ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ರೇಮಂಡ್ಸ್ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಸಪ್ಟೆಂಬರ್ 19ರಂದು ಸೇಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರನಲ್ಲಿ ನಡೆಯಿತು.

ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡ ಭಾವನೆ, ನಾಯಕತ್ವ ,ಆತ್ಮವಿಶ್ವಾಸ ಹಾಗೂ ಸ್ಪೂರ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ .ಎಂದು ಗಣ್ಯರು ಅಭಿಪ್ರಾಯ ಪಟ್ಟರು. ವಿವಿಧ ಕಾಲೇಜುಗಳ ಬಾಲಕರು ಬಾಲಕಿಯರು ಉತ್ಸಾಹದಿಂದ ಪಂದ್ಯಾಟದಲ್ಲಿ ಪಾಲ್ಗೊಂಡರು.

ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಸಾಧನ ಬಿ ಎಸ್ ರವರು ಅತಿಥಿಗಳು, ಕ್ರೀಡಾಪಟುಗಳು ದೈಹಿಕ ಶಿಕ್ಷಣ ಉಪನ್ಯಾಸಕರನ್ನು ಮತ್ತು ಎಲ್ಲಾ ಕ್ರೀಡಾಭಿಮಾನಿಗಳನ್ನು ಸ್ವಾಗತಿಸಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ಸಿಸಿಲಿಯ ಮೆಂಡೋನ್ಸ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮಾನ್ ವಿಕ್ರಂ sports ಕಾರ್ಡಿನೇಟರ್ ಮಂಗಳೂರು ವಲಯ ಹಳೆಯ ವಿದ್ಯಾರ್ಥಿ ಶ್ರೀಮಾನ್ ಯಜ್ಞೇಶ್ ಪಿಟಿಎ ಉಪಾಧ್ಯಕ್ಷರಾದ ಶ್ರೀ ಎಕೆ ಮೈಯದಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು

ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಸಂತ ಅಲೋಶಿಯಸ್
ಪದವಿಪೂರ್ವ ಕಾಲೇಜು ಮತ್ತು ದ್ವಿತೀಯ ಬಹುಮಾನ ಪದವಿ ಪೂರ್ವ ಕಾಲೇಜು ಬಾಲಕರು ಪಡೆದರು ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ದ್ವಿತೀಯ ಬಹುಮಾನ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜು, ಬಾಲಕಿಯರು ಪಡೆದರು .ಸಂಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಶ್ರೀಮತಿ ಮಮಿತಾ ಅಮೀನ್ ಅವರು ನಿರೂಪಿಸಿದರು ಕೊನೆಯಲ್ಲಿ ವಂದನಾಪಣಿ ಸಲ್ಲಿಸಿ ಪಂದ್ಯಾಟದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಪಂದ್ಯಾಟವು ಯಶಸ್ವಿಯಾಗಿ ನಡೆಯಿತು.


