- ಮಂಗಳೂರು : ಕಾಣದ ಕೈಗಳು ಹಾಗೂ ಸಿಬ್ಬಂದಿ ವರ್ಗದ ತಪ್ಪಿನಿಂದಾಗಿ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ,ಸಿಕ್ಕಿಬಿದ್ದ ಉದ್ಯೋಗಿಗಳು ಸಂಸ್ಥೆಯಿಂದ ವಜಾ : ಡ್ರೀಮ್ ಡೀಲ್ ಗ್ರೂಪ್ ..!
- ತುಳುನಾಡು ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಸಮಾಜ ಸುಧಾರಕ ಸಂತ ಕನಕದಾಸರ ಜಯಂತಿ ಆಚರಣೆ
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಪ್ರಮುಖ ಪದಾಧಿಕಾರಿಗಳ ಸಭೆ ಹಲವು ಪ್ರಮುಖರ ಸೇರ್ಪಡೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸುನಿಲ್ ಫೆರ್ನಾಂಡಿಸ್ ಆಯ್ಕೆ
- ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ನೀರಿಗೆ ಹಾರಿ ಬಂಧಿಸಿದ ಪೊಲೀಸರು
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕ ವತಿಯಿಂದ ಓನಕೆ ಒಬ್ಬವ ಜಯಂತಿ ಆಚರಣೆ
- ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕ ಹಲವು ಪ್ರಮುಖರ ಸೇರ್ಪಡೆ
- ಬ್ರಹ್ಮಾವರ ಠಾಣೆಯಲ್ಲಿ ಆರೋಪಿ ಲಾಕಪ್ ಡೆತ್ – ಹಿರಿಯ ಅಧಿಕಾರಿಗಳ ಭೇಟಿ
- ಮಂಗಳೂರು : ಲೇಡಿಗೋಷನ್ ಆಸ್ಪತ್ರೆಯ ಮಹಡಿಯಿಂದ ಹಾರಿ ಬಾಣಂತಿ ಆತ್ಮಹತ್ಯೆ
Author: Tulunada Surya
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಮೃತ್ಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಒಂದೇ ವಾರದಲ್ಲಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40) ಹಾಗೂ ವೀರಲಗೊಂದಿ ಗ್ರಾಮದ ಅನಿತಾ (30) ಮೃತ ದುರ್ದೈವಿಗಳು. ತುಮಕೂರು ಜಿಲ್ಲೆಯ ಪಾವಗಡ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಈ ಮೂವರು ಫೆ.22 ರಂದು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಆ ದಿನವೇ ಅನಿತಾ ಫೆ.22 ರಂದು ಮೃತಪಟ್ಟರೆ, ಫೆ.24ರಂದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಂಜಲಿ ಹಾಗೂ ನರಸಮ್ಮ ಎಂಬುವವರು ಫೆ.25ರಂದು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೂವರು ಮಹಿಳೆಯರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿ ಕುಟುಂಬಸ್ಥರು ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ತಡೆದು, ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು, ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪಾವಗಡ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…
