Author: Tulunada Surya

ಉಡುಪಿ: ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆದಿ ಉಡುಪಿ ಶಾಖೆಯ ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಅಲೆವೂರು ಗ್ರಾಮದ ಬನ್ನಂಜೆ ಪ್ರದೇಶದ ನಿವಾಸಿ ಅವರು ನೀಡಿದ ಲಿಖಿತ ದೂರಿನ ಮೇರೆಗೆ 19-02-2026 ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 12/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 74ರಡಿ ಪ್ರಕರಣ ದಾಖಲಾಗಿದೆ. ದೂರುದಾರರ ಹೇಳಿಕೆಯ ಪ್ರಕಾರ, 07-02-2026ರಂದು ಸಂಜೆ ಸುಮಾರು 5.30 ಗಂಟೆ ವೇಳೆಗೆ ಸಾಲ ಸಂಬಂಧಿತ ವಿಚಾರವಾಗಿ ಕರೆದುಕೊಂಡು ಹೋಗಿ, ಕಾರಿನಲ್ಲಿ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಕಾರು (ನಂ: HR-59 E-8192) ಬಳಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ತಿಳಿದುಬರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದಾರೆ.

Read More

ಮಂಗಳೂರು: Mangaluru ನಗರ ಪೊಲೀಸ್ ಕಮಿಷನರೇಟ್ ಹಾಗೂ Udupi ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಹಲವು ಗಂಭೀರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನನ್ನು ಹಳೆಯಂಗಡಿ ವಿಲೇಜ್ ನಿವಾಸಿ ಸಜ್ವಾನ್ ಹುಸೈನ್ (42) ಎಂದು ಗುರುತಿಸಲಾಗಿದೆ. ಈತನ ವಿರುದ್ಧ 02 ಕೊಲೆ, 04 ಕೊಲೆಯತ್ನ, ಗ್ಯಾಂಗ್ ರೇಪ್, 05 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಜೈಲಿನಲ್ಲಿಯೇ ಸಹಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ತಯಾರಿ ಹಾಗೂ ಸಂಚು ಸೇರಿದಂತೆ ವಿವಿಧ ಗಂಭೀರ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 21 ಪ್ರಕರಣಗಳು ದಾಖಲಾಗಿವೆ.ಈತನ ವಿರುದ್ಧ Mulkhi Police Station ವ್ಯಾಪ್ತಿಯಲ್ಲಿ 2008ರಲ್ಲಿ ದಾಖಲಾಗಿದ್ದ ಪ್ರವೀಣ್ ಎಂಬವರ ಅಪಹರಣ, ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ಮಾನ್ಯ Karnataka High Court ದಿನಾಂಕ…

Read More

ಮಂಗಳೂರು: ಖ್ಯಾತ ಶಿಕ್ಷಣ ತಜ್ಞ, ದೀರ್ಘದೃಷ್ಟಿಯ ಶಿಕ್ಷಣ ಸಂಸ್ಥಾಪಕ ಹಾಗೂ ಲೋಕೋಪಕಾರಿ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ ಅವರು ಫೆಬ್ರವರಿ 17, ಮಂಗಳವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಅವರ ಅಗಲಿಕೆ ಕರಾವಳಿ ಭಾಗದ ಶಿಕ್ಷಣ ಹಾಗೂ ವಾಣಿಜ್ಯ ವಲಯಕ್ಕೆ ಅಪಾರ ನಷ್ಟವಾಗಿದೆ.ಶಿಕ್ಷಣ ಕ್ಷೇತ್ರದ ಮಹತ್ವದ ದೃಷ್ಟಿಕೋನ“ಎಲ್ಲರಿಗೂ ಗುಣಮಟ್ಟದ ಹಾಗೂ ಸುಸ್ಥಿರ ಶಿಕ್ಷಣ” ಎಂಬ ಧ್ಯೇಯದೊಂದಿಗೆ ಅವರು 1988ರಲ್ಲಿ A. Shama Rao Foundation (ಎ. ಶಾಮ ರಾವ್ ಪ್ರತಿಷ್ಠಾನ)ವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನದ ಅಡಿಯಲ್ಲಿ ರೂಪುಗೊಂಡ Srinivas Group of Colleges ಇಂದು ರಾಜ್ಯದ ಪ್ರಮುಖ ಶೈಕ್ಷಣಿಕ ಜಾಲವಾಗಿ ಬೆಳೆದಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.ಕೇವಲ ಏಳು ವಿದ್ಯಾರ್ಥಿಗಳೊಂದಿಗೆ ಆರಂಭವಾದ Srinivas College of Hotel Management ನಂತರ ಹಲವು ವೃತ್ತಿಪರ, ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿತು. ವೈದ್ಯಕೀಯ, ದಂತ, ನರ್ಸಿಂಗ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಫಾರ್ಮಸಿ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ…

