Author: Tulunada Surya

ಪ್ರವಾಸಿಗರನ್ನು ಹೊತ್ತು ತಂದ 7ಸೀ ವಯೋಜರ್ ಹಡಗಿನ ಲ್ಲಿ ನಮ್ಮ ಧಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಗೆ ಬಂದ ಹಡ ಗಿ ನಲ್ಲಿ ಬಂದವರಲ್ಲಿ ಸುಮಾರು ಜನ ಪ್ರವಾಸಿ ಗರು ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯನ್ನು 09.05.2025 ರಂದು ಮಧ್ಯಾಹ್ನ 1.30ಕ್ಕೆ ಸಂದರ್ಶನ ಮಾಡಿದರು ಪ್ರವಾಸಿಗರಲ್ಲಿ ಅಮೇರಿಕಾ ದೇಶದ ಪ್ರಜೆಗಳು ಹೆಚ್ಚಿದ್ದರು ಈ ಸಂಧರ್ಭ ಉಪಸ್ಥಿತರಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ ಬಸದಿ ಇತಿಹಾಸ ಹಾಗೂ ಧರ್ಮ ಕ್ಕೆ ಸಂಬಂಧ ಪಟ್ಟ ಪ್ರಶ್ನೆ ಗಳಿಗೆ ಉತ್ತರಿಸಿದರು. ಲೋಕಶಾಂತಿ ಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಪಾಕ್ ಭಯೋತ್ಪದಕ ಉಗ್ರ ದಾಳಿ ಯಿಂದ ಹುತಾತ್ಮ ರಾದಭಾರತಿ ಯ ಸೈನಿಕರಿಗೆ ಹಾಗೂ ನಾಗರೀಕರಿಗೆಉತ್ತಮ ಸದ್ಗತಿ ಕೋರಿ ಪ್ರಾರ್ಥಿಸ ಲಾಯಿತು ಮಂಗಳೂರು ಲಿಯಾ ಟ್ರಾವೆಲ್ಸ್ ರೋಹನ್ ಮತ್ತಿ ತರ ಪ್ರವಾಸಿ ಮಾರ್ಗ ದರ್ಶಕರು ಜತೆಗಿದ್ದರು ಶ್ರೀ ಗಳು ಎಲ್ಲರಿಗೂ ಶುಭ ಯಾತ್ರೆ…

Read More

ಇಸ್ಲಾಮಾಬಾದ್ : ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಯನ್ನು ಗುರಿಯಾಗಿಸಿ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಮರುದಿನವೇ ಪಾಕಿಸ್ತಾನದ ಲಾಹೋರ್‌ ನಲ್ಲಿ ಮೂರು ಸ್ಫೋಟ ಸಂಭವಿಸಿದ್ದು ಜನರು ಭಯದಿಂದ ಮನೆಯಿಂದ ಹೊರಗೋಡಿದರು ಎಂದು ಮೂಲಗಳಿಂದ ತಿಳಿದು ಬಂದಿದೆ ಗುರುವಾರ ಲಾಹೋರ್‌ ನ ಅತ್ಯಂತ ಸೂಕ್ಷ್ಮ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಗುಲ್ಬೆರ್ಗ್‍ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ರಸ್ತೆಯಲ್ಲಿ ಕೆಲ ನಿಮಿಷಗಳ ಅಂತರದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ವಾಲ್ಟನ್ ವಿಮಾನ ನಿಲ್ದಾಣದ 9 ಕಿ.ಮೀ ವ್ಯಾಪ್ತಿಯಲ್ಲಿರುವ ಡಿಎಚ್‍ಎ 3 ಮತ್ತು 4ನೇ ಹಂತದಲ್ಲಿ ಸ್ಫೋಟ ಸಂಭವಿಸಿದ್ದು ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ ನಗರ ಮತ್ತು ನಸೀರಾಬಾದ್ ನಗರಗಳಲ್ಲಿಯೂ ಸ್ಫೋಟ ಸಂಭವಿಸಿದೆ. ಎಂದು ತಿಳಿದು ಬಂದಿದೆ

