Author: Tulunada Surya

ಮಂಗಳೂರು ; ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ,ತಾಲೂಕು ಪಂಚಾಯತ್ ಮಂಗಳೂರು ನೀರುಮಾರ್ಗ ಗ್ರಾಮ ಪಂಚಾಯತ್ ಮತ್ತು ಹಸಿರು ದಳ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಇಂದು ಮಂಗಳೂರಿನ ನೀರುಮಾರ್ಗದಲ್ಲಿ ನಡೆಯಿತು. ನಾಡಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಬಳಿಕ ಎಸ್.ಎಸ್.ಎಲ್.ಸಿ ಯ ಕೆ.ರೂಪಾಲಿರಾವ್,ಇಜಾರ ಸಾಹಿಲ್,ಲಿಜಾ ರೂಜ್ ಮೊಂತೆರೊ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬಳಿಕ ವಿಕಲಚೇತರಿಗೆ ಹಾಗೂ ಕ್ರೀಡಾ ಸಾಧಕರಿಗೆ ಚೆಕ್ ವಿತರಣೆ ನಡೆಯಿತು. ವಿಧಾನ ಸಭಾಸ್ಪೀಕರ್ ಯು.ಟಿ ಖಾದರ್ ರವರು ವಿವಿಧ ಕಾಮಗಾರಿಯ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಯನ್ನು ನೆರೆವೆರಿದಿದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉಧ್ಘಾಟನೆಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ರವರು ಉದ್ಘಾಟಿಸಿದರು.ಬಳಿಕ ನೀರ್ ಮಾರ್ಗ ಗ್ರಾಮ ಪಂಚಾಯತ್ – ಹಸಿರು ದಳ ಮಂಗಳೂರು ವತಿಯಿಂದ ಸನ್ಮಾನಿಸಿದರು. ಬಳಿಕ ಮಾತನಾಡಿದ ಯು.ಟಿ ಖಾದರ್ ಅವರು ಗ್ರಾಮ ಪಂಚಾಯತ್ ಎಂದರೆ ಅದು…

Read More

ಮಂಗಳೂರು: ವಿಷಾನಿಲ ಸೋರಿಕೆಯಿಂದ ಮಂಗಳೂರು ಹೊರವಲಯದ ಸುರತ್ಕಲ್‌ನ ಎಂಆರ್‌ಪಿಎಲ್ ಘಟಕದ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಮೃತ ಸಿಬ್ಬಂದಿಗಳು ದೀಪ ಚಂದ್ರ ಭಾರ್ತಿಯಾ ಮತ್ತು ಬಿಜಿಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ಮಂಗಳೂರು ತೈಲ ಶುದ್ಧೀಕರಣ ಘಟಕದ ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ಘಟನೆ ನಡೆದಿದೆ. ಆಯಿಲ್ ಮೂವ್‌ಮೆಂಟ್ ವಿಭಾಗದಲ್ಲಿ ದೋಷ ಕಂಡು ಬಂದ ಹಿನ್ನೆಲೆ ಪರಿಶೀಲನೆಗೆಂದು ಸಿಬ್ಬಂದಿ ತೆರಳಿದ್ದರು. ಟ್ಯಾಂಕ್ ಮೇಲ್ಛಾವಣಿಗೆ ಹೋದ ಬೆನ್ನಲ್ಲೇ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ. ತಕ್ಷಣದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರ ರಕ್ಷಣೆಗೆ ಮುಂದಾಗಿದ್ದ ಮತ್ತೊಬ್ಬ ಸಿಬ್ಬಂದಿ ವಿನಾಯಕ ಮಯಗೇರಿ ಎಂಬವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಆರ್‌ಪಿಎಲ್ ಆಡಳಿತ ಘಟನೆಯ ತನಿಖೆಗೆ ಸಮಿತಿ ರಚಿಸಿದೆ. ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ.

