗಿದೆ. ಚಿತ್ರದ ಬಹುತೇಕ ಎಲ್ಲಾ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿದ್ದು. ಕರಾವಳಿಯ ಸೌಂದರ್ಯವನ್ನು ಸಿನೆಮಾದಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. “ಲೈಟ್ ಹೌಸ್” ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಇಡೀ ಸಂಸಾರ ಮಕ್ಕಳ ಜೊತೆ ಕೂತು ನೋಡುವ ಸಿನೆಮಾ ಇದಾಗಿದ್ದು, ಪ್ರಸ್ತುತ ಕನ್ನಡ ಮಾದ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ ಹಾಗೂ ಕರಾವಳಿಯ ಕಲೆ-ಸಂಸ್ಕೃತಿಯನ್ನು ಸಮಾಜಕ್ಕೆ ತೋರಿಸುವ ಕಥೆ ಈ ಚಿತ್ರದಲ್ಲಿದೆ ಎಂದು ನಟಿ ಶೈಲಶ್ರಿ ಮುಲ್ಕಿಯವರು ತಿಳಿಸಿದ್ದಾರೆ. ಈ ಚಿತ್ರದಲ್ಲಿ 50 ಕ್ಕೂ ಮಕ್ಕಳು ನಟಿಸಿದ್ದು ಹೆಸರಾಂತ…

Read More

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬೋಳ್ಳಂಬಳ್ಳಿಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ 27 ಅಡಿ (ಪೀಠ ಸಹಿತ) ಎತ್ತರದ ಏಕಶಿಲಾ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಭಗವಾನ್ ಶ್ರೀ ಆದಿನಾಥ ಸ್ವಾಮಿಯ ಪಂಚ ಕಲ್ಯಾಣ ಹಾಗೂ ಪ್ರತಿಷ್ಠಾ ಪೂರ್ವಕ ಮಹಾಮಸ್ತಕಾಭಿಷೇಕ ಹಾಗೂ ಪ್ರತಿಷ್ಠೋತ್ತರ ಮಹಾಮಸ್ತಕಾಭಿಷೇಕವನ್ನು ದಿನಾಂಕ 4 .5 .2025 ರವಿವಾರದಿಂದ 9:05.2025ರ ಶುಕ್ರವಾರದವರೆಗೆ ಶ್ರೀ ಸಂತಾರ ಜೈನ ಮಠ ಹೊಂಬುಚದ ಪರಮ ಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.ಸಂಪೂರ್ಣ ಕಾರ್ಯಕ್ರಮವು ಆಚಾರ್ಯ ಶ್ರೀ ಗುಲಾಬೂಷಣ ಮುನಿ ಮಹಾರಾಜರ ಸಾನಿಧ್ಯದೊಂದಿಗೆ ನಡೆಸಲಾಯಿತು. ಪ್ರತಿಷ್ಠ ವಿಧಿ ವಿಧಾನಗಳನ್ನು ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹಾಗೂ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟ ಕಲಂಕ ಭಟ್ಟಾರಕ ಸ್ವಾಮೀಜಿ ಶ್ರೀ ಕ್ಷೇತ್ರ ದಿಗಂಬರ ಜೈನ ಮಠ ಸೊಂದಾ ರವರು ನೆರವೇರಿಸಿದರು.ಜೊತೆಯಲ್ಲಿ ಸಿದ್ದ ಭಗವಾನ್…

