
ಮಂಗಳೂರು: ‘ಕೇವಲ ಮನೋರಂಜನೆ ಯಲ್ಲದೆ ಸಾಹಿತ್ಯಪರ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವ ಅಗತ್ಯವಿದೆ. ಆಡಂಬರದ ಭಕ್ತಿಗೆ ದೇವರು ಒಲಿಯುವುದಿಲ್ಲ. ದುಡಿಮೆಯಲ್ಲಿ ಭಗವಂತನನ್ನು ಕಾಣುವ ಪ್ರವೃತ್ತಿ ಬೆಳೆಯಬೇಕು. ಕವಿ, ಸಾಹಿತಿಗಳು ತಮ್ಮ ಬರಹಗಳಲ್ಲಿ ಇಂತಹ ಸಂದೇಶಗಳನ್ನು ನೀಡಿದರೆ ಸಮಾಜ ಎಚ್ಚೆತ್ತು ಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಧಾರ್ಮಿಕ ಕವಿಗೋಷ್ಠಿಯನ್ನು ಯೋಜಿಸಿರುವುದು ಒಂದು ಶ್ರೇಷ್ಠ ಪರಿಕಲ್ಪನೆ’ಎಂದು ಹಿರಿಯ ಕವಿ ಮತ್ತು ಯಕ್ಷಗಾನ ವಿದ್ವಾಂಸ ವಿದ್ಯಾರತ್ನ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಅಮೃತಪ್ರಕಾಶ ಪತ್ರಿಕೆ ಮಂಗಳೂರು ಸಂಯೋಜನೆಯಲ್ಲಿ ಅತ್ತಾವರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಕವಿಗೋಷ್ಠಿ – ಕಾವ್ಯ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳಿಕ ತಮ್ಮ ಸ್ವರಚಿತ ತುಳು ಕವಿತೆಯೊಂದನ್ನು ಓದಿದರು.
ಕವಿಗಳಾಗಿ ಭಾಗವಹಿಸಿದ್ದ ರಘು ಇಡ್ಕಿದು, ವ.ಉಮೇಶ ಕಾರಂತ, ಡಾ. ಎಸ್.ಎಂ.ಶಿವಪ್ರಕಾಶ್, ಡಾ. ಮೀನಾಕ್ಷಿ ರಾಮಚಂದ್ರ , ಸುಧಾ ನಾಗೇಶ್, ಡಾ.ಮಾಲತಿ ಶೆಟ್ಟಿ ಮಾಣೂರು ಧಾರ್ಮಿಕ ಸಂದೇಶವುಳ್ಳ ಕನ್ನಡ – ತುಳು ಗೇಯ ಕವನಗಳನ್ನು ವಾಚಿಸಿದರು. ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಲಾವಣ್ಯ ಸುಧಾಕರ್ ಅವುಗಳಿಗೆ ರಾಗಸಂಯೋಜಿಸಿ ಹಾಡಿದರು. ಸತೀಶ್ ಸುರತ್ಕಲ್, ಕೌಶಿಕ್ ಮಂಜನಾಡಿ ಮತ್ತು ವಂದನ್ ಬೇಕಲ್ ಹಿನ್ನಲೆ ಸಂಗೀತ ನೀಡಿದರು. ವಿ. ಯನ್. ಅರ್. ಗೋಲ್ಡ್ ಬಂಟ್ವಾಳ ಹಾಗೂ ಅಮೃತ ಪ್ರಕಾಶ ಪತ್ರಿಕೆ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಅಮೃತ ಪ್ರಕಾಶದ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರಾದ ಸುರೇಶ್ ಅತ್ತಾವರ ವಂದಿಸಿದರು. ಅಯ್ಯಪ್ಪ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ್ ಅತ್ತಾವರ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕ ಮಂಡಳಿ ಸದಸ್ಯ ಸತ್ಯ ಪ್ರಕಾಶ್ ಶೆಟ್ಟಿ ಅತ್ತಾವರ , ಬ್ರಹ್ಮ ಕಲಶ ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜರತ್ನ ಸನಿಲ್ ಮತ್ತು ಗೌರವ ಕಾರ್ಯದರ್ಶಿ ಜನಾರ್ಧನ್ ಅತ್ತಾವರ ಕವಿಗಳಿಗೆ ಸ್ಮರಣಿಕೆ, ಶಾಲು ನೀಡಿ ಗೌರವಿಸಿದರು. ಲಲಿತಾ ಅತ್ತಾವರ, ದೇವಿ ಅತ್ತಾವರ, ಪ್ರೊ.ವಿನಯ ಶೆಟ್ಟಿ ಅತ್ತಾವರ, ಶ್ರುತಿ ಶೆಟ್ಟಿ ಅತ್ತಾವರ ಸಹಕರಿಸಿದರು.

