Author: Tulunada Surya

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿರುವುದು ಮಾಹಿತಿ ತಿಳಿದು ಬಂದಿದೆ. ಬಂಧಿತ ಆರೋಪಿ ಜಪ್ಪಿನಮೊಗರು ನಿವಾಸಿ ರೋಶನ್ ಸಲ್ಡಾನ(45) ಎಂದು ಗುರುತಿಸಲಾಗಿದೆ ‌ ಈತನನ್ನು ಗುರುವಾರ ರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ತಿಳಿಯಲಾಗಿದೆ. ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರಿ ಮಾಹಿತಿ ನೀಡಿದ್ದಾರೆ. ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು…

Read More

ಮಂಗಳೂರು ; ‘ಮಿಸ್ ಡಿವೈನ್ ದಿವಾ’ ರಾಷ್ಟ್ರಮಟ್ಟದ ಫ್ಯಾಷನ್ ಪೇಜೆಂಟ್ ಸೌಂದರ್ಯ ಸ್ಪರ್ಧೆ ಮತ್ತು ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ಆ.7ರಿಂದ 10 ರವರೆಗೆ ಜರಗಲಿದೆ. ಅಸ್ತ್ರ ಗ್ರೂಫ್ ಅರ್ಪಣೆಯಲ್ಲಿ ಅಜಯ್ ಕುಮಾರ್ ಹಾಗೂ ಸಾಹಿಲ್ ಈವೆಂಟ್ಸ್ ಆಶ್ರಯದಲ್ಲಿ ಸ್ಪರ್ಧೆ ಆಯೋಜನೆಯಾಗಿದೆ ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಸಾಹಿಲ್ ಅವರು, ‘ಮಿಸ್ ಡಿವೈನ್ ಕರಾವಳಿಗೆ ಹೊಸ ಅವಕಾಶದ ಬಾಗಿಲು. ಜಗತ್ತಿಗೆ ಮಂಗಳೂರಿನ ಸೌಂದರ್ಯವನ್ನು ಪಸರಿಸಲು ಸೂಕ್ತ ವೇದಿಕೆ. ಇದರಲ್ಲಿ ಕಾಶ್ಮೀರದಿಂದ ತೊಡಗಿ ದೇಶದ ವಿವಿಧ ಭಾಗಗಳ ಸ್ಪಽಗಳು ಪಾಲ್ಗೊಳ್ಳಲಿದ್ದಾರೆ. ಕರಾವಳಿಯ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಸಾಧ್ಯತೆಯ ದಾರಿ’ ಎಂದರು. ಅಸ್ತ್ರ ಗ್ರೂಪ್ ಸಿಇಒ ಲಂಚುಲಾಲ್ ಕೆ.ಎಸ್. ಮಾತನಾಡಿ, ‘ದೇಶದ ವಿವಿಧ ಭಾಗಗಳಿಂದ ಆಯ್ದ ೫೦ ಮಂದಿ ಸ್ಪಽಗಳು ಪಾಲ್ಗೊಳ್ಳಲಿದ್ದು, ಮಂಗಳೂರಿನ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಮತ್ತು ಇಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿವೈನ್ ದಿವಾ ಸ್ಪರ್ಧೆಗೆ ಅಸ್ತ್ರ ಸಂಸ್ಥೆಯು ಪ್ರಾಯೋಜಕತ್ವ ವಹಿಸಿದೆ. ಇದರಿಂದ ಹೊಸಬರಿಗೆ ಅವಕಾಶ ಸಿಗಲಿದೆ’…

