ಮಂಗಳೂರು, ನವೆಂಬರ್ 18, 2026: ಸಹಕಾರಿ ಕ್ಷೇತ್ರದ ಸಾಧಕರ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಸಹಕಾರಿ ಚಳವಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ, 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ತೌಳವ ಸಹಕಾರಿ ಪ್ರಶಸ್ತಿ–2026’ ಪ್ರದಾನ ಸಮಾರಂಭವು ನವೆಂಬರ್ 17ರಂದು ಮಂಗಳೂರಿನ ಉರ್ವ ಸ್ಟೋರ್ನ ತುಳು ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ತುಳುನಾಡ ರಕ್ಷಣಾ ವೇದಿಕೆ (ರಿ.) ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನು ಮೂಡುಬಿದಿರೆ ಜೈನಕಾಶಿಯ ಶ್ರೀ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕರು ಹಾಗೂ ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಆಲ್ವಿನ್ ಜೋಯೆಲ್ ನೊರೊನ್ಹಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಹಕಾರದಿಂದ ಸಮಗ್ರ ಅಭಿವೃದ್ಧಿ ಸಾಧ್ಯ: ಸ್ವಾಮೀಜಿ
ಆಶೀರ್ವಚನ ನೀಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು, “ಸಹಕಾರ ಎನ್ನುವುದು ಕೇವಲ ಆರ್ಥಿಕ ವ್ಯವಹಾರಕ್ಕೆ ಸೀಮಿತವಾದ ವ್ಯವಸ್ಥೆಯಲ್ಲ; ಇದು ಪರಸ್ಪರ ಸಹಾಯ, ನಂಬಿಕೆ, ಸಾಮೂಹಿಕ ಜವಾಬ್ದಾರಿ ಮತ್ತು ಒಗ್ಗಟ್ಟಿನ ತತ್ವಗಳ ಮೇಲೆ ರೂಪುಗೊಂಡಿರುವ ಮಹತ್ವದ ಸಾಮಾಜಿಕ ಚಳವಳಿಯಾಗಿದೆ. ಗ್ರಾಮೀಣ ಆರ್ಥಿಕತೆ, ಸಣ್ಣ ಉದ್ಯಮಗಳು, ಉದ್ಯೋಗ ಸೃಷ್ಟಿ ಹಾಗೂ ಜನರ ಸ್ವಾವಲಂಬನೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ. ಸಹಕಾರಿ ಸಂಸ್ಥೆಗಳು ಲಾಭ ಗಳಿಸುವುದರ ಜೊತೆಗೆ ಸಮಾಜಮುಖಿ ಚಿಂತನೆ ಹಾಗೂ ಜನಪರ ಸೇವೆಗೆ ಆದ್ಯತೆ ನೀಡಬೇಕು“ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳು:
ಕಾರ್ಯಕ್ರಮದಲ್ಲಿ ಮಧೂರು ಶ್ರೀ ಶಿವದುರ್ಗಾಂಬಾ ಮಠದ ಶಿವಯೋಗಿ ದುರಾನಂದ ಸ್ವಾಮೀಜಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ, ಅದಾನಿ ಗ್ರೂಪ್ನ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕಿರಣ್ ಬುಡ್ಲೆಗುತ್ತು, ತುಳು ಚಲನ ಚಿತ್ರ ನಿರ್ಮಾಪಕ ಸಂಘದ ಅದ್ಯಕ್ಷ ಅರ್ ಧನ್ ರಾಜ್ , ದಾಸ್ ಪ್ರೋಷಶನ್ ಕೇರ್ ಟ್ರಸ್ಟ್ ಸ್ಥಾಪಕ ಅನಿಲ್ ದಾಸ್ , ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತೌಳವ ಸಹಕಾರಿ ಪ್ರಶಸ್ತಿ–2026 ಪುರಸ್ಕೃತರ ಪಟ್ಟಿ
ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ನೇತೃತ್ವ ನೀಡುತ್ತಿರುವ ಪದಾಧಿಕಾರಿಗಳ ಹುದ್ದೆ ಮತ್ತು ಸೇವೆಗೆ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