Read More

ಉಡುಪಿ: ಕರ್ನಾಟಕ ಕರಾವಳಿ ಜಿಲ್ಲೆಯ ಮೀನುಗಾರರು ಎದುರಿಸುತ್ತಿರುವ ಅಂತಾರಾಜ್ಯ ಮೀನುಗಾರಿಕಾ ಸಮಸ್ಯೆಗಳ ಕುರಿತು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಮಹಾರಾಷ್ಟ್ರ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ ಅವರನ್ನು ಸಚಿವಾಲಯದ ಕಚೇರಿಯಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ರಾಜ್ಯಗಳ ಗಡಿಭಾಗ ಹಾಗೂ ನಿಯಮಾವಳಿಗಳ ಬಗ್ಗೆ ಸಮನ್ವಯ ಕೊರತೆಯಿಂದಾಗಿ ಅನೇಕ ಬಾರಿ ಮಹಾರಾಷ್ಟ್ರ ಮೀನುಗಾರಿಕಾ ಇಲಾಖೆ ಪ್ರಕರಣಗಳನ್ನು ದಾಖಲಿಸಿ ಭಾರೀ ದಂಡ ವಿಧಿಸುವ ಘಟನೆಗಳು ನಡೆಯುತ್ತಿವೆ. ಇದರಿಂದ ಕರಾವಳಿ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ಶಾಸಕ ಸುವರ್ಣ ಸಚಿವರ ಗಮನಕ್ಕೆ ತಂದರು. ಅಂತಾರಾಜ್ಯ ಮಟ್ಟದಲ್ಲಿ ಸಮನ್ವಯ ವ್ಯವಸ್ಥೆ ರೂಪಿಸಿ ಇಂತಹ ಪ್ರಕರಣಗಳನ್ನು ಮರುಪರಿಶೀಲಿಸಿ ಮೀನುಗಾರರಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಜೊತೆಗೆ ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ರಾಜ್ಯಗಳ ನಡುವೆ ಸಮಗ್ರ ಸಮನ್ವಯ…

Read More

ಉಡುಪಿ: ಉಡುಪಿ ತಾಲೂಕಿನ ನೇಜಾರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಸುಲೋಚನ ಅವರು ನೀಡಿದ ಗಂಭೀರ ದೂರಿಗೆ ನ್ಯಾಯ ವಿಳಂಬವಾಗುತ್ತಿರುವುದನ್ನು ಖಂಡಿಸಿ, ಪ್ರಕರಣವನ್ನು ಸಿ.ಐ.ಡಿ. ತನಿಖೆಗೆ ಒಪ್ಪಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಆಗ್ರಹಿಸಿದ್ದಾರೆ. ಫೆಬ್ರವರಿ 9ರಂದು ಉಡುಪಿ ಪತ್ರಿಕಾ ಭವನದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಣಿಪಾಲ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮುಖ್ಯಸ್ಥರಿಂದ ದೌರ್ಜನ್ಯ, ಜಾತಿ ನಿಂದನೆ, ಲೈಂಗಿಕ ಕಿರುಕುಳ ಹಾಗೂ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಸಂತ್ರಸ್ತೆಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂತ್ರಸ್ತೆ ಮನೆ ರಿಪೇರಿಗಾಗಿ ಸಾಲ ಪಡೆಯಲು ತೆರಳಿದ ಸಂದರ್ಭದಲ್ಲಿ ಖಾತೆ ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ಅಕ್ರಮ ವ್ಯವಹಾರಕ್ಕೆ ಒತ್ತಾಯಿಸಲಾಗಿದೆ, ವಿರೋಧಿಸಿದಾಗ ಸುಳ್ಳು ಪ್ರಕರಣದ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲಾಗಿದೆ ಹಾಗೂ ಫೆಬ್ರವರಿ 6ರಂದು ಮನೆಗೆ ನುಗ್ಗಿ ಜಾತಿ ನಿಂದನೆ ಮತ್ತು ಲೈಂಗಿಕ ಕಿರುಕುಳ…

