Author: Tulunada Surya

ಬಹು ಮಾಧ್ಯಮಗಳ ನಡುವೆ ಯಕ್ಷಗಾನ ಅಸ್ತಿತ್ವ ಉಳಿಸಿಕೊಂಡಿದೆ: ರವಿರಾಜ ಹೆಗ್ಡೆ ಮಂಗಳೂರು: ‘ಯಕ್ಷಗಾನ ಕರಾವಳಿಯ ಶ್ರೀಮಂತ ಕಲೆ. ಹಿಂದಿನಿಂದಲೂ ಕಲಾವಿದರು, ಸಂಘಟಕರು ಹಾಗೂ ಕಲಾ ಸಂಸ್ಥೆಗಳ ಪರಿಶ್ರಮದಿಂದ ಅದು ಬೆಳೆದು ಬಂದಿದೆ. ಇಂದಿನ ಬಹು ಮಾಧ್ಯಮಗಳ ನಡುವೆ ತಾಂತ್ರಿಕ ಜಗತ್ತಿನ ಸವಾಲುಗಳನ್ನು ಎದುರಿಸಿಯೂ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಈ ದಿಸೆಯಲ್ಲಿ ಯಕ್ಷಾಂಗಣ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಪ್ರಕಾರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಾ ಬಂದಿದೆ’ ಎಂದು ದ.ಕ.ಜಿಲ್ಲಾ ಹಾಲುತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ.ಡಾ|ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರ ಸಹಯೋಗದೊಂದಿಗೆ ನ. 23 ರಿಂದ 29 ರವರೆಗೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ…

Read More

ಮಂಗಳೂರು, ನವೆಂಬರ್ 29, 2025: “ಎಂಸಿಎಫ್ ಹೆಸರು ಉಳಿಸಿ” ಅಭಿಯಾನದ ಪ್ರಾರಂಭಿಕ ಸಭೆ ಶುಕ್ರವಾರ ಮಂಗಳೂರಿನ ವುಡ್ಲ್ಯಾಂಡ್ಸ್ ಹೋಟೆಲ್‌ನಲ್ಲಿ ಭರ್ಜರಿಯಾಗಿ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಂಸಿಎಫ್‌ನ ಮಾಜಿ ಉದ್ಯೋಗಿಗಳು ತಮ್ಮ ಒಗ್ಗಟ್ಟು ಮತ್ತು ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸಿದರು. ಸಭೆಯ ಆರಂಭವನ್ನು ಹಿರಿಯರು ವೈ.ಎಂ. ದೇವದಾಸ್ ಮತ್ತು ಶೀನ ಪೂಜಾರಿ ದೀಪ ಪ್ರಜ್ವಲನದಿಂದ ನೆರವೇರಿಸಿದರು. ಜಯರಾಮ ಶೆಟ್ಟಿ ಸ್ವಾಗತ ಭಾಷಣ ಮಾಡಿ ಸಭೆಯ ಕಾರ್ಯಾರಂಭ ಮಾಡಿದರು. ಅಭಿಯಾನದ ಹಿನ್ನೆಲೆ, ಅಗತ್ಯತೆ ಮತ್ತು “ಎಂಸಿಎಫ್” ಹೆಸರಿನೊಂದಿಗೆ ಬೆರೆತಿರುವ ಭಾವನಾತ್ಮಕ ಬಾಂಧವ್ಯ ಕುರಿತು ಶಿವರಾಂ ಶೆಟ್ಟಿ ಹೃದಯಸ್ಪರ್ಶಿ ಮಾತುಗಳನ್ನು ಹಂಚಿಕೊಂಡರು. ಉದ್ಯಮದ ಹೆಸರಿನ ಬದಲಾವಣೆ ತಂದಿರುವ ಅಸಮಾಧಾನ, ಮಾನಸಿಕ ನೋವು ಮತ್ತು ಸಾರ್ವಜನಿಕ ವಲಯದಲ್ಲಿ ಹೋರಾಟದ ಧ್ವನಿಯನ್ನು ಪ್ರಬಲವಾಗಿ ಎತ್ತಿಹಿಡಿಯುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು. ಅನಂತರ ನಡೆದ ಮುಕ್ತ ಚರ್ಚೆಯಲ್ಲಿ ಮಾಜಿ ಸಿಬ್ಬಂದಿ ವಿಷ್ಣು ಶಬರಾಯ, ಕೃಷ್ಣಮೂರ್ತಿ ರೈ, ರಾಮಕೃಷ್ಣ ಭಟ್, ರವೀಂದ್ರ ವಿ., ವೈ.ಎಂ. ದೇವದಾಸ್, ಜನಾರ್ಧನ ಗಟ್ಟಿ, ನವಚಂದ್ರ ರಾವ್,…

