What's Hot
- ಮಂಗಳೂರು ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ: ಎಐ ತಂತ್ರಜ್ಞಾನ ಪ್ರಯೋಗ, ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒತ್ತು
- ಮಂಗಳೂರು : ಕ್ರಿಸ್ ಮಸ್ ಹಬ್ಬ ಸಮಾಜದಲ್ಲಿ ಸತ್ಯ,ನ್ಯಾಯ ಹಾಗೂ ಸಹ ಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶ ಒದಗಿಸುತ್ತದೆ ; ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ.
- ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಎಂ.ಆರ್.ಜಿ. ಗ್ರೂಪ್ನ ಆಶಾ–ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆ ‘ನೆರವು–2025’
- ಉಡುಪಿ: ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪಿಂಪ್ಗಳನ್ನು ಬಂಧಿಸಿದ ಪಡುಬಿದ್ರೆ ಪೊಲೀಸರು
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
- ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕ ಸ್ಥಾನ , ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ?
- ಮಂಗಳೂರು: MDMA ಸಾಗಾಟ ಜಾಲ ಭೇದಿಸಿದ ಸಿಸಿಬಿ; ಮೂವರು ಆರೋಪಿಗಳು ಬಂಧನ
- ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಕ್ರಮ ಖಂಡನೀಯ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ತೀವ್ರ ಆಕ್ರೋಶ
Author: Tulunada Surya
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 31ನೇ ಬಿಜೈ ವಾರ್ಡಿನ ಬಿಜೈ ನ್ಯೂ ರೋಡ್‌ನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕರಾದ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಶನಿವಾರ ಶಿಲಾನ್ಯಾಸ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಬಿಜೈ ಕಾಪಿಕಾಡ್‌ನಿಂದ ಆನೆಗುಂಡಿಯವರೆಗೆ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದು ಹೋಗಲು ಅನುಕೂಲವಾಗುವಂತಹ ಉತ್ತಮ ಚರಂಡಿ ಮತ್ತು ಫುಟ್‌ಪಾತ್ ಅಗತ್ಯವಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಲವು ಬಾರಿ ಮನವಿ ಮಾಡಿದ್ದರು. ಈ ಬೇಡಿಕೆಗೆ ಸ್ಪಂದನೆ ನೀಡಿದ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗಾಗಿ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು,” ಎಂದು ಹೇಳಿದರು. “ಆದರೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ಅಭಿವೃದ್ಧಿ ಕಾಮಗಾರಿಗಳ ಅನುದಾನಗಳನ್ನು ತಡೆಹಿಡಿದ ಕಾರಣ ಈ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಸಚಿವ ಸತೀಶ್ ಜಾರಕಿಹೊಳಿಯವರನ್ನು ಹಲವು ಬಾರಿ…
ಉಡುಪಿ ಜಿಲ್ಲೆಯ ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿಯಲ್ಲಿ ದುಃಖದ ಘಟನೆ ನಡೆದಿದೆ. ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪವಿತ್ರ (17) ಮತ್ತು ಮಲ್ಲೇಶ (23) ಎಂದು ಗುರುತಿಸಲಾಗಿದೆ. ಇಬ್ಬರೂ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ಪವಿತ್ರ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮಲ್ಲೇಶ ಕಾಯಕಮಗಾರನಾಗಿದ್ದಾನೆ. ತಾಯಿ ಕೆಲಸಕ್ಕಿದ್ದು, ಮನೆಯಲ್ಲಿಲ್ಲದ ಸಮಯದಲ್ಲಿ, ಬಾಡಿಗೆ ಜೋಪಡಿಯಲ್ಲಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸ್ ಠಾಣೆಯ ಎಸ್‌ಐ ಭರತೇಶ್, ಎಎಸ್‌ಐ ಪರಮೇಶ್ವರ ಕೆ, ಎಎಸ್‌ಐ ರಮೇಶ್ ಹಾಗೂ ಮುಖ್ಯ ಆರಕ್ಷಕ ಜಯಕರ ಭೇಟಿ ನೀಡಿ ಕಾನೂನು ಕ್ರಮ ಜರಗಿಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಮೃತದೇಹಗಳನ್ನು ನೇಣಿನಿಂದ ಇಳಿಸಿ, ಅಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣವನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಂಗಳೂರು, ಅ.16 – ಶ್ರೀ ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡು ಸಂಸ್ಥಾನದ ದಶಮ ಸಂಭ್ರಮದ ಅಂಗವಾಗಿ “ಬಂಟ ಸಂಸ್ಕೃತಿ ಪರಂಪರೆ ಅನಾವರಣ” ಕಾರ್ಯಕ್ರಮ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭವು ಅಕ್ಟೋಬರ್ 19, ಭಾನುವಾರ ಸಂಜೆ 3 ಗಂಟೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿನ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ ಎಂದು ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ. ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹತ್ವದ ಕಾರ್ಯಕ್ರಮದಲ್ಲಿ ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಪರಮಪೂಜ್ಯ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರ ದಿವ್ಯ ಉಪಸ್ಥಿತಿ ಇರಲಿದೆ ಎಂದು ತಿಳಿಸಿದ್ದಾರೆ. ಪ್ರಮುಖ ಅತಿಥಿಗಳು:• ಉದ್ಘಾಟನೆ: ಡಾ. ಕೆ. ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕರು, ಎಂಆರ್‌ಜಿ ಗ್ರೂಪ್, ಬೆಂಗಳೂರು• ಅಧ್ಯಕ್ಷತೆ: ಡಾ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಸಿಎಂಡಿ, ಹೇರಂಭಾ ಇಂಡಸ್ಟ್ರೀಸ್, ಮುಂಬೈ• ದಶಮ ಸಂಭ್ರಮ ಸಂಕಲ್ಪ ಅನಾವರಣ: ಶಶಿಧರ ಶೆಟ್ಟಿ ಬರೋಡ,…
ಮಂಗಳೂರು: ಧ್ವನಿ ಬೆಳಕು ಮಾಲಕರ ಸಂಘ, ಮಂಗಳೂರು ತಾಲೂಕು, ಕಾವೂರ್ ವಲಯದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೇ ನಡೆದ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಂಘದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಲು ನೂತನ ತಂಡ ತಾವು ಸಜ್ಜು ಎಂಬುದಾಗಿ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳ ವಿವರ ಹೀಗಿದೆ:• ಗೌರವ ಅಧ್ಯಕ್ಷರು: ದಾಮೋದರ್ ಭಾಗವತ್• ಅಧ್ಯಕ್ಷರು: ಒಸ್ವಾಲ್ಡ್ ಪಿಂಟೋ ಬೊಂದೆಲ್• ಉಪಾಧ್ಯಕ್ಷರು: ಶೇಖರ್ ಸಪಲಿಗ ಬಜ್ಪೆ• ಕಾರ್ಯದರ್ಶಿ: ಪ್ರಶಾಂತ್ ಮುಲ್ಲಕಾಡ್• ಸಹ ಕಾರ್ಯದರ್ಶಿ: ಕೀರ್ತನ್ ಕೊಂಚಾಡಿ• ಕೋಶಾಧಿಕಾರಿ: ಪ್ರಸಾದ್ ರೈ ಕಾವೂರ್ ಸಂಘಟನ ಕಾರ್ಯದರ್ಶಿಗಳಾಗಿ ಈ ಮಂದಿ ಆಯ್ಕೆಯಾಗಿದ್ದಾರೆ:• ರಮೇಶ್ ಶೆಟ್ಟಿ ಎಕ್ಕಾರ್• ರಂಜಿತ್ ದಾಸ್ ಬಜ್ಪೆ• ತೇಜಸ್ ಬಜ್ಪೆ• ಗುರುನಂದನ್ ಕೋಡಿಕಲ್• ಸರ್ವೋತ್ತಮ ಶೆಣೈ ಗೌರವ ಸಲಹೆಗಾರರು:• ಅನಿಲ್ ಮಿಸ್ಕಿತ್• ಲೋಕನಾಥ್• ಮಾದವ ಪರಿಮಳ ಪ್ರಸಾದ್ ಸಂಘದ ಪದಾಧಿಕಾರಿಗಳಿಗೆ ಹಾರೈಕೆಗಳನ್ನು ತಿಳಿಸಿ, ಸಮುದಾಯದ ಉತ್ತಮ ಸೇವೆಗೆ ಮುಂದಾಗುವಂತೆ ಸ್ಥಳೀಯರು ಆಶಿಸಿದ್ದಾರೆ.
