ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಂಪಿ ರವರಿಗೆ ಬೀಳ್ಕೋಡುಗೆ ಸಮಾರಂಭ ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನುಅಪಾರ ಜಿಲ್ಲಾಧಿಕಾರಿ ಡಾ.ಸಂತೋಷ ರವರು ಮಾಡಿದ್ದು ,ವೇದಿಕೆಯಲ್ಲಿರುವ ಅಧಿಕಾರಿಗಳನ್ನು ಸ್ವಾಗತಿಸಿದರು.
ಬಳಿಕ ಮಾತನಾಡಿದ ನಿವೃತ್ತ ಅಧಿಕಾರಿ ಪ್ರಭಾಕರ್ ಶರ್ಮ ಜಿಲ್ಲಾಧಿಕಾರಿ ಗಳು ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ ಯಾವ ಅಧಿಕಾರಿ ಈ ಮಣ್ಣಿನ ವಾಸನೆಯನ್ನು ಗುರುತ್ತಿಸುತ್ತಾರೆ ಅವರ ನೆನಪು ಅಜರಾಮರ,ಈ ಸಂಸ್ಕತಿ ,ಕಲೆ ಇತಿಹಾಸವನ್ನು ಅರ್ಥಮಾಡಿಕೊಳ್ಳುತ್ತಾರೆ ಅವರು ಮಣ್ಣಿನ ಋಣದಲ್ಲಿರುತ್ತಾರೆ.ಅಂತಹ ಅಥಿಕಾರಿಗಳಲ್ಲಿ ಮುಲೈ ಮುಹಿಲನ್ ,ಜಿಲ್ಲೆಯಿಂದ ಹೊರಡುವಾಗ ಭಾವನಾತ್ಮಕ ನೆನಪು ಇರುತ್ತದೆ ಎಂದರು, ಹಳೆಯ ಜಿಲ್ಲಾಧಿಕಾರಿಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ,ಆ ಕಟ್ಟಡದ ಇತಿಹಾಸವನ್ನು ಪ್ರದರ್ಶನ ಮಾಡಿರುವಂತಹದು ಅದ್ಬುತ ಎಂದರು.ಈ ಬಜೆಟ್ ಅಲ್ಲಿ ಅ ಕಟ್ಟಡವನ್ನು ಹೆರಿಟೆಜ್ ಕಟ್ಟಡನ್ನಾಗಿ ಮಾಡಲು 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.ಅವರ ಜೊತೆ ಸಾರ್ವಜನಿಕರು ಆತ್ಮೀಯ ವಾದ ಸಂಭಂದವಿರಿಸಿದ್ದು ಅದು ಜಿಲ್ಲಗೆ ಅವರ ಸೇವೆಗೆ ಸಂದ ಶಾಸ್ವತ ನೆನಪು ಎಂದರು.ಕುಮ್ಕಿ ಹಾಗೂ ಜಾಗದ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕಿದ್ದೆ ಇವರು ಎಂದರು.
