ಮಂಗಳೂರು: ನಂದಿಗುಡ್ಡದಲ್ಲಿ ನೂತನವಾಗಿ ಆರಂಭಗೊಂಡ ಝೀವಾ ಬುಟೀಕ್ ಆ್ಯಂಡ್ ಸ್ವೀಯಿಂಗ್ ಸ್ಟುಡಿಯೋ ಹಾಗೂ ಐಬಾಲ್ ಆಪ್ಟಿಕಲ್ಸ್ ಸಂಸ್ಥೆಗಳ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮವು ನವೆಂಬರ್ 7ರಂದು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ. ಫಾರೂಕ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಧನರಾಜ್, ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ಸಂಸ್ಥೆಗಳಿಗೆ ಶುಭ ಹಾರೈಸಿದರು.

ನಂದಿಗುಡ್ಡದ ನಂದಿ ಹಿಲ್ಸ್ನ ಕೋಟಿ ಚೆನ್ನಯ್ಯ ವೃತ್ತದ ಸಮೀಪದ ಮೊದಲ ಮಹಡಿಯಲ್ಲಿ ಆರಂಭಗೊಂಡಿರುವ ಜಿವಾ ಬೊಟಿಕ್ ಮತ್ತು ಸ್ವೀಯಿಂಗ್ ಸ್ಟುಡಿಯೋದಲ್ಲಿ ಆಧುನಿಕ ಫ್ಯಾಷನ್ ವಿನ್ಯಾಸಗಳು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶೇಷ ಹೊಲಿಗೆ ಹಾಗೂ ವೈವಿಧ್ಯಮಯ ಉಡುಪುಗಳ ಸೇವೆ ಲಭ್ಯವಿರಲಿದೆ. ಅದೇ ರೀತಿ ಐಬಾಲ್ ಆಪ್ಟಿಕಲ್ಸ್ನಲ್ಲಿ ಗುಣಮಟ್ಟದ ಕನ್ನಡಕಗಳು ಹಾಗೂ ಕಣ್ಣಿನ ದೃಷ್ಟಿ ಆರೈಕೆಗೆ ಸಂಬಂಧಿಸಿದ ಆಪ್ಟಿಕಲ್ ಸೇವೆಗಳನ್ನು ಒದಗಿಸಲಾಗುತ್ತದೆ.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಸಂಸ್ಥೆಗಳ ಬೆಳವಣಿಗೆ ಹಾಗೂ ಯಶಸ್ಸಿಗೆ ಶುಭ ಹಾರೈಸಿ, ಗ್ರಾಹಕರ ವಿಶ್ವಾಸ ಗಳಿಸುವ ಮೂಲಕ ಉತ್ತಮ ಸೇವೆ ನೀಡುವಂತಾಗಲಿ ಎಂದು ಹಾರೈಸಿದರು.

ಸಂಸ್ಥೆಯ ಮಾಲಕರಾದ ಮಾಜಿ ಕೋರ್ಪೊರೇಟರ್ ರಮೀಝಾ , ನಾಸೀರ್ ಹಾಗೂ ಕುಟುಂಬದವರು ಆಗಮಿಸಿದ ಗಣ್ಯರು, ಬಂಧುಮಿತ್ರರು ಮತ್ತು ಹಿತೈಷಿಗಳನ್ನು ಅತ್ಯಂತ ಸಂತೋಷ ಹಾಗೂ ಆತ್ಮೀಯತೆಯಿಂದ ಬರಮಾಡಿಕೊಂಡರು.

ಕಾರ್ಯಕ್ರಮವು ಕುಟುಂಬದವರು, ಸ್ನೇಹಿತರು, ಹಿತೈಷಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸೌಹಾರ್ದಯುತ ವಾತಾವರಣದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.


