ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ತಕ್ಷಣ ಸ್ಪಂದಿಸಿದ ಮೊಹಮ್ಮದ್ ಅಲ್ತಾಫ್ ಹಾಗೂ ಯಾಶಿನ್ ಅವರು ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತುರ್ತು ಸಂದರ್ಭದಲ್ಲಿ ಯಾವುದೇ ವಿಳಂಬ ಮಾಡದೆ ರಕ್ತದಾನಕ್ಕೆ ಮುಂದಾದ ಇವರ ಸೇವಾ ಮನೋಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕ ಉಪಾದ್ಯಕ್ಷರಾದ ಫೇರಿ ಡಿಸೋಜರವರು ತುಳುನಾಡ ಸೂರ್ಯ ಪತ್ರಿಕೆ ಗಮನಕ್ಕೆ ತಂದಿದ್ದಾರೆ.
ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದ್ದು, ಅಗತ್ಯದ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ರಕ್ತದ ಅವಶ್ಯಕತೆ ಇದೆ ಎಂಬ ತುರ್ತು ಕರೆ ಬಂದ ತಕ್ಷಣ ಸ್ಪಂದಿಸಿ ರಕ್ತದಾನ ಮಾಡಿದ ಮೊಹಮ್ಮದ್ ಅಲ್ತಾಫ್ ಮತ್ತು ಯಾಶಿನ್ ಅವರ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವಕ್ಕೆ ಅಭಿನಂದನೆಗಳು ವ್ಯಕ್ತವಾಗಿವೆ.
“ತುರ್ತು ಸಂದರ್ಭದಲ್ಲಿ ಒಂದು ಯೂನಿಟ್ ರಕ್ತವೂ ಒಂದು ಜೀವಕ್ಕೆ ಅಮೂಲ್ಯವಾಗಬಹುದು. ರಕ್ತದಾನ ಮಾಡಿ, ಜೀವ ಉಳಿಸಿ” ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಕೂಡ ನಿಯಮಿತವಾಗಿ ರಕ್ತದಾನಕ್ಕೆ ಮುಂದಾಗಬೇಕೆಂದು ಮನವಿ ಮಾಡಲಾಗಿದೆ

