ಮಂಗಳೂರು: ಸಹಕಾರ ಕ್ಷೇತ್ರದ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು ಹಾಗೂ ಸಹಕಾರ ತತ್ವಗಳ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ತುಳುನಾಡ ಸೂರ್ಯ ಪತ್ರಿಕೆ ಮತ್ತು ತುಳುನಾಡ ರಕ್ಷಣಾ ವೇದಿಕೆ (ರಿ.) ವತಿಯಿಂದ ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ–2026ರಲ್ಲಿ ಮೂರು ವಿಭಾಗಗಳಿದ್ದು, 16ರಿಂದ 23 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಯುವಜನತೆ ಮತ್ತು ಸಹಕಾರ ಕ್ಷೇತ್ರ: ಭವಿಷ್ಯದ ಸಮೃದ್ಧ ಕರ್ನಾಟಕದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ವಿಷಯ ನೀಡಲಾಗಿದೆ. ಸರ್ಕಾರಿ ನೌಕರರು ಹಾಗೂ ಸಹಕಾರ ಕ್ಷೇತ್ರದ ಸಿಬ್ಬಂದಿಗೆ ಸಹಕಾರ ಕ್ಷೇತ್ರದ ಬಲವರ್ಧನೆ, ಪಾರದರ್ಶಕ ಆಡಳಿತ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಿಬ್ಬಂದಿಗಳ ಪಾತ್ರ ಹಾಗೂ ಸಾರ್ವಜನಿಕರು, ಬರಹಗಾರರು ಮತ್ತು ಆಸಕ್ತರಿಗೆ ಸಹಕಾರದಿಂದ ಸಮೃದ್ಧಿ–ಗ್ರಾಮೀಣ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಸಾಮಾಜಿಕ ನ್ಯಾಯದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯಗಳನ್ನು ನಿಗದಿಪಡಿಸಲಾಗಿದೆ.
ಪ್ರಬಂಧಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಹಾಗೂ ಗರಿಷ್ಠ 1,000 ಪದಗಳನ್ನು ಮೀರಬಾರದು. ಸ್ವಂತ ಬರಹವಾಗಿರುವ ಪ್ರಬಂಧಗಳನ್ನು ಕೈಬರಹ ಅಥವಾ ಟೈಪ್ ಮಾಡಿ ಸಲ್ಲಿಸಬಹುದು. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಮತ್ತು ಭಾಗವಹಿಸುವ ವಿಭಾಗದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಲಾಗುವುದು. ಅರ್ಹ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಅರ್ಹ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ ನೀಡಲಾಗುತ್ತದೆ. ಆಯ್ದ ಅತ್ಯುತ್ತಮ ಪ್ರಬಂಧಗಳನ್ನು ತುಳುನಾಡ ಸೂರ್ಯ ಪತ್ರಿಕೆ ಮತ್ತು ವೆಬ್ ನ್ಯೂಸ್ನಲ್ಲಿ ಪ್ರಕಟಿಸಲಾಗುವುದು.
ರಾಜ್ಯಮಟ್ಟದ ಭಾಷಣ ಸ್ಪರ್ಧೆ–2026 ನವೆಂಬರ್ 17ರಂದು ತುಳು ಭವನದಲ್ಲಿ ನಡೆಯಲಿದೆ. 16ರಿಂದ 23 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರಾಗಿದ್ದು, ಸಹಕಾರ ಕ್ಷೇತ್ರದ ಮಹತ್ವ, ಯುವಜನತೆ ಮತ್ತು ಸಹಕಾರ ಚಳವಳಿ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಡಿಜಿಟಲ್ ಯುಗದ ಸವಾಲುಗಳು ಹಾಗೂ ಸ್ವಾವಲಂಬಿ ಭಾರತ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳಲ್ಲಿ ಕನ್ನಡದಲ್ಲಿ ಭಾಷಣ ಮಾಡಲು ಅವಕಾಶವಿದೆ. ವಿಷಯ ಮಂಡನೆ, ಭಾಷಾ ಶೈಲಿ, ಸ್ಪಷ್ಟತೆ, ಆತ್ಮವಿಶ್ವಾಸ, ಸಮಯಪಾಲನೆ ಮತ್ತು ಪ್ರಸ್ತುತತೆಯ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಎರಡೂ ಸ್ಪರ್ಧೆಗಳಿಗೆ ನೋಂದಣಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 7, 2026. ಪ್ರಬಂಧಗಳನ್ನು tulunadasurya1@gmail.com ಇಮೇಲ್ ಮೂಲಕ ಅಥವಾ 9019501165 ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 9019387676, 6362876286, 9243307481 ಹಾಗೂ 7760565977 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಹಕಾರ ಕ್ಷೇತ್ರದ ಸಿಬ್ಬಂದಿ, ಬರಹಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ಚಳವಳಿಯ ಬೆಳವಣಿಗೆಗೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಧ್ಯೇಯವಾಕ್ಯ: “ಸಹಕಾರದಿಂದ ಸಮೃದ್ಧಿ–ಸಹಭಾಗಿತ್ವದಿಂದ ಅಭಿವೃದ್ಧಿ.”

