ಬ್ರಹ್ಮಾವರ ತಾಲೂಕಿನ ಕೋಟ ಸಮೀಪ ಅಕ್ರಮ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಕೋಟ ಪೊಲೀಸರು ಭೇದಿಸಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕೋಟ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಬಳಿ ನಡೆದ ದಾಳಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಏಪ್ರಿಲ್ 2ರಂದು ಸಂಜೆ 5.45ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ಮಹಾಂತೇಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಮೊಬೈಲ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, Kolkata Knight Riders (KKR) ಮತ್ತು Sunrisers Hyderabad (SRH) ತಂಡಗಳ ನಡುವಿನ ಐಪಿಎಲ್ ಟಿ20 ಪಂದ್ಯಕ್ಕೆ ಸಂಬಂಧಿಸಿದಂತೆ ಅಕ್ರಮ ಬೆಟ್ಟಿಂಗ್ ನಡೆಸುತ್ತಿರುವುದು ಪತ್ತೆಯಾಯಿತು.
ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಆದಿತ್ಯ ಶೆಟ್ಟಿ (28) ಎಂದು ಗುರುತಿಸಲ್ಪಟ್ಟಿದ್ದಾನೆ. ನೂಜಿಯ ಸಂದೀಪ ಗಾಣಿಗನ ಸೂಚನೆಯಂತೆ “PARKER” ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್ಸೈಟ್ ಮೂಲಕ ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದುದಾಗಿ ಆತ ಒಪ್ಪಿಕೊಂಡಿದ್ದಾನೆ.
ಹೆಚ್ಚುವರಿ ವಿಚಾರಣೆಯಲ್ಲಿ, ಇತ್ತೀಚೆಗೆ ನಡೆದ Lucknow Super Giants (LSG) ಮತ್ತು Delhi Capitals ನಡುವಿನ ಪಂದ್ಯದಲ್ಲೂ ಇದೇ ರೀತಿಯಲ್ಲಿ ಬೆಟ್ಟಿಂಗ್ ಹಣ ಸಂಗ್ರಹಿಸಿ, ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಆರೋಪಿಯಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಇನ್ನೊಬ್ಬ ಪ್ರಮುಖ ಆರೋಪಿಯಾದ ಸಂದೀಪ ಗಾಣಿಗನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 57/2026 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕಲಂ 78 KP Act, 112 BNS ಹಾಗೂ 66(D) IT Act ಅಡಿಯಲ್ಲಿ ತನಿಖೆ ಮುಂದುವರಿಯುತ್ತಿದೆ.
Trending
- ಬ್ರಹ್ಮಾವರ ಬೈಕಾಡಿಯಲ್ಲಿ ನೂತನ ತುಳು ಟೆಲಿ ಮೂವಿಗೆ ಮುಹೂರ್ತ ತುಳು ಭಾಷೆ, ಸಂಸ್ಕೃತಿ ಹಾಗೂ ಕರಾವಳಿಯ ಬದುಕಿನ ಅನಾವರಣಕ್ಕೆ ಹೊಸ ಪ್ರಯತ್ನ
- ಶಿವಪುರದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ಶ್ರೀ ರಾಯರ 52ನೇ ಆರಾಧನಾ ಮಹೋತ್ಸವ
- ಪೋಕ್ಸೋ ಪ್ರಕರಣ: ಆರೋಪಿ ಬಂಧನಕ್ಕೆ ಆಗ್ರಹ ರಾಜಕೀಯ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಲಿ – ಹಕೀಂ ಕೂರ್ನಡ್ಕ
- ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಮಂಗಳೂರು ವಲಯ ಸಮಿತಿ ರೂಪೀಕರಣ ಸಭೆ ಸೆ.3ರಂದು
- ಮಂಗಳೂರು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ವರ್ಗಾವಣೆ – ಆರ್. ಚೇತನ್ ನೂತನ ಡಿಐಜಿಯಾಗಿ ನೇಮಕ
- ಕಾನ್ಪುರ ತರಬೇತಿ ವಿಮಾನ ದುರಂತ – ಕರ್ನಾಟಕದ ಯುವ ಪೈಲಟ್ ಸಾವು
- ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ದುರ್ಗಾನಂದ ಸ್ವಾಮೀಜಿಗೆ ಮಂತ್ರೋಪದೇಶ
- ಗುರು ವಂದನಾ: ಡಾ. ಸಿಸ್ಟರ್ ಸಾಧನಾ ಅವರಿಗೆ ‘ಅಧ್ಯಕ್ಷ ಆಚಾರ್ಯ’ ಪ್ರಶಸ್ತಿ ಶಿಕ್ಷಣ ಕ್ಷೇತ್ರದ ಸಮರ್ಪಣೆ, ಶೈಕ್ಷಣಿಕ ನಾಯಕತ್ವ ಹಾಗೂ ಆಡಳಿತ ಸೇವೆಗೆ ಸಂದ ಗೌರವ