Read More

ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಗುರುಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಜನಾನುರಾಗಿ ಶಿಕ್ಷಕ, ಸಜ್ಜನ – ಸ್ನೇಹಶೀಲ ವ್ಯಕ್ತಿತ್ವದ ವಿಶ್ವನಾಥ ಜೋಗಿ ಕದ್ರಿ (72) ಅವರು ಜುಲೈ 8ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮೂರು ದಶಕಗಳಿಂದ ಮಂಗಳೂರು ತಾಲೂಕಿನ ಬಲ್ಮಠ,ಕಾವೂರು,ಮೊಂಟೆಪದವು ಗುರುಪುರ ಮೊದಲಾದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದ ಅವರು 2014ರಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾದರು. ತಮ್ಮ ಸೇವಾವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ವಿದ್ಯಾರ್ಥಿಗಳ ಹಾಗೂ ಹೆತ್ತವರ ನೆಚ್ಚಿನ ಅಧ್ಯಾಪಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ನಿವೃತ್ತರಾದ ಬಳಿಕ ನಗರದ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಕಳೆದ ಆರು ತಿಂಗಳಿಂದ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರೂ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು. ಶಿಕ್ಷಕಿಯಾಗಿದ್ದ ಪತ್ನಿ ಶುಭಾ ವಿಶ್ವನಾಥ್ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಏಕೈಕ ಪುತ್ರಿ – ಅಳಿಯ ಮತ್ತು ಅಪಾರ ಬಂಧು ವರ್ಗವನ್ನವರು ಅಗಲಿದ್ದಾರೆ.…

Read More

ಹಿಂದೂ ಯುವ ಸೇನೆ ಭಾರ್ಗವ ಶಾಖೆ ಅಳಪೆ ನೇತೃತ್ವದಲ್ಲಿ 2025 ನೇ ಸಾಲಿನ “ಕೆಸರ್ಡ್ ಡೊಂಜಿ ದಿನ “ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡೋತ್ಸವವನ್ನು ನಡೆಸಲಾಯಿತು. ಸುಮಾರು 1500 ಮಕ್ಕಳು ಮತ್ತು ಕ್ರೀಡಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 55 ವರ್ಷದಿಂದ ಕೃಷಿ ಚಟುವಟಿಕೆಯನ್ನು ಉಳಿಸಿಕೊಂಡು ಬಂದ ಸದಾಶಿವ ಭಂಡಾರಿ ಮತ್ತು ಜಯಲಕ್ಷ್ಮಿ ಭಂಡಾರಿ ಅವರಿಗೆ ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ದಿನಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಯನ್ನು ಹೇಳಿದರು, ಸಮರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಹಿಂದು ಯುವ ಸೇನೆ ಕೇಂದ್ರೀಯ ಮಂಡಳಿಯ ಅಧ್ಯಕ್ಷರಾದ ಶ್ರೀ ಯಶೋಧರ ಚೌಟ ವಹಿಸಿದ್ದರು, ಶಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಕುಮಾರ್ ಜೆಪ್ಪು ಅವರು ಮಾತನಾಡಿ ತುಳುನಾಡ ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು, ತುಳುನಾಡ ಇತಿಹಾಸವನ್ನು ಜನರ ಮುಂದೆ ಸವಿಸ್ತಾರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಜನಾರ್ದನ್ ಅರ್ಕುಳ ,…

Read More

ಉಡುಪಿ: ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿಪರಾರಿಯಾಗಲು ಯತ್ನಿಸಿದ ಪೋಕ್ಸೊ ಪ್ರಕರಣದ ಆರೋಪಿಯನ್ನು ಲಾಠಿ ಏಟು ಕೊಟ್ಟು ವಶಕ್ಕೆ ಪಡೆದುಕೊಂಡ ಘಟನೆ ರವಿವಾರ ನಡೆದಿದೆ. ಈ ವೇಳೆ ಗಾಯಗೊಂಡ ಉಡುಪಿ ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ರಿತೇಶ್ ಹಾಗೂ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿರುವ ಉತ್ತರ ಪ್ರದೇಶ ಮೂಲದ ಮಣಿಪಾಲ ವಿ.ಪಿ.ನಗರದ ನಿವಾಸಿ ಮುಹಮ್ಮದ್ ದಾನೀಶ್(29) ಎಂಬವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ದಾಖಲಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.12ರಂದು ಆರೋಪಿ ಮುಹಮ್ಮದ್ ದಾನೀಶ್ನನ್ನು ದಸ್ತಗಿರಿ ಮಾಡಿದ್ದು, ಈತನನ್ನು ತನಿಖೆಗೆ ಒಳಪಡಿಸಿ ಜು.13ರಂದು ತನಿಖೆಯ ಬಗ್ಗೆ ಮಣಿಪಾಲ ತಾಂಗೋಡು 2ನೇ ಕ್ರಾಸ್ ಹಾಡಿ ಬಳಿ ಕೃತ್ಯವೆಸಗಿದ ಸ್ಥಳವನ್ನು ಪಂಚನಾಮೆಯನ್ನು ಮಾಡುವ ಕರೆದುಕೊಂಡು ಹೋಗಲಾಗಿತ್ತು. ಈ ಸಮಯದಲ್ಲಿ ಆರೋಪಿ ಆತನಿಗೆ ಕೈಕೊಳ ಹಿಡಿದುಕೊಂಡಿದ್ದ ಸಿಬ್ಬಂದಿ ರಿತೇಶ್ರವರ ಎದೆಗೆ ಎರಡೂ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಬಂದಿದ್ದನು. ಆಗ…