, ತುಳುನಾಡ ರಕ್ಷಣಾ ವೇದಿಕೆಉಡುಪಿ ಜಿಲ್ಲಾ ಕಚೇರಿಯಲ್ಲಿ 26-02-2024 ಸೋಮವಾರ ಸಂಜೆ 3 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೇಂದ್ರೀಯ ಮಂಡಳಿ ಅದ್ಯಕ್ಷ – ಸ್ಥಾಪಕರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದ್ದರು ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ರವರು ಸಭೆಯ ಪ್ರಾಸ್ತವಿಕ ಭಾಷಣಗೈದರು. ಬಳಿಕ ನೂತನ ಉಡುಪಿ ಜಿಲ್ಲಾ ಘಟಕದ ಸಮಿತಿ ರಚನೆ ಮಾಡಲಾಯಿತು. ಸಭೆಯಲ್ಲಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು.ಗೌರವ ಸಲಹೆಗಾರರಾಗಿ ರವಿ ಅಚಾರ್ಯ, ಮತ್ತುಸುಧಾಕರ ಅಮೀನ್ ಉಪಾಧ್ಯಕ್ಷರುಗಳಾಗಿ ಜಯ ಪೂಜಾರಿ ಮತ್ತು ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ,ಜೊತೆ ಕಾರ್ಯದರ್ಶಿಯಾಗಿ ಸುಭಾಷ್ ಸುದನ್, ಸಾಮಾಜಿಕ ಜಾಲತಾಣ ಸಂಚಾಲಕ ರಾಗಿ ರೋಶನ್, ಮತ್ತು ಸಹ ಸಂಚಾಲಕರಾಗಿ ಸ್ವಸ್ತಿಕ್ ಕ್ರೀಡಾ ಕಾರ್ಯದರ್ಶಿಯಾಗಿ ಅವಿನಾಶ್ ಸಂತೆಕಟ್ಟೆ , ಅಟೋ ಘಟಕ ಅದ್ಯಕ್ಷರಾಗಿ ಅನಿಲ್ ಪೂಜಾರಿ ಬ್ರಹ್ಮವಾರ ಘಟಕ…
ತುಳು ಭಾಷೆಯ ಬಗ್ಗೆ ಪತ್ರ ಅಭಿಯಾನ ಕುರಿತು ಉತ್ತಮ ಪ್ರತಿಕ್ರಿಯೆ; ಇಂದು ಫೆ, 24 ಪತ್ರಿಕಾಗೋಷ್ಠಿ ಮಂಗಳೂರು: ತುಳು ಭಾಷೆಯ ಬಗ್ಗೆ ನಾವು ನಡೆಸಿದ ಪತ್ರ ಅಭಿಯಾನ ಕುರಿತು ಉತ್ತಮ ಪ್ರತಿಕ್ರಿಯೆ ಹಾಗೂ ಸರ್ಕಾರದ ಸಕಾರಾತ್ಮಕ ಸ್ಪಂದನೆ ದೊರೆತಿದೆ, ಈ ನಿಟ್ಟಿನಲ್ಲಿ ಮಹತ್ವದ ಪತ್ರಿಕಾಗೋಷ್ಠಿಯನ್ನು 24-02-2024 ಮಧ್ಯಾಹ್ನ 4 ಗಂಟೆಗೆ ಮಂಗಳೂರಿನ ವುಡ್ ಲಾಂಡ್ಸ್ ಹೋಟೆಲ್ ನಲ್ಲಿ ಕರೆಯಲಾಗಿದೆ, ತಾವೆಲ್ಲರೂ ಭಾಗವಹಿಸಬೇಕೆಂದು ಮಾಜಿ ಶಾಸಕರಾದ ಮೋಹಿಯುದ್ದೀನ್ ಬಾವ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಜಗದ್ಗುರು ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠಮೂಡು ಬಿದಿರೆ ಇವರ ಮಾರ್ಗದರ್ಶನ ಪಾವನ ಸಾನಿಧ್ಯ ನೇತೃತ್ವ ದಲ್ಲಿ ಬಡಗ ಬಸದಿ ವಾರ್ಷಿಕ ರಥೋತ್ಸವ 19.2.24ರಂದು ಧ್ವಜಾರೋಹಣ ವಾಗಿ 21.2.24ಸರ್ವ ರಕ್ಷಾ ಯಂತ್ರ ಆರಾಧನೆ ಹಾಗೂಬಡಗ ಬಸದಿ ಹಗಲು ರಥೋತ್ಸವ 22.1.24ಮಧ್ಯಾಹ್ನ 12.35 ಭಗವಾನ್ ಶ್ರೀ ಶ್ರೀ ಶ್ರೀ ಚಂದ್ರ ನಾಥ ದೇವರ ರಥಾರೋಹಣ ಶ್ರೀ ವಿಹಾರ 108 ಕಳಶ ಅಭಿಷೇಕ ಸಂಘ ಸಂತರ್ಪಣೆ ಶ್ರದ್ದಾ ಭಕ್ತಿ ಯಿಂದ ಜರುಗಿತು ಆಶೀರ್ವಾದ ನೀಡಿದ ಪಪೂ ಮೂಡು ಬಿದಿರೆ ಸ್ವಾಮೀಜಿ ಭಗವಾನ್ ಚಂದ್ರ ನಾಥ ಸ್ವಾಮಿ ಸರ್ವಜ್ಞ ಭಗವಂತ ಅವರು ಸಮವಸರಣ ರಥ ದಲ್ಲಿ ವಿರಾಜ ಮಾನರಾಗಿ ಲೋಕ ಕಲ್ಯಾಣ ಭಾವನೆ ಯಿಂದ ಸರ್ವರಿಗೂ ಧರ್ಮೋಪದೇಶ ನೀಡಿ ಸಂಸಾರ ದಿಂದ ಪಾರಾಗುವ ಉಪಾಯ ತಿಳಿಸಿ ಉದ್ದರಿಸುತ್ತಿದ್ದರು ಆ ನೆನೆಪಲ್ಲಿ ಚಲಿಸುವ ಸಮವಸರಣ ಪ್ರತೀಕ ವಾಗಿ ವರ್ಷ oಪ್ರತಿ ರಥೋತ್ಸವ ಶ್ರೀಮಠ ದಿಂದ ಭಕ್ತರ…
