Author: Tulunada Surya

ಮಂಗಳೂರು: ಅಂತರರಾಷ್ಟ್ರೀಯ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ.), ಮಂಗಳೂರು ಇದರ ವತಿಯಿಂದ ಆಗಸ್ಟ್ 23ರಂದು ಆದಿತ್ಯವಾರ ಗ್ರ್ಯಾಂಡ್ ಬೇ ಮರಾವೂರು ಇಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ “ಮರಿಯಾಳದ ಮಿನದನ” ಕಾರ್ಯಕ್ರಮ/ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಹೋಟೆಲ್ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಗಸ್ಟ್ 23ರಂದು ಬೆಳಿಗ್ಗೆ 9 ಗಂಟೆಗೆ ಡಾ. ಅತ್ತೂರು ಸದಾನಂದ ಶೆಟ್ಟಿ ಹಾಗೂ ಪದ್ಮಚಿತ್ತರಂಜನ್ ರೈ ದಂಪತಿಗಳು “ಮರಿಯಾಳದ ಮಿನದನ” ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳು ಹಾಗೂ ಸ್ಪರ್ಧೆಗಳು ನಡೆಯಲಿವೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಟ್ರಸ್ಟ್‌ನ ಸಂಸ್ಥಾಪಕಾಧ್ಯಕ್ಷ ಡಾ. ಅತ್ತೂರು ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಮೋಹನ್ ಆಳ್ವ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳು:ಶಶಿಧರ ಶೆಟ್ಟಿ ಬರೋಡಾ, ಮುಖ್ಯ ಅತಿಥಿಗಳಾಗಿ ಶ್ರೀ ಪಾದೆ ಅಜಿತ್ ರೈ, ಕರುಣಾಕರ ಎಂ. ಶೆಟ್ಟಿ, ಅಜಿತ್ ಹೆಗ್ಡೆ, ವೇಣುಗೋಪಾಲ…

Read More

ಬೆಂಗಳೂರು: ಪ್ರತಿಷ್ಠಿತ ಔಷಧಿ ಕಂಪನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಔಷಧಿಗಳನ್ನು ಮರುಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಪೂರೈಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ. ತಾಂಡ್ಯ ಸಮೀಪದ ಫಾರ್ಮ್‌ಹೌಸ್‌ವೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾವುದೇ ಅಗತ್ಯ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಈ ಅಕ್ರಮ ಘಟಕದಲ್ಲಿ ಸುಮಾರು ₹5 ಕೋಟಿ ಮೌಲ್ಯದ ಔಷಧಿಗಳು ಹಾಗೂ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮ ಜಾಲದ ಕಾರ್ಯವೈಖರಿ ಬೆಳಕಿಗೆ ಬಂದಿದೆ. ಸ್ಥಳೀಯರಿಂದ ಫಾರ್ಮ್‌ಹೌಸ್‌ನ್ನು ಗುತ್ತಿಗೆಗೆ ಪಡೆದಿದ್ದ ಪ್ರಶಾಂತ್ ಎಂಬಾತ ಕಳೆದ ಒಂದು ವರ್ಷದಿಂದ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಕಡಿಮೆ ಬೆಲೆಯ ಔಷಧಿಗೆ ದುಬಾರಿ ಕಂಪನಿಯ ಲೇಬಲ್ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತರಿಸಿಕೊಂಡು, ಅವುಗಳ ಮೇಲೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಅಂಟಿಸಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಧಿಕಾರಿಗಳ…

Read More

ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ಮೂಲಕ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ರಮೇಶ್ ಶೆಟ್ಟಿ ಉಪ್ಪೂರು ಅವರು ಧ್ವಜ ಹಸ್ತಾಂತರಿಸುವ ಮೂಲಕ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಲ್ಸನ್ ಫೆರ್ನಾಂಡಿಸ್ ಹಾಗೂ ಯೋಗಿಶ್ ಶೆಟ್ಟಿ ಬಾಲಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವು ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 16ರಂದು ಕಾರ್ಯಕ್ರಮ ನಡೆಯಿತು. ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ–ವಿಚಾರ, ಜಾನಪದ ಕಲೆಗಳು ಹಾಗೂ ವಿಶಿಷ್ಟ ಜೀವನ ಪದ್ಧತಿಗಳು ಇಡೀ ದೇಶವೇ ಹೆಮ್ಮೆಪಡುವಂತಹ ಶ್ರೀಮಂತ ಪರಂಪರೆಯಾಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಅಮೂಲ್ಯ ಸಾಂಸ್ಕೃತಿಕ…

