- ತಂದೆ-ಮಗ ಹತ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ತೂತುಕುಡಿ ಲಾಕಪ್ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ
- ಮತದಾನದ ಮಹತ್ವ ಸಾರುವ ಕಂದಮ್ಮ – ಐದು ಭಾಷೆಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಸನ್ನಿಧಿ
- ಬಾವುಟ ಗುಡ್ಡ ತುಳುನಾಡ ಸ್ವಾತಂತ್ರ್ಯ ದಿನಾಚರಣೆ ಭಕ್ತಿಭಾವದಿಂದ ಆಚರಣೆ – ಅಮರಸುಳ್ಯ ಕ್ರಾಂತಿಯ ಸ್ಮರಣೆ
- ಕಾರ್ಕಳ-ಹೆಬ್ರಿ : ಜೆಡಿಎಸ್ ರಜತ ಮಹೋತ್ಸವ ಭರ್ಜರಿ ಯಶಸ್ಸು – ಜನಸಾಗರದ ನಡುವೆ ಅದ್ದೂರಿ ಸಂಭ್ರಮಾಚರಣೆ
- ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ – 2025-26ರಲ್ಲಿ ರೂ. 3.50 ಕೋಟಿಗೂ ಅಧಿಕ ಲಾಭ
- ಎಸ್ಸಿಡಿಸಿಸಿ ಬ್ಯಾಂಕ್ಗೆ ದಾಖಲೆ ಸಾಧನೆ – ರೂ.20,226 ಕೋಟಿ ವ್ಯವಹಾರ
- 🕯️ ಬಂಟ್ವಾಳದಲ್ಲಿ ಭಕ್ತಿ ಭಾವದಿಂದ ಶುಭ ಶುಕ್ರವಾರ ಆಚರಣೆ
- ಹೇರಾಡಿ ಆದಿಶೇಷನಾಗ ಸನ್ನಿಧಿ ವಾರ್ಷಿಕೋತ್ಸವ: ಪೊಲೀಸರಿಗೆ ಗೌರವ ಸನ್ಮಾನ
Author: Tulunada Surya
ಮಂಗಳೂರು, ಮಾರ್ಚ್ 18: ದಕ್ಷಿಣ ಕನ್ನಡ ಜಿಲ್ಲಾ ಜನತಾದಳ ಸಂಘಟನೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ, ಜಿಲ್ಲಾ ಅಧ್ಯಕ್ಷರಾದ ಶ್ರೀ ಜಾಕೆ ಮಾಧವ ಗೌಡರವರು ಜಿಲ್ಲಾ ವಿದ್ಯಾರ್ಥಿ ಜನತಾದಳದ ನೂತನ ಅಧ್ಯಕ್ಷರಾಗಿ ವೈದ್ಯಕೀಯ ವಿದ್ಯಾರ್ಥಿ ನಿಹಾಲ್ ಎಸ್ ಕೋಡ್ತುಗುಳಿ ಅವರನ್ನು ನೇಮಿಸಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ನೇಮಕಗೊಂಡ ಬಳಿಕ ನಿಹಾಲ್ ಎಸ್ ಕೋಡ್ತುಗುಳಿ ಅವರು ಮುಂಜಾನೆ ಭೇಟಿ ನೀಡಿ ಆಶೀರ್ವಾದ ಹಾಗೂ ಮಾರ್ಗದರ್ಶನ ಕೋರಿದರು. ಈ ವೇಳೆ ಮಾತನಾಡಿದ ಜನತಾದಳ ಉಪಾಧ್ಯಕ್ಷ ಎಂ.ಬಿ. ಸದಾಶಿವರವರು, ನಿಹಾಲ್ ಅವರ ಕುಟುಂಬದ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಉಲ್ಲೇಖಿಸಿದರು. ನಿಹಾಲ್ ಅವರ ತಂದೆ ಸುಕುಮಾರ್ ಕೋಡ್ತುಗುಳಿ ಅವರು ಯುವ ಜನತಾದಳದ ಅಧ್ಯಕ್ಷರಾಗಿಯೂ, ಬಳಿಕ ತಾಲೂಕು ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿರುವುದನ್ನು ಅವರು ಸ್ಮರಿಸಿದರು. ಯುವಜನೋಚಿತ ಉತ್ಸಾಹ, ವಿದ್ಯಾರ್ಥಿ ಜೀವನದ ವಿಧೇಯತೆ ಮತ್ತು ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ನಿಹಾಲ್, ಭವಿಷ್ಯದಲ್ಲಿ ಸಮರ್ಥ ನಾಯಕನಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಲಾಯಿತು. ಹಿರಿಯರಿಗಿರುವ ಗೌರವ, ಗೆಳೆಯರ ಬೆಂಬಲ ಮತ್ತು ರಾಜ್ಯ-ರಾಷ್ಟ್ರ…
