ಕೊಡಗು :ಮೂರ್ನಾಡು
ಆಪ್ತಮಿತ್ರ ಬಳಗ ಮೂರ್ನಾಡು ಇವರ ಸೇವಾರ್ಥವಾಗಿ ನಡೆಯುವ “ಮೂರ್ನಾಡು ಯಕ್ಷೋತ್ಸವ” ಕಾರ್ಯಕ್ರಮವು ಫೆಬ್ರವರಿ 1ರಂದು ಆದಿತ್ಯವಾರ ಸಂಭ್ರಮದಿಂದ ನಡೆಯಲಿದೆ. ಯಕ್ಷಗಾನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜನಸಾಮಾನ್ಯರಿಗೆ ಇನ್ನಷ್ಟು ಸಮೀಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಸಂಜೆ 6.00 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮೂರ್ನಾಡುವಿನಲ್ಲಿ ನಡೆಯಲಿದ್ದು ಯಕ್ಷಗಾನ ಪ್ರೇಮಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಯಕ್ಷೋತ್ಸವದ ಮುಖ್ಯ ಆಕರ್ಷಣೆಯಾಗಿ ಶ್ರೀ ಹನುಮಗಿರಿ ಮೇಳದವರಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಧಾರ್ಮಿಕ, ಪೌರಾಣಿಕ ಮಹತ್ವ ಹೊಂದಿರುವ ಈ ಪ್ರಸಂಗವು ಭಕ್ತರಿಗೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅನುಭವವನ್ನು ನೀಡಲಿದೆ.
ಕಾರ್ಯಕ್ರಮದಲ್ಲಿ ತಮಗೆಲ್ಲರಿಗೂ ಆತಿಥ್ಯವಿರಲಿದೆ. ಯಕ್ಷಗಾನ ಕಲಾವಿದರ ನೈಪುಣ್ಯ, ವೇಷಭೂಷಣ, ಸಂಗೀತ ಹಾಗೂ ಸಂಭಾಷಣೆಯ ಸೊಗಡಿನಿಂದ ಕಾರ್ಯಕ್ರಮವು ರಾತ್ರಿಯಿಡೀ ರಂಗೇರಲಿದೆ.
ಈ ಹಿನ್ನೆಲೆಯಲ್ಲಿ ಆಪ್ತಮಿತ್ರ ಬಳಗ ಮೂರ್ನಾಡು ವತಿಯಿಂದ ಯಕ್ಷಗಾನ ಅಭಿಮಾನಿಗಳು, ಕಲಾಸಕ್ತರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಯಕ್ಷೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.




