Author: Tulunada Surya

ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಥಟ್ಟನೆ ಜನಪ್ರಿಯತೆ ಗಳಿಸಿದ್ದ ನಾಗುರಿ ಆಶಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ತಮ್ಮ ವಿಭಿನ್ನ ಮಾತಿನ ಶೈಲಿ ಹಾಗೂ ಬೈಗುಳ ಮಿಶ್ರಿತ ಸಂಭಾಷಣೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ನಾಗುರಿ ಆಶಾ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದರು.ಮಂಗಳವಾರ ರಾತ್ರಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ವಾಂತಿ ಉಂಟಾಗಿದ್ದು, ತಕ್ಷಣ ಚಿಕಿತ್ಸೆ ನೀಡಲು ಸಾಧ್ಯವಾಗುವ ಮುನ್ನವೇ ಬುಧವಾರ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.ನಾಗುರಿ ಆಶಾ ಅವರ ಅಕಾಲಿಕ ನಿಧನದಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಹಾಗೂ ಅಭಿಮಾನಿಗಳ ವಲಯದಲ್ಲಿ ತೀವ್ರ ದುಃಖ ಆವರಿಸಿದೆ. ಅವರು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು–ಮಿತ್ರರನ್ನು ಅಗಲಿದ್ದಾರೆ.

Read More

ಉಡುಪಿ ಬ್ರಹ್ಮಾವರ: ಸಮಾಜದಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನರ ಧ್ವನಿಯಾಗಿ, ಅವರ ಹಕ್ಕುಗಳ ರಕ್ಷಣೆಗೆ, ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಸಂಘಟನೆಗಳು ಹುಟ್ಟುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳ ನಡೆ ಜನರಲ್ಲಿ ದೈರ್ಯ ತುಂಬುವ ಬದಲು ಭಯ, ಆತಂಕ ಮತ್ತು ಅಸ್ಥಿರತೆಯನ್ನು ಸೃಷ್ಟಿಸುವಂತಾಗಿರುವುದು ಚಿಂತಾಜನಕ ಸಂಗತಿ ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ತಿಳಿಸಿದರು. ಸಂಘಟನೆಗಳು ಜನರನ್ನು ಒಗ್ಗೂಡಿಸಿ, ಸಮಸ್ಯೆಗಳ ವಿರುದ್ಧ ಧೈರ್ಯದಿಂದ ನಿಲ್ಲುವಂತೆ ಪ್ರೇರೇಪಿಸಬೇಕು. ಕಾನೂನು, ಸಂವಿಧಾನ ಮತ್ತು ಶಾಂತಿಯ ಚೌಕಟ್ಟಿನೊಳಗೆ ಹೋರಾಟ ನಡೆಸುವುದು ಸಂಘಟನೆಗಳ ಜವಾಬ್ದಾರಿ. ಆದರೆ ಅತಿರೇಕದ ಭಾಷೆ, ಬೆದರಿಕೆ ಸ್ವರೂಪದ ಹೇಳಿಕೆಗಳು, ಗೊಂದಲ ಮೂಡಿಸುವ ಕರೆಗಳು ಸಮಾಜದಲ್ಲಿ ಅನಾವಶ್ಯಕ ಭಯವನ್ನು ಹುಟ್ಟಿಸುತ್ತವೆ. ಇದರಿಂದ ಜನರು ಸಂಘಟನೆಗಳ ಮೇಲೆ ನಂಬಿಕೆ ಕಳೆದುಕೊಳ್ಳುವ ಅಪಾಯವಿದೆ. ಭಯದ ಮೂಲಕ ಜನರನ್ನು ನಿಯಂತ್ರಿಸುವುದು ಕ್ಷಣಿಕ ಪರಿಣಾಮ ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ಅದು ಸಮಾಜಕ್ಕೆ ಹಾನಿಕಾರಕ. ದೈರ್ಯ ಎಂದರೆ ಅಕ್ರಮಕ್ಕೆ ಪ್ರೇರಣೆ…

