Author: Tulunada Surya

ಮಂಗಳೂರು: ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಪಿ.ಎಲ್. ಧರ್ಮಾ ಅವರು ನೇಮಕಗೊಂಡಿದ್ದಾರೆ. ಮಂಗಳವಾರ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಪ್ರೊ. ಪಿ.ಎಸ್. ಯಡಿಪಡಿತ್ತಾಯ ಅವರ ಕುಲಪತಿ ಅವಧಿ ಮುಗಿದ ಬಳಿಕ ಹುದ್ದೆ ಖಾಲಿಯಾಗಿಯೇ ಉಳಿದಿತ್ತು. ಇದೀಗ ಪಿ.ಎಲ್. ಧರ್ಮಾ ಅವರು ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಮೂಲತಃ ಮಡಿಕೇರಿಯವರಾದ ಪ್ರೊ. ಪಿ.ಎಲ್. ಧರ್ಮಾ ಅವರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಪರೀಕ್ಷಾಂಗ ಕುಲಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ ಅನುಭವಿ . ಅವರ ಅಧಿಕಾರ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗರಿಮೆ ಉತ್ತುಂಗಕ್ಕೆರಲಿ ಎಂದು ತುಳುನಾಡ ರಕ್ಷಣಾ ವೇದಿಕೆ ಶುಭ ಹಾರೈಸುತ್ತದೆ.

Read More

🔹 ಕೈಕಂಬ ಪೇಟೆ ಉಳಿವಿಗಾಗಿ ಪಕ್ಷಾತೀತವಾಗಿ ಹೊರಾಡೋಣ: ಅನ್ವರ್ ಸಾದಾತ್ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ನಕಟ್ಟೆ-ಸಾಣೂರು ವರೆಗೆ ಚತುಷ್ಪಥ ಕಾಮಗಾರಿಯು ಗುರುಪುರ ಕೈಕಂಬ ಜಂಕ್ಷನ್ ನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು ಹಲವಾರು ಸಮಸ್ಯೆಗಳಿಗೆ ಕಾರಣವಾಗುವ ಅಂಡರ್ ಪಾಸ್ ಮಾದರಿಯಾ ಕಾಮಗಾರಿಯನ್ನು ಸ್ಥಗಿತಗೊಳಿಸಿ ಚತುಷ್ಪಥ ಫ್ಲೈ ಓವರ್ ನಿರ್ಮಿಸಲು ಆಗ್ರಹಿಸಿ ಹಕ್ಕೊತ್ತಾಯ ಸಭೆ ಗುರುಪುರ ಕೈಕಂಬ ಜಂಕ್ಷನ್ ನಲ್ಲಿ ನಡೆಯಿತು ಹಕ್ಕೊತ್ತಾಯ ಸಭೆಯನ್ನು ಉದ್ದೇಶಿಸಿ SDPI ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಮಾತನಾಡಿದರು ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಎ.ಕೆ.ರಿಯಾಝ್ ಅಧ್ಯಕ್ಷತೆ ವಹಿಸಿದ್ದರು ಪ್ರತಿಭಟನಾ ಸಭೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫಾರ ನಾಸೀರ್ SDPI ಗುರುಪುರ ಕೈಕಂಬ ಬ್ಲಾಕ್ ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ, SDPI ಗುರುಪುರ ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ.ಮುಸ್ತಾಪ ಅಡ್ಡೂರು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಅಶ್ರಫ್ ಅಡ್ಡೂರು, ಝಕರಿಯಾ ಶಾಹೀಕ್, ಮನ್ಸೂರ್ ಟಿಬೆಟ್,ದಿಲ್ಶಾದ್, ಬುಶ್ರಾ, ಮರಿಯಮ್ಮ,ಅಝ್ಮೀನಾ,ರೆಹನಾ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯವು ಹಲವು ತಿಂಗಳುಗಳಿಂದ ತೀವ್ರ ಆರ್ಥಿಕ ಅಡಚಣೆ ಎದುರಿಸುತ್ತಿದೆ ಎಂದು ವರದಿಯಾಗಿವೆ ಹಾಗಾಗಿ ವಿವಿಯ ಆರ್ಥಿಕ ಶ್ವೇತಪತ್ರ ಬಿಡುಗಡೆಗೊಳಿಸಬೇಕು ಎಂದು ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್. ಹರೀಶ್ ಆಚಾರ್ಯ ಮನವಿ ಮಾಡಿದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಭವಿಷ್ಯನಿಧಿ ಖಾತೆಗಳಿಗೆ ಬಾಕಿಯಿರುವ ಮೊಬಲಗನ್ನೂ ಹೊಂದಿಸಿಕೊಳ್ಳಲಾಗದ ಇಕ್ಕಟ್ಟಿನಲ್ಲಿ ವಿಶ್ವವಿದ್ಯಾನಿಲಯ ಇದೆ. ಸಾರ್ವಜನಿಕ ವಲಯದಲ್ಲಿ ವಿಶ್ವವಿದ್ಯಾನಿಲಯದ ಹಣಕಾಸು ನಿರ್ವಹಣೆ ಹಾಗೂ ಆರ್ಥಿಕ ಶಿಥಿಲತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳು ಮೂಡಿದೆ. ಈ ಸಂದೇಹಗಳು ನಿವಾರಣೆಯಾಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯವು ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರವನ್ನು ಹೊರಡಿಸಬೇಕೆಂದು ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ಒತ್ತಾಯಿಸಿದ್ದಾರೆ. ಹಾಗೆಯೇ ಹಳಿ ತಪ್ಪಿರುವ ವಿಶ್ವವಿದ್ಯಾನಿಲಯದ ಅರ್ಥಿಕ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ದೃಷ್ಟಿಯಿಂದ ರಾಜ್ಯ ಸರಕಾರವು ಮಧ್ಯ ಪ್ರವೇಶಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ ಮಂಗಳೂರು ವಿಶ್ವವಿದ್ಯಾನಿಲಯಾದಿಂದ ನೇಮಕಾತಿಗೊಂಡು ಕೊಡಗು ವಿಶ್ವ…