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪೂರು–ಕೊಳಲಗಿರಿ ಪ್ರದೇಶದಲ್ಲಿ ಯುವ ವಿಚಾರ ವೇದಿಕೆಯ ವತಿಯಿಂದ ಎರಡು ದಿನಗಳ ರಜತ ಸಂಭ್ರಮ ಕಾರ್ಯಕ್ರಮಗಳು ಶನಿವಾರ ಮತ್ತು ಭಾನುವಾರ ವೈಭವವಾಗಿ ನೆರವೇರಿದವು. ಸಮಾಜಮುಖಿ ಚಟುವಟಿಕೆಗಳು, ಸಾಂಸ್ಕೃತಿಕ ವೈಭವ ಮತ್ತು ಯುವಜನರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ವಿಶೇಷ ಮೆರುಗು ಪಡೆದಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಶಾಸಕ ಯಶಪಾಲ್ ಎ ಸುವರ್ಣ, ಉದ್ಯಮಿಗಳಾದ ಸುಗ್ಗಿ ಸುಧಾಕರ್ ಶೆಟ್ಟಿ, ರೋಯಲ್ ರತ್ನಾಕರ್ ಡಿ ಶೆಟ್ಟಿ, ಹರೀಶ್ ಪೂಜಾರಿ ಒಳಮಡಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಾಜಿ ತಾಲೂಕು ಪಂಚಾಯತ್ ಸದಸ್ಯೆ ವೆರೋನಿಕಾ ಕರ್ನೇಲಿಯೋ ಹಾಗೂ ಸಂಸ್ಥಾಪಕ ಅಧ್ಯಕ್ಷ ಜಯಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ಅದ್ಧೂರಿ ಉದ್ಘಾಟನೆ ರಜತ ಸಂಭ್ರಮದ ಅಂಗವಾಗಿ “MRG ಗ್ರೂಪ್ ಮಂಗಳೂರು” ಪ್ರವೇಶ ದ್ವಾರವನ್ನು ಸುಗ್ಗಿ ಸುಧಾಕರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಅಧಿಕೃತ ಉದ್ಘಾಟನೆಯನ್ನು…
ಮೂಡಬಿದಿರೆ: ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ತಿರುವು ದೊರೆತಿದೆ. ದೂರುದಾರರಾದ ಸುಮತಿ ನಾಯ್ಕ್ ಅವರ ಅಕ್ಕ ಪ್ರಪುಲ್ಲ ನಾಯ್ಕ್ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ತಂಗಿಯ ಆರೋಪಗಳನ್ನು ತಳ್ಳಿಹಾಕಿ ಇನ್ಸ್ಪೆಕ್ಟರ್ ಪರವಾಗಿ ಮಾತನಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಪುಲ್ಲ ನಾಯ್ಕ್, “ಇದು ಸಂಪೂರ್ಣ ಕೌಟುಂಬಿಕ ಕಲಹದಿಂದ ಉಂಟಾದ ಪ್ರಕರಣ. ನನ್ನ ತಂಗಿ ಸುಮತಿ ನಾಯ್ಕ್ ಅವರು ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕುಟುಂಬ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಇನ್ಸ್ಪೆಕ್ಟರ್ ಅವರು ಸೂಕ್ತ ಸಲಹೆ ನೀಡಿದ್ದರು. ಆದರೆ ಇದನ್ನು ತಪ್ಪಾಗಿ ಅರ್ಥೈಸಿ ದೂರು ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ. ಇನ್ನಷ್ಟು ವಿವರಿಸುತ್ತಾ ಅವರು, “ಈ ಹಿಂದೆ ನನ್ನ ತಂಗಿ ತನ್ನ ಗಂಡ ಮತ್ತು ಮಗನನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ದೂರು ನೀಡಿದಾಗ, ಇನ್ಸ್ಪೆಕ್ಟರ್ ನಮ್ಮ ಪರವಾಗಿ ನಡೆದುಕೊಂಡಿದ್ದರು. ಅವರು ಒಳ್ಳೆಯ ವ್ಯಕ್ತಿ. ದುರುದ್ದೇಶದಿಂದಲೇ ಈಗ ಈ ಆರೋಪ ಮಾಡಲಾಗಿದೆ” ಎಂದು ತಿಳಿಸಿದ್ದಾರೆ. ಪ್ರಪುಲ್ಲ ನಾಯ್ಕ್…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಜನತಾದಳ (ಜಾತ್ಯಾತೀತ) ವತಿಯಿಂದ ನಡೆದ ಮಹತ್ವದ ಸಭೆಯಲ್ಲಿ ನಿಹಾಲ್ ಎಸ್. ಕೋಡ್ತುಗುಳಿಯನ್ನು ಜಿಲ್ಲಾ ವಿದ್ಯಾರ್ಥಿ ಜನತಾದಳದ ಅಧ್ಯಕ್ಷರಾಗಿ ಅಧಿಕೃತವಾಗಿ ಘೋಷಿಸಿ, ಜಿಲ್ಲಾ ಸಮಿತಿ ರಚನೆಗೆ ಅಗತ್ಯವಾದ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು ನಿಹಾಲ್ ಎಸ್. ಕೋಡ್ತುಗುಳಿಗೆ ಅಧಿಕಾರ ಹಸ್ತಾಂತರಿಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಯುವ ನಾಯಕರಿಗೆ ಹೆಚ್ಚಿನ ಅವಕಾಶ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ವಿದ್ಯಾರ್ಥಿ ಘಟಕವು ಪಕ್ಷದ ಭವಿಷ್ಯವಾಗಿದ್ದು, ಸಂಘಟನೆಯ ವಿಸ್ತರಣೆ ಹಾಗೂ ಯುವಕರನ್ನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ನಿಹಾಲ್ ಎಸ್. ಕೋಡ್ತುಗುಳಿ ಅವರು, ತಮಗೆ ನೀಡಲಾದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವ ಭರವಸೆ ನೀಡಿ, ಜಿಲ್ಲೆಯಾದ್ಯಂತ ವಿದ್ಯಾರ್ಥಿ ಘಟಕವನ್ನು ಬಲಿಷ್ಠಗೊಳಿಸಲು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು. ಸಭೆಯಲ್ಲಿ ಮೀನುಗಾರ ಘಟಕದ…
ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್ ಅಮೃತೋತ್ಸವ ಕಟ್ಟಡ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ದತ್ತು ಸ್ವೀಕರಿಸಿ ಮಾಸಿಕ ಧನಸಹಾಯ ಪಡೆಯುತ್ತಿರುವ ಪಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿ, ಸಮಾಜ ಸೇವಾ ಕಾರ್ಯಗಳ ಮೂಲಕ ಬಡವರ ಮತ್ತು ಅಗತ್ಯವಿರುವವರ ಜೀವನಕ್ಕೆ ನೆರವಾಗುವುದು ಒಕ್ಕೂಟದ ಪ್ರಮುಖ ಉದ್ದೇಶವೆಂದು ಹೇಳಿದರು. ಸಮಾಜದ ಸಹಕಾರದಿಂದ ಇಂತಹ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಹಾಗೂ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ ಕೊಲ್ಲಾಡಿ ಬಾಲಕೃಷ್ಣ ರೈ, ಆಹ್ವಾನಿತ ಸದಸ್ಯರಾದ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಪಲಾನುಭವಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ನಂತರ ಪಲಾನುಭವಿಗಳಿಗೆ ಸಹಾಯಧನದ ಚೆಕ್‌ಗಳನ್ನು ವಿತರಿಸಲಾಯಿತು.