Read More

ಮೂಡಬಿದ್ರಿ: ‘ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ನುಡಿಸಿರಿ ವಿರಾಸತ್ ಗಳಲ್ಲದೆ ಇತರ ಹಲವಾರು ರಾಜ್ಯ – ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು ಕರಾವಳಿ ಕರ್ನಾಟಕದ ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಜಗದಗಲ ಪಸರಿಸಿದೆ. ನಾಡು – ನುಡಿಯ ಸೇವೆಯಲ್ಲಿ ಆಳ್ವಾಸ್ ಸಮೂಹ ಸಂಸ್ಥೆಗಳ ಪಾತ್ರ ಹಿರಿದು. ಅದು ಇತರ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯ ತುಳು ಸಂಘದ ಆಶ್ರಯದಲ್ಲಿ ಜರಗಿದ ‘ಸಿರಿಪರ್ಬ – 2025′ ತುಳು ಸಾಂಸ್ಕೃತಿಕ ಉತ್ಸವದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾತ್ಮಕ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತುಳು ತಲೆಯೆತ್ತಿ ನಿಲ್ಲಲಿ:’ ಶಿಕ್ಷಣ ಸಂಸ್ಥೆಗಳಲ್ಲಿ ತುಳು ಮಾತನಾಡಲು ತೀವ್ರ ವಿರೋಧವಿದ್ದ ಕಾಲವಿತ್ತು; ಆದರೆ ಈಗ ಅದು ಬದಲಾಗಿದೆ. ಪ್ರಾಥಮಿಕ ಹಂತದಿಂದ ಕಾಲೇಜಿನವರೆಗೆ ತುಳುವನ್ನೊಂದು ಪಠ್ಯವಾಗಿ…

Read More

ಮಂಗಳೂರು:ಏಪ್ರಿಲ್ 27 ರಿಂದ 30 ರವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆದ 24 ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್‌ಶಿಪ್ 2025 ರ ಸಬ್ ಜೂನಿಯರ್ ವಿಭಾಗದ ತೌಲೊ ಜಿಯನ್ಸೂವಿನಲ್ಲಿ ಕು.ಮನ್ವಿತ ಮನೋಜ್ ಕುಮಾರ್ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇಮ್ಮೋರ್ಟಲ್ಸ್ ಅಕಾಡಮಿಯ ಗುರುಗಳಾಗಿರುವ ರೋಹನ್. ಎಸ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿರುವ ಇವರು ಶ್ರೀ ರಾಮಾಶ್ರಮ ಆಂಗ್ಲ ಮಾದ್ಯಮ ಶಾಲೆ ಕೊಂಚಾಡಿಯಲ್ಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿರುತ್ತಾರೆ.

Read More

Bahrain, May 6: Kannada Sangha Bahrain has elected a new Executive Committee for the term 2025-26. The new committee, led by president Ajith Bangera, was elected unanimously at the annual general meeting held on May 2. The newly elected executive committee comprises the following members: The dedicated team will lead the Sangha in its mission to promote Kannada language, culture, and community spirit in Bahrain. Bangera expressed his gratitude for the trust placed by members in the new committee. “We are deeply honoured to have been chosen to serve the Kannada Sangha Bahrain. We are committed to building upon the…

Read More

ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ* ಕರುನಾಡ ಕಾಯಕ ಯೋಗಿ ಸದ್ಭಾವನ *ರಾಜ್ಯಪ್ರಶಸ್ತಿಗೆ ಆಯ್ಕೆ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ರಿಜಿಸ್ಟರ್ ಬೆಂಗಳೂರು ರಂಗವೈಭವ 2025 ಪ್ರಯುಕ್ತ ನಡೆಯುವ ಕರುನಾಡ ಕಾಯಕ ಯೋಗಿ ಸದ್ಭಾವನ . ಪ್ರಶಸ್ತಿಗೆ, ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮೇ 9ರಂದು ನಗರಬಾವಿ ಮಲ್ಲತಳ್ಳಿ ಕಲಾಗ್ರಾಮ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಲಿದೆ .ಗೀತ ರಚನೆಗಾರರು ಹಾಗೂ ಸಂಗೀತ ಸಂಯೋಜಕರು, ನಿರ್ದೇಶಕರಾದ ಡಾ. ನಾಗೇಂದ್ರ ಪ್ರಸಾದ್ ಪ್ರಶಸ್ತಿ ಪ್ರಧಾನ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹದಳ ಹಾಗೂ ವಿಶ್ವಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಪ್ರವೀಣ್ ಹಿರೇಮಠ ವಹಿಸುವರು ‌.ಮುಖ್ಯ ಅತಿಥಿಗಳಾಗಿ ಡಾ. ಮಂಜುನಾಥ್ , ಹೆಸರಾಂತ ಚಲನಚಿತ್ರ ತಾರೆ ಡಾ.ಭವ್ಯ, ಅತಿಥಿಯಾಗಿ ಭಾಗವಹಿಸುವರು.