Read More

ತುಳುನಾಡ ರಕ್ಷಣಾ ವೇದಿಕೆಉಡುಪಿ ಜಿಲ್ಲಾ ‌ಕಚೇರಿಯಲ್ಲಿ 3-03-2024 ರವಿವಾರ ಸಂಜೆ 3 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಕಾರ್ಯಕಾರಿ ಸಭೆಯು ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕೇಂದ್ರೀಯ ಮಂಡಳಿ ಅದ್ಯಕ್ಷ – ಸ್ಥಾಪಕರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದ್ದರು. ಉಡುಪಿ ಜಿಲ್ಲಾ ಅಧ್ಯಕ್ಷ ಕೃಷ್ಣ ಕುಮಾರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ ಪ್ರಾಸ್ತವಿಕ ಭಾಷಣಗೈದರು. ಸಭೆಯಲ್ಲಿ ಕಾಪು ತಾಲೂಕು ಘಟಕ ನೂತನ ಅದ್ಯಕ್ಷರಾಗಿ ಹರೀಶ್ ಶೆಟ್ಟಿ ಹಿರಿಯಡ್ಕ ರವರು ಅಯ್ಕೆ ಮಾಡಲಾಯಿತು.ಸಭೆಯಲ್ಲಿಗೌರವ ಸಲಹೆಗಾರರಾದ ಸುಧಾಕರ ಅಮೀನ್ಉಪಾಧ್ಯಕ್ಷರು ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಜೊತೆ ಕಾರ್ಯದರ್ಶಿಯಾದ ಸುಭಾಷ್ ಸುದನ್,ಸಾಮಾಜಿಕ ಜಾಲತಾಣ ಸಂಚಾಲಕ ರಾಗಿ ರೋಶನ್,ಅಟೋ ಘಟಕ ಅದ್ಯಕ್ಷಅನಿಲ್ ಪೂಜಾರಿ,ಬ್ರಹ್ಮವಾರ ಘಟಕ ಅದ್ಯಕ್ಷ ಸತೀಶ್ ಪೂಜಾರಿ ಕೀಳಂಜೆ,ಪ್ರೀತಮ್,ಮಜೀದ್ , ಹರಿ ಪ್ರಸಾದ್ , ಮಹಿಳಾ ಘಟಕ ಅದ್ಯಕ್ಷೆ ಶೋಭ ಪಾಂಗಳಾ,ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ,…