ದುಬೈ: ಯುಎಇಯಲ್ಲಿ ಹಲವು ವರ್ಷಗಳಿಂದ ನಾಟಕಾಭಿಮಾನಿಗಳಿಗೆ ಮನರಂಜನೆಯ ಪ್ಲಾಟ್‌ಫಾರ್ಮ್ ನೀಡುತ್ತಿರುವ ‘ಗಮ್ಮತ್ ಕಲಾವಿದೆರ್ ದುಬೈ’ ತಂಡದ 14ನೇ ವಾರ್ಷಿಕೋತ್ಸವದ ಅಂಗವಾಗಿ ಹೊಸ ತುಳು ನಾಟಕ “ಪೋನಗ ಕೊನೊಪರಾ..?” ಅಕ್ಟೋಬರ್ 11ರಂದು ನಗರದ ಎಮಿರೇಟ್ಸ್ ಥೀಯೇಟರ್, ಉಮ್ ಅಲ್ ಸೈಫ್ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಮೊದಲ ಪ್ರದರ್ಶನದಲ್ಲೇ ಈ ನಾಟಕವು “ಹೌಸ್ ಫುಲ್ ಶೋ” ಆಗಿ ವಿಶೇಷ ಶ್ಲಾಘನೆಗೆ ಪಾತ್ರವಾಯಿತು. ನಾಟಕದ ಕಥೆಯನ್ನು ದಿನಕರ್ ಭಂಡಾರಿ ಕಣಂಜರ್ ಅವರು ಬರೆದು, ನಿರ್ದೇಶನವನ್ನು ರಂಗ ನಿರ್ದೇಶಕ ವಿಶ್ವನಾಥ ಶೆಟ್ಟಿ ಮಾಡಿದ್ದು, ರಂಗಪಟು ಜಗದೀಶ್ ಶೆಟ್ಟಿ ಕೆಂಚನಕೆರೆ ಅವರ ರಚನೆ ಈ ನಾಟಕಕ್ಕೆ ಹೊಸಬಗೆಯ ಸೃಜನಾತ್ಮಕತೆಯನ್ನು ನೀಡಿದೆ. ಕಾರ್ಯಕ್ರಮದ ಪ್ರಮುಖ ಅತಿಥಿಗಳು: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು. ಇವರಲ್ಲಿ:• ಪ್ರಖ್ಯಾತ ಉದ್ಯಮಿ ಡಾ. ಬಿ.ಆರ್. ಶೆಟ್ಟಿ• ಮುಂಬೈನ ಖ್ಯಾತ ಜ್ಯೋತಿಷ್ಯರು• ಸೈನ್ ಕನ್ನಡ ಸಂಘದ ಅಧ್ಯಕ್ಷ ಡಾ. ಎಂ.ಜೆ. ಪ್ರವೀಣ್ ಭಟ್• ಖ್ಯಾತ ಮುಳುಗು ತಜ್ಞ, ಸಮಾಜಸೇವಕ…
ಮೂಡುಬಿದಿರೆ, ನಿಡ್ಡೋಡಿ:ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಯುವಕರ ತಂಡವೊಂದು ಮನೆಯೊಂದರಲ್ಲಿ ಅನುಚಿತ ಚಟುವಟಿಕೆಗಳಲ್ಲಿ ತೊಡಗಿದಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ಬಂಧಿಸಿರುವ ಘಟನೆ ನಿಡ್ಡೋಡಿಯಲ್ಲಿ ನಡೆದಿದೆ. ಬಂಧಿತರನ್ನು ನಿಡ್ಡೋಡಿಯ ಮಹೇಶ್, ಕಟೀಲು ಪರಿಸರದ ಯಜ್ನೇಶ್, ದಿಲೀಪ್ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.ಅವರಿಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಮಹೇಶ್ ನಿಡ್ಡೋಡಿಯಲ್ಲಿ ವಾಸಿಸುತ್ತಿದ್ದ ಮನೆಯಲ್ಲಿ ಸೇರಿದ್ದರಿಂದ, ಇದೇ ಮನೆ ಅಕ್ರಮ ಚಟುವಟಿಕೆಗಳಿಗೆ ಕೇಂದ್ರವಾಗಿದ್ದೆಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆಸಿದ ತಂಡಕ್ಕೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರು ನೇತೃತ್ವ ವಹಿಸಿದ್ದರು. ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ, ಎಲ್ಲ ಮಾಹಿತಿ ಬಾಯಿಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪೊಕ್ಸೋ (POCSO) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.ಸಮಯಪ್ರಜ್ಞೆಯಿಂದ ತಕ್ಷಣ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಸಂದೇಶ್ ಹಾಗೂ ಅವರ ತಂಡದ ಕಾರ್ಯಪ್ರವೃತ್ತಿಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೆಬ್ರಿ: ಮಾಜಿ ಶಾಸಕ, ದಿವಂಗತ ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (40) ಅವರು ಸೋಮವಾರ ತಡರಾತ್ರಿ ಬಾರಕೂರು ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಸುದೀಪ್ ಅವರು ಹೆಬ್ರಿಯ ನಿವಾಸಿಯಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ
ಮಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ “ಕಾಂತಾರ” ಚಿತ್ರ ಬಿಡುಗಡೆ ಬಳಿಕ ಹುಟ್ಟಿದ ವಿವಾದಗಳ ನಡುವೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ—ಈ ಸಿನಿಮಾದಲ್ಲಿ ದೈವಗಳಿಗೆ ಯಾವುದೇ ರೀತಿಯ ಅವಹೇಳನೆ ನಡೆಯಿಲ್ಲ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿತ “ಕಾಂತಾರ” ಚಿತ್ರ ವಿಶ್ವದಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಆದರೆ, ಇದರತ್ತ ಕೆಲವೊಂದು ಅಪಸ್ವರಗಳು ಎದ್ದ ಹಿನ್ನೆಲೆಯಲ್ಲೇ ಶೆಟ್ಟಿಯವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲದೇ, ರಿಷಬ್ ಶೆಟ್ಟಿಯವರ ನಿರ್ದೇಶನ ಹಾಗೂ ನಟನೆಯ ಶ್ಲಾಘನೆ ಮಾಡಿರುವ ಅವರು, “ಇವರು ನಮ್ಮ ನಾಡಿನ ಪರಂಪರೆ, ಭಾಷೆಯ ಕಂಪನ್ನು ರಾಷ್ಟ್ರ ಮಟ್ಟಕ್ಕೂ ಮೀರಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಿಷಬ್ ಶೆಟ್ಟಿಯವರ “ಕಾಂತಾರ” ಚಿತ್ರವನ್ನು ಚಿತ್ರವಾಗಿ ನೋಡಬೇಕು; ಧಾರ್ಮಿಕ ನಂಬಿಕೆಗಳ ತೋರುವ ಅಂಶಗಳ ವಿರುದ್ಧ ದೋಷಾರೋಪ ಮಾಡುವ ಪ್ರವೃತ್ತಿ ತಪ್ಪು ಎಂಬ ಸಂದೇಶವನ್ನೂ ಅವರು ಕೊಟ್ಟಿದ್ದಾರೆ.