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ಮಹಿಳಾ ಜಿಲ್ಲಾದ್ಯಕ್ಷರಾಗಿ ಶೋಭಾ ಪಾಂಗಳಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾಗಲಕ್ಷ್ಮಿ ತುಳುನಾಡ ರಕ್ಷಣಾ ವೇದಿಕೆ ಕಳೆದ 15 ವರ್ಷಗಳಿಂದ ತುಳುನಾಡಿನ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಹೋರಾಡುವ ಜಾತ್ಯಾತೀತ ಮತ್ತು ರಾಜಕೀಯ ರಹಿತ ನಂ.1 ಸಂಘಟನೆಯಾಗಿದ್ದು ಇದೀಗ ಉಡುಪಿ ಜಿಲ್ಲೆಯ ಮಹಿಳಾ ಘಟಕದ ನೂತನ ಅದ್ಯಕ್ಷರಾಗಿ ಶೋಭ ಪಾಂಗಳರವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾಗಲಕ್ಷ್ಮಿಯವರನ್ನು ಈ ಕೂಡಲೇ ಜಾರಿಗೆ ಬರುವಂತೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿಯ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ನೇಮಕ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ವಿವಿಧ ಘಟಕಗಳ ಅದ್ಯಕ್ಷ ಮತ್ತು ಪಧಾದಿಕಾರಿಗಳ ನೇಮಕ ಮಾಡಲಾಗುವುದು ಎಂದು ಕೇಂದ್ರೀಯ ಮಂಡಳಿಯ ಸಂಘಟನೆ ಕಾರ್ಯದರ್ಶಿ ಮತ್ತು ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬರವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ: ದಿನೇಶ್ ಗುಂಡೂರಾವ್ ಬೆಂಗಳೂರು: ವಿಧಾನಸಭೆಯಲ್ಲಿಂದು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು. ಈ ಕುರಿತು ಸದನದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಈ ಹಿಂದೆ ಸಿಗರೇಟು ಮಾರಾಟ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಪಡಿಸಲಾಗಿತ್ತು, ಈಗ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು. ಅಲ್ಲದೇ ಶಾಲೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುವರಿಗೆ ದಂಡದ ಪ್ರಮಾಣ 100 ರೂ. ನಿಂದ 1000 ರೂ. ಗೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಿಮ್ಮ ನಿಲುವು ಸ್ವಾಗತಾರ್ಹವಾಗಿದೆ. ಆದ್ರೆ…
ಫೆಬ್ರವರಿ 26 :ಉಡುಪಿ ಉಡುಪಿ ಜಿಲ್ಲೆ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರ ಸಭೆ ಮತ್ತು ಸೇರ್ಪಡೆ ಕಾರ್ಯಕ್ರಮ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಧ ಘಟಕಗಳ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಸಭೆಯು ದಿನಾಂಕ 26-02-2024 ರಂದು ಸೋಮವಾರ ಮಧ್ಯಾಹ್ನ 3.00 ಘಂಟೆಗೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ದಲ್ಲಿ ಹಲವಾರು ಉಡುಪಿ ಜಿಲ್ಲೆಯ ಗಣ್ಯ ವ್ಯಕ್ತಿಗಳು, ಪ್ರಮುಖರು ಸೇರ್ಪಡೆಗೊಳ್ಳಲಿದ್ದಾರೆ.ಸರ್ವರೂ ಆಗಮಿಸುವಂತೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ರವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
