Saturday, May 25, 2024
spot_img
More

  Latest Posts

  ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕದ ಪ್ರತಿಭಟನಾ ಸಭೆ

  ಮಂಗಳೂರು: ರಾಜ್ಯ ಆಯುರ್ವೇದ ವೈದ್ಯರುಗಳ ಬಹುದಿನಗಳ ಬೇಡಿಕೆಯಾದ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಲು ಕಾನೂನಿನ್ವಯ ರಾಜ್ಯದಲ್ಲೂ ಕೂಡ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಇಂದು (03-01-2024) ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ವತಿಯಿಂದ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧ ಎದುರು ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಯಿತು.

  ಆಯುರ್ವೇದ ಚಿಕಿತ್ಸೆಯು ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದ್ದು ಅದು ಔಷಧ ಮತ್ತು ತತ್ವಶಾಸ್ತ್ರ ಎರಡರ ಸಂಮಿಶ್ರಣವಾಗಿದೆ. ಇದು ಮಾನವನ ದೈಹಿಕ, ಮಾನಸಿಕ ಮತ್ತು
  ಆಧ್ಯಾತ್ಮಿಕ ಬೆಳವಣಿಗೆಯತ್ತಾ ಮುನ್ನಡೆಸುತ್ತದೆ. ಕೊರೋನಾ ಸಂದರ್ಭದಲ್ಲಿ ನಮ್ಮ ಜೀವ ಪಣಕ್ಕಿಟ್ಟು
  ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರಿಗೆ ಹೊಸ ಜೀವನ ಕಲ್ಪಿಸಿದ್ದಲ್ಲದೆ, ಗ್ರಾಮೀಣ ಭಾಗದ ಜನರ
  ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ.

  ನಮ್ಮ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಬಾರದು ಎನ್ನುವ ರಾಜ್ಯ ಸರ್ಕಾರದ ಕಾನೂನು ನಮ್ಮ ವೃತ್ತಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಮ್ಮ ಭಾರತ ದೇಶದ ರಾಜ್ಯಗಳಾದಂತ ಮಧ್ಯಪ್ರದೇಶ, ರಾಜಾಸ್ತಾನ, ಮಹಾರಾಷ್ಟ್ರ, ಬಿಹಾರ್, ಉತ್ತರಾಖಂಡ, ತಮಿಳುನಾಡು, ಉತ್ತರಪ್ರದೇಶ ಹಾಗೇ ಹಲವು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಆಯುರ್ವೇದ ವೈದ್ಯರುಗಳಿಗೆ (B.A.M.S) ಅವಶ್ಯಕ ಅಲೋಪತಿ ಔಷಧಗಳನ್ನು ನೀಡಲು ಅನುಮತಿ ನೀಡಿರುತ್ತದೆ.

  ಆಯುರ್ವೇದ ವೈದ್ಯರು (B.A.M.S) ಪದವಿಯನ್ನು ಐದುವರೇ ವರ್ಷ ಕಲಿತು, ಸರ್ಕಾರ ಮಾನ್ಯತೆಯುಳ್ಳ ರಾಜೀವ್‌ಗಾಂಧಿ ಯುನಿರ್ವಸಿಟಿ ಹಾಗೂ KAUP Boardನಲ್ಲಿ ಪದವಿಯನ್ನು ಪಡೆದಿರುತ್ತಾರೆ. (B.A.M.S) ಕೋರ್ಸ್‌ನಲ್ಲಿ ಆಯುರ್ವೇದದ ಜೊತೆಗೆ ಮಾಡರ್ನ್ ಮೆಡಿಕಲ್ ಸೈನ್ಸ್‌ನ್ನು ಕಲಿಸಿರುತ್ತಾರೆ. 6 ತಿಂಗಳು ಕಡ್ಡಾಯ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್ ಮತ್ತು 6 ತಿಂಗಳು ಆಯುರ್ವೇದ ಚಿಕಿತ್ಸೆ ಪದ್ಧತಿಯಲ್ಲಿ ಇಂಟರ್ನ್‌ಶಿಪ್ ಮಾಡಿರುತ್ತೇವೆ. 2016ರಲ್ಲಿ ಮಾನ್ಯ ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿರುವಾಗ ಸರಕಾರಿ ಪ್ರಾಥಮಿಕ ಕೇಂದ್ರಗಳಲ್ಲಿ ಆರ್ಯುವೇದ ವೈದ್ಯರಿಗೆ ಅಲೋಪತಿ ಔಷಧ ನೀಡಲು ಪರವಾನಿಗೆ ಸಿಕ್ಕಿರುತ್ತದೆ.