Read More

ಮಂಗಳೂರು:ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ತುಳುವ ಮಹಾಸಭೆಯ ಪ್ರಥಮ ಘಟಕದ ರೂಪಿಕರಣ ಸಭೆ ಮರೋಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಆಡಳಿತ ಮೊಕ್ತೆಸರಾದ ಗಣೇಶ ಶೆಟ್ಟಿ ಗುಡ್ಡೆಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ “ಆರಾಧನೆ ಕೇಂದ್ರಗಳು ಕೇವಲ ಭಕ್ತಿಯ ಶ್ರದ್ಧಾ ಕೇಂದ್ರಗಳಾಗದೆ, ಸಾಮಾಜಿಕ, ಸಾಂಸ್ಕೃತಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯ ಉತ್ಥಾನ ಕೇಂದ್ರಗಳಾಗಬೇಕು” ಎಂಬ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೀರಿದರ್ ಶೆಟ್ಟಿ ಅವರು ಮಾತನಾಡಿ ಮಕ್ಕಳಿಗೆ ನಮ್ಮ ಆಚಾರ–ವಿಚಾರಗಳನ್ನು ಅರ್ಥವಾಗುವ ರೀತಿಯಲ್ಲಿ ಹಾಗೂ ಖುಷಿಯಾಗುವ ರೀತಿಯಲ್ಲಿ ಬೋಧನೆ ಮಾಡಬೇಕು ಆವಾಗಲೇ ಮಕ್ಕಳಲ್ಲಿ ಆಸಕ್ತಿಯ ಬೆಳವಣಿಗೆ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ತುಳುವ ಮಹಾಸಭೆ ಕೈಗೊಂಡಿರುವ ಕೆಲಸ ಶ್ಲಾಘನೀಯವಾಗಿದೆ” ಎಂದು ಅವರು ಹೇಳಿದರು. ತುಳುವ ಮಹಾಸಭೆಯ ಉದ್ದೇಶಗಳು, ಗುರಿಗಳು ಹಾಗೂ ತತ್ವಚಿಂತನೆಗಳ ಬಗ್ಗೆ ಆಧ್ಯಾತ್ಮಗುರು ಹಾಗೂ ತುಳುವ ಮಹಾಸಭೆ ಮಂಗಳೂರು ತಾಲೂಕು ಸಂಚಾಲಕರು ಅರವಿಂದ ಬೆಳ್ಚಾಡ, ಹಾಗೂ ತುಳುವರ್ಲ್ಡ್ ಫೌಂಡೇಶನ್, ಕಟೀಲ್ ಇದರ ನಿರ್ದೇಶಕರಾದ ಡಾ. ರಾಜೇಶ್ ಆಳ್ವ…

Read More

ಮೂಡುಬಿದ್ರೆ : ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಇರುವೈಲ್ ಗ್ರಾಮದಲ್ಲಿ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಹಲವರನ್ನು ಬಂಧಿಸಿದ ಘಟನೆ ಜು. 12ರ ರಾತ್ರಿ ನಡೆದಿದೆ. ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದ್ರೆ ತಾಲೂಕಿನ ಇರುವೈಲ್ ಗ್ರಾಮದ ಕೋರಿಬೆಟ್ಟು ಬಳಿ ಗುಡ್ಡೆಯಲ್ಲಿ ಕೆಲವು ವ್ಯಕ್ತಿಗಳು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ನಡೆಸುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ದಾಳಿ ನಡೆಸಿದ ಅವರು, ಅಕ್ಬರ್, ಸಂತೋಷ್, ಪ್ರಶಾಂತ್, ಮಹಾಬಲ ಪೂಜಾರಿ, ಪ್ರಜ್ವಲ್, ಗಿರೀಶ್, ರಾಜೇಶ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡುಕೊಂಡಿದ್ದಾರೆ. ಗಣೇಶ, ಶ್ರೀನಾಥ್, ದಿನೇಶ್ ಕೆಂಪುಗುಡ್ಡೆ, ಕೇಶವ ಯಾನೆ ಅಪ್ಪು ಹಾಗೂ ಇನ್ನಿತರರು ಅದೇ ಸಂದರ್ಭದಲ್ಲಿ‌ ಘಟನಾ ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಪಾಧಿತರ ವಶದಲ್ಲಿದ್ದ ನಗದು ಹಣ 10,100 ರೂ., 52 ಇಸ್ಪೀಟ್ ಎಲೆಗಳು, 2 ಮೇಣದ ಬತ್ತಿ ಹಾಗೂ KA-09-EP-8948 ಮತ್ತು KA-19-EZ-1077 ದ್ವಿಚಕ್ರ ವಾಹನಗಳನ್ನು ವಶಕ್ಕೆ…

Read More

ಬೆಂಗಳೂರು : ತುಳು ಭಾಷೆ, ಸಂಸ್ಕೃತಿ, ಮತ್ತು ಸಮುದಾಯ ಹಕ್ಕುಗಳ ರಕ್ಷಣೆಗೆ ಶತಮಾನಾಂತರದಿಂದ ಶ್ರಮಿಸುತ್ತಿರುವ ತುಳುವ ಮಹಾಸಭೆ, ಬೆಂಗಳೂರು ಮಹಾನಗರದ ಸಂಚಾಲಕರಾಗಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ನೂತನ ನೇಮಕದಿಂದ ಕರ್ನಾಟಕ ರಾಜ್ಯದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಲಭಿಸಬೇಕಾದ ಹೋರಾಟಕ್ಕೆ ಹೊಸ ಶಕ್ತಿ ತುಂಬಲಿದೆ ಎಂದು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತುಳು ಸಂಘಟನೆಗಳು ಈ ನೇಮಕಾತಿಯನ್ನು ಸ್ವಾಗತಿಸಿದೆ. ತುಳುವ ಮಹಾಸಭೆ, 1928ರಲ್ಲಿ ಹಿರಿಯ ತಿಲಕವಾದಿ ಎಸ್. ಯು. ಪಣಿಯಾಡಿ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಈ ಸಂಘಟನೆ, ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಶತಮಾನೋತ್ಸವದ ಹೆಜ್ಜೆಯಲ್ಲಿ ಈ ಸಂಸ್ಥೆ ತುಳುನಾಡನ್ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸಾ ಪಾಠ), ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ಸ್ಥಾಪನೆ, ಭಾಷಾ–ಮತ–ಜಾತಿ ಸೌಹಾರ್ದತೆ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಾದಿಗಳಲ್ಲಿ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದೆ. ತುಳುನಾಡದ…