Read More

ಪಡುಬಿದ್ರೆ : ಬಿಗ್‌ಬಾಸ್‌ ಕನ್ನಡ ಸೀಸನ್–12ರಲ್ಲಿ ರನ್ನರ್‌ಅಪ್‌ ಪ್ರಶಸ್ತಿ ಗೆದ್ದು ಮನೆಮಂದಿಯ ಹೃದಯ ಗೆದ್ದ ರಕ್ಷಿತಾ ಶೆಟ್ಟಿ ಹುಟ್ಟೂರಿಗೆ ಆಗಮಿಸಿದ ಕ್ಷಣವೇ ಸಂಭ್ರಮದ ಮಹಾಪೂರ ಹರಿದುಬಂದಿತು. ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್‌ಗೇಟ್ ಬಳಿ ರಕ್ಷಿತಾಳಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಗೌರವಿಸಿದರು. ಹೆಜಮಾಡಿ ಟೋಲ್‌ನಿಂದ ಪಡುಬಿದ್ರೆಯವರೆಗೆ ಭರ್ಜರಿ ಮೆರವಣಿಗೆಯೊಂದಿಗೆ ರಕ್ಷಿತಾ ಶೆಟ್ಟಿಯನ್ನು ಕರೆತರಲಾಯಿತು. ತೆರೆದ ವಾಹನದಲ್ಲಿ ನಿಂತು ಅಭಿಮಾನಿಗಳಿಗೆ ಕೈಬೀಸಿದ ರಕ್ಷಿತಾ, ಮೆರವಣಿಗೆಯ ಮಧ್ಯೆ ಕೈಯಲ್ಲಿ ಬಂಗುಡೆ ಮೀನು ಹಿಡಿದು ಸಂಭ್ರಮ ವ್ಯಕ್ತಪಡಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ರಕ್ಷಿತಾ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಹೆಜಮಾಡಿ ಟೋಲ್‌ನಲ್ಲಿ ಜಮಾಯಿಸಿದ್ದು, ಹೂಗುಚ್ಛ, ಹಾರಗಳೊಂದಿಗೆ ಅಭಿನಂದನೆ ಸಲ್ಲಿಸಿದರು. ಸೆಲ್ಫಿ ಪಡೆಯಲು ಅಭಿಮಾನಿಗಳ ಮುಗಿಬಿದ್ದ ದೃಶ್ಯ ಕಂಡುಬಂದಿತು. ಬಳಿಕ ರಕ್ಷಿತಾ ಅವರ ವಾಹನದ ಜೊತೆಗೆ ಅಭಿಮಾನಿಗಳು ಹೆಜ್ಜೆ ಹಾಕಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಬಿಗ್‌ಬಾಸ್‌ ರನ್ನರ್‌ಅಪ್‌ ಗೌರವದೊಂದಿಗೆ ಹುಟ್ಟೂರಿಗೆ ಮರಳಿದ ರಕ್ಷಿತಾ ಶೆಟ್ಟಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದು, ಪಡುಬಿದ್ರೆ ಸಂಭ್ರಮದ…

