ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಂದೂರ್ವೆಲ್ ಶಾಖೆಯ ವತಿಯಿಂದ ಕೆ.ವಿ.ಕೆ ಸೇವಾ ಸಮಿತಿ ಕಸಿಹಿತ್ತಲು, ಜಪ್ಪಿನಮೊಗರು, ಲಯನ್ಸ್ ಕ್ಲಬ್ ಮಂಗಳೂರು, ಪಂಪ್ವೆಲ್, ಕಲ್ಪವೃಕ್ಷ ಹಾಗೂ ಎನ್.ಜಿ.ಒ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ದಿನಾಂಕ 05/04/2026 ರಂದು ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಕೆ.ವಿ.ಕೆ ಮೈದಾನ, ಕಸಿಹಿತ್ತಲು, ಜಪ್ಪಿನಮೊಗರು ಇಲ್ಲಿ ಆಯೋಜಿಸಲಾಗಿದೆ.

ಈ ವೈದ್ಯಕೀಯ ಶಿಬಿರದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇದರ ನುರಿತ ವೈದ್ಯರ ತಂಡದಿಂದ ಉಚಿತ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುದ್ಧೀಕರಣ, ಹುಳುಕು ಹಲ್ಲುಗಳಿಗೆ ಭರ್ತಿಗಳು, ಚಿಕಿತ್ಸೆ ಅಗತ್ಯವಿರುವ ಹಲ್ಲುಗಳನ್ನು ತೆಗೆಯುವುದು ಸೇರಿದಂತೆ ವಿವಿಧ ಸೇವೆಗಳು ಲಭ್ಯವಿರುತ್ತವೆ.
ಅದೇ ರೀತಿ ಮಂಗಳೂರು ಆಸ್ಪತ್ರೆ ಮತ್ತು ಮಂಗಳೂರು ಕಾಲೇಜು, ಕದ್ರಿ, ಮಂಗಳೂರು ಇವರಿಂದ ಕಣ್ಣಿನ ತಪಾಸಣೆ, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಸಾಮಾನ್ಯ ವೈದ್ಯಕೀಯ ಸಲಹೆ, ಬಿ.ಪಿ. ಹಾಗೂ ಮಧುಮೇಹ ತಪಾಸಣೆ, ಮಾತು ಮತ್ತು ಶ್ರವಣ ಸಮಸ್ಯೆಗಳ ಕುರಿತು ಮಾಹಿತಿ, ಕಿವಿ-ಮೂಗು-ಗಂಟಲು ತಪಾಸಣೆ, ಉಚಿತ ಔಷಧ ವಿತರಣೆ ಹಾಗೂ ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಗೆ ಹಸಿರು ಕಾರ್ಡ್ ನೀಡಲಾಗುತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಎಸ್.ಜೆ.ಎಸ್ ಮಂಗಳೂರು ಇವರಿಂದ ಆಯುಷ್ಮಾನ್ ಕಾರ್ಡ್, ಇ-ಶ್ರಮ ಕಾರ್ಡ್, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್, ರಾಷ್ಟ್ರೀಯ ಪಿಂಚಣಿ ಯೋಜನೆ (NPS/VNPS), ಪ್ಯಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ ನೋಂದಣಿ ಶಿಬಿರ ಹಾಗೂ ವಿವಿಧ ಸರಕಾರಿ ಯೋಜನೆಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