Read More

ತಾರೀಕು 28.02 20 24 ರಂದು ಸಂಜೆ 6.30 ಗಂಟೆ ಗೆ ಮಣಿಪಾಲ್ ಭಾರತ್ ಮಾಲ್ ನಲ್ಲಿ ಗಬ್ಬರ್ ಸಿಂಗ್ ತುಳು ಫಿಲಂ ನ ಪ್ರೀಮಿಯರ್ ಶೋ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ತುಳುಕುಟದ ಅಧ್ಯಕ್ಷರಾದ ಜಯಕರ ಶೆಟ್ಟಿ ,ಉದ್ಯಮಿ ಅಬೂಬಕ್ಕರ್, ವೀಣಾ ಶೆಟ್ಟಿ , ಬೈಕಾಡಿ ಸುಪ್ರಸಾದ್ ಶಕ್ತಿ ಬಿರ್ತಿ ರಾಜೇಶ್ ಶೆಟ್ಟಿ, ಬಿಲ್ಡರ್ ದಿನೇಶ್ ಪೂಜಾರಿ ಸಂತ ಕಟ್ಟೆ ರಾಘವೇಂದ್ರ ಜೆ.ಬಿ. ಬ್ರಹ್ಮಾವರ , ಶೇಖರ್ ಹಾವಂಜೆ, ಎಸ್.ನಾರಯಣ ಬ್ರಹ್ಮಾವರ, ನಾಯಕ ಶರಣ್ ಶೆಟ್ಟಿಹಾಗೂ ಸ್ಥಳೀಯ ಕಲಾವಿದರಾದ ಚಂದ್ರಹಾಸ್ ಶೆಟ್ಟಿ ಕಪ್ಪೆಟ್ಟು , ಪೂರ್ಣಿಮಾ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ವೀಕ್ಷಕ ರಾದ ಫ್ರಾಂಕಿ ಡಿಸೋಜ ಕೊಳಲಗಿರಿ, ತುಳುನಾಡು ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ ,ಪ್ರಚಾರ ಸಂಯೋಜಕರಾದ ಜಾಹೀರ್ ಅಹಮ್ಮದ್ ಬೆಳಪು , ಕೀರ್ತಿರಾಜ್ ಅಂಬಲಪಾಡಿ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್…

Read More

ಬೆಂಗಳೂರು: ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವ ಬಗ್ಗೆ ಈಗಾಗಲೇ ಎರಡು ಭಾಷೆಗಳಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಿರುವ ಬಿಹಾರ, ಪಶ್ಚಿಮ ಬಂಗಾಲ ಮತ್ತು ಆಂಧ್ರ ಪ್ರದೇಶಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ವರದಿ ಪಡೆದು ಕಾನೂನು ಇಲಾಖೆಗೆ ಸಲ್ಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ. ಎಂ. ಫಾರೂಖ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನ ನೀಡುವುದು ನಮ್ಮ ಗಮನದಲ್ಲಿದೆ. ಆದರೆ ನಿಯಮಗಳ ಪಾಲನೆ ಆಗಬೇಕಿದೆ. ಡಾ| ಮೋಹನ್ ಆಳ್ವರ ಸಮಿತಿ ನೀಡಿದ ವರದಿ ನಮ್ಮ ಮುಂದಿದೆ. ಆದರೆ ಕಾನೂನು ಇಲಾಖೆಯು ಅನ್ಯ ರಾಜ್ಯಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಬಯಸಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಸಮಿತಿ ಕಳುಹಿಸಲು ಸರಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು. ನಾವು ಈಗಾಗಲೇ ಈ ಮೂರು ರಾಜ್ಯಗಳಿಗೆ ಪತ್ರ ಬರೆದು ದ್ವಿಭಾಷೆ ಅಳವಡಿಕೆ ಬಗ್ಗೆ ಮಾಹಿತಿ ನೀಡುವಂತೆ…

