ರಾಷ್ಟ್ರೀಯ ವೈದ್ಯರ ದಿನಾಚರಣೆಯ ರಾಷ್ಟ್ರ ಪುರಸ್ಕಾರ ಡಾ ಕುಲಾಲ್ ಅವರಿಗೆ
ನೂರು ವರ್ಷಗಳ ಸಂಭ್ರಮದ ಹೊಸ್ತಿಲಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘ ತನ್ನ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಸಮುದಾಯ ಸೇವಾ ಪುರಸ್ಕಾರಕ್ಕೆ
ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ಆಯ್ಕೆಮಾಡಿದ್ದು
ಅವರ ಒಡನಾಟದಲ್ಲಿ ಇರುವ ಕರಾವಳಿ ಮಲೆನಾಡು ಹಾಗು ರಾಜ್ಯದ ಎಲ್ಲಾ ವರ್ಗಗಳ ಹಿತೈಷಿಗಳಿಗೆ ಹೆಮ್ಮೆಯ ವಿಚಾರ
ಸಮಾಜ ಮುಖಿ ವೈದ್ಯಕೀಯ ಸೇವೆ, ವೈದ್ಯಕೀಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ಸಿಡಿಲಬ್ಬರದ ಸಂಘಟಕ, ನೇರ ಮಿಂಚಿನ ಮಾತು, ದಿಟ್ಟ ಸ್ಪಷ್ಟ ಬರಹ, ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಟ ಮಾಡಬಲ್ಲ ವೈದ್ಯ ಎಂಬ ಖ್ಯಾತಿಯ ಡಾ ಕುಲಾಲ್, ಐಎಂಎ, ಕುಟುಂಬ ವೈದ್ಯರ ಸಂಘ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕನ್ನಡಕಟ್ಟೆ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ವೈದ್ಯ ಬರಹಗಾರರ ಬಳಗ, ಯುವ ವೇದಿಕೆ ಸಹಿತ ನೂರಾರು ಸಂಘಟನೆಗಳ ಜೊತೆ ಸದ್ದಿಲ್ಲದೇ ದುಡಿಯುತ್ತಾ, ತನು ಮನ ಧನಗಳ ಸಹಕಾರ ನೀಡುತ್ತಾ, ಮುಗುಳ್ನಗುತ್ತಾ ಸದ್ದಿಲ್ಲದೇ ಸುದ್ದಿಯಾದವರು. ನಾಡಿನ ಶ್ರೇಷ್ಠ ಪುರಸ್ಕಾರ ವಾದ ದೇವರಾಜ ಅರಸು ಪುರಸ್ಕಾರ, ರಾಜ್ಯ
ಐಎಂಎ ರಾಜ್ಯ ಡಾ ಬಿ ಸಿ ರಾಯ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಹೊಯ್ಸಳ ಪುರಸ್ಕಾರ, ಅಂತರಾಷ್ಟ್ರೀಯ ಆರ್ಯಭಟ ಪುರಸ್ಕಾರ, ಮಂಗಳೂರು ಐಎಂಎ ಯಿಂದ ಜೀವ ಮಾನ ಸಾಧನ ಪುರಸ್ಕಾರ ಸಹಿತ ನೂರಾರು ಗೌರವ ಪಡೆದಿರುವ ಇವರು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಡಾ ಬಿ ಸಿ ರಾಯ್ ರಾಷ್ಟ್ರ ಪುರಸ್ಕಾರವನ್ನ ಹೊಸದೆಹಲಿಯಲ್ಲಿ ಜುಲೈ ೧೩ ರಂದು ಕೇಂದ್ರಸರಕಾರದ ಪ್ರತಿನಿಧಿ ಯವರ ಉಪಸ್ಥಿತಿ ಯಲ್ಲಿ ರಾಷ್ಟ್ರೀಯ ಐಎಂಎ ನಾಯಕರ ಕೈಯಿಂದ ಸ್ವೀಕರಿಸಲಿದ್ದಾರೆ ಎಂಬುದೇ ಅವರ ಹಿತೈಷಿ ಮಿತ್ರರುಗಳಿಗೆ ಹೆಮ್ಮೆ. ವೈದ್ಯಕೀಯ ವೃತ್ತಿ ಯಲ್ಲಿ ಜೀವ ಮಾನದ ಸಾಧನೆಗೆ ಪಡೆಯುವ ಈ ಪುರಸ್ಕಾರಕ್ಕೆ ಭಾಜನಾಗುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಡಾ ಕುಲಾಲ್ ಅತಿ ಕಿರಿಯ ವಯಸ್ಸಿನ ಸಾಧಕರು.
Trending
- ಪಚ್ಚನಾಡಿಯಲ್ಲಿ ಹೊಸತಾಗಿ ಕಸ ಸಂಗ್ರಹ ಕ್ಕೆ ಅನುಮತಿ. ವಾರ್ಡ್ ಕಾಂಗ್ರೆಸ್ ತೀವ್ರ ವಿರೋಧ.
- ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ- ಉದ್ಯಮಿ ರಾಕೀ ಬಂಧನ
- ಮಂಗಳೂರು : ಸ್ಪೀಕರ್ ಯು.ಟಿ ಖಾದರ್ ರವರಿಂದ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ…!
- ಎಂ.ಆರ್. ಪಿ.ಎಲ್ ನಲ್ಲಿ ವಿಷಾನಿಲ ಸೋರಿಕೆ: ಇಬ್ಬರು ಸಿಬ್ಬಂದಿಗಳು ಸಾವು, ಓರ್ವ ಗಂಭೀರ
- ಲೋಕಅದಾಲತ್ ನಲ್ಲಿ ಗಂಡ ಹೆಂಡತಿಯ ಒಂದಾಗಿಸಿದ ಪ್ರಧಾನ ಕೌಟುಂಬಿಕ ನ್ಯಾಯಾಲಯ
- ಕರಾವಳಿ ಟೀಮ್ ನ ಅಧ್ಯಕ್ಷರಾದ ನಿಸಾರ್ ಕರಾವಳಿ ಆಜ್ಮಲ್ ಕೊಳಂಬೆ ಹಫೀಜ್ ಕೊಳಂಬೆರವರ ಸಮಾಜಮುಖಿ ಕಾರ್ಯಕ್ರಮ
- ವೆನ್ಲಾಕ್, ಲೇಡಿಗೋಶನ್ ಹಾಗು ಕೆಎಂಸಿ ಹಳೆ ವಿದ್ಯಾರ್ಥಿ ಸಂಘ ಹಾಗು ವೆನ್ಲಾಕ್ ಲೇಡಿ ಗೋಶನ್ ಆಸ್ಪತ್ರೆಗಳ 175 ನೇ ವರ್ಷದ ಆಚರಣಾ ಸಮಿತಿಯ ವತಿಯಿಂದ ಐತಿಹಾಸಿಕ ವೈದ್ಯರ ದಿನಾಚರಣೆ
- ಕೋಟ್ಯಂತರ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