Read More

  ಮಂಗಳೂರು, ಮೇ 12(ಕ.ವಾ):- ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಿಳಿಸುವುದೇನೆಂದರೆ, ಯಾರೋ ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಅಧಿಕಾರಿ/ಸಿಬ್ಬಂದಿಯವರಿಗೆ ತಾನು ಲೋಕಾಯುಕ್ತ ಅಧಿಕಾರಿ/ಸಿಬ್ಬಂದಿಯೆಂದು ಹೇಳಿ ಬೆದರಿಸಿ ಕೆಲಸ ಕಾರ್ಯಗಳನ್ನು ಅಸಮುಚಿತವಾಗಿ ಮಾಡಿಕೊಳ್ಳುತ್ತಿರುವುದು, ಅಧಿಕಾರಿಗಳನ್ನು ಬೆದರಿಸುವುದಾಗಿ ಮಾಹಿತಿ ಬಂದಿರುತ್ತದೆ. ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪೆÇಲೀಸ್ ಅಧೀಕ್ಷಕರಾಗಿ ಕುಮಾರಚಂದ್ರ,  ಪೆÇಲೀಸ್ ಉಪಾಧೀಕ್ಷಕರಗಳಾಗಿ ಡಾ. ಗಾನ ಪಿ ಕುಮಾರ್,  ಸುರೇಶ್ ಕುಮಾರ್ ಪಿ, ಪೆÇಲೀಸ್ ನಿರೀಕ್ಷಕರುಗಳಾಗಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಇವರು ಕರ್ತವ್ಯ ನಿರ್ವಹಿಸಿರುತ್ತಾರೆ. ಈ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯ ವೆಬ್‍ಸೈಟ್‍ನಲ್ಲಿ ಪರೀಕ್ಷಿಸಬಹುದು. ಈ ಅಧಿಕಾರಿಗಳು ಅಲ್ಲದೇ ಬೇರೆ ಯಾವ ಅಧಿಕಾರಿಗಳು ಕೂಡ ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ.     ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ಅಧಿಕಾರಿ ಅಥವಾ ಸಿಬ್ಬಂದಿಯವರಿಗೆ ಬೆದರಿಸಿ ಕರೆ ಮಾಡಿದ್ದಲ್ಲಿ ಲೋಕಾಯುಕ್ತ ಅಧಿಕಾರಿಯವರಿಗೆ ಅಥವಾ ಕಛೇರಿಗೆ ಅಥವಾ ಹತ್ತಿರದ ಪೆÇಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬಹುದು. ಮಂಗಳೂರು ಲೋಕಾಯುಕ್ತ ವಿಭಾಗದ ಪೆÇಲೀಸ್ ಅಧೀಕ್ಷಕರ…

Read More

ಮಂಗಳೂರು, ಮೇ 12(ಕ.ವಾ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ  ಆಶ್ರಯದಲ್ಲಿ   ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಮತ್ತು  ಕನ್ನಡ ಸಂಘ  ವಿಶ್ವವಿದ್ಯಾನಿಲಯ ಕಾಲೇಜು  ಇವರ ಸಹಕಾರದೊಂದಿಗೆ  ಭಗವಾನ್ ಬುದ್ಧ ಜಯಂತಿ  ಸೋಮವಾರ  ನಗರದ ವಿಶ್ವವಿದ್ಯಾನಿಲಯ ಕಾಲೇಜಿನ  ರವೀಂದ್ರ ಕಲಾಭವನದಲ್ಲಿ ನಡೆಯಿತು.    ಕಾರ್ಯಕ್ರಮವನ್ನು ವಿ.ವಿ  ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಯವಂತ ನಾಯಕ  ಉದ್ಘಾಟಿಸಿ ಮಾತನಾಡಿದರು.  ಬುದ್ಧ ಕೇವಲ ವ್ಯಕ್ತಿಯಲ್ಲ  ಅವರು ಮಹಾನ್ ಬೆಳಕು.ಶ್ರಮ ವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬುದ್ಧನಾಗಬಹುದು.   ಕಾಮ, ಕ್ರೋಧ, ಮದ, ಮತ್ಸರ ಇವುಗಳಿಂದ ದೂರವಿದ್ದು, ಬುದ್ಧನ ವಿಚಾರಧಾರೆಗಳನ್ನು ಅರಿತುಕೊಂಡಾಗ ಶಾಂತಿ ನೆಲೆಯೂರುತ್ತದೆ. ಬುದ್ಧನ ಸಂದೇಶಗಳನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂದು ಅವರು ಹೇಳಿದರು.   ಉಪನ್ಯಾಸ ನೀಡಿದ ಮಂಗಳಗಂಗೋತ್ರಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ   ಸಹಾಯಕ ಪ್ರಾಧ್ಯಾಪಕಿ  ಡಾ. ಸಬಿತಾ   ಮಾತನಾಡಿ, ಗೌತಮ ಬುದ್ಧನು ವೈಭೋಗದ ಜೀವನದಿಂದ  ಮುಕ್ತಿ ಪಡೆಯಲು ಬಯಸುತ್ತಾನೆ.  ಯಾವಾಗಲೂ ಜನರಿಗೆ ಅಹಿಂಸೆಯ ಅರ್ಥವನ್ನು  ಕಲಿಸಲು ಪ್ರಯತ್ನಿಸಿದವರು. ಜಗತ್ತಿನಲ್ಲಿ…

Read More