Read More

ಮಂಗಳೂರು: ಕಾಸರಗೋಡಿನಲ್ಲಿ ದೈವದರ್ಶನಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ ದರ್ಶನ ಪಾತ್ರಿ ಜಾರಿಗೆಕಟ್ಟೆ ದಿವಾಕರ ಪೂಜಾರಿ ತಮ್ಮ ವೃತ್ತಿ ಜೀವನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರಿಂದ ದೀಕ್ಷೆ ಪಡೆದು, ದೈವಾರಾಧನೆ ಕ್ಷೇತ್ರ ಮತ್ತು ಸಾವಿರಾರು ಕುಟುಂಬಗಳಲ್ಲಿ ಪಂಜುರ್ಲಿ ದರ್ಶನ ಸೇವೆ ಮೂಲಕ ಜನಾನುರಾಗಿಯಾಗಿದ್ದರು. ಇವರು ಜಾರಿಗೆಕಟ್ಟೆ ಕೊರಗಜ್ಜ ಕೊರಗ ಪಂಜುರ್ಲಿ ಕ್ಷೇತ್ರದ ಧರ್ಮದರ್ಶಿಯಾಗಿ ದೇವಾರಾಧನೆ ಕ್ಷೇತ್ರದಲ್ಲಿ ಮಾದರಿ ಸೇವಕರಾಗಿ ಗುರುತಿಸಿಕೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಸಾವಿರಾರು ದೈವಾರಾಧನೆ ಕ್ಷೇತ್ರ ಹಾಗೂ ಕುಟುಂಬಗಳು ಶ್ರೇಯೋಭಿವೃದ್ಧಿ ಹೊಂದಿರುತ್ತವೆ. ಜಾರಿಗೆಕಟ್ಟೆಯಲ್ಲಿರುವ ಕೊರಗಜ್ಜ ಕೊರಗ ಪಂಜುರ್ಲಿ ಕ್ಷೇತ್ರದಲ್ಲಿ ಸಾವಿರಾರು ಜಾತ್ಯಾತೀತ ಭಕ್ತರು ಆಗಮಿಸಿ ತಮ್ಮ ಅಹವಾಲು ಕೋರಿ ಪರಿಹಾರ ಕಂಡುಕೊಂಡಿದ್ದಾರೆ. ಮೃತರು ಪೋಸ್ಟಲ್ ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇವರ ನಿಧನದಿಂದ ದೈವಾರಾಧನೆ ಕ್ಷೇತ್ರದ ಮಾದರಿ ಸೇವಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ನಮ್ಮೂರು ಆಟ ಕೂಟ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಮುಲ್ಕಿ ಕರುಣಾಕರ…

Read More

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಹು ಪ್ರಕರಣಗಳ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಶಶಾಂಕ್ ಶೆಟ್ಟಿ (32) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿದ್ದು, ಹೆಬ್ರಿ, ಕಲಘಟಕಿ, ಕೋಟ ಹಾಗೂ ಬೆಂಗಳೂರು ಚಂದ್ರಲೇಔಟ್ ಠಾಣೆಗಳಲ್ಲೂ ತಲಾ ಪ್ರಕರಣಗಳಿವೆ. ಕಳ್ಳತನ, ಸುಲಿಗೆ ಹಾಗೂ ಹನಿಟ್ರ್ಯಾಪ್ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ನ್ಯಾಯಾಲಯವು ಈತನ ವಿರುದ್ಧ ಈಗಾಗಲೇ 12 ಬಾರಿ ವಾರಂಟ್ ಜಾರಿ ಮಾಡಿದ್ದರೂ, ಸುಮಾರು ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದನು. ಆರೋಪಿ ಪತ್ತೆಗೆ ಪೊಲೀಸರು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಆಧಾರದಲ್ಲಿ ಫೆಬ್ರವರಿ 15ರಂದು ಕುಂದಾಪುರ ತಾಲೂಕು ಬಿದ್ಮಲ್ ಕಟ್ಟೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್…

