Author: Tulunada Surya

ಮಂಗಳೂರು : ಕಳೆದ 7 ವರ್ಷಗಳಿಂದ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಂ.ಆರ್.ಜಿ. ಗ್ರೂಪ್‌ನ ಚೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿಯವರ ಗೌರವ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಂಗಳೂರು ಕಂಬಳವು ಡಿಸೆಂಬರ್ 28ರ ಶನಿವಾರ ಬೆಳಗ್ಗೆ 8.30ಕ್ಕೆ ಪ್ರಾರಂಭಗೊಂಡು ಅದೇ ದಿನ ಸಂಜೆ 6.00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮರುದಿನ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ 08.00ಕ್ಕೆ ಬಹುಮಾನ ವಿತರಣಾ ಸಮಾರಂಭದ ಮೂಲಕ ಸಂಪನ್ನಗೊಳ್ಳಲಿದೆ“ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ”ಎಳೆ ಮನಸ್ಸುಗಳನ್ನು ನಮ್ಮ ಈ ಆಚರಣೆಯ ಭಾಗವಾಗಿಸುವ ಸದುದ್ದೇಶದಿಂದ ‘ಕಲರ್ ಕೂಟ’ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಮೂರು ವಿಭಾಗಗಳಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಂದ ಎಲ್ಲರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ನಮ್ಮ ಕಂಬಳದ ಅನುಭವವನ್ನು ಪುಟ್ಟ ಹಾಗೂ ಯುವ ಪ್ರತಿಭೆಗಳು ತಮ್ಮ ಕುಂಚದಿಂದ ತಮ್ಮ ಹಾಳೆ ಹಾಗೂ ಮನಸ್ಸುಗಳಲ್ಲಿ ಸೃಷ್ಟಿಸಿ ಈ…

Read More

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಐವರು ಯೋಧರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್‌ನ (Maratha Light Infantry) ಐವರು ಮೃತಪಟ್ಟಿದ್ದರು. ಐವರು ಪೈಕಿ ಮೂವರು ಕರ್ನಾಟಕದವರಾಗಿದ್ದಾರೆ.ಬೆಳಗಾವಿ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್, ಮುಧೋಳದ ಮಹಾಲಿಂಗಪುರದ ಮಹೇಶ್ ಮರಿಗೊಂಡ, ಕುಂದಾಪುರ ಬೀಜಾಡಿಯ ಅನುಪ್‌ ಮೃತರಾಗಿದ್ದಾರೆ. ಸೈನಿಕರು ಮೃತಪಟ್ಟ ಬಗ್ಗೆ ಭಾರತೀಯ ಸೇನೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಅನೂಪ್ ಕುಟುಂಬಕ್ಕೆ ಸೇನಾಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ 13 ವರ್ಷಗಳಿಂದ ಅನೂಪ್ ಸೇನೆಯಲ್ಲಿದ್ದು 2 ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗೆ 1 ವರ್ಷದ ಮಗುವಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸರಿಗೂ ಸೇನೆಯಿಂದ ಮಾಹಿತಿ ಕಳುಹಿಸಲಾಗಿದೆ. ಮಹೇಶ್ ನಾಗಪ್ಪ ಮಾರಿಗೊಂಡ (25) ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿಯಾಗಿದ್ದರು. 7 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ…