Read More

ಪುಣೆ: ಬಂಟ್ಸ್ ಅಸೋಸಿಯೇಷನ್ ಪುಣೆ (ರಿ.) ವತಿಯಿಂದ 14ನೇ ವಾರ್ಷಿಕ ಸಮಾವೇಶವನ್ನು ಫೆಬ್ರವರಿ 6, 2026 (ಶುಕ್ರವಾರ)ರಂದು ಮಧ್ಯಾಹ್ನ 2.30 ಗಂಟೆಯಿಂದ ಪುಣೆಯ ಬಾನೇರ್‌ನಲ್ಲಿರುವ “ಬಂಟರ ಭವನ”ದಲ್ಲಿ ಆಯೋಜಿಸಲಾಗಿದೆ. ಮರ್ಸಿಡಿಸ್ ಶೋರೂಮ್ ಸಮೀಪ, ಪುಣೆ–ಬೆಂಗಳೂರು ಹೆದ್ದಾರಿಯ ಬಾನೇರ್ ಪ್ರದೇಶದಲ್ಲಿರುವ ಬಂಟರ ಭವನದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಬಂಟ ಸಮುದಾಯದ ಸದಸ್ಯರು ಹಾಗೂ ಸಾರ್ವಜನಿಕರು ಕುಟುಂಬ ಸಮೇತ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಗೆ ಅಧಿಕೃತ ವಾರ್ಷಿಕ ಸಮಾರಂಭಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 9 ಗಂಟೆಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ವಿಶೇಷ ಆಕರ್ಷಣೆಯಾಗಿ ಶ್ರೀ ಶಕ್ತಿ ಸಾಂಸ್ಕೃತಿಕ ತಂಡದ ಆಶ್ರಯದಲ್ಲಿ “ಸಾಮರ್ಥ್ಯ ಕಲಾವೈಭವ” ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಕ್ತಿ, ಶಕ್ತಿ ಹಾಗೂ ಸಂಸ್ಕೃತಿಯ ಸೊಗಡನ್ನು ಒಳಗೊಂಡ ಈ ಕಾರ್ಯಕ್ರಮವು ಪ್ರೇಕ್ಷಕರಿಗೆ ಮನಮುಗ್ಧಗೊಳಿಸುವ ಅನುಭವ ನೀಡಲಿದೆ ಎಂದು ಸಂಘದವರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಬಂಟ್ಸ್ ಅಸೋಸಿಯೇಷನ್ ಪುಣೆ…

Read More

ಕಾರವಾರ: ಕಾರವಾರ ತಾಲೂಕಿನ ಕದ್ರಾ ನಿವಾಸಿ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಕದ್ರಾ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಬಂಡಿವಡ್ಡರ್ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವು ರಾಜಕೀಯ ಹಾಗೂ ಸಾಮಾಜಿಕವಾಗಿ ತೀವ್ರ ತಿರುವು ಪಡೆದುಕೊಂಡ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.ಕದ್ರಾ ನಿವಾಸಿಗಳಾದ ರೀನಾ ಮತ್ತು ಕ್ರೀಸ್ತೋದ್ ಡಿಸೋಜ ದಂಪತಿಯ ಪುತ್ರಿ ರಿಶೆಲ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರ್ ಅವರ ಪುತ್ರ ಚಿರಾಗ್ ನೀಡುತ್ತಿದ್ದ ನಿರಂತರ ಕಿರುಕುಳವೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹೇರುತ್ತಿದ್ದಲ್ಲದೆ, ಸಾವಿಗೂ ಮುನ್ನ ಅತ್ಯಾಚಾರ ಎಸಗಿರುವ ಸಂಶಯವಿದೆ ಎಂದೂ ಅವರು ದೂರಿದ್ದಾರೆ.ಮೃತ ಯುವತಿಯ ಮೊಬೈಲ್‌ನಲ್ಲಿ ಸುಮಾರು 230 ಪುಟಗಳಷ್ಟು ವಾಟ್ಸಪ್ ಚಾಟ್‌ಗಳು ಲಭ್ಯವಿದ್ದರೂ, ಅವುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಪ್ರಾಥಮಿಕ ಹಂತದಲ್ಲೇ ಪ್ರಮುಖ ಆರೋಪಿಯನ್ನು…

Read More

ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸುವ ದಿಸೆಯಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳು ಹಾಗೂ ಅನುಷ್ಠಾನದ ವಿಧಾನಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಿಸಿದ್ದ ಅಧ್ಯಯನ ಸಮಿತಿಯು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ, ಎರಡು ದಿನಗಳ ಕಾಲ ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ಏಳು ಸದಸ್ಯರ ಈ ಸಮಿತಿ ಕಾರ್ಯನಿರ್ವಹಿಸಿದೆ. ಆಂಧ್ರ ಪ್ರವಾಸ ಅಧ್ಯಯನ ಸಮಿತಿಯು ಜನವರಿ 19 ಮತ್ತು 20ರಂದು ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ, ಎನ್.ಟಿ.ಆರ್ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಮೊದಲ ದಿನದ ಸಮಾಲೋಚನೆ ಮೊದಲ ದಿನ ಅಧ್ಯಯನ ತಂಡವು ಆಂಧ್ರ ಪ್ರದೇಶ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರನ್ನು ಸಚಿವಾಲಯದಲ್ಲಿ…

