ಮಕ್ಕಳು ಶಿಕ್ಷಣದ ಕುರಿತು ತುಂಬಾ ಉತ್ಸಾಹದಿಂದ ಮುನ್ನುಗ್ಗಬೇಕು. ಶಾಲಾ ಶಿಕ್ಷಣದೊಂದಿಗೆ ಮದ್ರಸ ಶಿಕ್ಷಣವನ್ನು ಪೂರೈಸಬೇಕು.
ಇದು ವಿಜಯದ ಹಾದಿಗೆ ಪೂರಕವಾಗಿದೆ. ಹತ್ತನೇ ತರಗತಿ ಕಲಿತು, ಹೋಗಿ ಮದ್ರಸ ಬಗ್ಗೆ ಸಂಬಂಧ ಮುರಿಯದೇ ಇರಲೂ ಶಿಕ್ಷಣವನ್ನು ಎಂದೆಂದಿಗೂ ನಿರಂತರ ಗೊಳಿಸುವ ನಿಟ್ಟಿನಲ್ಲಿ ನಮ್ಮ ಮದ್ರಸದಲ್ಲಿ ಹನ್ನೊಂದನೇ (+1) ತರಗತಿಯನ್ನು ಪ್ರಾರಂಭಿಸಿಸುತ್ತೇವೆ. ವಿದ್ಯಾರ್ಥಿಗಳು ಇದರ ಫಲ ಪಡೆಯುವಂತೆ ಮಲ್ಲಾರು – ಮಜೂರು ಬದ್ರಿಯಾ ಜುಮುಅ ಮಸ್ಜಿದ್ ಇದರ ಅಧ್ಯಕ್ಷರಾದ ಡಾ. ಎಂ.ಫಾರೂಕ್ ಚಂದ್ರನಗರ ರವರು ಹೇಳಿದರು. ಸದ್ರಿ ಮದ್ರಸದಲ್ಲಿ ಹನ್ನೊಂದನೇ ತರಗತಿ ಪ್ರಾರಂಭ ಗೊಂಡ ಸಂದರ್ಭದಲ್ಲಿ ಶುಭಾಶಂಸ ಭಾಷಣದಲ್ಲಿ ಹೇಳಿದರು. ಅದೇ ರೀತಿ 2025 -26 ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಐದು, ಏಳು, ಹತ್ತನೇ ತರಗತಿಯಲ್ಲಿ ಕಾಪು ರೇಂಜ್ ಮಟ್ಟದಲ್ಲಿ ಪ್ರಥಮ ಅಂಕ ಪಡೆದು ಮದ್ರಸಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸ್ಥಳೀಯ ಖತೀಬ್ ಅಬ್ದಲ್ ರಶೀದ್ ಸಖಾಫಿ, ಮುಖ್ಯಧ್ಯಾಪಕರಾದ ಅಬೂಬಕ್ಕರ್ ಸಅದಿ ಹಾಗೂ ಜಮಾತ್ ಸದಸ್ಯರು ಉಪಸ್ಥಿತರಿದ್ದರು