Read More

ಪಚ್ಚನಾಡಿಯಲ್ಲಿ ಹೊಸತಾಗಿ ಕಸ ಸಂಗ್ರಹ ಕ್ಕೆ ಅನುಮತಿ. ವಾರ್ಡ್ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತವಾಗಿದೆ ಪಚ್ಚನಾಡಿ ಮುಖ್ಯ ರಸ್ತೆಗೆ ತಾಗಿಕೊಂಡು ಇರುವ ಸರ್ಕಾರದ ಹೊಸ ಜಾಗದಲ್ಲಿ ಮತ್ತೊಂದು ಕಸದ ಕೇಂದ್ರ ಮಾಡಳು ಮಂಗಳೂರು ಮಹಾನಗರಪಾಲಿಕೆ ಅನುಮತಿ ನೀಡಿದೆ. ಸುಮಾರು 40 ಎಕರೆ ಸ್ಥಳದಲ್ಲಿ ತುಂಬಿರುವ ಕಸ ತೆಗೆಯುತ್ತಿದ್ದಾರೆ. ಅಲ್ಲಿ ಎಕರೆಗಟ್ಟಲೆ ಸ್ಥಳ ಇರುವಾಗ, ಪುನಹ ಹೊಸ ಸ್ಥಳದಲ್ಲಿ ಕಸದ ಕೇಂದ್ರ ಮಾಡುವ ಮಹಾನಗರ ಪಾಲಿಕೆ ನಿರ್ಧಾರವನ್ನು, ಇಂದು ನಡೆದ ಕಾಂಗ್ರೆಸ್ ವಾರ್ಡ್ ಸಮಿತಿ ಸಭೆಯಲ್ಲಿ ತೀವ್ರವಾಗಿ ವಿರೋಧಿಸುವ ನಿರ್ಣಯ ಕೈಗೊಳ್ಳಲಾಯಿತು. ಸಾರ್ವಜನಿಕರ ಸಹಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಮತ್ತು, ಜಿಲ್ಲೆಯ ಹಿರಿಯ ಹೋರಾಟಗಾರ ಎಂ ಜಿ ಹೆಗಡೆ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ನಿರ್ಧಾರ ಮಾಡಲಾಯಿತು.ಈಗಾಗಲೇ ಇರುವ 40 ಎಕ್ರೆ ಸ್ಥಳದಲ್ಲೇ ಕಸ ವಿಲೇವಾರಿ ಆಗಬೇಕು, ನೂತನವಾಗಿ ಗುರುತಿಸಿದ ಸ್ಥಳದಲ್ಲಿ, ಮಿನಿ ಮಾರುಕಟ್ಟೆ, ನಾಡ ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಬೇಕು ಎಂಬ ಬೇಡಿಕೆ ಇಡಲಾಗಿದೆ.ಕಾಂಗ್ರೆಸ್ ರಾಜ್ಯ ವಕ್ತಾರ ಎಂ…

Read More

ಮಂಗಳೂರು: ಕಿನ್ನಿಗೋಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಿನ್ನಿಗೋಳಿಯ ಪಿಂಟೋ ಗಾರ್ಡನ್ ಮಾಲೀಕ ಉದ್ಯಮಿ ರಾಕೀ ಪಿಂಟೋ (68) ಎಂಬಾತನ ಮೇಲೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಕೆಲಸ ಮಾಡಿಕೊಂಡಿದ್ದ ಬಾಲಕಿಯ ತಾಯಿ ಈ ಬಗ್ಗೆ ದೂರು ನೀಡಿದ್ದು, ಬಾಲಕಿಯನ್ನು ಶಾಲೆಗೆ ಬಿಡುವ ನೆಪದಲ್ಲಿ ಕಾರಿನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸೆಗಿದ್ದಾರೆ ಎಂದು ತಾಯಿ ದೂರು ನೀಡಿದ ಹಿನ್ನಲೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಂತೆ ಕಾರು ಸಹಿತ ರಾಕಿ ಪಿಂಟೋ ಅವರನ್ನು ಬಂಧಿಸಲಾಗಿದ್ದು, ಬಂಧನದ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಸತ್ಯ ಸತ್ಯತೆ ಹೆಚ್ಚಿನ ಪೋಲಿಸ್ ತನಿಖೆಯಿಂದ ತಿಳಿದು ಬರಲಿದೆ.

Read More