1. ವಿಶೇಷ ಮತ್ತು ವೈಯಕ್ತಿಕ ವಿಭಾಗದ ಪುರಸ್ಕೃತರು:
ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿ:
ಜಾಕೆ ಮಾಧವ ಗೌಡ (ಅಧ್ಯಕ್ಷರು, ಪಂಬೆತಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಮಾಜಿ ಉಪಾಧ್ಯಕ್ಷರು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್)
ನಾಗೇಶ್ ಕುಲಾಲ್ (ಅಧ್ಯಕ್ಷರು, ಸ್ವರ್ಣಕುಂಭ ಬಹುಉದ್ದೇಶ ಸಹಕಾರಿ ಸಂಘ)
ತೌಳವ ಸಹಕಾರಿ ರತ್ನ ಪ್ರಶಸ್ತಿ:
ವಸಂತ್ ಬರ್ನಾಡ್ (ಅಧ್ಯಕ್ಷರು, ಪ್ರಿಯದರ್ಶಿನಿ ಸಹಕಾರಿ ಸಂಘ)
ಕೆ.ಟಿ. ವಿಶ್ವನಾಥ್ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ)
ತೌಳವ ಸಹಕಾರಿ ಸಾಧಕಿ ಪ್ರಶಸ್ತಿ:
ಹೇಮಾ ದಾಮೋದರ ನಿಸರ್ಗ (ನಿರ್ದೇಶಕರು, ಶ್ರೀ ಗೋಕರ್ಣನಾಥ ಸಹಕಾರಿ ಬ್ಯಾಂಕ್ ಲಿ.)
2. ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು (ಸಂಸ್ಥೆವಾರು ವಿವರ):
ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನವ ಉದ್ಯಮಿಗಳ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಮಂಗಳೂರು: ಫ್ಲೇವಿಯಾ ಮರಿಯಾ ನೊರೊನ್ಹಾ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಜಗನ್ನಾಥ್ ಶಿರ್ಲಾಲ್ – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ಮಿಥುನ್ ಎಸ್. ಅಂಚನ್ – ಸಿಇಒ (ತೌಳವ ಸಹಕಾರಿ ಸಾಧಕ).
ಟ್ಯಾಕ್ಸ್ ಪೇಯರ್ಸ್ ಆ್ಯಂಡ್ ಟ್ಯಾಕ್ಸ್ ಸೇವರ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಪಂಪ್ವೆಲ್: ಶಶಾಂತ್ ಸುವರ್ಣ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ರಮ್ಯಾ – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ವಿನೀತ್ ಎ.ಕೆ. – ನಿರ್ದೇಶಕರು (ವಿಶೇಷ ಗೌರವ).
ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನವ ಉದ್ಯಮಿಗಳ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಉಡುಪಿ: ಜಾರ್ಜ್ ಡಿಸೋಜ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಕಿಶನ್ ಆರ್. ಕುಂದರ್ – ಸಿಇಒ (ತೌಳವ ಸಹಕಾರಿ ಸಾಧಕ).
ಟ್ಯಾಕ್ಸ್ ಪೇಯರ್ಸ್ ಆ್ಯಂಡ್ ಟ್ಯಾಕ್ಸ್ ಸೇವರ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಗುತ್ತಿಗಾರು: ಸೀತಾರಾಮ ಗೌಡ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಮನೋಹರ್ ಎಚ್.ಎಸ್. – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ಶಿವಪ್ರಕಾಶ್ – ನಿರ್ದೇಶಕರು (ವಿಶೇಷ ಗೌರವ), ನಿಖಿತಾ ಎ. – ಸಿಇಒ (ತೌಳವ ಸಹಕಾರಿ ಸಾಧಕ).
