ಮಣಿಪಾಲ, ಅಕ್ಟೋಬರ್ 21 – ಮಸಾಜ್ ಪಾರ್ಲರ್ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಮಣಿಪಾಲ ಪೊಲೀಸರು ಕೊಡುಗೆ ನೀಡಿದ್ದಾರೆ. ಬಾಡಿ ಮಸಾಜ್ ಹೆಸರಿನಲ್ಲಿ ಮಹಿಳೆಯರನ್ನು ಬಳಸಿಕೊಂಡು ಅಕ್ರಮ ಲಾಭ ಗಳಿಸುತ್ತಿದ್ದೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು:
ಇಮ್ರಾನ್
ಜೈಬಾಯ್ ಅಲಿಯಾಸ್ ಎಲಿಸಾ
ದಾಳಿಯಲ್ಲಿ ನೊಂದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದು, ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಭಾರತ ದಂಡ ಸಂಹಿತೆ 143 BNS ಕಲಂ, ಹಾಗೂ ITP (Immoral Traffic Prevention) ಕಾಯ್ದೆ ಅಡಿಯಲ್ಲಿ 3, 4, 5 ಮತ್ತು 6ನೇ ಸೆಕ್ಷನ್ಗಳು ಅನ್ವಯಿಸಲಾಗಿದೆ.
ಮುಖ್ಯ ಆರೋಪಿಗಳು ಮಹೇಶ್ ಮತ್ತು ಅಶೋಕ್ ಎಂಬವರು, ತಮ್ಮ ಲಾಭಕ್ಕಾಗಿ “ಸೆಲೂನ್ & ಸ್ಪಾ ಬಾಡಿ ಮಸಾಜ್ ಸೆಂಟರ್” ನಡೆಸುತ್ತಿದ್ದು, ಇಮ್ರಾನ್ ಮತ್ತು ಎಲಿಸಾ ಅವರೊಂದಿಗೆ ಒಟ್ಟಾಗಿ ಈ ದಂಧೆಗೆ ಸಹಕರಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

ಮಣಿಪಾಲ ಪೊಲೀಸ್ ಠಾಣೆ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ದಾಳಿ ನಡೆಯಿತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.