  ರಾಜ್ಯದಲ್ಲಿ BAMS ವೈದ್ಯರಿಗೆ K.P.M.EA ಕಾಯ್ದೆ ಅಡಿಯಲ್ಲಿ ಪರಿವೀಕ್ಷಣ ಹೆಸರಿನಲ್ಲಿ ಆಗುತ್ತಿರುವ ಕಿರುಕುಳ ನೀಡುತ್ತಿರುವುದು ಖಂಡನೀಯವಾಗಿದೆ. ಮತ್ತು ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಆಯುಷ್ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಿಯನ್ನು ಬಳಕೆ ಮಾಡಲು ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾನೂನಿನಂತೆ ತಿದ್ದುಪಡಿಯನ್ನು ಡ್ರಗ್ಸ್ ಆಂಡ್ ಕಾಸ್ಕೆಟಿಕ್ ಆಕ್ಟ್ (Drugs & cosmatics act 1940 Rule 2EE (iii) ರನ್ವಯ ನಮ್ಮ ರಾಜ್ಯದಲ್ಲಿಯೂ ಕೂಡ ತಿದ್ದುಪಡಿ ಮಾಡಿ ಜಾರಿಗೆ ತರಬೇಕು ಹಾಗೂ ಕರ್ನಾಟಕ ರಾಜ್ಯ ಆಯುರ್ವೇದ ಯುನಾನಿ ಬೋರ್ಡ್ ಮತ್ತು ಹೋಮಿಯೋಪತಿ ಬೋರ್ಡ್‌ಗಳ ಕಾಯ್ದೆಯಲ್ಲಿ ತಿದ್ದುಪಡಿ ತಂದು ಜಾರಿಗೆ ತರಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ಮಾನ್ಯ ಮುಖ್ಯ ಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.

  ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಆಯುರ್ವೇದ ವೈದ್ಯರ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ ಹಾಗೂ ಹಕ್ಕೊತ್ತಾಯ ಸಭೆಗಳು ನಡೆಯಲಿವೆ.
  ಬರುವ ಮೇ ತಿಂಗಳಲ್ಲಿ ವೈದ್ಯರ ಹಲವಾರು ಬೇಡಿಕೆಗಳನ್ನು ಸರಕಾರದ ಗಮನಸೆಳೆಯುವ ದೃಷ್ಟಿಯಿಂದ ಬೃಹತ್ ವೈದ್ಯರ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದು. ಆ ಸಮಾವೇಶ ದಲ್ಲಿ ಸಾವಿರಾರು ವೈದ್ಯರು ಭಾಗವಹಿಸಲಿರುವರು. ಆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮಂತ್ರಿಗಳು, ಶಾಸಕರು,ಸಂಸದರು ,ಸಮಾಜದ ಗಣ್ಯ ವ್ಯಕ್ತಿಗಳ ಕೂಡುವಿಕೆಗೆ ಯೋಜನೆ ರೂಪಿಸಲಾಗಿದೆ. ಸರ್ವ ಜನರ ಸಹಕಾರದಿಂದ ಮಾತ್ರ ಸಾದ್ಯವಾಗಲಿದೆ.ಎಂದು ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಉಡುಪಿ ಜಿಲ್ಲಾದ್ಯಕ್ಷ ಡಾ. ರವೀಂದ್ರ ತಿಳಿಸಿದ್ದಾರೆ.

  ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪ್ರಾಸ್ತಾವಿಕ ಭಾಷಣ ಮಾಡಿದರು , ವೈದ್ಯರ ಘಟಕದ ಉಪಾಧ್ಯಕ್ಷರಾದ ಡಾ. ಎನ್‌ .ಟಿ ಅಂಚನ್, ವೈದ್ಯರ ಘಟಕ ಮುಖಂಡರುಗಳಾದ ಡಾ.ಜಗದೀಶ್ ಶೆಟ್ಟಿ, ಡಾ.ಸುಭಾಷ್ ರೈ ಯವರು ಆಯುರ್ವೇದ ವೈದ್ಯರ ಸಂಕಷ್ಟಗಳ ಬಗ್ಗೆ ಮಾತನಾಡಿದರು.


  ಡಾ.ಪ್ರಜಿತ್ ನಂಬಿಯಾರ್, ಡಾ. ಸಂದೀಪ್ ಸನಿಲ್, ಡಾ. ಜಯ ಮೋಹನ್ ನಂಬಿಯಾರ್, ಡಾ. ಪ್ರಕಾಶ್ ಪೈ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಕೃಷ್ಣರಾವ್, ಗಜಾನನ್ ಹೆಗಡೆ, ಡಾ. ವಿಶ್ವನಾಥ್ ಹೆಗ್ಡೆ , ಡಾ. ಅರುಣ್ ಶೆಟ್ಟಿ, ಡಾ. ವರುಣ್ ಪಿ ನಂಬಿಯಾರ್, ಡಾ. ಸಂದೀಪ್ ಶೆಟ್ಟಿ, ಡಾ. ಶ್ರೇಯಸ್ ಕುಮಾರ್, ಡಾ. ಸತೀಶ್ ರಾವ್, ಡಾ ಕೀರ್ತಿ ,ಡಾ. ಶ್ರೀಧರ್ ವರ್ಣ , ಡಾ ಜೆ.ಕೆ. ಶೆಟ್ಟಿ , ಡಾ. ಜಬೀರ್, ಡಾ. ಕಾರ್ತಿಕೇಯ ಪ್ರಾಸಾ , ಡಾ .ಮತೀಮ್ ಹುಸೇನ್ , ಡಾ.ಎಸ್. ಎನ್ ,ಹೊಳ್ಳ. ಡಾ. ಗಣೇಶ್ ಕುಮಾರ್ ,ಡಾ.ಸುಮಂಗಳ , ಡಾ. ಪೌರವ್ ಶೆಟ್ಟಿ , ಡಾ. ಸುದರ್ಶನ್ ವೈದ್ಯ ,ಡಾ.ಹ್ಯಾರಿಸ್ , ಡಾ. ಹರಿಪ್ರಸಾದ್ ಶೆಟ್ಟಿ , ಡಾ. ಅಭಿನವ ಶೆಟ್ಟಿ , ಡಾ ಪ್ರವೀಣ್ ಶೆಟ್ಟಿ , ಉಡುಪಿ ಜಿಲ್ಲಾ ವೀಕ್ಷಕರು ಫ್ರಾಂಕಿ ಡಿಸೋಜ ಮುಖಂಡರುಗಳಾದ ಜ್ಯೋತಿಕಾ ಜೈನ್, ಸಿ.ಎಸ್ . ರಾಧಿಕಾ , ನಾಗಲಕ್ಷ್ಮಿ , ಹರೀಶ್ ಶೆಟ್ಟಿ, ಅಬ್ದುಲ್ ಅಜೀಜ್, ಆಶಿಶ್ ಅಂಚನ್, ಯಶು ಪಕ್ಕಳ, ಗೋಲ್ಡನ್ ಪಾರುಖ್, ಶಾರದಾ ಶೆಟ್ಟಿ, ಗಂಗಾಧರ ಅತ್ತಾವರ , ಕಾಮಾಕ್ಷಿ , ಗೈಟನ್ , ಸುರೇಂದ್ರ, ಗುಲಾಬಿ , ಗುಣವತಿ , ಮಹೇಶ್ , ಪುನೀತ್ ಮತ್ತಿತರ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss