ಮಂಗಳೂರು, ಮೇ 11 : ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಹುತಾತ್ಮ ಕೆದಂಬಾಡಿ ರಾಮಯ್ಯಗೌಡರವರ ಪ್ರತಿಮೆ ನಿರ್ಮಾಣ ಮತ್ತು ಸ್ವಾತಂತ್ಯ ಹೋರಾಟಗಾರರ ಹೆಸರು ಚಿರಸ್ಥಾಯಿಯಾಗಿ ಉಳಿಯುವಲ್ಲಿ ತನ್ನದೇ ಆದ ರೀತಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ತುಳುನಾಡ ರಕ್ಷಣಾ ವೇದಿಕೆಯ ಕಚೇರಿಗೆ ಜನಪ್ರಿಯ ನ್ಯಾಯವಾದಿಗಳಾದ ಸಮಾಜಮುಖಿ ಕೆಲಸಮಾಡುತ್ತಿರುವ ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ ಅವರು ದಿನಾಂಕ 11-05-2026 ರಂದು ಭೇಟಿ ನೀಡಿ ಸಂಘಟನೆಯ ಪ್ರಮುಖ ಪದಾಧಿಕಾರಿಗಳೊಂದಿಗೆ ಸೌಹಾರ್ದಯುತ ಸಂವಾದ ನಡೆಸಿದರು .ಜೆಡಿಎಸ್ ಸುಳ್ಯ ಪ್ರಧಾನಕಾರ್ಯದರ್ಶಿ ರಾಕೇಶ್ ಕುಂಟಿಕಾನ ಅವರು ಉಪಸ್ಥಿತರಿದ್ದರು
ಈ ವೇಳೆ ತುಳುನಾಡ ರಕ್ಷಣಾ ವೇದಿಕೆಯ ವಿವಿಧ ಸಾಮಾಜಿಕ ಚಟುವಟಿಕೆಗಳು, ಜನಪರ ಕಾರ್ಯಕ್ರಮಗಳು, ಯುವಜನರ ಸಂಘಟನಾ ಬಲವರ್ಧನೆ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಕೈಗೊಳ್ಳಲಾಗುತ್ತಿರುವ ಕಾರ್ಯಗಳ ಕುರಿತು ಚರ್ಚೆ ನಡೆಯಿತು. ಸಮಾಜಮುಖಿ ಚಟುವಟಿಕೆಗಳಲ್ಲಿ ಪರಸ್ಪರ ಸಹಕಾರದ ಅಗತ್ಯತೆಯನ್ನೂ ನಾಯಕರು ಅಭಿಪ್ರಾಯಪಟ್ಟರು.
ಭೇಟಿ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಉಪಸ್ಥಿತರಿದ್ದರು ಸಂಘಟನೆಯ ಮುಂದಿನ ಯೋಜನೆಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ರೂಪಿಸಲಾಗಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಸುಕುಮಾರ್ ಕೋಡ್ತುಗುಳಿ ಅವರು ತುಳುನಾಡ ರಕ್ಷಣಾ ವೇದಿಕೆಯ ಸಾಮಾಜಿಕ ಬದ್ಧತೆ ಹಾಗೂ ಜನಸೇವಾ ಕಾರ್ಯಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ಜನಪರ ಕಾರ್ಯಗಳಲ್ಲಿ ಸಹಯೋಗ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




