ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ಏಕೆ ನಿವೇಶನಕ್ಕೆ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದರೂ ಇದುವರಿಗೂ ಜನರಿಗೆ ಏಕೆ ನಿವೇಶನ ವಿನ್ಯಾಸ ಅನುಮತಿ ಸಿಗದಿದ್ದದ್ದು ಜನರಿಗೆ ತುಂಬಾ ಸಂಕಷ್ಟಕ್ಕೆ ಈಡು ಮಾಡಿದೆ. ಸ್ವಂತ ಮನೆ ನಿರ್ಮಾಣ ಮಾಡುವುದು ಅಸಾಧ್ಯವಾಗಿದ್ದು ಜನರು ಬಾಡಿಗೆ ಮನೆಯಲ್ಲಿ ಆಶ್ರಯಿಸುವಾಂತಾಗಿದೆ. ಈ ಸಮಸ್ಯೆಯನ್ನು ತ್ವರಿತ ಗತಿಯಲ್ಲಿ ಪರಿಹರಿಸಲು ಆದ್ಯತೆ ನೀಡಬೇಕಾಗಿದೆ.
ಕೃಷಿ ವಲಯದಲ್ಲಿ 10 ಸೆನ್ಸ್ ವರೆಗೆ ಏಕ ನಿವೇಶನ ಬರವಣಿಗೆ ನೀಡುವ ಪ್ರಕ್ರಿಯೆಯನ್ನು ನಗರ ಅಭಿವೃದ್ಧಿ ಪ್ರಾಧಿಕಾರ ಸ್ಥಗಿತಗೊಳಿಸಿದಾರೆ. ಇದರಿಂದ ಜನಸಾಮಾನ್ಯರಿಗೆ ಮನೆ ಕಟ್ಟಲು ಸಾಧ್ಯವಾಗದೆ ಪರದಾಡುವಂತಾಗಿದೆ ಈ ಮೊದಲಿನಂತೆ ಇದ್ದ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋದಲ್ಲಿ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅಲ್ಲದೇ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಬೇಡಿಕೆಗನುಸಾರವಾಗಿ ಸ್ಪಂದಿಸಲು ಸಾಕಷ್ಟು ಪೂರ್ಣ ಪ್ರಮಾಣದ ಸಿಬ್ಬಂದಿ ಮತ್ತು ಅಧಿಕಾರಿವರ್ಗದ ಕೊರತೆ ಇದ್ದು ಜನರ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಅಗತ್ಯ ಪ್ರಮಾಣದ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಗಳನ್ನು ನಿಯೋಜಿಸ ಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ನಿಯೋಗದಲ್ಲಿ
ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್,
ಉಡುಪಿ ಜಿಲ್ಲಾ ವೀಕ್ಷಕರ ಫ್ರಾಂಕಿ ಡಿಸೋಜ ಕೊಳಲಗಿರಿ,
ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ
ಮಹಿಳಾ ಜಿಲ್ಲಾಧ್ಯಕ್ಷ ಶೋಭಾ ಪಾಂಗಳ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಲ ಆಮೀನ್, ಕಾರ್ಮಿಕ ಘಟಕ ಜೊತೆ ಕಾರ್ಯದರ್ಶಿ ಮಹಮ್ಮದ್ ಮಜೀದ್, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಜ್ಯೋತಿ ಉಡುಪಿ ಮತ್ತಿತರರು ಉಪಸ್ಥಿತರಿದ್ದರು
Trending
- ಮಂಗಳೂರು : ಮಂಗಳೂರಿನ ಬಿಜೈ ಬಳಿ ಭೀಕರ ಅಪಘಾತದ ಮೂಲಕ ಬೈಕ್ ಸವಾರನ ಕೊಲೆ ಯತ್ನ , ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾಂಪೌಂಡ್ ಗೋಡೆಯಲ್ಲಿ ನೇತಾಡಿಕೊಂಡ ಪಾದಚಾರಿ ಮಹಿಳೆ
- ತುಳುವರ್ಲ್ಡ್ ಫೌಂಡೆಶನ್ ಮಾರ್ಚ್ 16 ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ವಾಗ್ಗೇವಿ ಸಭಾಂಗಣದಲ್ಲಿ ತುಳು ರಾಷ್ಟ್ರೀಯ ವಿಚಾರ ಸಂಕಿರಣ
- ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಧಕ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಆತ್ಮಸಮ್ಮಾನ’
- ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಮಫಲಕಗಳಲ್ಲಿ ಶೇಕಡಾ 60% ತುಳು ಲಿಪಿ ಅಳವಡಿಸುವರೇ ಕಾನೂನು ಜಾರಿಗೆ ತರಲು ತುಳುನಾಡ ರಕ್ಷಣಾ ವೇದಿಕೆ ಆಗ್ರಹ
- ತುಳು ಸಾಹಿತಿ “ಉಡಲ್” ತುಳು ಪತ್ರಿಕೆ ಸಂಪಾದಕಿ ಜಯಂತಿ ಬಂಗೇರ ಪತಿ ಸದಾಶಿವ ಬಂಗೇರ ನಿಧನ , ತುಳುನಾಡ ಸಂಘ ಸಂಸ್ಥೆಗಳ ಪ್ರಮುಖರ ಸಂತಾಪ
- ಮಾರ್ಚ್ 12 ಮೂಡುಬಿದಿರೆ ಕ್ಷೇಮ ವೇಣುಪುರ ಮೂಲ ನಾಗ ಸ್ಥಾನ ಪುನರ್ ಜೀರ್ಣೋದ್ದಾರ ಗೊಂಡು ಪುನರ್ ಪ್ರತಿಷ್ಠಾಪನೆ
- ಬಂಟರ ಯಾನೆ ನಾಡವರ ಸಂಘ ಹೊಸನಗರ(ರಿ ), ಬೆಂಗಳೂರು ಬಂಟರ ಸಂಘ ಇವರ ಸಹಭಾಗಿತ್ವದಲ್ಲಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ವಿತರಣೆ
- ತುಳು ಭಾಷೆದ ಅಧಿಕೃತ ಸ್ಥಾನಮಾನೋಗಾದ್ ವಿಶೇಷ ಪತ್ರಿಕಾ ಗೋಷ್ಠಿ – ರಾಜರಾಮ ಶೆಟ್ಟಿ