DFO ಅಂತೋನಿ ಮರಿಯಪ್ಪನ್ ಮಾತನಾಡಿ ಕಳೆದ 2 ವರ್ಷದಲ್ಲಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವಲ್ಲಿ ಯಶಸ್ವಿಯಾದಿರಿ , ಯಾವುದೇ ಒಂದು ಸಭೆ ನಡೆದರು ಎಲ್ಲಾ ಇಲಾಖೆಯ ಜೊತೆಗೂಡಿ ಕಾರ್ಯನಿವಹಿಸಿದಿರಿ ಇಂತಹ ಸ್ವಚ್ಚ ಮನಸ್ಸಿನ ಜಿಲ್ಲಾಥಿಕಾರಿ ಎಲ್ಲಿಯೂ ಸಿಗಲ್ಲ,ನಿಮ್ಮ ಮುಂದಿನ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಕಂದಾಯ ಅಧಿಕಾರಿ ಹರ್ಷವರ್ಧನ ಪ್ರಜಾಸೌಧ ದ ಶ್ರೇಯ ಇವರಿಗೆ ಸಲ್ಲುತ್ತದೆ ಎಂದರು,ಬಜೆಟ್ ಇಲ್ಲದಿದ್ದರು ಕಾಮಗಾರಿ ಮನಡೆಯುವಾಗ 150 ಬಾರಿ ಬೇಟಿ ನೀಡಿ ಸಂಭಂಧಪಟ್ಟ ಇಲಾಖೆಯ ಜೊತೆ ಮಾತನಾಡಿ ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪಾತ್ರವಹಿದಿರಿ ಎಂದು ಹೇಳಿದರು.10000 ಪಾಣಿಯನ್ನು ವಿತರಿಸಿರಿರುವುದು ಕೂಡ ಇವರದು ಎಂದರು.2019 ನಂತರ ಕರಾವಳಿ ಉತ್ಸವವನ್ನು ಫಂಡ್ ಇಲ್ಲದಿದ್ದರೂ ಬಹಳ ವಿಜೃಂಭಣೆಯಿಂದ ನಡೆಸಿದಿರಿ ಎಂದು ಅವರ ಕಾರ್ಯವನ್ನು ನೆನೆಸಿದರು. ರೆವಿನ್ಯೂ ವಿಚಾರದಲ್ಲಿ 28 ಸ್ಥಾವದಲ್ಲಿದ್ದು ಉತ್ತಮ ಕಾರ್ಯದ ನಂತರ ಇದೀಗ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ ಎಂದರು,ಹಲವು ತಿದ್ದುಪಡಿ ವಿಚಾರದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. Retention to soil ನಿಮ್ಮ ಜಮೀನನ್ನು ಕಾನೂನಾತ್ಮವಾಗಿ ನಿಮಗೆ ಒದಗಿಸುವ ಕಾರ್ಯವನ್ನು ಮಾಡಿದ ಕಾರ್ಯ ನಿಮಗೆ ಸಲ್ಲುತ್ತದೆ ಎಂದರು.ಕರಾವಳಿ ಉತ್ಸವದಲ್ಲಿ ಬದಲಾವಣೆ ತಂದಿದ್ದು ಸರ್ವಧರ್ಮದ ಜೊತೆಗೂಡಿ ಕಾರ್ಯನಿರ್ವಹಿದಿರಿ ಎಂದು ಹೇಳಿದರು.ತಾವು ಮಾಡಿರುವ ಕೊಡುಗೆ ಅಪಾರ .ಆರೋಗ್ಯ ಮುಖ್ಯವೆಂಬ ದ್ಯೇಯ.ಅದನ್ನು ಕಾಪಾಡೊಕೊಂಡು ಹೋಗಬೇಕೆಂದು ಕಾಲಜಿ ವಹಿಸಿ ಮಾತನಾಡಿದರು.
