ಉಡುಪಿ, ಜೂನ್ 14: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸಂಘಟನಾ ಬಲವರ್ಧನೆ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ರೂಪುರೇಷೆಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ವಿಶೇಷ ಸಭೆಯು ದಿನಾಂಕ 14-06-2026ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದ ಅಕ್ಷಯ ಟವರ್ಸ್ನಲ್ಲಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ಹೊಸ ಸದಸ್ಯರ ಸೇರ್ಪಡೆ ನಡೆಯಿತು.







ಈ ಸಂದರ್ಭದಲ್ಲಿ ಸಂಘಟನೆಗೆ ಹೊಸದಾಗಿ ಸೇರ್ಪಡೆಗೊಂಡ ಪವಿತ್ರ ಆಚಾರ್ಯ, ವನಿತಾ ಹರೀಶ್, ವೀಣಾ ಪ್ರಾಣೇಶ್, ಉಮೇಶ್ ಬೈಲೂರು, ಆಕಾಶ್ ಕೊರಂಕ್ರಪಾಡಿ, ಸತೀಶ್ ಬೈರಂಪಳ್ಳಿ, ದಿಶಾಂತ್ ಪೂಜಾರಿ ಹಾಗೂ ಮಂಜುಳಾ ಪೂಜಾರಿ ಅವರನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ಆತ್ಮೀಯವಾಗಿ ಸ್ವಾಗತಿಸಿ ಸಂಘಟನೆಗೆ ಬರಮಾಡಿ ಕೊಂಡರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರು, ತುಳುನಾಡಿನ ಹಕ್ಕುಗಳು, ಸಂಸ್ಕೃತಿ ಮತ್ತು ಜನಪರ ವಿಚಾರಗಳಿಗಾಗಿ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದ್ದು, ಹೊಸ ಸದಸ್ಯರ ಸೇರ್ಪಡೆಯಿಂದ ಸಂಘಟನೆಗೆ ಮತ್ತಷ್ಟು ಶಕ್ತಿ ದೊರೆಯಲಿದೆ ಎಂದು ಹೇಳಿದರು. ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟನೆಯ ಉದ್ದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸ್ವಾಗತಿಸಿದರು. ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣ ನಾಯಕ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರೋಶನ್ ಡಿಸೋಜಾ ಸೇರಿದಂತೆ ಮುಖಂಡರಾದ ಶಶಿಕಲಾ, ಉದಯ್ ನಾಯಕ್, ಸರ್ವೋತ್ತಮ, ವಿನೋದ್, ಸಂತೋಷ್ ಭಂಡಾರಿ, ಸಚ್ಚಿನ್, ಗುಣಾಕರ, ಪ್ರದೇಶ್, ಪ್ರಕಾಶ್, ಸತೀಶ್, ಆದಿತ್ಯ, ನಿರ್ಮಲಾ ಮೆಂಡನ್, ಉಷಾ ಕೋಟ್ಯಾನ್, ಅಶೋಕ್, ಮನೋಜ್ (ಕೆ.ಜಿ. ರಸ್ತೆ), ಜ್ಯೋತಿ ಆರ್., ಉಮೇಶ್, ಗಾಯತ್ರಿ, ಸೋಮಶೇಖರ, ನಿಶಾಂತ್, ಶೋಧನ್, ಪ್ರಸಾದ್, ಶ್ರಾವಣ್ ಹಾಗೂ ಉಮೇಶ್ ಶೆಟ್ಟಿ ಪ್ರೀತಮ್ ಡಿಕೋಸ್ಟ ಮತ್ತಿತ್ತರರು ಉಪಸ್ಥಿತರಿದ್ದರು.