ಟ್ಯಾಕ್ಸ್ ಪೇಯರ್ಸ್ ಆ್ಯಂಡ್ ಟ್ಯಾಕ್ಸ್ ಸೇವರ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಕಡಬ: ಎಸ್. ಸತೀಶ್ ನಾಯಕ್ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಕೆ. ಕೃಷ್ಣಪ್ಪ ಮಡಿವಾಳ – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ಕೆ. ಪ್ರದೀಪ್ ಕುಮಾರ್ – ಸಿಇಒ (ತೌಳವ ಸಹಕಾರಿ ಸಾಧಕ).
ದಕ್ಷಿಣ ಕನ್ನಡ ಗ್ರೋವರ್ಸ್ ಆರ್ಗ್ಯಾನಿಕ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿ., ಕಂಕನಾಡಿ: ವಿಲ್ಸನ್ ಫ್ರೆಡ್ರಿಕ್ ಪಿಂಟೋ – ಶಾಖಾ ಅಧ್ಯಕ್ಷರು (ತೌಳವ ಸಹಕಾರಿ ರತ್ನ).
ಎಂಟರ್ಪ್ರಿನರ್ಸ್ ಆ್ಯಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಸುರತ್ಕಲ್: ಕೇಶವ ಪೂಜಾರಿ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಸುಸ್ಮಿತ್ – ಸಿಇಒ (ತೌಳವ ಸಹಕಾರಿ ಸಾಧಕ).
ಟ್ಯಾಕ್ಸ್ ಪೇಯರ್ಸ್ ಆ್ಯಂಡ್ ಟ್ಯಾಕ್ಸ್ ಸೇವರ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಪುತ್ತೂರು: ವಿ.ಜೆ. ಪುನೀತ್ – ಅಧ್ಯಕ್ಷರು (ತೌಳವ ಸಹಕಾರಿ ರತ್ನ).
ದಕ್ಷಿಣ ಕನ್ನಡ ಗ್ರೋವರ್ಸ್ ಆರ್ಗ್ಯಾನಿಕ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿ., ಕಡಬ: ಸಂಗೀತಾ ಎಸ್. ನಾಯಕ್ – ಸಿಇಒ (ತೌಳವ ಸಹಕಾರಿ ಸಾಧಕ).
ಕೊಂಕಣ್ ಕ್ಯಾಥೋಲಿಕ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ.: ಶೇಷಿ ಲಿಡ್ವಿನ್ ಡಿಸೋಜ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಸೂಕ್ಷ್ಮಾ ಕ್ರಾಸ್ತಾ ಟಿ. – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ಆರ್ಥರ್ ಡಿಸೋಜ – ನಿರ್ದೇಶಕರು (ವಿಶೇಷ ಗೌರವ).
ಸಿಟಿಜನ್ಸ್ ಆ್ಯಂಡ್ ಸೀನಿಯರ್ ಸಿಟಿಜನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಮೂಡುಬಿದಿರೆ: ಜಿತೇಶ್ ಪೂಜಾರಿ – ಸಿಇಒ (ತೌಳವ ಸಹಕಾರಿ ಸಾಧಕ).
ಟ್ಯಾಕ್ಸ್ ಪೇಯರ್ಸ್ ಆ್ಯಂಡ್ ಟ್ಯಾಕ್ಸ್ ಸೇವರ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಬಂಟ್ವಾಳ: ಲವೀನಾ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಸದಾಶಿವ ಪೂಜಾರಿ – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ದೀಪ್ತಿ ಕೋಟ್ಯಾನ್ – ಸಿಇಒ (ತೌಳವ ಸಹಕಾರಿ ಸಾಧಕ).
