ಮಂಗಳೂರು, ಮೇ 20 : ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ವ್ಯಾಪ್ತಿಯ ಎಪಿಸ್ಕೋಪಲ್ ಸಿಟಿ ವರಾಡೊಗೆ ನಡೆದ ಚುನಾವಣೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ನಗರ ಕಾರ್ಯದ್ಯಕ್ಷ ಕ್ಲೀಟಸ್ ಲೋಬೊ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೇ 13ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ವರಾಡೊಗೆ ಹೊಸ ನಾಯಕತ್ವ ದೊರೆತಿದೆ.
ನೂತನ ಕಾರ್ಯಕಾರಿ ಸಮಿತಿಯಲ್ಲಿ ಜೆಸಿಂತಾ ಲೋಬೊ ಕಾರ್ಯದರ್ಶಿಯಾಗಿ ಹಾಗೂ ಸ್ಟೀವನ್ ರೋಡ್ರಿಗ್ಸ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮಾಜಿ ಅಧ್ಯಕ್ಷೆ ಐಡಾ ಫುರ್ಟಾಡೊ ಸದಸ್ಯೆಯಾಗಿ ಮುಂದುವರಿಯಲಿದ್ದು, ತಮ್ಮ ಅನುಭವದ ಮೂಲಕ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಇನ್ನೂ ಏಳು ಮಂದಿ ಸದಸ್ಯರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಸಮಗ್ರ ಕಾರ್ಯಕಾರಿ ತಂಡ ರಚನೆಯಾಗಿದೆ.
ಆಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಫಾ. ಜಾನ್ ವಾಸ್ ನೇಮಕಗೊಂಡಿದ್ದು, ವರಾಡೊದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಆಧ್ಯಾತ್ಮಿಕ ದಿಕ್ಕು ನೀಡಲಿದ್ದಾರೆ. ಸಂಘಟನೆಯ ಮೌಲ್ಯಾಧಾರಿತ ಸೇವಾ ಕಾರ್ಯಗಳಿಗೆ ಅವರು ಮಾರ್ಗದರ್ಶಕರಾಗಲಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಕ್ಯಾಥೋಲಿಕ್ ಸಭೆಯ ಕೇಂದ್ರ ಸಮಿತಿಯನ್ನು ಪ್ರತಿನಿಧಿಸಿ ಸ್ಟ್ಯಾನಿ ಲೋಬೊ ವೀಕ್ಷಕರಾಗಿ ಭಾಗವಹಿಸಿದ್ದರು. ಬಳಿಕ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೂ ಅವರು ಅಧ್ಯಕ್ಷತೆ ವಹಿಸಿದರು. ವಲಯದ ಸದಸ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಏಕತೆ ಮತ್ತು ಸಹಭಾಗಿತ್ವದ ಮನೋಭಾವ ಸ್ಪಷ್ಟವಾಗಿ ವ್ಯಕ್ತವಾಯಿತು.
ನೂತನ ಅಧ್ಯಕ್ಷ ಕ್ಲೀಟಸ್ ಲೋಬೊ ಅವರ ನೇತೃತ್ವದಲ್ಲಿ ಎಪಿಸ್ಕೋಪಲ್ ಸಿಟಿ ವರಾಡೊವು ಸಮಾಜಸೇವೆ, ಸಾಮಾಜಿಕ ನ್ಯಾಯ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯ ಕ್ಷೇತ್ರಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ಸದಸ್ಯರು ವ್ಯಕ್ತಪಡಿಸಿದ್ದಾರೆ.
Trending
- ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆ ಖಂಡನೀಯ: ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಉಡುಪಿ ಪತ್ರಕರ್ತರ ಸಂಘ ಆಗ್ರಹ
- ಆರೂರು ಅಡ್ಜಿಲು ಭಾಗದ ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಮೆಸ್ಕಾಂ ಒಂದು ತಿಂಗಳೊಳಗೆ ಹೊಸ ಟಿಸಿ ಅಳವಡಿಸುವ ಭರವಸೆ – ತುಳುನಾಡು ರಕ್ಷಣಾ ವೇದಿಕೆ ಆಗ್ರಹ
- ಆಗಸ್ಟ್ 23ರಂದು ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ “ಮರಿಯಾಳದ ಮಿನದನ” ಪೂರ್ವಭಾವಿ ಸಭೆ
- ₹5 ಕೋಟಿ ನಕಲಿ ಔಷಧಿ ಜಾಲ ಬಯಲು: ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಅಧಿಕಾರಿಗಳ ದಾಳಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಲೇಬಲ್ ಅಂಟಿಸಿ ಔಷಧಿಗಳ ಮರುಪ್ಯಾಕಿಂಗ್ – ಅವಧಿ ಮೀರಿದ ಔಷಧಿಗಳೂ ಪತ್ತೆ
- ಉಡುಪಿ: ತುಳುನಾಡಿನ ಸಂಸ್ಕೃತಿ, ಪರಂಪರೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಸೂರಜ್ ನಾಯಕ್ ಸೋನಿ
- INDIA through my EYES’ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯಿ ಎಸ್. ವಿಜೇತೆ
- ಕರಂಬಾರು ಶಾಲೆಯಲ್ಲಿ ಸಂಭ್ರಮ ಸಡಗರದಿಂದ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ
- ಕೋರ್ದಬ್ಬು ದೈವದ ಪಾತ್ರಿ ಸೀನ ಪಾತ್ರಿ ನಂದಿಕೂರು ಮೆರೆಗ್ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ದ “ತುಳುವಾಲ ಕುಲಸಿರಿ – 2026” ಪ್ರಶಸ್ತಿ ಘೋಷಣೆ