Read More

ಮಂಗಳೂರು: ಮಂಗಳೂರಿನ PIXNCIL ಚಿತ್ರಕಲಾ ಸಂಸ್ಥೆ, ರೋಹನ್ ಕಾರ್ಪೋರೇಶನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಪಾನ್ ಇಂಡಿಯಾ ಮಟ್ಟದ “Freedom Palette – INDIA through my EYES” ಚಿತ್ರಕಲಾ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 2,857 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯ ಪ್ರಾಥಮಿಕ ಹಂತದ ಬಳಿಕ ಅಂತಿಮ ಸುತ್ತಿಗೆ 60 ಮಂದಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಈ 60 ಸ್ಪರ್ಧಿಗಳಿಗಾಗಿ ಆಯೋಜಿಸಲಾಗಿದ್ದ “The COAST – In the Story of INDIA” ಎಂಬ ವಿಶೇಷ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯಿ ಎಸ್. ಅವರು ಅತ್ಯುತ್ತಮ ಚಿತ್ರಕಲಾ ಪ್ರತಿಭೆಯನ್ನು ಪ್ರದರ್ಶಿಸಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿಜೇತರಿಗೆ ರೋಹನ್ ಕಾರ್ಪೋರೇಶನ್ ವತಿಯಿಂದ ಘೋಷಿಸಲಾಗಿದ್ದ ₹15,000 ನಗದು ಬಹುಮಾನವನ್ನು ಚಿನ್ಮಯಿ ಎಸ್. ಅವರು 2026ರ ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವೀಕರಿಸಿದರು. ಪಾನ್ ಇಂಡಿಯಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಾವಿರಾರು ಸ್ಪರ್ಧಿಗಳ ನಡುವೆ ತಮ್ಮ ಪ್ರತಿಭೆಯನ್ನು ಮೆರೆದ ಚಿನ್ಮಯಿ ಎಸ್. ಅವರ ಸಾಧನೆಗೆ PIXNCIL ಚಿತ್ರಕಲಾ…

Read More

ಕರಂಬಾರು ಶಾಲಾ ಮೈದಾನ ದಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆ ಹಾಗೂ ಸಡಗರದಿಂದ ಆಚರಿಸಲಾಯಿತು.ಧ್ವಜಾರೋಹಣವನ್ನು ಶಾಲಾ SDMC ಅಧ್ಯಕ್ಷರಾದ ಶ್ರೀ ಗುಣಪಲ್ ದೇವಾಡಿಗ ನೆರವೇರಿಸಿ ದೇಶದ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸ ಲಾಯಿತು, ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕೌನ್ಸಿಲರ್ ದಿನೇಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಶ್ರಿ ಮಾರಿಯಮ್ಮ ಕೋಟೆ ಬಬ್ಬು ಸ್ವಾಮಿ ದೈವಸ್ಥಾನ ಕರಂಬಾರು ಅಧ್ಯಕ್ಷರಾದ ಶ್ರೀ ಜಗನ್ನಾಥ ಸಾಲ್ಯಾನ್ , ನಮ್ಮ ಕ್ಲಿನಿಕ್ ಮಳವೂರು ವೈದ್ಯಾಧಿಕಾರಿ ಶ್ರೀ ನಚಿಕೇತ, ನಾಗರಿಕ ಸೇವಾ ಸಮಿತಿ (ರಿ) ಅಂಬೇಡ್ಕರ್ ನಗರ ಕರಂಬಾರು ಅಧ್ಯಕ್ಷರಾದ ಶ್ರಿ ಭೋಜರಾಜ್ ಕೋಟ್ಯಾನ್, ನಮ್ಮ ಜವನೆರ್ ಕರಂಬಾರು ಗೌರವ ಅಧ್ಯಕ್ಷರಾದ ಶ್ರೀ ರಮೇಶ್ ಸುವರ್ಣ, ಶ್ರಿ ಮಹಾಲಕ್ಷ್ಮಿ ದೇವಸ್ಥಾನ ಕರಂಬಾರು. ಅಧ್ಯಕ್ಷರಾದ ಶ್ರಿ ಲಕ್ಷ್ಮಣ್ ಬಂಗೇರ, ಸಾವಿತ್ರಿ ಟೀಚರ್, ಓಂಕಾರ್ ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀ ಮನೋಜ್ ಶೆಟ್ಟಿ, ಪದ್ಮನಾಭ,…