Read More

ಮಂಗಳೂರು: ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಸಮುದ್ರದ ಅಲೆಗಳೊಂದಿಗೆ ಜೋಡಿಸುವ ವಿಶಿಷ್ಟ ಪ್ರಯತ್ನವಾಗಿ “ಯಕ್ಷಧ್ರುವ ಸಮುದ್ರಯಾನ”ಕ್ಕೆ ಭಾನುವಾರ ಅಧಿಕೃತ ಚಾಲನೆ ದೊರೆಯಿತು. ಮೇ 31ರಿಂದ ಜೂನ್ 6ರವರೆಗೆ ನಡೆಯಲಿರುವ ಲಕ್ಷದ್ವೀಪ ಪ್ರಯಾಣದ ಉದ್ಘಾಟನೆ ಬಲ್ಲಾಲ್ ಭಾಗ್‌ನ ಪತ್ತುಮುಡಿ ಸೌಧದಲ್ಲಿ ನೆರವೇರಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಹಾದಾನಿ ಬರೋಡ ಶಶಿಧರ ಶೆಟ್ಟಿ ಬ್ಯಾನರ್ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭವಾನಿ ಶಿಪ್ಪಿಂಗ್ ಸರ್ವಿಸಸ್, ಮುಂಬಯಿಯ ಸಂಪೂರ್ಣ ಸಹಕಾರದೊಂದಿಗೆ ಹಾಗೂ ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ಈ ಸಮುದ್ರಯಾನವನ್ನು ಆಯೋಜಿಸಲಾಗಿದೆ. ಈ ಕುರಿತು ಮಾತನಾಡಿದ ಬರೋಡ ಶಶಿಧರ ಶೆಟ್ಟಿ, “ಫೌಂಡೇಶನ್ ಸದಸ್ಯರು, ಊರಿನ ಹಿತೈಷಿಗಳು, ಮುಂಬಯಿ ಹಾಗೂ ವಿದೇಶದ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ — ಹಡಗಿನಲ್ಲೇ — ಸೇರಿಸಿ ಯಕ್ಷಗಾನ, ತಾಳಮದ್ದಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಈ ಯಾನ ವಿಶೇಷತೆ” ಎಂದರು. ಮೇ 31ರಂದು ಮಂಗಳೂರಿನಿಂದ ಮುಂಬೈಗೆ ತೆರಳಿ, ಜೂನ್ 1ರಂದು ಹಡಗಿನಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣಿಸಿ, ಜೂನ್ 6ರಂದು ಮಂಗಳೂರಿಗೆ ವಾಪಸ್ಸಾಗುವ…

Read More

ಮಂಗಳೂರು ನಗರದ ಹೃದಯಭಾಗದಲ್ಲಿ ಹೊಸತನದ ಸೊಗಡಿನಿಂದ ಆರಂಭಗೊಂಡಿರುವ “MFC CHAI Bank” ಸಂಸ್ಥೆಯ ಭವ್ಯ ಉದ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರು, ರಾಜಕೀಯ ನಾಯಕರು ಹಾಗೂ ಸಿನಿ ಕ್ಷೇತ್ರದ ಗಣ್ಯರು ಭಾಗವಹಿಸಿ ಶುಭಾಶಯ ಕೋರಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ Ivan D’Souza ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಇಂತಹ ಹೊಸ ಉದ್ಯಮಗಳು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ನಗರದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. MFC CHAI Bank ಉತ್ತಮ ಗುಣಮಟ್ಟದ ಸೇವೆಯ ಮೂಲಕ ಜನಮನ ಗೆಲ್ಲಲಿ” ಎಂದು ಶುಭ ಹಾರೈಸಿದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ Satish Kumpala ಮಾತನಾಡಿ, ಸ್ಥಳೀಯ ವ್ಯಾಪಾರ ವಲಯದಲ್ಲಿ ಇಂತಹ ನವೀನ ಪ್ರಯತ್ನಗಳು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು. ತುಳುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ Yogish Shetty Jappu ಸಂಸ್ಥೆಯ ಮುಂದಿನ ಬೆಳವಣಿಗೆಗೆ ಹಾರೈಕೆ ಸಲ್ಲಿಸಿದರು.ಮಾಜಿ ಮೇಯರ್‌ಗಳಾದ Divakar Pande ಹಾಗೂ Ashraf, ಮಾಜಿ ಕಾರ್ಪೋರೇಟರ್ Latif…

Read More

ಮಂಗಳೂರು: ತನ್ನ ಪತ್ನಿ ಮಾಜಿ ಸಂಸದರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿಸಿದ ಆರೋಪದಲ್ಲಿ ಪತಿಗೆ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ 3ನೇ ನ್ಯಾಯಾಲಯ ತೀರ್ಪು ನೀಡಿದೆ. ಮುಂಬೈ ನಗರದ ಥಾಣೆ ಜಿಲ್ಲೆಯ ಮೀರಾ ರೋಡ್ ಈಸ್ಟ್ ನಿವಾಸಿ ಸತೀಶ್ ಶೆಟ್ಟಿ ಶಿಕ್ಷೆಗೆ ಒಳಗಾದ ಆರೋಪಿ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುರೇಶ್ ಇ.ಎಸ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 509ರಡಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿದ್ದಾರೆ. ದಂಡವನ್ನು ಪಾವತಿಸಲು ವಿಫಲವಾದಲ್ಲಿ ಇನ್ನೂ ಒಂದು ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆಯನ್ನು ಅನುಭವಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಹಿನ್ನೆಲೆ ಸಂತ್ರಸ್ತೆಯ ದೂರಿನ ಪ್ರಕಾರ, ವಿವಾಹದ ನಂತರ ದಂಪತಿಗಳ ನಡುವೆ ಕುಟುಂಬ ಕಲಹ ಉಂಟಾಗಿದ್ದು, ಮಕ್ಕಳಾದ ಬಳಿಕ ಪತಿ ಮಾನಸಿಕ…

Read More