ಬಜಪೆ: ಬಂಟರ ಸಂಘ (ರಿ.) ಬಜಪೆ ವಲಯದ ಮುಂದಿನ ಮೂರುವರ್ಷಗಳ ಅವಧಿಗೆ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸಮಾಜಮುಖಿ ಸೇವಾ ಮನೋಭಾವ ಹಾಗೂ ಸರಳ ವ್ಯಕ್ತಿತ್ವದ ಧನಾತ್ಮಕ ನಾಯಕ ಶ್ರೀ ವೇಣುಗೋಪಾಲ್ ಎಲ್ ಶೆಟ್ಟಿ, ಪಡುಮನೆ, ಕರಂಬಾರು ಅವರು ಆಯ್ಕೆಯಾಗಿದ್ದಾರೆ. ಹೋಟೆಲ್ ಉದ್ಯಮಿಯಾಗಿರುವ ಶ್ರೀ ಶೆಟ್ಟಿ ಅವರು ಮುಂಬೈ ಥಾಣೆ ಬಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೇವಲ ಸಂಘಟನಾತ್ಮಕ ನಾಯಕತ್ವವಲ್ಲದೆ, ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿಯೂ ಕೀರ್ತಿ ಗಳಿಸಿದ್ದಾರೆ. ಶ್ರೀ ವೇಣುಗೋಪಾಲ್ ಶೆಟ್ಟಿ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತಮ್ಮ ಸಕ್ರಿಯ ಪಾತ್ರದ ಮೂಲಕ ಗಮನಸೆಳೆದಿದ್ದು, ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಘದ ಕಾರ್ಯವೈಖರಿ ಉಜ್ವಲವಾಗಿ ಮುಂದುವರಿಯಲಿ ಎಂಬ ಆಶಯದೊಂದಿಗೆ, ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಬಂಟರ ಸಂಘ ಬಜಪೆ ವಲಯ ಹೊಸ ಉನ್ನತಿಗೆ ದಾರಿ ಹಿಡಿಯುವ ನಿರೀಕ್ಷೆ ವ್ಯಕ್ತವಾಗಿದೆ.
ಮಂಗಳೂರು, ಅ.12: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕಂಬಳ ಜಾನಪದ ಕ್ರೀಡೆಯಿಗಾಗಿ ರೂ. 2 ಕೋಟಿ ಅನುದಾನವನ್ನು ಮೀಸಲಿಡುವಂತೆ ರಾಜ್ಯ ಕಂಬಳ ಅಸೋಸಿಯೇಷನ್ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಐಕಳಬಾವ ದೇವೀಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಮೊತ್ತ ಮೀಸಲಾದರೆ, ರಾಜ್ಯದ 25 ಕಂಬಳಗಳಿಗೆ ತಲಾ ರೂ.8 ಲಕ್ಷದಂತೆ ಅನುದಾನ ನೀಡುವುದು ಸಾಧ್ಯವಾಗುತ್ತದೆ. ಇದರಿಂದ ಆಯೋಜಕರಿಗೆ ಸೂಕ್ತ ಯೋಜನೆ ರೂಪಿಸುವಂತೆ ನೆರವಾಗುತ್ತದೆ,” ಎಂದು ಹೇಳಿದರು. ಈ ಹಿಂದೆ ಒಂದು ಕಂಬಳಕ್ಕೆ ರೂ.5 ಲಕ್ಷ ಅನುದಾನ ನೀಡಲಾಗುತ್ತಿತ್ತು. ಆದರೆ ಈಗ ಅದು ರೂ.2 ಲಕ್ಷಕ್ಕೆ ಕುಸಿತವಾಗಿದೆ. ಈ ಹಿನ್ನೆಲೆ ಪುನಃ ಅನುದಾನ ಹೆಚ್ಚಿಸಲು ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಸರ್ಕಾರದ ಅಧಿಕೃತ ಮಾನ್ಯತೆ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಪ್ರಾಧಿಕಾರದ ಮೂಲಕ ಕಂಬಳ ಅಸೋಸಿಯೇಶನ್‌ಗೆ ಈಗಾಗಲೇ ಅಧಿಕೃತ ಮಾನ್ಯತೆ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
