ಉಡುಪಿ, ಸೆ.18: ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಅದ್ದೂರಿ ವಿಜಯೋತ್ಸವ ನಡೆಯಿತು.
ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಗರದ ಕ್ಲಾಕ್ ಟವರ್ ಎದುರು ತುಳುನಾಡು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಕಳೆದ 17 ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನಡೆದ ನಿರಂತರ ಹೋರಾಟಕ್ಕೆ ಈ ನಿರ್ಧಾರ ಮಹತ್ವದ ಮೈಲಿಗಲ್ಲಾಗಿದೆ ಎಂದು ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, “ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ತುಳುವರ ಹಲವು ವರ್ಷಗಳ ಕನಸು ನನಸಾದ ಐತಿಹಾಸಿಕ ಕ್ಷಣ. ತುಳು ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಯ ಸಂರಕ್ಷಣೆಗೆ ಈ ನಿರ್ಧಾರ ಹೊಸ ಶಕ್ತಿ ನೀಡಲಿದೆ” ಎಂದರು.
ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಮಾತನಾಡಿ, “ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಹಾಗೂ ತುಳು ಭಾಷಾಭಿಮಾನಿಗಳು ನಿರಂತರವಾಗಿ ನಡೆಸಿಕೊಂಡು ಬಂದ ಹೋರಾಟಕ್ಕೆ ಇಂದು ಫಲ ದೊರೆತಿದೆ. ಇದು ತುಳುವರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಗೌರವವಾಗಿದೆ” ಎಂದು ಹೇಳಿದರು.

ತುಳು ಭಾಷೆಯ ಆಡಳಿತಾತ್ಮಕ ಬಳಕೆಗೆ ಅಧಿಕೃತ ಮಾನ್ಯತೆ ದೊರಕಿರುವುದರಿಂದ ಮುಂದಿನ ದಿನಗಳಲ್ಲಿ ತುಳು ಭಾಷೆಯ ಅಭಿವೃದ್ಧಿಗೆ ಇನ್ನಷ್ಟು ಅವಕಾಶಗಳು ಸೃಷ್ಟಿಯಾಗಲಿವೆ. ಶಾಲಾ-ಕಾಲೇಜು, ಆಡಳಿತ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತುಳು ಭಾಷೆಯ ಬಳಕೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖಂಡರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ತುಳುವರ ಹಕ್ಕಿನ ಹೋರಾಟಕ್ಕೆ ಹೊಸ ಅಧ್ಯಾಯ
ತುಳು ಭಾಷೆ ಕೇವಲ ಸಂವಹನದ ಭಾಷೆಯಲ್ಲ. ಕರಾವಳಿಯ ಜನಜೀವನ, ದೈವಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ, ಜನಪದ ಸಂಸ್ಕೃತಿ ಹಾಗೂ ಸಾವಿರಾರು ವರ್ಷಗಳ ಪರಂಪರೆಯನ್ನು ಒಳಗೊಂಡಿರುವ ಜೀವಂತ ಭಾಷೆಯಾಗಿದೆ. ಇಂತಹ ಶ್ರೀಮಂತ ಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ತುಳುನಾಡಿನ ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆಗೆ ಮಹತ್ವದ ಗೌರವವಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮಿ ನಗರ, ಈಶ್ವರ್ ಚಿಡಪಾಡಿ, ತುಳುವ ಸಿರಿ ಚಾವಡಿ ಜಿಲ್ಲಾ ಕಾರ್ಯಅಧ್ಯಕ್ಷರು, ವಿಜಯ್ ಶೆಟ್ಟಿ ಸಾರಥ್ಯ ನಮ್ಮ ಉಡುಪಿ ಜವನೆರ್ ಪಿಲಿ ನಲಿಕೆ , ರತ್ನಾಕರ ಮೊಗವಿರ ಜೈ ಕರ್ನಾಟಕ, ಪ್ರಕಾಶ ಸಜ್ಜನ ಗೌರವಧ್ಯಕ್ಷರು ಜೈ ಕರ್ನಾಟಕ, ರತ್ನಕರ ಮೊಗವೀರ ಉಡುಪಿ ಜಿಲ್ಲಾ ಸಂಚಾಲಕರು ಜೈ ಕರ್ನಾಟಕ,ಮೋಹನ್ ಕಲ್ಮಡಿ, ತುಳುಸಿರಿ ಚಾವಡಿ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ದೈವಾರಾಧನೆದ ವಿನೋದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರು, ಮನೋಜ್ ಸುಭಾಷ್ ಜಿಲ್ಲಾ ಜೊತೆ ಕಾರ್ಯದರ್ಶಿ, ಶಂಕರ್ ಉಡುಪಿ, ಸಂಘಟನಾ ಕಾರ್ಯದರ್ಶಿ, ಕೃಷ್ಣ ಮಾರ್ಪಳ್ಳಿ ಸಹ ಕಾರ್ಯದರ್ಶಿ, ಶರತ್ ರಾಜ್ ಆರೂರು ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರು , ನಿತಿನ್ ಶೆಟ್ಟಿ ಕಾಪು ತಾಲೂಕು ಘಟಕದ ಅಧ್ಯಕ್ಷರು , ಅನುಸೂಯ ಶೆಟ್ಟಿ ಕಾಪು ತಾಲೂಕು ಮಹಿಳಾ ಅಧ್ಯಕ್ಷರು ,ಕಾರ್ತಿಕ್ ಕುಲಾಲ್ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರು ಗುಣಕಾರ್ ಹಲಕ್ಕಿ, ಕೃಷ್ಣನಂದ್ ನಾಯಕ್ ಬೈರಂಪಳ್ಳಿ ತಾಲೂಕು ಘಟಕದ ಅಧ್ಯಕ್ಷರು, ನಿಶಾನ್ ಪೂಜಾರಿ ಪ್ರಧಾನ ಕಾರ್ಯದರ್ಶಿ , ವಿಜಯ್ ಆರೂರು, ರಾಕೇಶ್ , ರವಿ, ರಮೇಶ್, ಗೋಪಾಲ್ ನಾಯ್ಕ್, ದಿನೇಶ್ ಆಚಾರ್ಯ, ಉಮೇಶ್ ಬೈಕಾಡಿ, ಅಜಯ್ ಕುಲಾಲ್ , ಸಚಿನ್ ಕುಮಾರ್ ಶೆಟ್ಟಿ, ಮಂಜುಳಾ ಪೂಜಾರಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ, ಜ್ಯೋತಿ ಆರ್, ಪುಷ್ಪ, ಸುಲೋಚನಾ, ರೋಹಿನಿ ಶೆಟ್ಟಿ, ಶಶಿಕಲಾ ಶೆಟ್ಟಿ, ರೋಷನ್ ಬಲ್ಲಾಳ್, ಈಶ್ವರ್ ಚಿಡಪಾಡಿ, ತುಳುವ ಸಿರಿ ಚಾವಡಿ ಜಿಲ್ಲಾ ಕಾರ್ಯಾಧ್ಯಕ್ಷ ವಿಜಯ್ ಶೆಟ್ಟಿ, ನಮ್ಮ ಉಡುಪಿ ಜವನೆರ್ ಪಿಲಿ ನಲಿಕೆ ಸಂಘಟನೆಯ ಪ್ರಮುಖರು, ರತ್ನಾಕರ ಮೊಗವೀರ, ಜೈ ಕರ್ನಾಟಕದ ಗೌರವಾಧ್ಯಕ್ಷ ಪ್ರಕಾಶ್ ಸಜ್ಜನ್, ಜೈ ಕರ್ನಾಟಕದ ಉಡುಪಿ ಜಿಲ್ಲಾ ಸಂಚಾಲಕ ರತ್ನಾಕರ ಮೊಗವೀರ, ಮೋಹನ್ ಕಲ್ಮಡಿ, ತುಳುಸಿರಿ ಚಾವಡಿ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ದೈವಾರಾಧನೆದ ವಿನೋದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮನೋಜ್, ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಷ್, ಸಂಘಟನಾ ಕಾರ್ಯದರ್ಶಿ ಶಂಕರ್ ಉಡುಪಿ, ಸಹ ಕಾರ್ಯದರ್ಶಿ ಕೃಷ್ಣ ಮಾರ್ಪಳ್ಳಿ ಉಪಸ್ಥಿತರಿದ್ದರು.
ಅದೇ ರೀತಿ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಶರತ್ ರಾಜ್ ಆರೂರು, ಕಾಪು ತಾಲೂಕು ಘಟಕದ ಅಧ್ಯಕ್ಷ ನಿತಿನ್ ಶೆಟ್ಟಿ, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್, ಉಪಾಧ್ಯಕ್ಷ ಗುಣಕಾರ್ ಹಲಕ್ಕಿ, ಬೈರಂಪಳ್ಳಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಪ್ರಧಾನ ಕಾರ್ಯದರ್ಶಿ ನಿಶಾನ್ ಪೂಜಾರಿ, ವಿಜಯ್ ಆರೂರು, ರಾಕೇಶ್, ರವಿ, ರಮೇಶ್, ಗೋಪಾಲ್ ನಾಯ್ಕ್, ದಿನೇಶ್ ಆಚಾರ್ಯ, ಉಮೇಶ್ ಬೈಕಾಡಿ, ಅಜಯ್ ಕುಲಾಲ್, ಸಚಿನ್ ಕುಮಾರ್ ಶೆಟ್ಟಿ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಮಂಜುಳಾ ಪೂಜಾರಿ, ಜ್ಯೋತಿ ಆರ್., ಪುಷ್ಪ, ಸುಲೋಚನಾ, ರೋಹಿನಿ ಶೆಟ್ಟಿ, ಶಶಿಕಲಾ ಶೆಟ್ಟಿ, ರೋಷನ್ ಬಲ್ಲಾಳ್ ಸೇರಿದಂತೆ ತುಳುನಾಡು ರಕ್ಷಣಾ ವೇದಿಕೆಯ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ತುಳುಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ನಡೆದ ಈ ವಿಜಯೋತ್ಸವವು ಉಡುಪಿಯಲ್ಲಿ ತುಳುವರ ಭಾಷಾಭಿಮಾನ ಮತ್ತು ಒಗ್ಗಟ್ಟಿನ ಪ್ರತೀಕವಾಗಿ ಗಮನ ಸೆಳೆಯಿತು.