ಪ್ರೈವೇಟ್ ಆ್ಯಂಡ್ ಪಬ್ಲಿಕ್ ಸೆಕ್ಟರ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಮಂಗಳೂರು: ಸೌಧಾ ಫಾರೂಕ್ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಎಂ. ಶ್ರೀಧರ್ ಕುಮಾರ್ ಜೈನ್ – ಉಪಾಧ್ಯಕ್ಷರು (ತೌಳವ ಸಹಕಾರಿ ಸಿರಿ), ಅಬ್ದುಲ್ ಅಜೀಮ್ ರೆನಿದ್ ರೆಹಮಾನ್ – ಸಿಇಒ (ತೌಳವ ಸಹಕಾರಿ ಸಾಧಕ).
ಸಿಟಿಜನ್ಸ್ ಆ್ಯಂಡ್ ಸೀನಿಯರ್ ಸಿಟಿಜನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಲಿ., ಬೆಲ್ಮಣ್: ರಿತೀಶಾ ಪೂಜಾರಿ – ಅಧ್ಯಕ್ಷರು (ತೌಳವ ಸಹಕಾರಿ ರತ್ನ), ಶಮಿತ್ ಶಶಿಕುಮಾರ್ ಪೂಜಾರಿ – ಸಿಇಒ (ತೌಳವ ಸಹಕಾರಿ ಸಾಧಕ).
ವಿವಿಧ ಕ್ಷೇತ್ರಗಳ ಸಾಧಕರಿಗೆ ವಿಶೇಷ ಗೌರವ
ತುಳುನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ ಹಾಗೂ ಸಮಾಜಸೇವೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು:
ಪುನೀತ್ ಮುಂಡ್ಕೂರು (ಸಂಪಾದಕರು, ತುಳುನಾಡ ವಾರ್ತೆ) – ತೌಳವ ವಿಶೇಷ ಸಾಧಕ ಪ್ರಶಸ್ತಿ
ದೀಪಕ್ ಜಿ., ಬೆಳ್ತಂಗಡಿ (ಅಧ್ಯಕ್ಷರು, ರಾಜ ಕೇಸರಿ ಸೇವಾ ಟ್ರಸ್ಟ್)
ಕುಶಾಲಾಕ್ಷಿ ಕಣ್ವತೀರ್ಥ (ಸಾಹಿತಿ)
ಮುಲ್ಕಿ ಕರುಣಾಕರ ಶೆಟ್ಟಿ (ಅಧ್ಯಕ್ಷರು, ನಮ್ಮೂರ ಆಟ ಕೂಟ ಟ್ರಸ್ಟ್)
ಯು.ಆರ್. ಶೆಟ್ಟಿ ಸೇರಿದಂತೆ ಹಲವು ಸಾಧಕರು.
ಅಲ್ಲದೆ, ‘ಮೊನಾಲಿಸಾ ಇನ್ ಟ್ರಬಲ್’ ಕಿರುಚಿತ್ರದ ಮೂಲಕ ಕಲಾತ್ಮಕ ಕೊಡುಗೆ ನೀಡಿದ ನವೀನ್ ಕುಮಾರ್ ಶೆಟ್ಟಿ ಹಾಗೂ ಬೃಂದಾವನ ಶೆಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಯುವಜನರಿಗೆ ಸ್ಫೂರ್ತಿ:
ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು, ಸಹಕಾರಿ ಕ್ಷೇತ್ರದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದರೊಂದಿಗೆ ಮುಂದಿನ ಪೀಳಿಗೆಯ ಯುವಜನರಲ್ಲಿ ಸಹಕಾರಿ ಚಳವಳಿಯ ಬಗ್ಗೆ ಆಸಕ್ತಿ ಮತ್ತು ಜವಾಬ್ದಾರಿಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. ಸಮಾರಂಭದಲ್ಲಿ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಯೋಗೀಶ್ ಶೆಟ್ಟಿ ಜಪ್ಪು ಕೃತಜ್ಞತೆ ಸಲ್ಲಿಸಿದರು