Read More

ಕಾಪು ಸಮೀಪದ ಕೋತಲ್‌ಕಟ್ಟೆ ಬಳಿ ಭಾನುವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕಿಳಿದ ಘಟನೆ ಸ್ಥಳೀಯರಲ್ಲಿ ಬೆಚ್ಚಿಬೀಳುವಂತಾಗಿದೆ. ಅಲಂಕಾರಿಕ ಸಾಮಗ್ರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಳಿಕ ಸರ್ವಿಸ್ ರಸ್ತೆಗೆ ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿದುಬಂದಿದೆ. ಟೆಂಪೋದಲ್ಲಿ ಆ ಸಂದರ್ಭದಲ್ಲಿ ಒಟ್ಟು 10 ಮಂದಿ ಕೆಲಸಗಾರರು ಇದ್ದರು ಎಂದು ಮೂಲಗಳು ತಿಳಿಸಿವೆ. ಅಪಘಾತದಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ನಾಲ್ವರು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿರುವುದು ದುರಂತವಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಪು ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Read More

ಮಂಗಳೂರು: ತೀಯಾ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚನೆ ಅಗತ್ಯವಾಗಿದೆ ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಡಿಸೆಂಬರ್ 3ರಂದು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಯಾ ಸಮಾಜದ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದಾದ್ದಾಗಿ ಅವರು ತಿಳಿಸಿದರು. ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಕಳದ ಶಿವಗಿರಿ ಮಠ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ – ನಾರಾಯಣ ಗುರು ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ಶ್ರೀ ನಾರಾಯಣ ಗುರು ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 3ರಂದು ಕೊಣಾಜೆಯ ಮಂಗಳೂರು ವಿವಿಯಲ್ಲಿ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಇದೇ ವೇಳೆ ತೀಯಾ ಸಮುದಾಯದ ಬೇಡಿಕೆಯ ಮನವಿಯನ್ನು ಅವರ ಕೈಗೆ ಒಪ್ಪಿಸಲಾಗುವುದು. ಈ ಕುರಿತು ಕುದ್ರೋಳಿ, ಉಳ್ಳಾಲ, ಸಸಿಹಿಟ್ಟು ಮತ್ತು…

Read More

ನಾಗೋರಿ, ಮಂಗಳೂರು: ಡಿ.ಕೆ. ಟ್ರಾನ್ಸ್‌ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ ಸಂಸ್ಥೆಯ ಹೊಸ ಕಚೇರಿ ಉದ್ಘಾಟನಾ ಹಾಗೂ ಆಶೀರ್ವಾದ ಸಮಾರಂಭವು ನವೆಂಬರ್ 29, 2025ರಂದು ನಾಗೋರಿ, ಕಂಕನಾಡಿ ‘ಬಿ’ ವಿಲ್ಲೇಜ್ ಪ್ರದೇಶದ ಏಂಜಲ್ ರೆಸಿಡೆನ್ಸಿಯಲ್ಲಿ ಭವ್ಯವಾಗಿ ನೆರವೇರಿತು. ಕಾರ್ಯಕ್ರಮವು ಬೆಳಿಗ್ಗೆ 10.30ಕ್ಕೆ ಗಾರ್ಡಿಯನ್ ಏಂಜಲ್ ಚರ್ಚ್ ಪಾರಿಷ್ ಪ್ರೀಸ್ಟ್ ರೆವ್. ಫಾ. ಫ್ರೆಡ್ರಿಕ್ ಮೋಂಟೆರೋ ಹಾಗೂ ಸೋಸಿಯಸ್ ವಿಕಾರ್ ರೆವ್. ಫಾ. ಸ್ಟ್ಯಾನಿ ಫರ್ನಾಂಡ್ಸ್ ಅವರ ಆಶೀರ್ವಾದದೊಂದಿಗೆ ಆರಂಭಗೊಂಡಿತು. ಧರ್ಮಗುರುಗಳು ಸಂಸ್ಥೆಯ ಪ್ರಗತಿ, ಸೇವಾ ನಿಷ್ಠೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳು ಮತ್ತು ಗೌರವ ಅತಿಥಿಗಳು ಕಾರ್ಯಕ್ರಮದಲ್ಲಿ ಡಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಶಾಂತ್ ಶೆಟ್ಟಿ, ಡಕ್ಷಿಣ ಕನ್ನಡ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿತ್ರಂಜನ್, ಏಂಜಲ್ ರೆಸಿಡೆನ್ಸಿ ಮಾಲೀಕ ಯೋಗೀಶ್ ಪೂಜಾರಿ ಗೌರವ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು. ಹಾಜರಿದ್ದ ಗಣ್ಯರು ಎಂಸಿಸಿ ಬ್ಯಾಂಕ್ ನ ಅದ್ಯಕ್ಷ ಅನಿಲ್ ಲೋಬೊ, ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್…