ಜಿಲ್ಲಾಪಂಚಾಯತ್ ಸಿಇಓ ಆನಂದ್ ಕೆ. ಇವರು ಆಡಳಿತ ನಡೆಸುವ ಕಾರ್ಯ ಅಧ್ಬುತ,ಇಂಟೆನ್ಸನ್ ತುಂಬಾ ಮುಖ್ಯ ,ಜಿಲ್ಲೆಯ ಬಗ್ಗೆ ಸ್ಟಡಿ ಮಾಡಿದ್ದಿರಿ, ಯಾವುದೇ ಒಂದು ಕಾರ್ಯನಿರ್ವಹಿಸಿದಿರಿ ಅದು ಅದ್ಬುತ ಕಾರ್ಯವೆಂದರು. ಇಲ್ಲಿ ಮಾಡುವಂತಹ ಕೆಲಸ ಉತ್ತಮ,human resources ಮ್ಯಾನೆಜ್ ಮೆಂಟ್ ,ಏನೂ ಚರ್ಚೆಯಾದರು ಕೊನೆಗೆ ಅನುಷ್ಠಾನಕ್ಕೆ ತರುವುದು ದೊಡ್ಡ ಸಾಧನೆ ಎಂದರು. ಎಷ್ಟೋ ಕೆಲಸಮಾಡಿ ದರೂ ಅವರಿಗೆ ಸಂತೃಪ್ತಿ ಸಿಕ್ಕಿತುವುದು ಖುಷಿಯವಿಚಾರ ಎಂದರು. ನೂತನ ಜಿಲ್ಲಾಧಿಕಾರಿ ಮಾತನಾಡಿದ್ದು ಸಭಾಂಗಣ ತುಂಬಿ ತುಳುಕ್ಕಿದ್ದು ಅದು ಅವರ ಕಾರ್ಯವೈಕರಿಯ ಬಗ್ಗೆ ವಿವರಿದಿದರು .ರಾತ್ರಿ ನಾನು ಅವರ ಮೊಬೈಲ್ ನೀಡಿದರು ರಾತ್ರಿ ಹೊತ್ತು ಹಲವು ಕರೆಗಳಿಗೆ ಉತ್ತರಿಸಿದರು ಎಂದರು. ಸರಿಸುಮಾರು ೫೦ ಕ್ಕೂ ಹೆಚ್ಚು ಕರೆಗಳು ಬಂದಿದ್ದು ಅದು ಅವರ ಮೇಲೆ ಜನರಿಗೆ ಇರುವ ಅಭಿಮಾನ ಎಂದರು, ಅವರಿಗೆ ಇರುವ ತಳ್ಮೆಯಿಂದ ಇಂತಹ ಕಾರ್ಯವೈಕರಿ ಮಾಡುತ್ತಿರುವುದು ಎಂದರು.ಸೂಕ್ಷತೆ ಯನ್ನು ಅರ್ಥ ಮಾಡಿಕೊಳ್ಳುವುದು ಅದು ಅವರ ದೊಡ್ಡಗುಣವವೆಂದರು.ಅವರಂತೆಯೇ ಕಾರ್ಯ ನಿರ್ವಹಿಸಲು ಪ್ರಯತ್ನ ಪಡುತ್ತೆನೆ ಎಂದರು.ಮುಂದಿನ ನಿಮ್ಮ ಇಲಾಖೆಯಲ್ಲಿ ಒಳ್ಳೆಯದಾಗಲಲಿ ವೆಂದರು.
ಬೀಳ್ಕೊಡುಗೆ ಸಮಾರಂಭದಲ್ಲಿ ನುಡಿಮಾತನಾಡಿದ ಮುಲೈ ಮುಹಿಲನ್ ರವರು ವೈಯಕ್ತಿಕ ಬಂದು ಈ ಕ್ಷಣದಲ್ಲಿ ತಮ್ಮ ಅನಿಸಿಕೆಗಳನ್ನು ಅಂಚಿಕೊಂಡಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಮಂಗಳೂರು ಎಲ್ಲಾ ರೀತಿಯಲ್ಲಿ ನನಗೆ ಸ್ಪೇಷಲ್ ಅಮೇರಿಕಾದಲ್ಲಿ ಲಿಫ್ಟ್ ನಲ್ಲಿ ಹೋಗುತ್ತಿರುವಾಗ ಕುಡ್ಲದ ಡಿಸಿ ಅಂತಹ ಮಾತು ಕೇಳುವಾಗ ಖುಷಿಯಾಯ್ತು,ಮಂಗಳೂರಿನಲ್ಲಿ ಕೆಲಸ ಮಾಡುವಾಗ ಕಾನೂನಿನ ಹರಿವು ತುಂಬಾ ಸಿಗುತ್ತದೆ,ಮಂಗಳೂರಲ್ಲಿ ಕೆಲಸ ಮಾಡಕ್ಕೆ ಆಗದವರು ಬೇರೆ ಎಲ್ಲಿ ಏನೂ ಮಾಡುತ್ತಾರೆ ಎನ್ನುತ್ತಾರೆ ಹಿರಿಯರಿ.ರಾತ್ರಿಯಲ್ಲಿ ಕರೆ ಮಾಡುವಾಗ ನನ್ನ ಜೊತೆ ಇರುವ ಎಲ್ಲಾ ಕಾರ್ಯ ನಿರ್ವಹಿಸಿದವರಿಗೆ ಧನ್ಯವಾದ ಅರ್ಪಿಸಿದರು.800 ಕೇಸುಗಳಲ್ಲಿ 650 ಕೇಸನ್ಮು ಕ್ಲಿಯರ್ ಮಾಡಿದ್ದೆವೆ ಎಂದರು .ಜಿಲ್ಲೆಗೆ ಜವಾಬ್ದಾರಿ ಯಾದಂತಹ ಕೆಲಸವನ್ನು ಮಾಡುವುದು ನಮ್ಮ ಕರ್ತವ್ಯ, ಅಭಿವೃದ್ಧಿ ಗೆ ಸಂಬಂಧ ಪಟ್ಟ ಕೆಲಸಕ್ಕೆ ಗ್ರಾಮ ಪಂಚಾಯತ್ ನ ಪಾತ್ರ ಮುಖ್ಯ,ಹಾಗೂ ನನಗೆ ಎಲ್ಲಾ ವಿಚಾರದಲ್ಲಿ ಬೆನ್ನೆಲುಬಾಗಿ ನಿಂತ ಆನಂದ್ ರವರನ್ನು ಶ್ಲಾಘಿಸಿದರು. ನಾನು ಒಮ್ಮೊಮ್ಮೆ ಅನಿಯನ್ ತರಹ ಚೆಂಜ್ ಆಗ್ತಾ ಇರ್ತೆನೆ ಅದು ನನ್ನ ಸಹೋದ್ಯೋಗಿಗಳಿಗೆ ಗೊತ್ತು ಎಂದರು,ಚುನಾವಣಾ ಸಂದರ್ಭದಲ್ಲಿ ಕೆಲಸ ಕಾರ್ಯಕ್ಕೆ ಸಾಥ್ ನೀಡಿದ ಅನುಮಪ್ ಅಗರ್ವಾಲ್,ಯತೀಶ್ ಎನ್.ಹಾಗೂ ಇನ್ನಿತರ ಅಧಿಕಾರಿಗಳನ್ನು ಅಬಿನಂದಿಸಿದರು.ಶಾಲೆಯ ರಜಾ ವಿಚಾರದಲ್ಲೂ ನನ್ನ ಸಹೋದ್ಯೋಗಿಗಳು ಉತ್ತಮ ಕಾರ್ಯ ನಿರ್ವಹಿಸಿದರು ಎಂದರು.ಎಲ್ಲಾ ಇಲಾಖೆಯನ್ನು ನಿಭಾಯಿಸುವದು ಕಷ್ಟಕರ ಆದರೆ ಮಂಗಳೂರಿನಲ್ಲಿ ತುಂಬಾ ಬೆಂಬಲ ಸಿಕ್ಕಿದೆ ಎಂದು ಸಂಭಂದ ಪಟ್ಟ ಅಧಿಕಾರಿಗಳನ್ನು ಹಾಡಿಹೊಗಳಿದರು.ಸ್ಮಾಟ್ ಸಿಟಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕಾರ್ಯ ೮೦% ಪೂರ್ಣಗೊಳಿಸಿದ ತೃಪ್ತಿ ನನಗಿದೆ ಎಂದರು.