Read More

ತುಳುನಾಡ್‌ಡ್, ಐಟ್‌ಲಾ ಮುಲ್ಕಿ, ಹೆಜಮಾಡಿ, ಉಡುಪಿ, ಮಂಗಳೂರುಡು ಕೋರ್ದಬ್ಬು ಕಂಬೆರ್ಲು ದೈವದ ಪಾತ್ರಿಯಾದ್ ಪುಗರ್ತೆ ದೆತೊಂದು, ಕರಿನ್ 37 ವರ್ಸಡ್ದ್ ದೈವದ ಸೇವೆನ್ ನಿಷ್ಠೆ ಬೊಕ್ಕ ಪ್ರಾಮಾಣಿಕತೆಡ್ ಮಲ್ತೊಂದು ಬೈದಿನ ಪ್ರಸ್ತುತ ನಂದಿಕೂರುದ ನಿವಾಸಿಯಾಯಿನ ಶ್ರೀ ಶೀನ ಪಾತ್ರಿ ಮೆರೆಗ್ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.) ಮೊಕ್ಲೆನ ವರ್ಸದ “ತುಳುವ ಜವನೆರೆ ಆಯನ, ತುಳುನಾಡ್ ಕಾನ್ಕ್ಲೇವ್ – 2026″ದ ಜೀವಮಾನದ ಸಾಧನಾ ಪುರಸ್ಕಾರ “ತುಳುವಾಲ ಕುಲಸಿರಿ” ಪ್ರಶಸ್ತಿನ್ ಆಗಸ್ಟ್ 23ತ್ತಾನಿ ಮುಲ್ಕಿದ ಸರ್ಕಾರಿ ಪದವಿ ಪೂರ್ವ ಕಾಲೇಜಿಡ್ ನಡಪರೆ ಉಪ್ಪುನ ಸಮಾವೇಶೊಡು ಕೊರಿಯೆರೆ ನಿರ್ಧಾರ ಮಲ್ತ್‌ದೆರ್. ಶ್ರೀ ಶೀನ ಪಾತ್ರಿ ಮೇರ್ ಸುಮಾರು 37 ವರ್ಸಡ್ದ್ ಬಬ್ಬು ಸ್ವಾಮಿನ ದರ್ಶನ ಸೇವೆನ್ ಮಲ್ತೊಂದು ಬೈದೆರ್. ಬಬ್ಬುಸ್ವಾಮಿನ ಚರಿತ್ರೆಯಾಯಿನ “ಬೈದ”ನ್ ಎಡ್ಡೆಡೇ ತೆರಿದಿನಾರಾದ್ ನಾನಾ ಕಡೆಟ್ ಸೇವೆನ್ ಮಲ್ತ್‌ದೆರ್. ಕಚ್ಚೂರು ಮಾಲ್ದಿದೇವಿ ಬೊಕ್ಕ ಬಬ್ಬುಸ್ವಾಮಿನ ಮೂಲಕ್ಷೇತ್ರ ಕಚ್ಚೂರುಡುಲಾ ಬಬ್ಬು ಸ್ವಾಮಿನ ದರ್ಶನ ಪಾತ್ರಿಯಾದ್ ಸೇವೆ ಸಲ್ಲಿಸಾದೆರ್. ಮುಲ್ಕಿ ಮಟ್ಟು ಗ್ರಾಮದ ಕೂಡುಕಟ್ಟುಗು…

Read More

ಪುತ್ತೂರು, ಆ. 16: ಕರಾಟೆ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಹಾಗೂ ದೇಶದ ನಾಗರಿಕರಿಗೆ ಆತ್ಮರಕ್ಷಣಾ ಕೌಶಲ್ಯವನ್ನು ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ World Karate Masters Association (WKMA) ಸಂಸ್ಥೆಯ ವತಿಯಿಂದ ಚೆನ್ನೈನಲ್ಲಿ ಆಯೋಜಿಸಲಾದ 3ನೇ ಗಿನ್ನೆಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಧಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿತಾ ಎಂ. ರೈ ಭಾಗವಹಿಸಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನದ ಭಾಗವಾಗಿದ್ದಾರೆ. 2030ರೊಳಗೆ 8 ಕೋಟಿ ಭಾರತೀಯ ನಾಗರಿಕರಿಗೆ ಉಚಿತ ಆತ್ಮರಕ್ಷಣಾ ತರಬೇತಿ ನೀಡುವ ಗುರಿಯನ್ನು WKMA ಹೊಂದಿದ್ದು, ಕರಾಟೆಯ ಮಹತ್ವ, ಆತ್ಮರಕ್ಷಣಾ ಕೌಶಲ್ಯ ಹಾಗೂ ದೈಹಿಕ-ಮಾನಸಿಕ ಸದೃಢತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 2026ರ ಆಗಸ್ಟ್ 16ರಂದು ಚೆನ್ನೈನ ಕೋಯಂಬೇಡು, ಸೇಂಟ್ ಥಾಮಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲಂಡನ್‌ನಲ್ಲಿರುವ ಗಿನ್ನೆಸ್ ವಿಶ್ವ ದಾಖಲೆಗಳ ಪ್ರಧಾನ ಕಚೇರಿಯಿಂದ ಗಿನ್ನೆಸ್ ಪ್ರತಿನಿಧಿ/ಅಧಿಕಾರಿ ಉಪಸ್ಥಿತರಿದ್ದು, ದಾಖಲೆಯ ಪ್ರಯತ್ನಕ್ಕೆ ಸಾಕ್ಷಿಯಾಗಿದ್ದರು. ಕಾರ್ಯಕ್ರಮದ ಪ್ರಮುಖ…