ಉಡುಪಿ : ಜಿಲ್ಲೆಯ ಕಟಪಾಡಿ ಸಮೀಪ ಸೋಮವಾರ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ಸಂಭವಿಸಿದೆ. ಅಪಘಾತದ ನಂತರ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿರುವ ಶಂಕೆ ವ್ಯಕ್ತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಕಟಪಾಡಿ ಬಳಿ ಇರುವ ತಿರುವಿನಲ್ಲಿ ಪಲ್ಟಿಯಾದುದಾಗಿ ತಿಳಿದುಬಂದಿದೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.ಘಟನೆಯ ಬಳಿಕ ಟ್ಯಾಂಕರ್‌ನಿಂದ ಅನಿಲ ಸೋರಿಕೆಯ ಸಾಧ್ಯತೆ ಇರುವುದಾಗಿ ಶಂಕೆ ವ್ಯಕ್ತವಾದ ಕಾರಣ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಚಾಲಕರಲ್ಲಿ ಆತಂಕ ಉಂಟಾಯಿತು. ಪರಿಸ್ಥಿತಿ ಗಂಭೀರವಾಗದಂತೆ ತಡೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳವನ್ನು ಸುರಕ್ಷಿತಗೊಳಿಸಿ ಅನಿಲ ಸೋರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸಿದ್ದು, ಪರಿಸ್ಥಿತಿಯನ್ನು ಸಮರ್ಪಕವಾಗಿ…
ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಘಟಕಕ್ಕೆ ರಿಕ್ಷಾ ಚಾಲಕರಾದ ಎಂಟು ಮಂದಿ ಸದಸ್ಯರು ಸೇರ್ಪಡೆಗೊಂಡರು. ಸೋಮವಾರ (ಮಾ.16) ಬೆಳಿಗ್ಗೆ 11 ಗಂಟೆಗೆ ಉಡುಪಿಯ ಮಥುರಾ ಛತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸದಸ್ಯ ಸೇರ್ಪಡೆ ನಡೆಯಿತು. ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ಅನುಮತಿಯೊಂದಿಗೆ ನಡೆದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ವಿಠ್ಠಲ್ ಶೆಟ್ಟಿ, ನಿತೇಶ್ ಶೆಟ್ಟಿ, ಪಾಂಡಪ್ಪ, ಸಂತೋಷ್, ಇಬ್ರಾಹಿಂ, ಸಿದ್ದ ರೂಢ್, ಎಲ್ಲಪ್ಪ ಹಾಗೂ ಪ್ರವೀಣ್ ಅವರು ಸಂಘಟನೆಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಅವರು ಹೊಸ ಸದಸ್ಯರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ರಿಕ್ಷಾ ಚಾಲಕರಿಗೆ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಮುಖಂಡರಾದ ಜಯಪ್ರಕಾಶ್ ಶೆಟ್ಟಿ, ಆನಂದ್ ಶೆಟ್ಟಿ ಹಾಗೂ ನಾಗರಾಜ್ ಉಪಸ್ಥಿತರಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ರಂಜಾನ್ ಸೌಹಾರ್ಧ ಇಫ್ತಾರ್ ಕೂಟ – ಶಾಂತಿ ಸಂದೇಶ ಸಾರಿದ ಕಾರ್ಯಕ್ರಮ
ಉಡುಪಿ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಸ್ಲಿಂ ಬಾಂಧವರಿಗಾಗಿ ರಂಜಾನ್ ಸೌಹಾರ್ಧ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ಮಾರ್ಚ್ 15ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದ ಸಮೀಪದಲ್ಲಿರುವ ಮಥುರಾ ಛತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಧರ್ಮಸೌಹಾರ್ದತೆಯ ಸಂದೇಶವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಅವರು, “ಉಡುಪಿ ಜಿಲ್ಲೆ ಸದಾ ಶಾಂತಿ ಮತ್ತು