Read More

ಉಡುಪಿ ಜಿಲ್ಲೆಯ ನೂತನ ಜಿಲ್ಲಾದ್ಯಕ್ಷರಾದ ಕೃಷ್ಣ ಕುಮಾರ್ ಮತ್ತು ಮಹಿಳಾ ಜಿಲ್ಲಾದ್ಯಕ್ಷರಾದ ಶೋಭ ಪಾಂಗಳಾ ರವರನ್ನು ತುಳುನಾಡ ರಕ್ಷಣಾ ವೇದಿಕೆ ಕಾಪು ಮಹಿಳಾ ಘಟಕ ವತಿಯಿಂದ ದಿನಾಂಕ 26-02-2024 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಕಾಪು ಘಟಕ ಮಹಿಳಾ ಅದ್ಯಕ್ಷ ರಾದ ಅನುಸೂಯ ಶೆಟ್ಟಿ, ಗೌರವ ಅದ್ಯಕ್ಷ ರಾದ ರೋಶನಿ ಬಲ್ಲಾಲ್ ,ಉಪಾಧ್ಯಕ್ಷೆ ಸವಿತಾ ನಾಯಕ್ , ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಹೆಗ್ಡೆ , ಜೊತೆಕಾರ್ಯದರ್ಶಿ ರಂಜಿತ ಶೆಟ್ಟಿ , ಸಾಮಾಜಿಕ ಜಾಲತಾಣ ಕಾರ್ಯದರ್ಶಿ ದೀಪ ಶೆಟ್ಟಿ , ಕೀರ್ತಿ ಶೆಟ್ಟಿ ,ಮಮತ ,ಗುಲಾಬಿ ಶೆಟ್ಟಿ, ಸಂಗೀತ ಶೆಟ್ಟಿ ,ರಂಜಿತ , ವಿನೋದ ಮತ್ತಿತರ ಪಧಾದಿಕಾರಿಗಳ ಉಪಸ್ಥಿತರಿದ್ದರು.

Read More

ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ,ವಿದ್ಯಾರ್ಥಿಪರ ಹಲವಾರು ಹೋರಾಟಗಳನ್ನು ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿ ನಂತರ ವಕೀಲ ವೃತ್ತಿಯನ್ನು ಪ್ರಾರಂಭಿಸಿ ನ್ಯಾಯಾಲಯದಲ್ಲಿ ಯಶಸ್ವಿ ವಕೀಲರೆಂದು ಹೆಸರುಗಳಿಸಿರುತ್ತಾರೆ. ತುಳುನಾಡ ರಕ್ಷಣಾ ವೇದಿಕೆ ವಕೀಲರ ಘಟಕದ ಅದ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸಿ ಯುವ ನಾಯಕರೆಂದು ಜಿಲ್ಲೆಯಲ್ಲಿ ಜನಪ್ರಿಯ ರಾಗಿರುತ್ತಾರೆ. ಪ್ರಸ್ತುತ ರಾಘವೇಂದ್ರ ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಹಿಂದುಳಿದ ಮೋರ್ಚದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶುಭ ಸಂದರ್ಭದಲ್ಲಿ ತಮಗೆ ಹೃದಯಪೂರ್ವಕವಾದ ಅಭಿನಂದನೆಗಳು. ತಮ್ಮ ಆಯ್ಕೆಗೆ ಕಾರಣಕರ್ತರಾದ ರಾಜ್ಯ ಭಾಜಪ ಕಾರ್ಯದರ್ಶಿ ಬ್ರಿಜೇಶ್ ಚೌಟ ,ನಮ್ಮ ನೆಚ್ಚಿನ ಶಾಸಕರಾದ ವೇದ ವ್ಯಾಸ ಕಾಮತ್ ಹಾಗೂ ಜಿಲ್ಲಾಧ್ಯಕ್ಷರವರಿಗೂ ಕೃತಜ್ಞತೆಗಳು.ತಮ್ಮ ಉಪಾಧ್ಯಕ್ಷ ಅವಧಿಯಲ್ಲಿ ಜನತಾ ಪಕ್ಷವು…