Read More

ಮಂಗಳೂರು ನ್ಯಾಯಾಲಯದಲ್ಲಿ ಇಂದು ನಡೆದ ಲೋಕಅದಾಲತ್ ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಭಟ್ ಕೆ, ಅದಲತ್ ಸದಸ್ಯರಾದ ಶ್ರೀಮತಿ ಕೆ ಎಸ್ ಗೌರಿ ರವರು ಕೌಟುಂಬಿಕ ಸಮಸ್ಯೆಯಿಂದ ಬೇರೆ ಬೇರೆಯಾದ ಗಂಡ ಹೆಂಡತಿಯನ್ನು ಒಟ್ಟುಗೂಡಿಸಿದ ಪ್ರಸಂಗ ನಡೆಯಿತು. ಕಾವೂರು ನಿವಾಸಿ ಹನುಮಂತ ಹೂಗಾರ್ ಮತ್ತು ಬಿಜೈ ನಿವಾಸಿ ಸಾವಿತ್ರಿ ಹೂಗಾರ್ ರವರು ಮದುವೆಯಾಗಿ 16 ವರ್ಷ ಆಗಿದ್ದು ಎರಡು ಮಕ್ಕಳಿರುತ್ತಾರೆ. ಕೆಲವೊಂದು ಕೌಟುಂಬಿಕ ಸಮಸ್ಯೆಯಿಂದ ಇಬ್ಬರು ಬೇರೆಬೇರೆಯಾಗಿ ವಾಸಿಸುತ್ತಿದ್ದರು ಹನುಮಂತ ಹೂಗಾರ್ ಅವರು ನನಗೆ ಹೆಂಡತಿ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿದಾರ ಹನುಮಂತ ಹೂಗಾರ್ ಪರವಾಗಿ ನ್ಯಾಯವಾದಿ ಅನಿಶಾ ಡಿಸೋಜ ಮತ್ತು ಪ್ರತಿವಾದಿ ಸಾವಿತ್ರಿ ಹೂಗಾರ್ ಪರವಾಗಿ ನ್ಯಾಯವಾದಿ ದಿನಕರ್ ಶೆಟ್ಟಿ ಅವರು ವಕಾಲತು ವಹಿಸಿದ್ದರು.ಮತ್ತು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಜೈಬುನ್ನಿಸ್ಸ ಉಪಸ್ಥಿತರಿದ್ದರು. ವೈವಾಹಿಕ ಜೀವನದ ಬಗ್ಗೆ ಸವಿಸ್ತಾರವಾಗಿ ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಜೀವನ ನಡೆಸುವ ಬಗ್ಗೆ ತಿಳುವಳಿಕೆ…

Read More

ಕರಾವಳಿ ಟೀಮ್ ನ ಅಧ್ಯಕ್ಷರಾದ ನಿಸಾರ್ ಕರಾವಳಿ ಆಜ್ಮಲ್ ಕೊಳಂಬೆ ಹಫೀಜ್ ಕೊಳಂಬೆನೇತೃತ್ವದಲ್ಲಿ ಬಜ್ಪೆ ಸ್ರಷ್ಟಿ ಹೋಟೆಲ್ ಮುಂಭಾಗ ಹದಗೆಟ್ಟ ಮುಖ್ಯ ರಸ್ತೆಯ ಗುಂಡಿ ಮುಚ್ಚುವ ಮೂಲಕ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಂಡರು , ಕರಾವಳಿ ಟೀಮಿನ ಮುಖಂಡರಾದ ಜಲಾಲ್ ಮರವೂರು ಆಸ್ಪಕ್ ಪ್ಯಾರ ನಾಗೇಶ ಬಜ್ಪೆ ಖಾದರ್ ಕಿನ್ನಿಪದವ್ ಜುನೈದ್ ಬಜ್ಪೆ, ಸಹದ್ ಎಲ್ಲಾ ಸದಸ್ಯರುಗಳು ಭಾಗವಹಿಸಿದರು