Read More

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಸಂಚಲನ ಮೂಡಿಸಿದರು. ಚೈನ್ ಲಿಂಕ್ ಮಾದರಿಯ ಆರ್‌ಪಿಸಿ ತನ್ನ ಸಾವಿರಾರು ಗ್ರಾಹಕರಿಗೆ ಪಂಗನಮ ಹಾಕಿ ಕೋಟಿಗಟ್ಟಲೆ ಹಣ ಲಪಟಾಯಿಸಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ ಇಂದಿನಿಂದ ಮೂರು ದಿನ ಕಾಲ ವಿತ್ ಡ್ರಾ ಮಾಡಲು ಅವಕಾಶ ನೀಡಿದ ಸಂಸ್ಥೆಯು ಪುನಃ ರಿನಿವಲ್ ಹಾಗೂ ಆದರ್ ಸಂಖ್ಯೆ ಕೇಳುತ್ತಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ ರ್‌ಪಿಸಿ ಡಿಸೆಂಬರ್ ತಿಂಗಳಿಗೆ ಅಂತ್ಯವಾಗಲಿದೆ ಎಂದು ಈ ಹಿಂದೆ ಕೆಲವರು ಎಚ್ಚರಿಕೆ ನೀಡಿದ್ದರು ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಕೂಡ ಇಂಥ ಚೈನ್ ಲಿಂಕ್ ಮಾದರಿಯ ಗ್ಯಾಮ್ಲಿಂಗ್ ಬಳಸುತ್ತಿದ್ದಾರೆ ಆರ್‌ಪಿಸಿ ಕೂಡ ಅಂತದೇ ಮಾದರಿ ಅನುಸರಿಸುತಿದ್ದೆಯಾ ಅನ್ನೋ ಶಂಕೆ ಗ್ರಾಹಕರಿಗೆ ಶುರುವಾಗಿದೆ ಗ್ರಾಹಕರು ಜಿಲ್ಲೆಯ ಸಾವಿರಾರು ಮಂದಿ ಜನರು ಆರ್‌ಪಿಸಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಆರಂಭದಲ್ಲಿ ಕೆಲವು ಗ್ರಾಹಕರಿಗೆ ತಮ್ಮ ಹೂಡಿಕೆ ಹಣಕ್ಕಿಂತ ಡಬಲ್ ಮೊತ್ತ ನೀಡಿತ್ತು ಉಳಿದಂತೆ ಬೇರೆ ಗ್ರಾಹಕರಿಗೆ ಹಿಂದಿನಿಂದ ಮೂರು ದಿನ ಕಾಲ ಅವಕಾಶ ನೀಡಿದ ಆರ್‌ಪಿಸಿ…

Read More

ಡಿಸೆಂಬರ್ 30, ಕಾಡು ಪ್ರಾಣಿಗಳ ಕಾಟ ತಡೆಗಟ್ಟುದ್ದಕ್ಕಾಗಿ ತುಳುನಾಡ ರಕ್ಷಣಾ ವೇದಿಕೆ ಸಹಭಾಗಿತ್ವದಲ್ಲಿ ಜನಜಾಗೃತಿ ಸಭೆ ನಡೆಯಲಿದೆ . ಚೆನೈತ್ತೋಡಿ,ಎಲಿಯನಡು ಗೋಡು, ಅಜ್ಜಿ ಬೆಟ್ಟು ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹಲವು ಚಿರತೆಗಳು ರಾತ್ರಿ ಹೊತ್ತಿನಲ್ಲಿ ಜನಸಂದನಿ ಇರುವ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಘಟನೆಗಳು ನಡೆದಿವೆ ಈ ಪರಿಸ್ಥಿತಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಅರಣ್ಯ ಇಲಾಖೆ ಯವರು ತಕ್ಷಣವೇ ಕ್ರಮ ಕೈಗೊಂಡು ಈ ಚಿರತೆಗಳನ್ನು ಹಿಡಿದುಕೊಂಡು ಹೋಗುವಂತೆ ಮನವಿ ಮಾಡಲು ತುಳುನಾಡ ರಕ್ಷಣಾ ವೇದಿಕೆ ವೇದಿಕೆಯ ಸಹಭಾಗಿತ್ವದಲ್ಲಿ. ನಿತ್ಯಾನಂದ ಮುಖ್ಯಪ್ರಾಣ ಭಜನಾ ಮಂದಿರದ ಎದುರುಗಡೆ ಗುರುನಗರ ಚೆನೈತ್ತೋಡಿ ಗ್ರಾಮ ದಲ್ಲಿ ದಿನಾಂಕ 30-12-2024 ರಂದು 9,30 ಕ್ಕೆ ಸಭೆ ಸೇರಲು ನಿರ್ಧಾರಿಸಲಾಗಿದೆ ಈ ಸಭೆಗೆ ಗ್ರಾಮಸ್ಥರ ಒಗ್ಗಟ್ಟಿನ ಅಗತ್ಯವಿದೆ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ವಾಮದ ಪದವು ಘಟಕ ಪ್ರಮುಖರು ಹಾಗೂ ಸುನಿಲ್ ಕುಮಾರ್ ಕೆಎಸ್ ಉಪ ವಲಯ ಅರಣ್ಯ ಅಧಿಕಾರಿ ವೇಣೂರು ಭಾಗವಹಿಸಲಿರುವರು ಸರ್ವರೂ ಭಾಗವಹಿಸುವಂತೆ ತುಳುನಾಡ ರಕ್ಷಣಾ…

