ಮಂಗಳೂರು, ಆ. 12: ತುಳುನಾಡಿನ ವಿಶಿಷ್ಟ ಆಚರಣೆ ಹಾಗೂ ಪಾರಂಪರಿಕ ಆರೋಗ್ಯ ಪರಂಪರೆಯ ಪ್ರತೀಕವಾಗಿರುವ ಆಟಿ ಅಮಾವಾಸ್ಯೆ ಪ್ರಯುಕ್ತ ಪಾಲೆ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮವನ್ನು ಡಿಂಕಿ ಡೈನ್ ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಬುಧವಾರ ಡಿಂಕಿ ಡೈನ್ ಆವರಣದಲ್ಲಿ ಆಯೋಜಿಸಲಾಯಿತು.

ತುಳುನಾಡಿನ ಪದ್ದತಿ ಹಾಗೂ ಸಂಪ್ರದಾಯದಂತೆ ಆಟಿ ಅಮಾವಾಸ್ಯೆಯಂದು ಮದ್ದು ಗಂಜಿ ಹಾಗೂ ಪಾಲೆ ಕೆತ್ತೆ ಕಷಾಯ ಸೇವಿಸುವ ಆಚರಣೆಗೆ ವಿಶೇಷ ಮಹತ್ವವಿದೆ. ಈ ಪಾರಂಪರಿಕ ಆಚರಣೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಉಳಿಸಿ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ಸ್ಥಾಪಕ ಸತೀಶ್ ಪಟ್ಲ ಹಾಗೂ ನಾಟಕ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ಆಟಿ ಕಷಾಯದ ಪಾರಂಪರಿಕ ಮಹತ್ವ, ತುಳುನಾಡಿನ ಜನಜೀವನದಲ್ಲಿ ಅದರ ಸ್ಥಾನ ಹಾಗೂ ಆರೋಗ್ಯದ ದೃಷ್ಟಿಯಿಂದ ಹಿರಿಯರು ಪಾಲಿಸಿಕೊಂಡು ಬಂದಿರುವ ಆಚರಣೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜೋಗಿ ಸಮಾಜದ ಮುಖಂಡ ಕಿರಣ್ ಜೋಗಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಹಾಗೂ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು, ತುಳು ವಲ್ಡ್ ಅದ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಮಾಜಿ ಕಾರ್ಪೊರೇಟರ್ ಕಿರಣ್ ಕೋಡಿಕಲ್, ಯೋಗ ಗುರು ಜಗದೀಶ್ ಬಿಜೈ, ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ತುಳುನಾಡಿನ ಪ್ರಮುಖರು ಉಪಸ್ಥಿತರಿದ್ದರು.

ತುಳುವ ಬೊಳ್ಳಿ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರು ಸ್ವಾಗತಿಸಿದರು. ಡಿಂಕಿ ಡೈನ್ ಮಾಲಕ ಸ್ವರ್ಣ ಸುಂದರ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ತುಳುನಾಡಿನ ಮಣ್ಣಿನ ಸಂಸ್ಕೃತಿ, ಆಚರಣೆ ಮತ್ತು ಆರೋಗ್ಯ ಪರಂಪರೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿದ್ದು, ಯುವ ಪೀಳಿಗೆಗೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಜೀವನ ಪದ್ಧತಿ ಹಾಗೂ ಸಂಪ್ರದಾಯಗಳ ಪರಿಚಯ ಮಾಡಿಸುವಲ್ಲಿ ಸಹಕಾರಿಯಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕನ್ನಡ ಕಟ್ಟೆ ಅದ್ಯಕ್ಷರಾದ ಡಾ ಅಣ್ಣಯ್ಯ ಕುಲಾಲ್ ,ಬಾಸ್ಕರ್ ರೈ ಕುಕ್ಕುವಳ್ಳಿ , ಮಾಜಿ ಕೋರ್ಪೋರೇಟರ್ ಕಿಶೋರ್ ಕೊಟ್ಟರಿ, ತುಳು ಹೋರಾಟಗಾರ ರೋಶನ್ ರೊನಲ್ಡ್ ,ತುಳುನಾಡ ರಕ್ಷಣಾ ವೇದಿಕೆ ಯುವ ಘಟಕ ಅದ್ಯಕ್ಷ ಹರೀಶ್ ಶೆಟ್ಟಿ ಶಕ್ತಿನಗರ , ಸುರೇಶ್ ಶೆಟ್ಟಿ ಶಕ್ತಿನಗರ ಮತ್ತಿತರ ಸಾವಿರಾರು ಜನರು ಪಾಲೆದ ಕತ್ತೆ ಕಷಾಯ ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು



