ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕದ ಪ್ರಮುಖ ಪದಾಧಿಕಾರಿಗಳ ಸಭೆಯು ಉಡುಪಿ ಜಿಲ್ಲಾ ವೈದ್ಯರ ಘಟಕದ ಡಾ . ಸಂದೀಪ್ ಸನಿಲ್ ರವರ ಅಧ್ಯಕ್ಷತೆಯಲ್ಲಿ. ದಿನಾಂಕ 28-11-2024ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಉಡುಪಿ ಜಿಲ್ಲಾ ತುರವೇ ಕಚೇರಿಯಲ್ಲಿ ಜರಗಿತು. ಸಭೆಯಲ್ಲಿ ಮಾತನಾಡಿದ ತುರವೇ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ನಮ್ಮ ಸಂಘಟನೆ ನಿಷ್ಟಾವಂತ ಕಾರ್ಯಕರ್ತರ, ಪದಾಧಿಕಾರಿಗಳ, ಹಿತೈಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅವರ ಬೆಂಬಲಕ್ಕೆ ನಮ್ಮ ಸಂಘಟನೆಯ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ವಿವಿದ ಘಟಕ ಸದಾ ಸಿದ್ಧರಿದ್ದೇವೆ ಎಂದರು. ಸಭೆಯಲ್ಲಿ ಕೇಂದ್ರೀಯ ಮಂಡಳಿ ಸಂಘಟನೆ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ರಾಜ್ಯ ವೈದ್ಯರ ಘಟಕ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ , ಕುಂದಾಪುರ ತಾಲೂಕು ಘಟಕ ಅಧ್ಯಕ್ಷ ಸತೀಶ್ ಖಾರ್ವಿ ,ಡಾ. ಸೂರಜ್ ಎಕೆ , ಡಾ. ಪ್ರವೀಣ್ ಶೆಟ್ಟಿ ಡಾ. ಚಂದ್ರಶೇಖರ್ ಶೆಟ್ಟಿ , ಡಾ. ರಾಜೇಶ್ ಶೆಟ್ಟಿ , ಡಾ. ಸುರೇಶ್ ಕುಮಾರ್ , ಡಾ. ಸುಮಂಗಳ , ಡಾ. ಪ್ರಸನ್ನ ಶೆಟ್ಟಿ , ಡಾ. ಪೌರವ್ ಶೆಟ್ಟಿ , ಡಾ. ಸಂದೀಪ್ ಶೆಟ್ಟಿ ಡಾ. ಶ್ರೀಪಾದ್ ಹೆಗ್ಡೆ , ಡಾ ಶ್ರೀನಿವಾಸ್, ಕೌಶೀಕ್ ಐತಾಲ್, ಡಾ. ಶ್ರೇಹಾಸ್ ಯು.ಕೆ. ಸೇರಿದಂತೆ ಪ್ರಮುಖ ವೈದ್ಯರ ಘಟಕ ಪದಾಧಿಕಾರಿಗಳು ಭಾಗವಹಿಸಿದ್ದು ಸಲಹೆ ಸೂಚನೆ ನೀಡಿದರು.