ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಇದರ ಜನಪರ, ಸಾಮಾಜಿಕ ಚಟುವಟಿಕೆಗಳಲ್ಲಿ ಸಂಪೂರ್ಣ ಸಹಕಾರ ಹಾಗು ಉಡುಪಿ ಜಿಲ್ಲಾ ಖಾಝಿ ಯಾಗಿದ್ದ ತಾಜುಲ್ ಫುಕಹಾಹ್ ಬೇಕಲ್ ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್ ಅವರ ಅನುಸ್ಮರಣೆ ನಿಮಿತ್ತ ನಡೆದ ಬೃಹತ್ ವಿದ್ವಾಂಸ, ಉಮರಾ ಸಮಾವೇಶಕ್ಕೆ ಸ್ಥಳಾವಕಾಶ ಹಾಗೂ ಸಂಪೂರ್ಣ ಸಹಕಾರ ನೀಡಿದ ಬದ್ರಿಯಾ ಜುಮುಅ ಮಸ್ಜಿದ್ ಮಲ್ಲಾರು – ಮಜೂರು ಆಡಳಿತ ಸಮಿತಿಗೆ ಸುನ್ನೀ ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಮೂಳೂರು ಸುನ್ನೀ ಸೆಂಟರ್ ನಲ್ಲಿ ನಡೆದ ಅಸಂಬ್ಲೇಜ್ ಕಾರ್ಯಕ್ರಮದಲ್ಲಿ ಉಪ ಖಾಝಿ ಅಬ್ದುರ್ರಹ್ಮಾನ್ ಮದನಿ ಯವರ ದಿವ್ಯ ಹಸ್ತದ ಮೂಲಕ
ಗೌರವ ಸಲ್ಲಿಸಲಾಯಿತು. ಗೌರವ ಸಮರ್ಪಣೆಯನ್ನು ಸ್ವೀಕರಿಸಿದ ಅಧ್ಯಕ್ಷ ಡಾ.ಎಂ.ಫಾರೂಕ್ ರವರು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಸಹಕಾರವು ಮುಂದುವರೆಯಲಿದೆ ಎಂದು ಡಾ.ಫಾರೂಕ್ ರವರು ತಿಳಿಸಿದರು.
ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್ ನೇಜಾರ್,
ಕಾರ್ಯದರ್ಶಿ ಬಾವು ಹಾಜಿ ಮೂಳೂರು, ಖತೀಬ್ ಅಬ್ದುರ್ರಶೀದ್ ಸಖಾಫಿ, ಮೂಳೂರು ಮುದರ್ರಿಸ್ ಹಾಫಿಳ್ ಅಶ್ರಫ್ ಸಖಾಫಿ, ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ಸುಲೈಮಾನ್ ಸಅದಿ, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಹುಸೈನ್ ಪಡುಕೆರೆ
ಉಪಸ್ಥಿತರಿದ್ದರು. ಮಿತ್ತೂರು ಹಂಝ ಮದನಿ ಧ್ಯೇಯೋದ್ದೇಶ ತರಗತಿ ಮಂಡಿಸಿದರು.
ಸಂಘಟನಾ ಕಾರ್ಯದರ್ಶಿ ಕಲ್ಕಟ್ಟ ಅಬ್ದುರ್ರಹ್ಮಾನ್ ರಝ್ವೀ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಫುರ್ಖಾನೀ ಸ್ವಾಗತವನ್ನು, ಕಾರ್ಯದರ್ಶಿ ಎನ್.ಸಿ.ರಹೀಮ್ ಧನ್ಯವಾದವನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಎಂ ಜಮಾತ್ ಕಮಿಟಿ ಪರವಾಗಿ ಸಮಿತಿ ಕಾರ್ಯದರ್ಶಿ ಅಶ್ರಫ್ ಕರಂದಾಡಿ ಸದಸ್ಯರಾದ ರಝಕ್ ಕೊಪ್ಪ ಭಾಗವಹಿಸಿದ್ದರು
Trending
- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ

