ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಮಂಗಳೂರು ಇದರ ನೀರುಮಾರ್ಗ ಶಾಖೆಯ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ 113ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು 2026ರ ಆಗಸ್ಟ್ 8ರಂದು (ಶನಿವಾರ) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಸುಬ್ರಹ್ಮಣ್ಯ ಭಜನಾ ಮಂದಿರ ಸಭಾಭವನ, ನೀರುಮಾರ್ಗ ಇಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ಮಂಗಳೂರು ಮೆಡಿಕಲ್ ಕಾಲೇಜು, ಮಂಗಳೂರು ಆಸ್ಪತ್ರೆ ಹಾಗೂ ಮಂಗಳೂರು ಕಿಡ್ನಿ ಫೌಂಡೇಶನ್, ಕದ್ರಿ ಇವುಗಳ ನುರಿತ ವೈದ್ಯರ ತಂಡದಿಂದ ವಿವಿಧ ವೈದ್ಯಕೀಯ ಸೇವೆಗಳು ಲಭ್ಯವಿರಲಿವೆ. ಅವುಗಳಲ್ಲಿ:
ನೇತ್ರ ತಪಾಸಣೆ
ಅಗತ್ಯವಿರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ
ಮಧುಮೇಹ ತಪಾಸಣೆ
ರಕ್ತದೊತ್ತಡ (ಬಿ.ಪಿ.) ತಪಾಸಣೆ
ಸಾಮಾನ್ಯ ವೈದ್ಯಕೀಯ ಸಲಹೆ
ಕಿವಿ, ಮೂಗು ಹಾಗೂ ಗಂಟಲು ತಪಾಸಣೆ
ಹಾಳಾದ ಹಲ್ಲುಗಳನ್ನು ಕೀಳುವುದು
ಹುಳುಕು ಹಲ್ಲುಗಳಿಗೆ ಫಿಲ್ಲಿಂಗ್ ಮಾಡುವುದು
ಹಲ್ಲುಗಳ ಸ್ವಚ್ಛತೆ (ಸ್ಕೇಲಿಂಗ್)
ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡ್ ವಿತರಣೆ
ಇತರೆ ವೈದ್ಯಕೀಯ ಸೇವೆಗಳು
ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಣೆ ಸಹ ಮಾಡಲಾಗುವುದು.
ಇದು ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ 113ನೇ ಉಚಿತ ವೈದ್ಯಕೀಯ ಶಿಬಿರವಾಗಿದ್ದು, ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ (ರಿ.), ನೀರುಮಾರ್ಗ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ (ರಿ.), ಸುಬ್ರಹ್ಮಣ್ಯ ನಗರ, ನೀರುಮಾರ್ಗ ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ.
ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಈ ಉಚಿತ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