Read More

25 ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ವೈದ್ಯರು ಶಿಕ್ಷಕರು, ಡೀನ್, ಜಿಲ್ಲಾ ಸರ್ಜನ್, ನಿವಾಸಿ ವೈದ್ಯಾಧಿಕಾರಿಗಳನ್ನ ಸೇರಿಸಿ ಸುಮಾರು 43 ವೈದ್ಯರನ್ನ ಹಿರಿತನದ ಆಧಾರದಲ್ಲಿ ಸನ್ಮಿಸಲಾಗುತ್ತಿದೆ ಮುಂದೆ ಈ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ಇನ್ನಷ್ಟು ವೈದ್ಯರು ನರ್ಸಿಂಗ್ ಆಫೀಸರ್ಸ್ ಸಹಾಯಕ ಸಿಬ್ಬಂದಿಗಳು ಡಿ ಗ್ರೂಪ್ ನೌಕರರನ್ನ ಗುರುತಿಸಿ ಗೌರವಿಸುವ ಯೋಜನೆ ಇದ್ದು ಇದು ಪ್ರಥಮ ಹಂತದ ಸನ್ಮಾನ ಕಾರ್ಯಕ್ರಮ ಅಂತ ಸರ್ವರನ್ನ ಸ್ವಾಗತಿಸಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ ಶಿವಪ್ರಕಾಶ್ ಪ್ರಸ್ತಾವನೆಯಲ್ಲಿ ತಿಳಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಹಿರಿಯ ವೈದ್ಯಕೀಯ ಶಿಕ್ಷಕರಾದ ಡಾ ಶಾಂತಾರಾಮ್ ಶೆಟ್ಟಿ ಮಾತಾಡಿ ವೆನ್ಲಾಕ್ ಲೇಡಿಗೋಶನ್ ಹಾಗು ಕೆಎಂಸಿ ಸಂಸ್ಥೆಗಳು ಆರೋಗ್ಯ ಸೇವೆ ನೀಡಲು ಹಾಲು ಜೇನು ಸಕ್ಕರೆ ಹಾಗೆ ಬೇರ್ಪಡಿಸಲು ಆಗದಷ್ಟು ಗಟ್ಟಿ ಸೇವಾ ಬಾಂದವ್ಯ ಹಾಗು ಬದ್ಧತೆಯನ್ನ ಹೊಂದಿದ ವಿಶ್ವ ಮಟ್ಟದ ಸಂಸ್ಥೆಗಳಾಗಿದ್ದು ಈ 175 ರ ಸಂಭ್ರಮದಲ್ಲಿ ವೈದ್ಯರ ದಿನಾಚರಣೆಯ ಸನ್ಮಾನ ಸ್ವೀಕರಿಸಲು ಬಂದಿರುವ ಹಿರಿಯ ವೈದ್ಯರುಗಳು…

Read More

ಮಂಗಳೂರು : ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಆಮಿಷವೊಡ್ಡಿ ಮಂಗಳೂರಿ ನಲ್ಲಿ 300 ಮಂದಿ ಉದ್ಯೋಗ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಗರದ ಬೆಂದೂರ್‌ವೆಲ್‌ನಲ್ಲಿ ಹೈರ್‌ಗ್ಲೋ ಎಲಿಗೆಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ ಪ್ರೈ.ಲಿ. ಎಂಬ ಹೆಸರಿನ ಕಚೇರಿಯನ್ನು ತೆರದು ವಿದೇಶದಲ್ಲಿ ಉದ್ಯೋಗ ವೀಸಾ ಕೊಡಿಸುವುದಾಗಿ ಜಾಹೀರಾತುಗಳನ್ನು ನೀಡಿ ವಂಚನೆ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ನವಿ ಮುಂಬೈಯ ಕೋಪರಕೈರಾನೆ ನಿವಾಸಿ ದಿಲ್‌ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಥಾಣೆ ದೊಂಬಿವಿಲಿಯ ಸಾಹುಕಾರಿ ಕಿಶೋರ್ ಕುಮಾರ್ ಯಾನೆ ಅನಿಲ್ ಪಾಟೀಲ್ (34) ಎಂಬವರನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

