ಬೆಳ್ತಂಗಡಿ : ಅಡಿಕೆ ವ್ಯಾಪಾರದ ಅಂಗಡಿಗೆ ಸ್ಕೂಟರಿನಲ್ಲಿ ಬಂದ ಅಪರಿಚಿತರು ಕ್ಯಾಶ್ ಡ್ರಾವರಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ ಘಟನೆ ಮಡಂತ್ಯಾರು ಗ್ರಾಮದ ನಾವುಂಡ ಎಂಬಲ್ಲಿ ನಡೆದಿದೆ. ಮಾಲಾಡಿ ಗ್ರಾಮದ ಟಿ. ಪುಷ್ಪರಾಜ ಹೆಗ್ಡೆ ಎಂಬವರ ದೂರಿನಂತೆ, ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯಲ್ಲಿ ಅಡಕೆ ವ್ಯಾಪಾರ ಅಂಗಡಿಯನ್ನು ನಡೆಸುತ್ತಿದ್ದು ಜ.1 ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬವರಲ್ಲಿ ಕ್ಯಾಷ್ ಡ್ರಾವರ್ ನ ಕೀ ಯನ್ನು ನೀಡಿ, ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿರುತ್ತಾರೆ. ಮಧ್ಯಾಹ್ನ ಸಮಯ ಅಂಗಡಿಯಲ್ಲಿದ್ದ ಇಸ್ಮಾಯಿಲ್ ಕರೆ ಮಾಡಿ,ಇಬ್ಬರು ಅಪರಿಚಿತರು ಸ್ಕೂಟರಿನಲ್ಲಿ ಅಂಗಡಿಗೆ ಬಂದಿದ್ದುತನ್ನ ಗಮನ ಬೇರೆಡೆಗೆ ಸೆಳೆದು ಕ್ಯಾಷ್ ಡ್ರಾಯರ್ ನಲ್ಲಿದ್ದ ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ. ಮಾಲೀಕರು ಅಂಗಡಿಗೆ ಬಂದು ಕ್ಯಾಶ್ ಡ್ರಾವರ್ ನ್ನು ಪರಿಶೀಲಿಸಿದಾಗ ಡ್ರಾವರ್ ನಲ್ಲಿದ್ದ ಒಟ್ಟು 2,31,000 ರೂ.ಹಣ ಕಳವಾಗಿರುವುದು ಕಂಡುಬಂದಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 01/2024 ಕಲಂ: 380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Trending
- ಚಿಕ್ಕಮಂಗಳೂರು: ಎಸ್.ಎಲ್. ಭೋಜೇಗೌಡ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಶಶಿರಾಜ್ ಶೆಟ್ಟಿ ಕೊಳಂಬೆ ಮತ್ತು ಯೋಗಿಶ್ ಶೆಟ್ಟಿ ಜಪ್ಪು – ಪಕ್ಷ ಸಂಘಟನೆ ಬಲವರ್ಧನೆ ಕುರಿತು ಚರ್ಚೆ
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ
- ಲೋಕಾಯುಕ್ತ ಬಲೆ: ಉಡುಪಿ ಅಬಕಾರಿ ಡಿಸಿ ಬಳಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ
- ಕುಂದಾಪುರ : ಕಾಪು ಭಾಗದಲ್ಲಿ ಚಿರತೆ ಭೀತಿ ಹೆಚ್ಚಳ – ಸ್ಥಳ ಪರಿಶೀಲನೆಗೆ ಅರಣ್ಯ ಇಲಾಖೆಗೆ ತುಳುನಾಡ ರಕ್ಷಣಾ ವೇದಿಕೆ ಮನವಿ
- ಪಿವಿಎಸ್ ಸಂಸ್ಥೆಯ ಆಡಳಿತವನ್ನು ತಾವು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಅದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ – ಸರೋಜಿನಿ ಕುಸೆ
- ಚೀನಾ ಲಿಂಕ್ ಸೈಬರ್ ವಂಚನೆ ಬಯಲು: ಮಂಗಳೂರು ಮೂಲದ ಇಬ್ಬರು ಬಂಧನ
- ಹನಿಟ್ರಾಪ್ ಜಾಲದಲ್ಲಿ ಸಿಲುಕಿದ ವಿಕಲಚೇತನ ಯುವಕ: ಲಾಡ್ಜ್ನಲ್ಲಿ ಹಲ್ಲೆ, ಬೆದರಿಕೆ – ನಾಲ್ವರು ಪರಾರಿ
- ಮುಲ್ಕಿ ತಾಲೂಕು ಘೋಷಣೆಗೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಲ್ಕಿ ಜನರ ಕೃತಜ್ಞತೆ – ಎಂ.ಬಿ. ಸದಾಶಿವ
