ಉಡುಪಿ: ಆ್ಯಪ್ ಒಂದರಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಪಡೆಯುವ ಬಗ್ಗೆ ಟೆಲಿಗ್ರಾಮ್ ಆ್ಯಪ್ ಮೂಲಕ ಬಂದಿದ್ದ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು 43.43 ಲಕ್ಷ ರೂ. ಕಳೆದುಕೊಂಡಿದ್ದು ಈ ಬಗ್ಗೆ ದೂರು ದಾಖಲಾಗಿದೆ. ಪರ್ಕಳದ ಯತಿರಾಜ್ ವಂಚನೆಗೊಳಗಾದವರು. ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಮಿಷ ಒಡ್ಡಿದ ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ತಿಳಿಸಿದರು. ಅದರಂತೆ ಹಂತಹಂತವಾಗಿ ಒಟ್ಟು 43.43 ಲಕ್ಷ ರೂ. ಹಣ ಪಾವತಿಸಿದ್ದಾರೆ. ಹೂಡಿಕೆ ಮಾಡಿದ ಹಣ ಸಹಿತ ಲಾಭಾಂಶವನ್ನೂ ನೀಡದೆ ವಂಚನೆ ಮಾಡಲಾಗಿದೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
Trending
- ಬ್ರಹ್ಮಾವರ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ದಿಢೀರ್ ದಾಳಿ ನೂರಾರು ಕಡತಗಳ ಪರಿಶೀಲನೆ – ಮಹತ್ವದ ದಾಖಲೆ ವಶಕ್ಕೆ
- ಬಕ್ರೀದ್ ಹಬ್ಬದ ಧಾರ್ಮಿಕ ವಿಧಿವಿಧಾನಗಳಿಗೆ ಅಡಚಣೆ ಆಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮನವಿ
- ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಿಂದ “ಹಲಸು–ಮಾವು ಮೇಳ” ಆಯೋಜನೆ
- ಹಿರಿಯ ನಾಟಕಕಾರ, ಸಿನಿಮಾ ನಿರ್ಮಾಪಕ ಡಾ.ಸಂಜೀವ ದಂಡಕೇರಿ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ
- ಭಟ್ಕಳ ದುರಂತ: ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು – ಜೆಡಿಎಸ್ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ ಆಗ್ರಹ
- ಶಿರಾಲಿಯಲ್ಲಿ ಹೃದಯವಿದ್ರಾವಕ ಜಲ ದುರಂತ: ಒಂದೇ ಕುಟುಂಬದ 8 ಮಂದಿ ನೀರಿನಲ್ಲಿ ಕೊಚ್ಚಿ ಸಾವು
- ಸೂಟರ್ಪೇಟೆ-ಕನಕರಬೆಟ್ಟು ತಡೆಗೋಡೆ ಪುನರ್ನಿರ್ಮಾಣಕ್ಕೆ ಚಾಲನೆ, ₹20 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ
- 26ರಂದು ಬಟರ್ ಫ್ಲೈ ಚಂದ್ರನಗರದಲ್ಲಿ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ
