“ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)” ಅದ್ದೂರಿಯಾಗಿ ತೆರೆಕಂಡಿದ್ದು, ಮಂಗಳೂರು ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.
ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಯುವ ನಿರ್ಮಾಪಕ ಪ್ರಜ್ವಲ್ ಶೆಟ್ಟಿ ನಿರ್ಮಿಸಿದ್ದು, ಕತೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ಪ್ರತಿಭಾವಂತ ನಿರ್ದೇಶಕ ಕೀರ್ತನ್ ಭಂಡಾರಿ ನಿರ್ವಹಿಸಿದ್ದಾರೆ. ಕ್ರಿಕೆಟ್ ಹಿನ್ನೆಲೆಯ ಭಾವನಾತ್ಮಕ ಕಥಾವಸ್ತುವಿನೊಂದಿಗೆ ಮೂಡಿಬಂದಿರುವ ಈ ಸಿನಿಮಾ ತುಳು ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಭಾರತ್ ಸಿನಿಮಾಸ್ನಲ್ಲಿ ಅದ್ದೂರಿ ಬಿಡುಗಡೆ ಸಮಾರಂಭ
ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ನಡೆದ ಭವ್ಯ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದೊಂದಿಗೆ ಹಲವಾರು ಗಣ್ಯರು, ಕಲಾವಿದರು, ಸಮಾಜಮುಖಿ ನಾಯಕರು ಹಾಗೂ ತುಳು ಚಿತ್ರರಂಗದ ಪ್ರಮುಖರು ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು. ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗಣ್ಯರು
ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್
ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್
ಖ್ಯಾತ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್
ಉದ್ಯಮಿ ಮೈಕಲ್ ಡಿ’ಸೋಜ
ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ್
ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು
ಸಮಾಜಸೇವಕ ತೋನ್ಸೆ ಪುಷ್ಕಳ್ ಕುಮಾರ್
ಹಿರಿಯ ಕಲಾವಿದ ಭೋಜರಾಜ್ ವಾಮಂಜೂರು
ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ
ಪ್ರಸನ್ನ ಶೆಟ್ಟಿ ಬೈಲೂರು
ಲಂಚುಲಾಲ್
ನವೀನ್ ಶೆಟ್ಟಿ ಆರ್ಯನ್
ದಯಾನಂದ ಹೆಜಮಾಡಿ
ನವೀನ್ ಶೆಟ್ಟಿ ಎಡ್ಮೆಮಾರ್
ವಿನೀತ್ ಕುಮಾರ್
ನಿರ್ದೇಶಕ ಕೀರ್ತನ್ ಭಂಡಾರಿ
ನಿರ್ಮಾಪಕ ಪ್ರಜ್ವಲ್ ಶೆಟ್ಟಿ
ಸಹ ನಿರ್ಮಾಪಕರಾದ ರೋಹನ್ ಪಿರೇರಾ, ಸಂತೋಷ್ ಲಾಡ್
ನಟಿಯರಾದ ಶೈಲಶ್ರೀ ಮುಲ್ಕಿ, ರೂಪ ವರ್ಕಾಡಿ, ಅನ್ವಿತಾ ಸಾಗರ್, ಸಮತಾ ಅಮೀನ್
ಸಂಗೀತ ನಿರ್ದೇಶಕ ಸೃಜನ್ ಕುಮಾರ್ ತೋನ್ಸೆ
ಕಾರ್ಯಕ್ರಮವನ್ನು ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರ್ ಸುಂದರವಾಗಿ ನಿರ್ವಹಿಸಿದರು.
“ಹೊಸ ಪ್ರತಿಭೆಗಳು ಸಿಕ್ಸರ್ ಹೊಡೆಯುತ್ತಿದ್ದಾರೆ” — ವಿಜಯಕುಮಾರ್ ಕೊಡಿಯಾಲ್ ಬೈಲ್
ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ,
“ತುಳು ಚಿತ್ರರಂಗದಲ್ಲಿ ಹಿರಿಯರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಇಂದು ಯುವ ಪ್ರತಿಭೆಗಳು ಹೊಸ ಕನಸುಗಳನ್ನು ಕಟ್ಟುತ್ತಿದ್ದಾರೆ. ‘ಗಜಾನನ ಕ್ರಿಕೆಟರ್ಸ್’ಂತಹ ಚಿತ್ರಗಳು ತುಳು ಸಿನಿರಂಗಕ್ಕೆ ಹೊಸ ಶಕ್ತಿ ನೀಡುತ್ತಿವೆ. ಯುವಕರು ಇನ್ನಷ್ಟು ಸಿಕ್ಸರ್ ಬಾರಿಸಿ ಯಶಸ್ಸು ಸಾಧಿಸಲಿ” ಎಂದು ಶುಭ ಹಾರೈಸಿದರು.