Read More

ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಮೃತ್ಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40) ಹಾಗೂ ವೀರಲಗೊಂದಿ ಗ್ರಾಮದ ಅನಿತಾ (30) ಮೃತ ದುರ್ದೈವಿಗಳು. ತುಮಕೂರು ಜಿಲ್ಲೆಯ ಪಾವಗಡ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಈ ಮೂವರು ಫೆ.22 ರಂದು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಆ ದಿನವೇ ಅನಿತಾ ಫೆ.22 ರಂದು ಮೃತಪಟ್ಟರೆ, ಫೆ.24ರಂದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಂಜಲಿ ಹಾಗೂ ನರಸಮ್ಮ ಎಂಬುವವರು ಫೆ.25ರಂದು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿ ಕುಟುಂಬಸ್ಥರು ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ತಡೆದು, ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪಾವಗಡ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…

Read More

, ತುಳುನಾಡ ರಕ್ಷಣಾ ವೇದಿಕೆಉಡುಪಿ ಜಿಲ್ಲಾ ‌ಕಚೇರಿಯಲ್ಲಿ 26-02-2024 ಸೋಮವಾರ ಸಂಜೆ 3 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರೀಯ ಮಂಡಳಿ ಅದ್ಯಕ್ಷ – ಸ್ಥಾಪಕರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದ್ದರು ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ರವರು ಸಭೆಯ ಪ್ರಾಸ್ತವಿಕ ಭಾಷಣಗೈದರು. ಬಳಿಕ ನೂತನ ಉಡುಪಿ ಜಿಲ್ಲಾ ಘಟಕದ ಸಮಿತಿ ರಚನೆ ಮಾಡಲಾಯಿತು. ಸಭೆಯಲ್ಲಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ರವಿ ಅಚಾರ್ಯ, ಮತ್ತುಸುಧಾಕರ ಅಮೀನ್ ಉಪಾಧ್ಯಕ್ಷರುಗಳಾಗಿ ಜಯ ಪೂಜಾರಿ ಮತ್ತು ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ,ಜೊತೆ ಕಾರ್ಯದರ್ಶಿಯಾಗಿ ಸುಭಾಷ್ ಸುದನ್, ಸಾಮಾಜಿಕ ಜಾಲತಾಣ ಸಂಚಾಲಕ ರಾಗಿ ರೋಶನ್, ಮತ್ತು ಸಹ ಸಂಚಾಲಕರಾಗಿ ಸ್ವಸ್ತಿಕ್ ಕ್ರೀಡಾ ಕಾರ್ಯದರ್ಶಿಯಾಗಿ ಅವಿನಾಶ್ ಸಂತೆಕಟ್ಟೆ , ಅಟೋ ಘಟಕ ಅದ್ಯಕ್ಷರಾಗಿ ಅನಿಲ್ ಪೂಜಾರಿ ಬ್ರಹ್ಮವಾರ ಘಟಕ…

Read More