ಎಲ್ಲಾ ಶಾಸಕರು ಸಹಕಾರಕೊಟ್ಟಿದಕ್ಕೆ ಸಂತಸವ್ಯಕ್ತಪಡಿಸಿದರು.ಆದರಿಂದ ದಕ ಜಿಲ್ಲೆಯ ಮೇಲೆ ಅಭಿಮಾನ ಜಾಸ್ತಿಎಂದರು. ಎಲ್ಲದಕ್ಕೂ ಪ್ರಮುಖ ಕಾರಣ ಮಂಗಳೂರು ದ.ಕ ಜಿಲ್ಲೆಯ ಜನ ಎಲ್ಲಾ ಕಾರ್ಯದಲ್ಲಿ ಜಿಪುನರು ಎಂದರು .ಎಲ್ಲಾ ವಿಭಾಗದಲ್ಲಿ ಮಂಗಳೂರಿನ ಜನರು ಉತ್ತಮರು, ಅದ್ದರಿಂದ ನನಗೆ ಮಂಗಳೂರು ಎಂದರೆ ನನಗೆ ಪ್ರೀತಿ. ಮಂಗಳೂರು ಬಹಳಷ್ಟು ಎತ್ತರಕ್ಕೆ ಹೋಗಬೇಕಿತ್ತು ನನ್ನಿಂದ ಆದಷ್ಟು ಪ್ರಯತ್ನ ಮಾಡಿದ್ದಾನೆ ಆದರಿಂದ ಇನ್ನೂ ಮುಂದೆ ಬಂದವರು ಕೂಡ ಉತ್ತಮ ಕೆಲಸಮಾಡಲಿ ಎಂದರು. ನಮ್ಮದುT-20 ಮ್ಯಾಚ್ ಟೆಸ್ಟ್ ಕ್ರಿಕೆಟ್ ಅಲ್ಲ 2 ವರ್ಷ ಅವಕಾಶ. ನನ್ನ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳಿಗೆ ಸಂತೃಪ್ತಿ ಸಿಕ್ಕಿರಬಹುದೆಂದು ಎಂದು ಹೇಳಿದರು. ಒಂದು ಹೂ ಕಟ್ಟಿದ ಮೇಲೆಯೆ ಅದು ಮಾಲೆಯಾಗುವುದು ಅದಂತಯೆ ಕೆಲಸ ಮಾಡಿ ಎಂದರು ಅರ್ಧಪೂರ್ಣವಾದ ಕಾರ್ಯಮಾಡಬೇಕು,ನನ್ನನು ಮಂಗಳೂರಿನ ಜನ ಮನೆ ಮಗನಾಗಿ ಸ್ವೀಕರಿಸಿದಿರೀ ಇದು ನನ್ನ ಕೊನೆಯಕ್ಷಣದ ವರೆಗೂ ಮೆರಯುವುದಿಲ್ಲಎಂದು ಭಾವುಕರಾದರು .ನನ್ನ ತಂದೆ ತಾಯಿಯೂ ಸರಕಾರಿ ಸವೆಯಲ್ಲಿದ್ದವರು ಪ್ರಮಾಣಿಕವಾಗಿ ತಂದೆ ತಾಯಿ ಕೆಲಸಮಾಡಿದ್ದಕ್ಜೆ ಅ ಪ್ರಮಾಣಿತರ ಮೌಲ್ಯ ನನಗೆ ಇಲ್ಲಿ ಸಿಕ್ಕಿದೆ. ನಿಷ್ಠೆಯಿಂದ ಇದ್ದರೆ ಎಲ್ಲಿಯೂ ಖಾಯಂ ಆಗಿ ನೆಲೆ ಸಿಗುವಿದಿಲ್ಲ ಎಂದು ಹೇಳಿದರು.ಬಳಿಕ ಜಿಲ್ಲೆಯಾ ಎಲ್ಲಾ ಸಂಬಂದಹಪಟ್ಟ ಅಧಿಕಾರಿಗಳು,ಗಣ್ಯರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರಿಗೆ ಶುಭಹಾರೈಸಿದರು.