Read More

ಸುರತ್ಕಲ್‌ನ ಎಂ.ಆರ್.ಪಿ.ಎಲ್. (MRPL) ಘಟಕದಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ವರದಿಯಾಗಿದೆ. ಜೋಕಟ್ಟೆ–ಬಜ್ಪೆ ನಡುವಿನ ಫೇಸ್–3 ಘಟಕದಲ್ಲಿರುವ ಪೆಟ್ರೋಲಿಯಂ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಈ ದುರ್ಘಟನೆ ನಡೆದಿದೆ. ಮಾಹಿತಿಯಂತೆ, ಘಟಕದ ಸಮೀಪ ವೆಲ್ಡಿಂಗ್ ಕಾಮಗಾರಿ ನಡೆಯುತ್ತಿದ್ದ ವೇಳೆ ಬೆಂಕಿಯ ಕಿಡಿಯೊಂದು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಪರ್ಕ ಹೊಂದಿರುವ ಕೊಳವೆಗೆ ತಗುಲಿದ್ದು, ಅಲ್ಲಿಂದ ಸುಮಾರು 10 ಸಾವಿರ ಲೀಟರ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಟ್ಯಾಂಕ್‌ಗೆ ಬೆಂಕಿ ಹರಡಿದೆ. ಪರಿಣಾಮ ಟ್ಯಾಂಕ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಎಂ.ಆರ್.ಪಿ.ಎಲ್.ನ ತುರ್ತು ಸ್ಪಂದನಾ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಘಟನೆಯಿಂದ ಸಂಭವಿಸಿದ ಹಾನಿ ಹಾಗೂ ಪ್ರಾಣಹಾನಿ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.

Read More

ಮಂಗಳೂರು ಸೆಂಟ್ರಲ್‌ನಿಂದ ಬಂದರ್ ಗೂಡ್ಸ್ ಶೆಡ್ ಗೆ ಹೋಗುವ ಖಾಲಿ ರೈಲುಗಳ ಓಡಾಟದಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುವುದು ಸೇರಿದಂತೆ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ, ಸಾರ್ವಜನಿಕರ ಸಭೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರು, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಗೇಟ್‌ ಮೂಲಕ ದಿನಕ್ಕೆ ಕನಿಷ್ಠ 16 ಸಲವಾದರೂ ಖಾಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಬಂದರ್ ಯಾರ್ಡ್ ಗೆ ಹೋಗುವುದರಿಂದ ಪ್ರತೀ ಬಾರಿ ಕನಿಷ್ಠ 15 ರಿಂದ 20 ನಿಮಿಷ ಟ್ರಾಫಿಕ್ ಜಾಮ್ ಉಂಟಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಉದ್ಯೋಗಿಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ತೊಂದರೆಗೀಡಾಗುತ್ತಿವೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ನನಗೆ ದೂರು ನೀಡಿದ್ದು, ಅದನ್ನು ಖುದ್ದು ಪರಿಶೀಲಿಸಿ ಸಂಸದರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ ಎಂದರು.ಜಿಲ್ಲಾಧಿಕಾರಿಗಳಾದ ದರ್ಶನ್ ಎಚ್.ವಿ ಮಾತನಾಡಿ, ರೈಲು ಬರುವ ಸಮಯವನ್ನು ಆಯಾ ಪ್ರದೇಶಗಳಲ್ಲಿ ದೊಡ್ಡ…