ಸೌಹಾರ್ದತೆಯ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಪವಿತ್ರ ನೆಲವಾಗಿದೆ. ರಂಜಾನ್ ಮಾಸವು ಸಹೋದರತ್ವ, ಸಹಾನುಭೂತಿ ಮತ್ತು ಶಾಂತಿಯ ಸಂದೇಶವನ್ನು ಸಾರುತ್ತದೆ. ಎಲ್ಲಾ ಸಮುದಾಯದವರು ಪರಸ್ಪರ ಗೌರವದಿಂದ ಬದುಕಿ ಉಡುಪಿ ಜಿಲ್ಲೆಯನ್ನು ಶಾಂತಿ ಸೌಹಾರ್ದತೆಯ ಮಾದರಿ ಜಿಲ್ಲೆಯನ್ನಾಗಿ ರೂಪಿಸೋಣ” ಎಂದು ಕರೆ ನೀಡಿದರು. ಇಫ್ತಾರ್ ಕೂಟದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಸೈಯದ್ ನಿಜಾಮ್, ತಮೀಮ್ ಉಸ್ತಾದ್, ಅಬು…
ನವದೆಹಲಿ: Election Commission of India ಭಾನುವಾರ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದೆ. ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಮತ ಎಣಿಕೆ ಮೇ 4, 2026 ರಂದು ನಡೆಯಲಿದೆ. ನವದೆಹಲಿಯ Vigyan Bhavan ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ Gyanesh Kumar, ಚುನಾವಣಾ ಆಯುಕ್ತರಾದ Sukhbir Singh Sandhu ಹಾಗೂ Vivek Joshi ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು. ಈ ಐದು ಪ್ರದೇಶಗಳ ಚುನಾವಣೆಯಲ್ಲಿ ಒಟ್ಟಾರೆ 800ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಸೇರಿದ್ದು, ಅವುಗಳ ಅವಧಿ ಈ ವರ್ಷದ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. 🗳️ ರಾಜ್ಯವಾರು ಚುನಾವಣಾ ವೇಳಾಪಟ್ಟಿ 📍 Kerala (140 ಕ್ಷೇತ್ರಗಳು)• ನಾಮಪತ್ರ ಸಲ್ಲಿಕೆ ಕೊನೆ ದಿನ: ಮಾರ್ಚ್ 23• ನಾಮಪತ್ರ ವಾಪಸ್ ಕೊನೆ ದಿನ: ಮಾರ್ಚ್ 26• ಮತದಾನ: ಏಪ್ರಿಲ್ 9• ಮತ ಎಣಿಕೆ:…
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ವಿದ್ಯಾರ್ಥಿ ಘಟಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದಿನಾಂಕ 15-03-2026 ರಂದು ಸುಳ್ಯದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು ವಿದ್ಯಾರ್ಥಿ ಜನತಾದಳದ ಜಿಲ್ಲಾ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕ ಮಾಡಿದರು. ಈ ನೇಮಕಾತಿಯಲ್ಲಿ ಆಯುರ್ವೇದಿಕ್ ವಿದ್ಯಾರ್ಥಿ ನಿಹಾಲ್ ಎಸ್. ಕೋಡ್ತುಗುಳಿ ಅವರನ್ನು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಪ್ರಣವ್ ಬಾಲಕೃಷ್ಣ ಹಾಗೂ ಶ್ರೇಯಸ್ ಸಿ. ಕುಕ್ಕುಜೆ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅದೇ ವೇಳೆ ರುತೇಶ್ ಜಾಕೆ ಮತ್ತು ಅಂಜನ್ ಮೂರ್ಜೆ ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಕಾರ್ಯಕಾರಿ ಸದಸ್ಯರಾಗಿ ಪ್ರೀತಮ್ ಮಾಜಿಕೋಡಿ, ಸಾಗರ್ ಹಾಗೂ ಸಾಯಿಸ್ಮರಣ್ ಅವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ, ಪಕ್ಷದ ಸಂಘಟನೆ ಬಲವರ್ಧನೆ ಮತ್ತು ಮುಂದಿನ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