Read More

ಮಂಗಳೂರು: ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಪಿಲಿಪಂಜ” ತುಳು ಚಲನಚಿತ್ರದ ಎರಡನೇ ಹಾಡಾದ ಫ್ರೆಂಡ್ಷಿಪ್ ಸಾಂಗ್, ಭಾನುವಾರ ಮಂಗಳೂರಿನ ಭಾರತ್ ಮಾಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಪ್ರತೀಕ್ ಯು. ಪೂಜಾರಿ ಕಾವೂರು ಅವರ ನಿರ್ಮಾಣದ ಈ ಚಿತ್ರಕ್ಕೆ ಭರತ್ ಶೆಟ್ಟಿ ಕಥೆ, ಪರಿಕಲ್ಪನೆ ಹಾಗೂ ನಿರ್ದೇಶನ ನೀಡುತ್ತಿದ್ದಾರೆ. ಬಿಡುಗಡೆ ಸಮಾರಂಭಕ್ಕೆ ತುಳು ಚಿತ್ರರಂಗ ಮತ್ತು ಸಮಾಜದ ಗಣ್ಯರು ಹಾಜರಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದರು. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ‍್. ಧನರಾಜ್, ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗೀಶ್ ಶೆಟ್ಟಿ ಜಪ್ಪು, ನಿರ್ದೇಶಕ ರಝಾಕ್ ಪುತ್ತೂರು, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದೀಪಕ್ ಪೂಜಾರಿ, ವೀಣಾ ಮಂಗಳ, ಕ್ಯಾಮ್ಕೋ ಮಾಜಿ ಅಧ್ಯಕ್ಷ ಪ್ರಮೋದ್ ರೈ, ಪ್ರೇಮ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಿತ್ರದ ನಿರ್ಮಾಪಕ ಪ್ರತೀಕ್ ಯು. ಪೂಜಾರಿ, ಸಹ-ನಿರ್ಮಾಪಕಿ ಬಿಂದಿಯಾ ಪ್ರತೀಕ್, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ, ಸಂಗೀತ ನಿರ್ದೇಶಕ…

Read More

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಹೆಲಿಕಾಪ್ಟರ್ ಮೂಲಕ ಇಂದು ಮಧ್ಯಾಹ್ನ ಉಡುಪಿಗೆ ಆಗಮಿಸಿದ್ದು, ಆಗಮನ ಕ್ಷಣದಿಂದಲೇ ನಗರದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತು. ಉಡುಪಿ ಕರಾವಳಿ ಬೈಪಾಸ್‌ನಿಂದ ಬನ್ನಂಜೆ ಮಾರ್ಗವಾಗಿ ಕಲ್ಸಂಕದವರೆಗೆ ನಡೆದ ಭವ್ಯ ರೋಡ್ ಶೋದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಸಾವಿರಾರು ಜನರ ಘೋಷಣೆಗಳು, ಹರ್ಷೋದ್ಗಾರಗಳು ಹಾಗೂ ಕೈ ಬೀಸುವ ಸಂಭ್ರಮದ ನಡುವೆ ಪ್ರಧಾನಿಯವರ ವಾಹನ ಮೆರವಣಿಗೆ ಮುಂದುವರಿಯಿತು. ರಸ್ತೆ ತುದಿಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಂಡವು ರೋಡ್ ಶೋ ಹಿನ್ನೆಲೆಯಲ್ಲಿ ಉಡುವಪಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯು ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ಹಮ್ಮಿಕೊಂಡಿತ್ತು. ಜನರ ಸುರಕ್ಷತೆ ಹಾಗೂ ನಿಯಂತ್ರಣಕ್ಕಾಗಿ ಸಂಪೂರ್ಣ ಮಾರ್ಗದ ಎರಡೂ ಬದಿಗಳಲ್ಲೂ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಸಾವಿರಾರು ಜನರು ಸರಿನಿಯಮದಲ್ಲಿ ನಿಂತು ಪ್ರಧಾನಿಯವರನ್ನು ನೋಡುವ ಅಪಾರ ಕುತೂಹಲ ತೋರಿದರು. ಪ್ರಧಾನಿಯವರಿಗೆ ಪುಷ್ಪಾರ್ಚನೆಯೊಂದಿಗೆ ಸ್ವಾಗತ ರೋಡ್ ಶೋ ಆರಂಭವಾದ ಕ್ಷಣದಿಂದಲೇ ಜನರು ಹೂಗುಚ್ಛಗಳು, ಪುಷ್ಪವೃಷ್ಠಿಯ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಸಲ್ಲಿಸಿದರು. ಪುಟ್ಟ ಮಕ್ಕಳಿಂದ…

