ಮಂಗಳೂರು: ನಮ ತುಳುವೆರ್ ಕಲಾ ಸಂಘಟನೆ (ರಿ.) ಮುದ್ರಾಡಿ ಉಡುಪಿ ವತಿಯಿಂದ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸಹಯೋಗದೊಂದಿಗೆ ದಿನಾಂಕ 2-01-2024ರಂದು ತುಳು ಭವನ ಉರ್ವಸ್ಟೊರ್ ನಲ್ಲಿ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಂಗ ನಿರ್ದೇಶಕರಾದ ಶ್ರೀ ನಾ.ದಾಮೋದರ ಶೆಟ್ಟಿ ನೆರವೇರಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ, ನ್ಯಾಯವಾದಿ ಶಶಿರಾಜ್ ಕಾವೂರು, ಅಖಿಲ ಭಾರತ ತುಳು ಒಕ್ಕೂಟ ಸಂಘಟನಾ ಕಾರ್ಯದರ್ಶಿ ರಾಜೇಶ್ ಆಳ್ವ , ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಶ್ರೀ. ಭುವನಬಿರಾಮ ಉಡುಪ ಭಾಗವಹಿಸಿದರು.
ಶ್ರೀ ಹರಿಕೃಷ್ಣ ಪುನುರೂರು, ಡಾ. ಮೂಡಂಬೈಲು ರವಿ ಶೆಟ್ಟಿ, ಪಮ್ಮಿ ಕೊಡಿಯಾಲ್ ಬೈಲ್, ಡಾ. ಮಂದಾರ ರಾಜೇಶ್ ಭಟ್, ಶ್ರೀಮತಿ ವಿದ್ಯಾ ಸಂಪತ್ ಕರ್ಕೇರ ಕೊಡಿಕಲ್ ರವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರಧಾನ ಪುರಸ್ಕಾರ ನಡೆಯಿತು.
ಸಭಾ ಕಾರ್ಯಕ್ರಮ ಬಳಿಕ ಅಂಬೆ ಎಂಬ ನಾಟಕ ಪ್ರದರ್ಶನ ನಡೆಯಿತು.