“ಪ್ರೇಕ್ಷಕರ ಮೆಚ್ಚುಗೆ ನಮ್ಮ ಗೆಲುವು” — ಪ್ರಕಾಶ್ ಪಾಂಡೇಶ್ವರ್
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ,
“ಚಿತ್ರದ ಪ್ರೀಮಿಯರ್ ಶೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಜ್ವಲ್ ಶೆಟ್ಟಿ, ರೋಹನ್ ಪಿರೇರಾ ಮತ್ತು ಸಂತೋಷ್ ಲಾಡ್ ತುಂಬಾ ಕಷ್ಟಪಟ್ಟು ಈ ಚಿತ್ರ ನಿರ್ಮಿಸಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

ಕ್ರಿಕೆಟ್ ಹಿನ್ನೆಲೆಯ ಮನಮುಟ್ಟುವ ಕಥೆ
“ಗಜಾನನ ಕ್ರಿಕೆಟರ್ಸ್” ಕೇವಲ ಕ್ರೀಡಾ ಸಿನಿಮಾ ಅಲ್ಲ. ಕ್ರಿಕೆಟ್ ಆಟಗಾರರ ಬದುಕಿನ ಕನಸು, ಹೋರಾಟ, ಸ್ನೇಹ, ಪ್ರೀತಿ, ಭಾವನೆ ಹಾಗೂ ಸಮಾಜಮುಖಿ ಸಂದೇಶವನ್ನು ಮನರಂಜನಾತ್ಮಕವಾಗಿ ಹೇಳುವ ದೊಡ್ಡ ಬಜೆಟ್ ತುಳು ಚಿತ್ರವಾಗಿದೆ.
ಚಿತ್ರದಲ್ಲಿ ಕರಾವಳಿಯ ನೆಲದ ಸೊಗಡು, ಸ್ಥಳೀಯ ಭಾಷೆಯ ಸಿಹಿತನ, ಹಾಸ್ಯ ಹಾಗೂ ಭಾವನಾತ್ಮಕ ದೃಶ್ಯಗಳು ವಿಶೇಷ ಆಕರ್ಷಣೆಯಾಗಿದೆ.
ಭರ್ಜರಿ ತಾರಾಗಣ
ಚಿತ್ರದಲ್ಲಿ ಪ್ರಜ್ವಲ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದು, ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಅನ್ವಿತಾ ಸಾಗರ್, ಸಮತಾ ಅಮೀನ್, ಸರ್ವೋತ್ತಮ ಶೆಟ್ಟಿ ಅಬುದಾಭಿ, ವಾಲ್ಟರ್ ನಂದಳಿಕೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ರೂಪ ವರ್ಕಾಡಿ, ಲಂಚುಲಾಲ್, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ, ಕರಣ್ ಪೂಜಾರಿ,ಸೌಮ್ಯ ಸುಧೀಂದ್ರ ರಾವ್, ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಸಂಗೀತ ನಿರ್ದೇಶನವನ್ನು ಸೃಜನ್ ಕುಮಾರ್ ತೋನ್ಸೆ ನಿರ್ವಹಿಸಿದ್ದು, ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಈಗಾಗಲೇ ಸಿನಿಪ್ರೇಮಿಗಳ ಮೆಚ್ಚುಗೆ ಗಳಿಸಿದೆ.
ಕರಾವಳಿಯಾದ್ಯಂತ ಭರ್ಜರಿ ಪ್ರದರ್ಶನ
ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ ಸೇರಿದಂತೆ ಕರಾವಳಿಯ ಹಲವೆಡೆ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
“ಜಂತೊಟ್ಟು ಮೈದಾನದಿಂದ ಬೆಳ್ಳಿ ತೆರೆಗೆ ಬಂದ ಕ್ರಿಕೆಟ್ ಕನಸು… ಈಗ ಕರಾವಳಿಯ ಹೃದಯ ಗೆಲ್ಲುತ್ತಿದೆ!”