Read More

ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಮೂಡಿ ಬಂದಿರುವ “ಧರ್ಮ ಚಾವಡಿ” ತುಳು ಚಿತ್ರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಇಂದು ಬಿಡುಗಡೆಗೊಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿ ಮಾತಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು “ಆತ್ಮೀಯ ಮಿತ್ರ ನಿತಿನ್ ರೈ ಕುಕ್ಕುವಳ್ಳಿ ಅವರು ಮಾಡಿರುವ ಮೊದಲ ಸಿನಿಮಾ “ಧರ್ಮ ದೈವ” ತುಳುವರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಂದು ಅವರ ಎರಡನೇ ಸಿನಿಮಾ “ಧರ್ಮ ಚಾವಡಿ” ಬಿಡುಗಡೆಯಾಗುತ್ತಿದೆ. ತುಳುವರ ಆರಾಧನೆಯಾಗಿರುವ ದೈವಾರಾಧನೆ ಕುರಿತಾದ ಸಿನಿಮಾ ಇದಾಗಿದ್ದು ತುಳುವರು ಮನಪೂರ್ವಕವಾಗಿ ಸಿನಿಮಾ ನೋಡುವ ಮೂಲಕ ಗೆಲ್ಲಿಸಬೇಕು ಎಂದರು. ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್,ಡಾ.ದೇವದಾಸ್ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ್, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಕ್ಯಾಟ್ಕಾ ಅಧ್ಯಕ್ಷ ಲಂಚುಲಾಲ್ ಕೆ ಎಸ್,ತುಳು ಸಾಹಿತ್ಯ ಅಕಾಡೆಮಿ…

Read More

ಯೆಮೆನ್‌: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಗಲ್ಲಿಗೇರಿಸಲಾಗುವುದು. ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಮುಂದಿನ ವಾರ ಅಂದರೆ ಜುಲೈ 16 ರಂದು ಗಲ್ಲಿಗೇರಿಸಲಾಗುತ್ತದೆ. ಕಳೆದ ವರ್ಷ, ಯೆಮೆನ್ ಅಧ್ಯಕ್ಷರು ಕೇರಳದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಅನುಮೋದಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಗಳು ರಾಷ್ಟ್ರೀಯ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದು, ಈ ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದ್ದಾರೆ ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದ್ದಾರೆ. ಸಚಿವಾಲಯವು ಈ ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ನಿಮಿಶಾ ಪ್ರಿಯಾ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ, ಅವರು ಅಂತಿಮವಾಗಿ ತಮ್ಮ ಕ್ಲಿನಿಕ್ ನ್ನು ತೆರೆದರು ಮತ್ತು 2014 ರಲ್ಲಿ ತಲಾಲ್ ಅಬ್ದೋ ಮಹ್ದಿ ಅವರನ್ನು ಸಂಪರ್ಕಿಸಿದರು,…

Read More

10.7.25 ಗುರು ಪೂರ್ಣಿಮಾ ನಿಮಿತ್ತ ಜೈನ ಕಾಶಿ ಮೂಡು ಬಿದಿರೆ ಶ್ರೀ ಮಠ ದಲ್ಲಿ ಚಾತು ರ್ಮಾಸ ನಿಮಿತ್ತ ಆಚಾರ್ಯ ಗುಲಾಬ್ ಭೂಷಣ ಮಹಾರಾಜ್, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ರ ದಿವ್ಯ ಸಾನಿಧ್ಯ ಬೆಳಿಗ್ಗೆ ಯಿಂದ ಅಭಿಷೇಕ ಪೂಜೆ ಶ್ರಾವಕ ರಿಂದ ಕಲಶ ಸ್ಥಾಪನೆ ಶ್ರೀ ಮಠ ಹಾಗೂ ಶಾಂತಿ ಭವನ ದಲ್ಲಿ ಲಘು ಸಿದ್ದ ಚಕ್ರ ವಿಧಾನ, ಪೂಜೆ ನೆರವೇರಿತು ಬಳಿಕ ಆಶೀರ್ವಾದ ಮಡಿದ ಆಚಾರ್ಯ ರುಗುರು ಗಳ ಉಪಕಾರ ಶ್ರೇಷ್ಠ ತಪಸ್ಸು ಜ್ಞಾನ ದ ಮೂಲಕ ನಮ್ಮ ನ್ನು ಸಂಸ್ಕಾರ ವಂತ ರಾಗಿ ರೂಪಿಸುವರು ಎಂದರು ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ನಾಲ್ಕು ಜೈನ ವೇದ ದಿವ್ಯ ಧ್ವನಿ ಯಿಂದ ಸಿಗಲು ಗೌತಮ ಗಣ ಧರ ರ ಉಪಕಾರ ಅತ್ಯಂತ ಶ್ರೇಷ್ಠ ಸರ್ವರಿಗೂ ಹಿತ ವಾದ ಮಧುರ ಓಂ ಕಾರ ಧ್ವನಿ ಯನ್ನು ಗೌತಮ ಸ್ವಾಮಿ ಸಂಸಾರ ದಿಂದ ಮೋಕ್ಷ ಪಡೆಯುವ ಪ್ರಶ್ನೆ ಮಾಡುವ ಮೂಲಕ ಜ್ಞಾನ ಹರಿಯಲು ಕಾರಣ…