Read More

ಮಂಗಳೂರು : ಪಿರ್ಯಾದಿದಾರರ ಅಜ್ಜಿ ಪದ್ಮಾವತಿ ರವರು ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ಪಿರ್ಯಾದಿದಾರರು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ ರವರ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಿದ್ದು, ಮುಲ್ಕಿ ಕಂದಾಯ ನಿರೀಕ್ಷಕರಾದ ಬಿ.ಎಸ್ ದಿನೇಶ್ ರವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದು ಈ ಬಗ್ಗೆ ಪಿಯಾದಿದಾರರು ದಿನಾಂಕ: 19-12-2024 ರಂದು ಅರ್ಜಿಯ ಬಗ್ಗೆ ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲಾಗಿ ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ರವರು ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು ರೂ 4 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್…

Read More

ದಿನಾಂಕ 18-12-2024 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಪದಗ್ರಹಣ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ನೆರವೇರಿಸಿ ಮಾತನಾಡುತ್ತಾ ತುಳುನಾಡ ರಕ್ಷಣಾ ವೇದಿಕೆ ಉತ್ತಮ ವ್ಯಕ್ತಿತ್ವದ ಸಮಾಜಪರ ಕಾಳಜಿ ಹೊಂದಿರುವ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅವರು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯನ್ನು ಸಮರ್ಥವಾಗಿ ಬಲಪಡಿಸಲು ಕೆಲಸ ಮಾಡುತ್ತಾರೆ ಎಂದುನಂಬಿರುತ್ತೇವೆ. ಅವರು ಉಡುಪಿ ಜಿಲ್ಲೆಯ ಕಾರ್ಯಕರ್ತರ ಪದಾಧಿಕಾರಿಗಳನ್ನು ಜೊತೆಯಾಗಿ ಸೇರಿಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿ ಜನರ ಆಶೋತ್ತರಕ್ಕೆ ಸ್ಪಂದಿಸುವರು ಎಂದು ನಂಬಿರುತ್ತೇನೆ. ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ವಿಶ್ವಾಸದ ಮಾತುಗಳನ್ನಾಡಿ ಅವರಿಗೆ ಉಡುಪಿ ಜಿಲ್ಲಾ ಕಚೇರಿಯ ಬೀಗದ ಗೊಂಚಲು ಮತ್ತು ಸಂಘಟನೆಯ ಪುಸ್ತಕವನ್ನು ನೀಡಿ ಹೂಗುಚ್ಛ ನೀಡಿ ಅಭಿನಂದಿಸಿರುತ್ತಾರೆ. ಹಾಗೂ ಸಭೆಯಲ್ಲಿ…

Read More

ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಸಂಚಾಲಕರರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿ ಸೋಜರವರ ನೇತ್ರತ್ವದಲ್ಲಿ ವಿಧಾನ ಸಭೆ ಯ ಸಭಾದಕ್ಷರಾದ ಯು ಟಿ ಖಾದರ್ ರವರ ಸಮುಕ್ಕದಲ್ಲಿ ಮುಖ್ಯಮಂತ್ರಿಯವರಿಗೆ, ಮಂಗಳೂರು ವಕೀಲರ ಸಂಘ ದ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಮತ್ತು ಹಿರಿಯ ವಕೀಲರಾದ ಎಂ.ಪಿ ನೊರೂಂನ್ಹ ರವರು ಕರಾವಳಿಯಲ್ಲಿ ಉಚ್ಛ ನ್ಯಾಯಲಯದ ಸಂಚಾರಿ ಪೀಠ ವನ್ನು ಜರೂರಾಗಿ ಸ್ಥಾಪಿಸುವ ಬಗ್ಗೆ ಮನವರಿಕೆ ಮಾಡಿದರು . ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಉಚ್ಚ ನ್ಯಾಯಲಯದ ನ್ಯಾಯಧೀಶರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುದಾಗಿ ತಿಳಿಸಿರುತಾರೆ. ನಿಯೋಗದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್,. ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ವಕೀಲರದ ಮೋನಪ್ಪ ಭಂಡಾರಿ, ಹಾಗೂ ಹಿರಿಯ ವಕೀಲರಾದ ಟಿ.…

