ಮಂಗಳೂರು, ಜೂನ್ 27: ಕರ್ನಾಟಕ ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕವನ್ನು ಮತ್ತಷ್ಟು ಸಂಘಟಿತವಾಗಿ ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಮಹಿಳಾ ವಿಭಾಗದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ರಮೀಝಾ ಬಾನು, ಕಾರ್ಯಾಧ್ಯಕ್ಷರಾಗಿ ಪ್ರಿಯ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಜೈನ್, ಹಿರಿಯ ಉಪಾಧ್ಯಕ್ಷರಾಗಿ ಚೂಡಮಣಿ ಎಲ್. ಬಂಗೇರ ಅವರನ್ನು ನೇಮಕ ಮಾಡಲಾಗಿದೆ.
ಉಪಾಧ್ಯಕ್ಷೆಯರಾಗಿ ಅನಿತಾ ಭಂಡಾರ್ಕರ್ ಹಾಗೂ ಶಾರದಾ ಶೆಟ್ಟಿ, ಕಾರ್ಯದರ್ಶಿಗಳಾಗಿ ಕವಿತಾ, ಸಲೀಮಾ ಖಾದರ್ ಮತ್ತು ರಾಜಶ್ರೀ ಉಳ್ಳಾಲ್, ಸಂಘಟನಾ ಕಾರ್ಯದರ್ಶಿಗಳಾಗಿ ಪದ್ಮಮಣಿ (ಪುತ್ತೂರು), ಪ್ಲೇವಿಯನ್ ಹಾಗೂ ಮೀರಾ (ಕಿನ್ನಿಗೋಳಿ) ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ, ಜೆಡಿಎಸ್ ತಾಲೂಕು ಮಹಿಳಾ ಘಟಕಗಳ ಅಧ್ಯಕ್ಷೆಯರನ್ನೂ ನೇಮಕ ಮಾಡಲಾಗಿದ್ದು, ಅವರ ವಿವರಗಳು ಈ ಕೆಳಗಿನಂತಿವೆ:
• ಪುತ್ತೂರು: ಮೀನಾಕ್ಷಿ ಎಂ.
• ಸುಳ್ಯ: ಡೈಝಿ ರೋಹನ್
• ಕಡಬ: ಹೇಮಲತಾ
• ಮಂಗಳೂರು ಉತ್ತರ: ಮೋಹಿನಿ ಶೆಟ್ಟಿ
• ಮಂಗಳೂರು ದಕ್ಷಿಣ: ವೀಣಾ ಶೆಟ್ಟಿ
• ಉಳ್ಳಾಲ: ಜೋಹರ
• ಮುಲ್ಕಿ: ಶಶಿಪ್ರಭಾ ಶೆಟ್ಟಿ
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ನಾಸೀರ್ ಅವರಿಂದ ಈ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ರಶ್ಮಿ ರಾಮೇ ಗೌಡ ಅವರ ಅನುಮೋದನೆಗಾಗಿ ಸಲ್ಲಿಸಲಾಗಿದೆ.


ಜಿಲ್ಲಾ ಮತ್ತು ರಾಜ್ಯ ನಾಯಕತ್ವದ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಮಹಿಳಾ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಜನತಾದಳ (ಜಾತ್ಯತೀತ) ಪಕ್ಷದ ತತ್ವ-ಸಿದ್ಧಾಂತಗಳು ಮತ್ತು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.





