ಉಡುಪಿ, ಜೂನ್ 14: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ಹಸ್ತಾಂತರ ಹಾಗೂ ಸಂಘಟನಾ ಬಲವರ್ಧನೆ ಕುರಿತ ವಿಶೇಷ ಸಭೆಯು ದಿನಾಂಕ 14-06-2026 ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದ ಅಕ್ಷಯ ಟವರ್ಸ್ನಲ್ಲಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು, ತುಳುನಾಡಿನ ಅಸ್ಮಿತೆ, ಭಾಷೆ, ಸಂಸ್ಕೃತಿ ಹಾಗೂ ಹಕ್ಕುಗಳ ರಕ್ಷಣೆಗೆ ಸಂಘಟನೆಯ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದು, ಸಂಘಟನೆಯನ್ನು ಮತ್ತಷ್ಟು ಜನಪರ ಹಾಗೂ ಬಲಿಷ್ಠವಾಗಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ ಎಂದು ಹೇಳಿದರು. ಯುವಜನರನ್ನು ಸಂಘಟನೆಯತ್ತ ಆಕರ್ಷಿಸಿ ತುಳುನಾಡಿನ ವಿಚಾರಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಯೋಜನೆ, ಸದಸ್ಯತ್ವ ಅಭಿಯಾನ, ಸಾಮಾಜಿಕ ಚಟುವಟಿಕೆಗಳು, ತುಳುನಾಡಿನ ಹಿತಾಸಕ್ತಿ ವಿಚಾರಗಳು ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಹೋರಾಟಗಳು ಮತ್ತು ಕಾರ್ಯಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಂಘಟನೆಯ ಬೆಳವಣಿಗೆಗೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಗೆ ಮಹತ್ವದ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಶಂಕರ ಉಡುಪಿ, ಹಾಗೂ ಸಂಘಟನಾ ಸಹ ಕಾರ್ಯದರ್ಶಿಯಾಗಿ ಕೃಷ್ಣ ಉಡುಪಿ ಅವರನ್ನು ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ನೇಮಕಾತಿ ಆದೇಶ ನೀಡಿ ಗೌರವಿಸಿದರು.

ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರು, ಸಂಘಟನೆಯ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹಾಗೂ ತುಳುನಾಡಿನ ಹಿತಾಸಕ್ತಿಯ ವಿಚಾರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ತುಳುನಾಡಿನ ಹಕ್ಕುಗಳು, ಭಾಷೆ, ಸಂಸ್ಕೃತಿ ಹಾಗೂ ಜನರ ಸಮಸ್ಯೆಗಳ ಪರವಾಗಿ ನಿರಂತರ ಹೋರಾಟ ನಡೆಸುವ ಭರವಸೆ ವ್ಯಕ್ತಪಡಿಸಿದರು.


ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸ್ವಾಗತಿಸಿದರು. ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣ ನಾಯಕ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರೋಶನ್ ಡಿಸೋಜಾ ಸೇರಿದಂತೆ ಮುಖಂಡರಾದ ಶಶಿಕಲಾ, ಉದಯ್ ನಾಯಕ್, ಸರ್ವೋತ್ತಮ, ವಿನೋದ್, ಸಂತೋಷ್ ಭಂಡಾರಿ, ಸಚ್ಚಿನ್, ಗುಣಾಕರ, ಪ್ರದೇಶ್, ಪ್ರಕಾಶ್, ಸತೀಶ್, ಆದಿತ್ಯ, ನಿರ್ಮಲಾ ಮೆಂಡನ್, ಉಷಾ ಕೋಟ್ಯಾನ್, ಅಶೋಕ್, ಮನೋಜ್ (ಕೆ.ಜಿ. ರಸ್ತೆ), ಜ್ಯೋತಿ ಆರ್., ಉಮೇಶ್, ಗಾಯತ್ರಿ, ಸೋಮಶೇಖರ, ನಿಶಾಂತ್, ಶೋಧನ್, ಪ್ರಸಾದ್, ಶ್ರಾವಣ್ ಹಾಗೂ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯ ಸಂದರ್ಭದಲ್ಲಿ ಸಂಘಟನೆಗೆ ಸೇರ್ಪಡೆಗೊಂಡ ಪವಿತ್ರ ಆಚಾರ್ಯ, ವನಿತಾ ಹರೀಶ್, ವೀಣಾ ಪ್ರಾಣೇಶ್, ಉಮೇಶ್ ಬೈಲೂರು, ಆಕಾಶ್ ಕೊರಂಕ್ರಪಾಡಿ, ಸತೀಶ್ ಬೈರಂಪಳ್ಳಿ, ದಿಶಾಂತ್ ಪೂಜಾರಿ ಹಾಗೂ ಮಂಜುಳಾ ಪೂಜಾರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಸಭೆಯು ತುಳುನಾಡಿನ ಅಸ್ಮಿತೆ, ಭಾಷೆ, ಸಂಸ್ಕೃತಿ ಹಾಗೂ ಹಕ್ಕುಗಳ ರಕ್ಷಣೆಗೆ ಸಂಘಟನೆಯನ್ನು ಜಾತಿ ,ಮತ, ಭೇದ ವಿಲ್ಲದೆ ನಾವೆಲ್ಲ ಒಗ್ಗಟ್ಟಾಗಿ ಇನ್ನಷ್ಟು ಬಲಿಷ್ಠಗೊಳಿಸುವ ಸಂಕಲ್ಪದೊಂದಿಗೆ ಸಮಾಪ್ತಿಗೊಂಡಿತು. ಪ್ರೀತಮ್ ಡಿಕೋಸ್ಟ ರವರು ದನ್ಯವಾದ ಅರ್ಪಿಸಿದರು