Read More

ಅಮ್ಮಣ್ಣಾಯರ ಹಾಡುಗಳ ಡಿಜಿಟಲೀಕರಣವಾಗಲಿ : ಸೂಡ ಮಂಗಳೂರು: ‘ಭಾಗವತ ಅಮ್ಮಣ್ಣಾಯರು ಸ್ವ ಪ್ರತಿಭೆ ಉಳ್ಳವರಾಗಿದ್ದರು; ಅವರ ಹಾಡುಗಾರಿಕೆ ಅನುಕರಣೆಗೆ ನಿಲುಕುವುದಲ್ಲ. ಮಂಡೆಚ್ಚರ ದಾರಿಯಲ್ಲಿ ತನ್ನ ಸ್ವಂತಿಕೆಯನ್ನು ಕಾಣಿಸಿದ ಅವರದೇ ವಿಶಿಷ್ಟ ಶೈಲಿಯ ಹಾಡುಗಳ ಡಿಜಿಟಲೀಕರಣ ಆಗತಕ್ಕದ್ದು’ ಎಂದು ಯಕ್ಷಗಾನ ಭಾಗವತ ಮತ್ತು ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಹೇಳಿದ್ದಾರೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು ,ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ನಡೆಸಿದ ‘ಅಮ್ಮಣ್ಣಾಯೆರ್ನ ನೆಂಪು ಬೊಕ್ಕ ತುಳು ತಾಳಮದ್ದೊಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಕ್ಷಗಾನದಲ್ಲಿ ತುಳು ಸಂಸ್ಕೃತಿ ಅನಾವರಣ:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಅವರು ಮಾತನಾಡಿ ‘ಯಕ್ಷಗಾನದಲ್ಲಿ ತುಳುತಿಟ್ಟು ಆರಂಭವಾದ ಕಾಲದಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಪ್ರೇರಣೆಯಿಂದ ಕರ್ನಾಟಕ ಮೇಳದಲ್ಲಿ ದಿ| ಮಂಡೆಚ್ಚರು ಮತ್ತು ಅಮ್ಮಣ್ಣಾಯರು ತುಳು ಪ್ರಸಂಗಗಳನ್ನು ಮೆರೆಸಿದ್ದರು.…

Read More

ಹಾಲು ಎಂದರೆ ಅದು ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ಹಸುವಿನ ಹಾಲಿನಲ್ಲಿ ದೇಹವನ್ನು ಪೋಷಿಸುವ ಎಲ್ಲಾ ಪೂರಕ ಅಂಶಗಳಿವೆ ಎಂಬುದು ಜನಜನಿತ. ಹಸುವಿನ ಹಾಲು ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಗತ್ಯ ಆಹಾರ. ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ವೈದ್ಯರು ಪ್ರತಿನಿತ್ಯ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಲಿನಿಂದ ನಮಗೆ ಸಿಗಬಹುದಾದ ಆರೋಗ್ಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಸಲು ಮತ್ತು ದೇಶದಲ್ಲಿ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಕ್ಷೀರಕ್ರಾಂತಿಯ ಪಿತಾಮಹರಾದ ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನವಾದ ನವೆಂಬರ್ 26ರಂದು ಭಾರತದಲ್ಲಿ ರಾಷ್ಟ್ರೀಯ ಹಾಲು ದಿನ ಎಂದು ಆಚರಿಸಲಾಗುತ್ತಿದೆ. 2023-24ರ ಅಂಕಿ ಅಂಶಗಳ ಪ್ರಕಾರ, ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಮೂಡಿಬಂದಿದೆ. ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇಕಡಾ 24ರಷ್ಟು ಪಾಲು ಭಾರತದ್ದೇ ಆಗಿದೆ. 2023-24ರ ಅವಧಿಯಲ್ಲಿ ಹಾಲು ಉತ್ಪಾದನೆಯು ಸುಮಾರು 4% ಹೆಚ್ಚಾಗಿದ್ದು, ಒಟ್ಟು 230.58 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು…

Read More

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ ಹಾಗೂ ಬಹಿರಂಗ ಅಧಿವೇಶನದ ಸಂದರ್ಭದಲ್ಲಿ ಪ್ರಮುಖ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್, ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್ ಶೆಟ್ಟಿ ಬಿ.ಎನ್. ಬ್ರಹ್ಮರಕೂಟ್ಲು ಇವರನ್ನು ಒಕ್ಕೂಟದ ಪುನರಾಯ್ಕೆಯಾದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಮಾತೃ ಸಂಘದ ಹೊರ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಮಾಕೃಷ್ಣ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ, ಮೋಹನ್ ದಾಸ್ ಶೆಟ್ಟಿ, ಶಶಿಧರ್ ಶೆಟ್ಟಿ…

Read More