2023 ನವೆಂಬರ್ ತಿಂಗಳಿನಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ನಡೆದ ಬೋಟ್ ಅಗ್ನಿ ಅವಘಡದಿಂದ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಬೋಟ್ ಮಾಲೀಕರಿಗೆ ರಾಜ್ಯ ಸರ್ಕಾರ 1.75 ಕೋಟಿ ಹಾಗೂ ಶಿರೂರಿನಲ್ಲಿ ಪ್ರವಾಹದಿಂದ ಹಾನಿಗೀಡಾದ ನಾಡದೋಣಿಗಳಿಗೆ ರೂ. 28 ಲಕ್ಷ ಪರಿಹಾರವನ್ನು ಮೀನುಗಾರರ ಸಂಕಷ್ಟ ಪರಿಹಾರನಿಧಿಯ ಮೂಲಕ ಮಂಜೂರು ಮಾಡಿರುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಮೀನುಗಾರಿಕೆ ಸಚಿವರಾದ ಶ್ರೀ ಮಾಂಕಾಳ ಎಸ್. ವೈದ್ಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಮೀನುಗಾರರ ಸಂಕಷ್ಟ ಪರಿಹಾರನಿಧಿ ಸಮಿತಿಯ ಸಭೆಯಲ್ಲಿ ಪ್ರಕರಣದಿಂದ ಸಮಸ್ಯೆಗೀಡಾದ ಮೀನುಗಾರರಿಗೆ ಸೂಕ್ತ ಪರಿಹಾರ ನಿಟ್ಟಿನಲ್ಲಿ ಚರ್ಚಿಸಿ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಯಿತು. ಗಂಗೊಳ್ಳಿ ಬೋಟ್ ಅಗ್ನಿ ಅವಘಡದಿಂದ ಬೋಟ್ ಮಾಲೀಕರು ಆರ್ಥಿಕವಾಗಿ ದೊಡ್ಡ ನಷ್ಟವನ್ನು ಎದುರಿಸಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಈ ಘಟನೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರನಿಧಿಯ ಮೂಲಕ ಗರಿಷ್ಠ ಪರಿಹಾರ ಒದಗಿಸುವಂತೆ ಸಭೆಯಲ್ಲಿ ಸಚಿವರಿಗೆ ಸಮಿತಿಯ ಸದಸ್ಯರಾದ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದರು.…
ಬೊಂಡಾಲ: ‘ಯಕ್ಷಗಾನ ಬಯಲಾಟವನ್ನು ದೇವರ ಸೇವಾ ರೂಪವಾಗಿ ಆಡಿಸುವ ಸಂಪ್ರದಾಯ ಕರಾವಳಿಯಲ್ಲಿ ಬೆಳೆದು ಬಂದಿದೆ. ಇದರಿಂದ ನಮ್ಮ ಸಂಸ್ಕೃತಿಯ ಪುನರುತ್ಥಾನ ಸಾಧ್ಯ. ಅಲ್ಲದೆ ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಮಾಜದ ಶ್ರೇಷ್ಠ ಕಾರ್ಯ’ ಎಂದು ಕರ್ನಾಟಕ ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಸುವರ್ಣ ಸಂಭ್ರಮ ಪ್ರಯುಕ್ತ ಫೆ.15ರಂದು ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ‘ಯಕ್ಷಗಾನ ಕಲೆಯ ಬೆಳವಣಿಗೆಗಾಗಿ ರಾಜ್ಯಮಟ್ಟದ ಯಕ್ಷಗಾನ ಪ್ರಾಧಿಕಾರ ನಿರ್ಮಾಣಕ್ಕೆ ಸರಕಾರದ ನೆಲೆಯಲ್ಲಿ ಯತ್ನಿಸಲಾಗುವುದು’ ಎಂದವರು ನುಡಿದರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾಲಿಗ್ರಾಮ ಸೇರಿದಂತೆ ಬಹು ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರಿಗೆ ಸುವರ್ಣೋತ್ಸವ ಗೌರವ ಪ್ರಶಸ್ತಿ ನೀಡಲಾಯಿತು. ಅಲ್ಲದೆ ಕಟೀಲು ಮೇಳದ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಅವರಿಗೆ 2024 ನೇ…
ಎಸ್.ಡಿ.ಎಂ.ಕಾನೂನು ಕಾಲೇಜು ನಲ್ಲಿ ನಡೆದ ಐಸಿರ ಸಾಂಸ್ಕೃತಿಕ ಶೃಂಗ ಸಭೆ 2024 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ ಅದ್ಯಕ್ಷ (ಬಾರ್ ಕೌನ್ಸಿಲ್) ಪ್ರಥ್ವಿರಾಜ್ ರೈ , ಲೋಟಸ್ ಪ್ರಾಪರ್ಟಿಸ್ ಆಡಳಿತ ನಿರ್ದೇಶಕ ಜೀತೆಂದ್ರ ಕೊಟ್ಟರಿ, ಕಾಲೇಜು ಮುಖೋಪಾದ್ಯಯ ತಾರಾನಾಥ್, ಕಾರ್ಯಕ್ರಮ ಸಂಯೋಜಕಿ ದೀಪಾ ಸಾಲಿಯಾನ್ ಉಪಸ್ಥಿತರಿದ್ದರು. ಯಶಸ್ವಿಯಾಗಿ 2 ದಿನಗಳ ಕಾರ್ಯ ಕ್ರಮ ನಡೆಯಿತು.