Read More

ಮಂಗಳೂರು, ಆ.15: ಅಳಪೆ–ಪಡೀಲ್‌ನ ಗ್ರೀನ್ ವ್ಯೂ ಅಂಗನವಾಡಿ ಕೇಂದ್ರದಲ್ಲಿ ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ದೇಶಪ್ರೇಮ, ರಾಷ್ಟ್ರಾಭಿಮಾನ, ಶಿಸ್ತು ಹಾಗೂ ಉತ್ತಮ ನಾಗರಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವವನ್ನು ಪರಿಚಯಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಡಿ.ಕೆ. ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕರಾದ ಆಲ್ವೀನ್ ನೊರೊನ್ಹ, ಡಿ.ಕೆ. ಟ್ರಾನ್ಸ್‌ಪೋರ್ಟ್ ಕಂಪನಿಯ ಆಡಳಿತ ನಿರ್ದೇಶಕರಾದ ಲೆಜಿ ಡಿಸೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಂಗನವಾಡಿ ಮಕ್ಕಳು ದೇಶಭಕ್ತಿ ಗೀತೆಗಳು ಹಾಗೂ…

Read More

ಮಂಗಳೂರು : ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಸಿಟಿಸೆಂಟರ್‌ನಲ್ಲಿರುವ KFC ಮಳಿಗೆಯಲ್ಲಿ ಸುಮಾರು 9 ತಿಂಗಳ ಹಿಂದಿನ ಕೋಳಿ ಮಾಂಸ ಪತ್ತೆಯಾಗಿದೆ ಎನ್ನಲಾಗಿದ್ದು, ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಗ್ಯ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಮಳಿಗೆಗೆ ತಾತ್ಕಾಲಿಕವಾಗಿ ಬೀಗ ಜಡಿದಿರುವ ಘಟನೆ ನಡೆದಿದೆ. ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹಣೆ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ಅಧಿಕಾರಿಗಳು ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ ದೀರ್ಘಕಾಲದಿಂದ ಸಂಗ್ರಹಿಸಲಾಗಿದ್ದ ಹಳೆಯ ಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಮಳಿಗೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಆಹಾರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಸಾಮಾನ್ಯವಾಗಿ ಕೋಳಿ ಮಾಂಸದಂತಹ ಬೇಗನೆ ಹಾಳಾಗುವ ಆಹಾರ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸುವುದು, ಅವುಗಳ ಬಳಕೆಯ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಅವಧಿ ಮೀರಿದ ಆಹಾರವನ್ನು ತಕ್ಷಣವೇ ವಿಲೇವಾರಿ ಮಾಡುವುದು ಆಹಾರ ಸುರಕ್ಷತಾ ನಿಯಮಗಳ ಪ್ರಮುಖ ಅಂಶಗಳಾಗಿವೆ. ಆದರೆ,…

Read More

ತಲ್ಲೂರು: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಲ್ಲೂರಿನಲ್ಲಿ ಆಟೋ ಚಾಲಕರಿಗೆ ಸಿಹಿ ತಿಂಡಿ ವಿತರಿಸಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಆಟೋ ಚಾಲಕರ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಸ್ಪಂದಿತ ಪೂಜಾರಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ ತಲ್ಲೂರು ಅವರು ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಸ್ಪಂದಿತ ಪೂಜಾರಿ ಅವರು ಸವಿತಾ ಪೂಜಾರಿ ಮತ್ತು ಸುಧೀರ್ ಪೂಜಾರಿ ದಂಪತಿಯ ಪುತ್ರಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಡಾ. ಸತೀಶ್ ಕಾರ್ವಿ, M.D. ರೆಸಿಡೆನ್ಸಿಯ ಅಧ್ಯಕ್ಷರಾದ ಶ್ರೀ ಆನಂದ್ ಸಿರಿಯನ್, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೇಶದ ಸ್ವಾತಂತ್ರ್ಯವನ್ನು ಸ್ಮರಿಸುವುದರ ಜೊತೆಗೆ, ದುಡಿಯುವ ವರ್ಗದ…

Read More