ಇರಾನ್ನಲ್ಲಿ ನಡೆಯುತ್ತಿರುವ ನಿರಂತರ ಯುದ್ಧದಿಂದ ಉಡುಪಿ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರಿನ ಸಮಸ್ಯೆ ಉಲ್ಬಣಿಸುತ್ತಿದೆ. ಸಾಮಾನ್ಯ ಜನರ ಜೀವನಕ್ಕೂ ಇದರ ಬಿಸಿ ತಟ್ಟುತ್ತಿದೆ. ಈವರೆಗೆ ಗೃಹ ಬಳಕೆಯ ಸಿಲಿಂಡರ್ ಆದರೂ ಸಿಗುತ್ತಿತ್ತು. ಈಗ ಅದರ ಲಭ್ಯತೆಯು ಇಲ್ಲದಂತಾಗಿ ಜನಸಾಮಾನ್ಯರಿಗೂ ಸಹ ಅಡುಗೆ ಮಾಡಲಾಗದೆ ಪರಿತಪಿಸುವಂತಾಗಿದೆ. ಸಣ್ಣ ಹೋಟೆಲ್ಗಳು, ದೊಡ್ಡ ಹೋಟೆಲ್ಗಳು, ಲಾಡ್ಜ್ಗಳು, ಸ್ವಂತ ಮನೆಯಲ್ಲಿ ವಾಸಿಸುವವರು, ಬಾಡಿಗೆ ಮನೆಯಲ್ಲಿರುವ ಜನಸಾಮಾನ್ಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸಹ ಸಿಲಿಂಡರಿನ ಸಮಸ್ಯೆಗೆ ಸಿಲುಕಿದ್ದಾರೆ. ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ವರ್ಷವೂ ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ, ವಿವಾಹ ಮುಂತಾದ ಸಮಾರಂಭ ನಡೆಯುವ ಕಾಲವಾಗಿದ್ದು, ಈಗ ಅದಕ್ಕೂ ಅನಿಲ ಪೂರೈಕೆಯ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ಸಭೆ ಸಮಾರಂಭವವನ್ನು ನಡೆಸಲಾಗದೆ ಸಿಲಿಂಡರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಗಮನಹರಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಇವರ ವಿನಂತಿ.
Trending
- ತುಳು ಭಾಷಾ ಕಲಿಕಾ ಪುಸ್ತಕ ಬಿಡುಗಡೆ
- ಉಡುಪಿ ಜಿಲ್ಲೆಯಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ! ಹೆಮಂತ್ ಪೂಜಾರಿ ಹೆಸರಿನಲ್ಲಿ ₹5 ಕೋಟಿ ಸುಲಿಗೆಗೆ ಬೇಡಿಕೆ
- ಎಲ್ಲರ ಪ್ರೀತಿ, ಆಶೀರ್ವಾದದಿಂದ ಮತ್ತೆ ನಿಮ್ಮೊಂದಿಗೆ ಬೆರೆಯುವಂತಾಗಿದೆ: ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್
- ವೈದ್ಯರ ಕ್ಲಿನಿಕ್ಗೆ ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಯೋಗಿಶ್ ಶೆಟ್ಟಿ ಜಪ್ಪು ಆಗ್ರಹ
- ಗ್ರಾಹಕರ ಹಕ್ಕುಗಳ ರಕ್ಷಣೆಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಲಿ: ಯೋಗಿಶ್ ಶೆಟ್ಟಿ ಜಪ್ಪು ಆಗ್ರಹ ಹಾಲ್ಮಾರ್ಕಿಂಗ್, ಗುಣಮಟ್ಟದ ಉತ್ಪನ್ನಗಳ ಮಾರಾಟ ಮತ್ತು ಗ್ರಾಹಕ ಜಾಗೃತಿಗೆ ಒಂಬತ್ತು ಪ್ರಮುಖ ಬೇಡಿಕೆಗಳೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ
- ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್ ನೇಮಕ ಮಾಜಿ ಸಂಸದೆ, ಶಿಕ್ಷಣ ತಜ್ಞೆ ಡಾ. ಸುಧಾ ಯಾದವ್ಗೆ ಮಹತ್ವದ ಜವಾಬ್ದಾರಿ; ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲೆ
- ನಮ್ಮ ಕರ್ನಾಟಕ ಸೇನೆಯ ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ
- ತುಳುನಾಡ ರಕ್ಷಣಾ ವೇದಿಕೆಯ ದುಬೈ ಘಟಕದ ಅಧ್ಯಕ್ಷ, ತುಳು ಕಲಾವಿದ ಅಶೋಕ್ ಬೈಲೂರು ಅವರಿಗೆ ಸನ್ಮಾನ ತುಳು ಭಾಷೆ, ಕಲೆ ಮತ್ತು ಸಂಸ್ಕೃತಿಯ ಉಳಿವಿನಲ್ಲಿ ಕಲಾವಿದರ ಪಾತ್ರ ಮಹತ್ವದ್ದು – ಫ್ರ್ಯಾಂಕಿ ಡಿಸೋಜ ಕೊಳಲಗಿರಿ