Read More

ಕೋಟ ಶ್ರೀನಿವಾಸ ಪೂಜಾರಿ ಅವರ ಇಪ್ಪತ್ತೈದು ಲಕ್ಷ ಅನುದಾನದಲ್ಲಿ ಪಿಲಾರು-ಪಲ್ಲ ಸಂಪರ್ಕದ ಕಚ್ಚಾ ರಸ್ತೆ ನಿರ್ಮಾಣವಾಗಲು ಹಿರಿಯರಾದ ಸುಬ್ರಾಯ ಗಟ್ಟಿಯವರ ತ್ಯಾಗ ಮನೋಭಾವವೇ ಪ್ರಮುಖ ಕಾರಣವಾಗಿದ್ದು,ಅವರು ತಮ್ಮ ಸ್ವಂತ ಸ್ಥಳವನ್ನ ಸಮಾಜಕ್ಕೆ ಬಿಟ್ಟು ಕೊಟ್ಟಿದ್ದರಿಂದ‌ ಪಿಲಾರು-ಪಲ್ಲ ಸಂಪರ್ಕದ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.ತೊಕ್ಕೊಟ್ಟಿನ‌ ಭಗತ್ ಸಿಂಗ್ ಪ್ರತಿಷ್ಠಾನದ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ನಿವೃತ್ತ ಶಿಕ್ಷಕರು ,ಪ್ರಗತಿ ಪರ ಕೃಷಿಕರಾದ ಸುಬ್ರಾಯ ಗಟ್ಟಿ ಪಿಲಾರು ಅವರಿಗೆ ಅವರ ಸ್ವಗೃಹದಲ್ಲಿ ಗುರುವಾರದಂದು ಗುರುವಂದನೆಯನ್ನ ಸಮರ್ಪಿಸಿ ಅವರು ಮಾತನಾಡಿದರು.ಬಹಳ ವರುಷಗಳ ಹಿಂದೆಯೇ ಪಿಲಾರು ಪ್ರದೇಶದ ಯುವಕರಿಗೆ ಮಾರ್ಗದರ್ಶನ ಮಾಡಲು ಸುಬ್ರಾಯ ಗಟ್ಟಿಯವರದ್ದೇ ನಾಯಕತ್ವ ಇತ್ತು.ಅವರಿಗೆ ತೊಂಭತ್ತೈದು ವರ್ಷವಾದರೂ ಇಂದಿಗೂ ಜೀವನೋತ್ಸಾಹದಲ್ಲಿದ್ದು ವಾಕ್,ಶ್ರವಣ,ಗ್ರಹಿಕಾ ಶಕ್ತಿಯನ್ನ ಹೊಂದಿದ್ದಾರೆ.ಸಂಘ ಸಂಸ್ಥೆಗಳನ್ನ ಹುಟ್ಟು ಹಾಕೋದು ಮಾತ್ರವಲ್ಲ ಅದನ್ನ ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕು.ಆ ನಿಟ್ಟಿನಲ್ಲಿ ಭಗತ್ ಸಿಂಗ್ ಪ್ರತಿಷ್ಠಾನವು ಉಳ್ಳಾಲ ಪ್ರದೇಶದಲ್ಲಿ ಇಂತಹ ಅರ್ಥಪೂರ್ಣ,ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸುತ್ತಿರುವುದು ಪ್ರಶಂಸನೀಯವೆಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾದ ಕೆ.ರವೀಂದ್ರ…

Read More