Read More

ಮಂಗಳೂರು : ಗ್ರಾಮಸ್ಥರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗಲೇ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಗೆ ಸಿಕ್ಕಿ ಬಿದ್ದ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್‌ ಪಿಡಿಒ ಪ್ರೇಮ್‌ ಸಿಂಗ್‌ ಅವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷಗಳ ಸಾದಾ ಸಜೆ ಹಾಗೂ 50,000 ರೂ. ದಂಡ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಡಿವೈಎಸ್‌ಪಿಯಾಗಿದ್ದ ಮಂಜುನಾಥ ಬಿ. ಕವರಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್‌ ನಿರೀಕ್ಷಕರಾದ ಮೋಹನ್‌ ಕೊಟ್ಟಾರಿ ಮತ್ತು ಯೋಗೀಶ್‌ ತನಿಖಾಧಿಕಾರಿಗಳಾಗಿದ್ದರು. ಪೊಲೀಸ್‌ ನಿರೀಕ್ಷಕ ಶ್ಯಾಮ ಸುಂದರ್‌ ಎಚ್‌.ಎಂ. ಅವರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ರವೀಂದ್ರ ಮುನ್ನಿಪಾಡಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.

Read More

ತಮಿಳುನಾಡು ಮೂಲದ 18ನೇ ವರ್ಷದ ಗುಕೇಶ್ ವಿಶ್ವ ಚೆಸ್ ಸಾಮ್ರಾಟದ ಪಟ್ಟಕ್ಕೇರಿದ್ದಾರೆ.ಈ ಗೆಲುವಿನ ಮೂಲಕ ಗುಕೇಶ್, ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾದರು. ವಿಶ್ವನಾಥ್ ಆನಂದ್ ಬಳಿಕ ಚದುರಂಗದ ಕಿಲಾಡಿ ಆದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಗುಕೇಶ್??ಗೆ ಸೇರಿದೆ. ಡಿ.ಗುಕೇಶ್.. ಪೂರ್ತಿ ಹೆಸರು ಗುಕೇಶ್ ದೊಮ್ಮರಾಜು. ಮೂಲತಃ ತಮಿಳುನಾಡಿನವರು. ತಮ್ಮ 7ನೇ ವಯಸ್ಸಿಗೆ ಚೆಸ್ ಆಡಲು ಶುರುಮಾಡಿದ ಗುಕೇಶ್, 12ನೇ ವಯಸ್ಸಿಗೆ ಚೆಸ್ ಗ್ರ‍್ಯಾಂಡ್ ಮಾಸ್ಟರ್ ಆಗಿ ದೊಡ್ಡ ಸಾಧನೆ ಮಾಡಿದರು. ಇದೀಗ 18ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆವಿಶ್ವ ಚಾಂಪಿಯನ್ ಶಿಪ್ ಗೆದ್ದ ಬೆನ್ನಲ್ಲೇ ಗುಕೇಶ್ ಭಾವುಕರಾಗಿದ್ದಾರೆ.. ವಿಶ್ವ ಚಾಂಪಿಯನ್ ಶಿಪ್ ಗೆಲ್ಲುವ ಕನಸು ನನಸಾದ ಬೆನ್ನಲ್ಲೇ ಗುಕೇಶ್ ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದಾರೆ. ಗುಕೇಶ್ ಚದುರಂಗದಾಟದ ಸಾಮ್ರಾಟನಾಗ್ತಿದ್ದಂತೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಶುಭ ಕೋರಿದ್ದಾರೆ.…

Read More

ದಿನಾಂಕ 10- 12-2024 ಮಂಗಳವಾರ ಸಂಜೆ 4.23 ರಂದು ಕೇಂದ್ರೀಯ ಕಚೇರಿಯಲ್ಲಿ ನಡೆದ ಕೇಂದ್ರೀಯ ಪ್ರಮುಖರ ಸಭೆಯಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಕೊಳಲಗಿರಿ ರವರನ್ನು ಮತ್ತು ಉಡುಪಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಕೃಷ್ಣಕುಮಾರ್ ರವರನ್ನು ನೇಮಕ ಮಾಡಲಾಗಿದೆ. ನೇಮಕಾತಿ ಪತ್ರ ನನ್ನು ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೀಡಿದರು ಉಡುಪಿ ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Read More