ಸಹಕಾರ ಕ್ಷೇತ್ರದಲ್ಲಿ ಹೊಸ ಹೆಜ್ಜೆ: ಗಣ್ಯರ ಉಪಸ್ಥಿತಿಯಲ್ಲಿ ನೂತನ ಸಹಕಾರಿ ಸೊಸೈಟಿ ಉದ್ಘಾಟನೆ
ಬೆಳ್ತಂಗಡಿ, ಅ. 24: ಬೆಳ್ತಂಗಡಿ ತರಿಗೆ ಪಾವತಿದಾರರ ಮತ್ತು ತರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಇದರ ಉದ್ಘಾಟನಾ ಸಮಾರಂಭವು ಶನಿವಾರ ಬೆಳ್ತಂಗಡಿಯ ಮೆಸ್ತ್ರಾ ರಸ್ತೆಯ ಶ್ರೀ ಅಯ್ಯಪ್ಪ ದೇವಸ್ಥಾನದ ಸಮೀಪವಿರುವ ಮಂಜುನಾಥ ಸ್ವಾಮಿ ಕಲಾಭವನದ ಪಿನಾಕಿ ಹಾಲ್ನಲ್ಲಿ ಅದ್ದೂರಿಯಾಗಿ ನೆರವೇರಿತು.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಅಡಿಯಲ್ಲಿ ನೋಂದಣಿಗೊಂಡಿರುವ ಈ ಸಹಕಾರಿ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಹಕಾರ ಕ್ಷೇತ್ರದ ಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಶುಭ ಹಾರೈಸಿದರು.

ಶ್ರೀ ಆಲ್ವಿನ್ ಜೆೋಯಲ್ ನೊರೊನ್ಹಾ ಅವರಿಂದ ಉದ್ಘಾಟನೆ
ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಸ್ಥಾಪಕರು ಹಾಗೂ ಡಿ.ಕೆ. ಬಿಸಿನೆಸ್ ಅಂಡ್ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆಲ್ವಿನ್ ಜೆೋಯಲ್ ನೊರೊನ್ಹಾ ಅವರು ಉದ್ಘಾಟಕರಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿಯ ಶ್ರೀ ರಕ್ಷಿತ್ ಶಿವರಾಮ್, ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಸ್. ಸತೀಶ್ ನಾಯಕ್, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಒಡಿಯೂರು ಸಹಕಾರ ಸಂಘದ ನಿರ್ದೇಶಕ ಭವಾನಿ ಶಂಕರ್, ಡಿ.ಕೆ. ಗ್ರೂಪ್ ಆಫ್ ಕಂಪನೀಸ್ನ ಮ್ಯಾನೇಜಿಂಗ್ ಪಾರ್ಟ್ನರ್ಗಳಾದ ಶ್ರೀಮತಿ ಸೌದಾ ಫಾರೂಕ್ ಮತ್ತು ಶ್ರೀ ಫಾರೂಕ್, ಹಾಗೂ ಬೆಳ್ತಂಗಡಿ ತರಿಗೆ ಪಾವತಿದಾರರ ಮತ್ತು ತರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮ್ಯಾನೇಜಿಂಗ್ ಪಾರ್ಟ್ನರ್ ಶ್ರೀ ಶ್ರೀಧರ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಸಮಾರಂಭದ ಅಂಗವಾಗಿ ಸಮಾಜಕ್ಕೆ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಸಾಧಕರಾದ ಶ್ರೀ ಪ್ರಭಾಕರ ಮಯ್ಯ ಸೂರ್ಯ (ಕೃಷಿಕರು) ಹಾಗೂ ಡಾ. ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಸಾಧಕರನ್ನು ಗೌರವಿಸುವ ಮೂಲಕ ಅವರ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಯಿತು.

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಹೊಸ ಅವಕಾಶ
ಸಹಕಾರ ತತ್ವದಡಿ ಜನರನ್ನು ಸಂಘಟಿಸಿ, ಸದಸ್ಯರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದು ಹಾಗೂ ಸಹಕಾರಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸೊಸೈಟಿಯು ಆರಂಭಗೊಂಡಿದೆ. ಸ್ಥಳೀಯ ಜನರ ಆರ್ಥಿಕ ಪ್ರಗತಿ ಮತ್ತು ಸಹಕಾರ ಕ್ಷೇತ್ರದ ಬೆಳವಣಿಗೆಗೆ ನೂತನ ಸಂಸ್ಥೆಯು ಕೊಡುಗೆ ನೀಡಲಿ ಎಂದು ಗಣ್ಯರು ಶುಭ ಹಾರೈಸಿದರು.
ಸೊಸೈಟಿಯ ಅಧ್ಯಕ್ಷ ಬದ್ರುದ್ದೀನ್ ಹಾಗೂ ಉಪಾಧ್ಯಕ್ಷ ನೇಮಿರಾಜ್ ಕಿರೋಡು ಅವರು ಅತಿಥಿಗಳು ಮತ್ತು ಸಭಿಕರನ್ನು ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸಮಾರಂಭದಲ್ಲಿ ನಿರ್ದೇಶಕರಾದ ಬಿ.ವೈ. ಯಶೋದರ ನಾಯಿರಾಯನ್, ಮುಮ್ಮತ್ತೂರು ಬೇಗಂ, ದೇವಪ್ಪ ಕೆ., ನವೀನ್ ಹೊಮ್ಮಪ್ಪ, ಸಫ್ವಾನ್ ಎನ್., ಸುಂದರ ಎನ್.ಕೆ., ಎಂ. ಜಯಂತಿ, ಸಂಜೀವನ್ ಆರ್., ಗೋವಾಳ ಬಿ., ಕೃಷ್ಣ ಕುಮಾರ್, ಶೇಖ್ ಇಬ್ರಾಹಿಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಾಗೂ ವಿವಿದ ಸಹಕಾರ ಸಂಘಗಳ ದೀಪಕ್ ಮಲ್ಲಿಕಟ್ಟೆ , ಸುಸಂತ್ ಪಂಪುವೆಲ್, ಟೆಲ್ಸನ್ , ಪ್ಲಾವಿಯ ನೊರೋನ್ಹ , ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ, ಸಾಧಕರಿಗೆ ಸನ್ಮಾನ ಹಾಗೂ ಸಹಕಾರ ಕ್ಷೇತ್ರದ ಅಭಿವೃದ್ಧಿಯ ಆಶಯದೊಂದಿಗೆ ಉದ್ಘಾಟನಾ ಸಮಾರಂಭವು ಸಂಭ್ರಮದಿಂದ ನೆರವೇರಿತು.