Read More

ಪಾಕಿಸ್ತಾನದಿಂದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ‘ಆಪರೇಷನ್ ಸಿಂಧೂರ್’ ಹೆಸರಲ್ಲಿ ಪ್ರತಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ನಿಖರವಾದ ದಾಳಿ ನಡೆಸಿದೆ. ಸರ್ಕಾರಿ ಮೂಲಗಳ ಪ್ರಕಾರ, ಈ ದಾಳಿಗಳಲ್ಲಿ ಸುಮಾರು 200 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 55 ಮಂದಿ ಗಾಯಗೊಂಡಿದ್ದಾರೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ, ಫ್ರಾನ್ಸ್‌ನಿಂದ ಆಮದು ಮಾಡಿಕೊಂಡ ರಫೇಲ್ ಯುದ್ಧ ವಿಮಾನವನ್ನು ಬಳಸಲಾಯಿತು. ಭಾರತದ ಮೇಲೆ ಭಯೋತ್ಪಾದಕ ದಾಳಿಗಳನ್ನು ಯೋಜಿಸಿ ಕಾರ್ಯಗತಗೊಳಿಸಲಾಗುತ್ತಿದ್ದ ಸ್ಥಳಗಳು ಇವುಗಳೇ. ಪಾಕಿಸ್ತಾನದ ಸ್ಥಳೀಯ ವರದಿಗಳ ಪ್ರಕಾರ, ಬಹಾವಲ್ಪುರದಲ್ಲಿ ನಡೆದ ವಾಯುದಾಳಿಯ ನಂತರ 30 ಜನರು ಸಾವನ್ನಪ್ಪಿದ್ದಾರೆ. ಲಷ್ಕರ್ ಮತ್ತು ಜೈಶ್‌ನ ಪ್ರಧಾನ ಕಚೇರಿಗಳು ನಾಶವಾಗಿವೆ. ಪಾಕಿಸ್ತಾನದ ಅಂತರ ಸೇವೆಗಳ ಸಾರ್ವಜನಿಕ ಸಂಪರ್ಕ (ISPR) ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಭಾರತ 24 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೇಳಿದರು. ದಾಳಿಯ ನಂತರ,…

Read More

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಂಜಾ ನಾಯ್ಕ್ ಅವರು ರೌಂಡ್ಸ್‌ನಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಪಂಚಗಂಗಾವಳಿ ಹೊಳೆಯ ಕುದ್ರುವಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ. ದಯಾನಂದ, ಅಣ್ಣಯ್ಯ, ರವೀಂದ್ರ, ಮೊಮಿನ್ ಮೊಹಮ್ಮದ್ ಜಮೀಲ್, ಜಯರಾಮ್ ಆರೋಪಿಗಳಾಗಿದ್ದು, ಇವರಿಂದ ಆಟಕ್ಕೆ ಬಳಸಿದ ಪರಿಕರ ಹಾಗೂ 1620 ರೂ.ನಗದನ್ನು ವಶಕ್ಕೆ ಪಡೆದಿದ್ದಾರೆ. ನಾರಾಯಣ ಹಾಗೂ ಇನ್ನೂ ಕೆಲವರು ದಾಳಿಯ ವೇಳೆ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ

Read More

ಮಂಗಳೂರು: ತೆಂಕು – ಬಡಗು ಯಕ್ಷಗಾನದ ಹವ್ಯಾಸಿ ವೇಷಧಾರಿ, ಹೋಟೆಲ್ ಉದ್ಯಮಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ಪಣಿಯೂರುಗುತ್ತು ಕರುಣಾಕರ ಶೆಟ್ಟಿ ಅವರು 2024 – 25 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ನೌಕೆ ಆರ್ಯಭಟ ಉಪಗ್ರಹ ಉಡ್ಡಯನವಾದ ವರ್ಷವೇ ಸ್ಥಾಪನೆಗೊಂಡ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 50 ವರ್ಷಗಳನ್ನು ಪೂರೈಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ದೇಶ ವಿದೇಶದ ಅನನ್ಯ ಸಾಧಕರನ್ನು ಗುರುತಿಸಿ ಈ ವಿಶೇಷ ಪ್ರಶಸ್ತಿಯನ್ನು ನೀಡುತ್ತಿದೆ. ಕಲಾ ರಂಗದ ಕರುಣಾಕರ:ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪಣಿಯೂರು ಕುಟುಂಬದವರಾದ ಕರುಣಾಕರ ಶೆಟ್ಟರಿಗೆ ಪ್ರಸ್ತುತ 66ರ ಹರೆಯ. ಯಕ್ಷಗಾನ ಕಲೆಯಲ್ಲಿ ಅಪಾರ ಅಭಿಮಾನ ಹೊಂದಿದ ಅವರು ಬಡಗುತಿಟ್ಟಿನ ಹವ್ಯಾಸಿ ವೇಷಧಾರಿಯಾಗಿ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರವಹಿಸಿದ್ದಾರೆ. ತೆಂಕು – ಬಡಗುತಿಟ್ಟಿನ ಪ್ರಮುಖರೊಂದಿಗೆ ತಾಳಮದ್ದಳೆ ಅರ್ಥ ಧಾರಿಯಾಗಿಯೂ ಭಾಗವಹಿಸಿದ್ದಾರೆ. ಅಲ್ಲದೆ ಹಲವು ವರ್ಷ ಐತಿಹಾಸಿಕ ಮೂಲ್ಕಿ ಮೇಳವನ್ನು ನಡೆಸಿದ ಅನುಭವ ಅವರಿಗಿದೆ.ಸುಮಾರು ನಾಲ್ಕು ದಶಕಗಳ ರಂಗಾನುಭವ ಹೊಂದಿದ ಪಣಿಯೂರು ಅವರು…

Read More

ಮಂಗಳೂರು: ಕರ್ನಾಟಕ ವುಶು ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ವುಶು ಅಸೋಸಿಯೇಶನ್ ವತಿಯಿಂದ ಮಂಗಳೂರಿನ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 24 ನೇ ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್ ಪಂದ್ಯಾಟದಲ್ಲಿ ಮಂಗಳೂರಿಗೆ ಒಟ್ಟು ೩೬ ಪದಕಗಳು ಲಭಿಸಿವೆ. ವಿವಿಧ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 9 ಮಂದಿ ಚಿನ್ನ, 10 ಮಂದಿ ಬೆಳ್ಳಿ ಮತ್ತು 12 ಮಂದಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಏ.27 ರಿಂದ ನಾಲ್ಕು ದಿನಗಳ ಕಾಲ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 600 ಮಂದಿ ವುಶು ಕ್ರೀಡಾಪಟುಗಳು, ತರಬೇತಿದಾರರು, ನಿರ್ಣಾಯಕರು ಭಾಗವಹಿಸಿದ್ದರು. ಜಿಲ್ಲಾ ವುಶು ಕಾರ್ಯದರ್ಶಿ ಮತ್ತು ಇಮ್ಮೋರ್ಟಲ್ಸ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯ ಸಂಸ್ಥಾಪಕ ರೋಹನ್ ಎಸ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿತ್ತು. ಕ್ರೀಡಾಕೂಟದಲ್ಲಿ ಮಂಗಳೂರಿನ ಇಮ್ಮೋರ್ಟಲ್ಸ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯ ಹಿಸ್ಸಾನ್, ಶಮಿಯುಲ್ಲಾ, ಸಾನ್ವಿ ಎಸ್, ಮಾನ್ವಿತಾ, ಧ್ರುವಿನ್,…

Read More