Read More

ಮಂಗಳೂರು: ವಿದೇಶದಲ್ಲಿ ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ತುಳು–ಕನ್ನಡ ಸಂಸ್ಕೃತಿಯ ವೈಭವವನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿಬಿಂಬಿಸುತ್ತಾ, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಗಮ್ಮತ್ ಕಲಾವಿದೆರ್ ದುಬೈ ಸಂಸ್ಥೆಯ 2026–27ನೇ ಸಾಲಿನ ಅಧ್ಯಕ್ಷರಾಗಿ ಖ್ಯಾತ ರಂಗಕಲಾವಿದ ವಾಸುಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಸಮಂತಾ ಗಿರೀಶ್, ಕೋಶಾಧಿಕಾರಿಯಾಗಿ ಜೆನೆಟ್ ಸಿಕ್ವೆರಾ ನೇಮಕಗೊಂಡಿದ್ದಾರೆ. ಸಲಹಾ ಸಮಿತಿಯ ಗೌರವ ಪೋಷಕರಾಗಿ ಉದ್ಯಮಿ ಹರೀಶ್ ಬಂಗೇರ್ ಅವರನ್ನು ಆಯ್ಕೆ ಮಾಡಲಾಗಿದ್ದು, ರಂಗ ಸಾರಥಿ ಹಾಗೂ ಖ್ಯಾತ ರಂಗ ನಿರ್ದೇಶಕ ವಿಶ್ವನಾಥ ಬಿ. ಶೆಟ್ಟಿ ಕೂಡ ಸಲಹಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಹೊಸ ಪದಾಧಿಕಾರಿಗಳ ನೇತೃತ್ವದಲ್ಲಿ ಗಮ್ಮತ್ ಕಲಾವಿದೆರ್ ದುಬೈ ಸಂಸ್ಥೆ ಇನ್ನಷ್ಟು ಬಲಿಷ್ಠವಾಗಿ ತುಳು–ಕನ್ನಡ ನಾಡಿನ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಯನ್ನು ವಿದೇಶದಲ್ಲಿಯೂ ಉತ್ತೇಜಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ವರದಿ: ಕರುಣಾಕರ್ ಶೆಟ್ಟಿ ಮುಲ್ಕಿ

Read More

ಮಂಗಳೂರು: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೇ ವಾರ್ಡ್‌ನ ಮೂಡುಬಾಳಿಕೆ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಎದುರಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ವತಿಯಿಂದ ಕಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಿರುವುದರಿಂದ ಈ ಕುಟುಂಬಗಳ ದೈನಂದಿನ ಜೀವನವೇ ಅಸ್ತವ್ಯಸ್ತವಾಗುವ ಭೀತಿ ಉಂಟಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಯ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಆರೋಪಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸುಮಾರು 70 ವರ್ಷಗಳಿಂದ ಈ ಕುಟುಂಬಗಳು ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, 1995ರಲ್ಲಿ ಸರ್ಕಾರದಿಂದ ಮನೆ ನಿವೇಶನದ ಹಕ್ಕುಪತ್ರವೂ ನೀಡಲಾಗಿದೆ. ಮನೆಗಳ ಸುತ್ತಲೂ ಖಾಸಗಿ ಜಮೀನುಗಳಿರುವ ಕಾರಣ ಸರ್ವೆ ನಂ.116/7ಕ್ಕೆ ಹೊಂದಿಕೊಂಡಿರುವ ಕಾಲುದಾರಿ ಹಾಗೂ ಕಚ್ಚಾ ರಸ್ತೆಯೇ ಈ ಕುಟುಂಬಗಳಿಗೆ ದೈನಂದಿನ ಸಂಚಾರ, ಮಕ್ಕಳ ವಿದ್ಯಾಭ್ಯಾಸ, ಅಗತ್ಯ ವಸ್ತುಗಳ ಸಾಗಣೆ ಮತ್ತು ತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ ಹಿರಿಯ ನಾಗರಿಕರನ್ನು ಕರೆದೊಯ್ಯುವ ಏಕೈಕ ಮಾರ್ಗವಾಗಿದೆ ಎಂದು ವಿವರಿಸಿದರು. ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ…

Read More